ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದರು.
ಇಸ್ರೇಲ್ ಪ್ರಧಾನ ಮಂತ್ರಿಗಳ ಆತ್ಮೀಯ ಅಕ್ಕರೆಯ ಕರೆಗೆ ಧನ್ಯವಾದ ತಿಳಿಸಿದ ಪ್ರಧಾನಮಂತ್ರಿ ಮೋದಿ, ಎಲ್ಲಾ ಭಾರತೀಯರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಚಂದ್ರಯಾನದ ಯಶಸ್ಸು ಜಗತ್ತಿನ ಇಡೀ ಮಾನವ ಕುಲಕ್ಕೆ ವಿಶೇಷವಾಗಿ ದಕ್ಷಿಣದ ದೇಶಗಳಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ಹೇಳಿದರು.
ಉಭಯ ನಾಯಕರು ಭವಿಷ್ಯದಲ್ಲಿ ಸಂಪರ್ಕದಲ್ಲಿರಲು ಪರಸ್ಪರ ಸಮ್ಮತಿಸಿದರು.