Quoteಭಾರತ-ರಷ್ಯಾ ವಿಶೇಷ ಮತ್ತು ವಿಶಿಷ್ಟ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು.
Quoteತಮ್ಮ ಉಕ್ರೇನ್ ಭೇಟಿಯ ಒಳನೋಟಗಳನ್ನು ಹಂಚಿಕೊಂಡರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷ ಕೊನೆಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಮುಂದಿನ ದಾರಿ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು.

ತಮ್ಮ ಉಕ್ರೇನ್ ಭೇಟಿಯ ಒಳನೋಟಗಳನ್ನು ಹಂಚಿಕೊಂಡರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷ ಕೊನೆಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಮುಂದಿನ ದಾರಿ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಷ್ಯಾ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಶ್ರೀ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು.

22ನೇ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲು ಕಳೆದ ತಿಂಗಳು ರಷ್ಯಾಗೆ ನೀಡಿದ ತಮ್ಮ ಯಶಸ್ವಿ ಭೇಟಿಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಹಲವಾರು ದ್ವಿಪಕ್ಷೀಯ ವಿಷಯಗಳ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು. ಭಾರತ ಹಾಗೂ ರಷ್ಯಾ ನಡುವಿನ ವಿಶೇಷ ಮತ್ತು ಅನನ್ಯವಾದ ವ್ಯೂಹತ್ಮಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಉಭಯ ನಾಯಕರು ಅಭಿಪ್ರಾಯಗಳನ್ನು  ವಿನಿಮಯ ಮಾಡಿಕೊಂಡರು.

ಉಭಯ ನಾಯಕರು ಪ್ರಸ್ತುತ ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಧಾನಮಂತ್ರಿಯವರು ತಮ್ಮ ಇತ್ತೀಚಿನ ಉಕ್ರೇನ್ ಭೇಟಿಯ ಒಳನೋಟಗಳನ್ನು ಹಂಚಿಕೊಂಡರು. ಸಂಘರ್ಷಕ್ಕೆ‌ ಶಾಶ್ವತ ಮತ್ತು ಶಾಂತಿಯುತ ಪರಿಹಾರವನ್ನು ಸಾಧಿಸಲು ಎಲ್ಲಾ ಮಧ್ಯಸ್ಥಗಾರರ ನಡುವೆ ಸಂಭಾಷಣೆ, ರಾಜತಾಂತ್ರಿಕತೆ ಮತ್ತು ಪ್ರಾಮಾಣಿಕತೆ ಜೊತೆಗೆ ಪ್ರಾಯೋಗಿಕ ಕ್ರಮಗಳ  ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಉಭಯ ನಾಯಕರು ಸದಾ ಸಂಪರ್ಕದಲ್ಲಿರಲು ಪರಸ್ಪರ ಒಪ್ಪಿಕೊಂಡರು.

 

  • Rampal Baisoya October 18, 2024

    🙏🙏
  • Harsh Ajmera October 14, 2024

    Love from hazaribagh 🙏🏻
  • Vivek Kumar Gupta October 13, 2024

    नमो ..🙏🙏🙏🙏🙏
  • Vivek Kumar Gupta October 13, 2024

    नमो .........................🙏🙏🙏🙏🙏
  • Aniket Malwankar October 08, 2024

    #NaMo
  • Lal Singh Chaudhary October 07, 2024

    बनी रहती है जिसकी हमेशा चाहत, कहते हैं हम उसे सफलता। दूआ ही नहीं पूरी चाहत है मेरी हमें प्राप्त हो तुम्हारी सफलता।। भारत भाग्य विधाता मोदी जी को जय श्री राम
  • Manish sharma October 04, 2024

    🇮🇳
  • Dheeraj Thakur September 29, 2024

    जय श्री राम ,
  • Dheeraj Thakur September 29, 2024

    जय श्री राम,
  • கார்த்திக் September 21, 2024

    🪷ஜெய் ஸ்ரீ ராம்🪷जय श्री राम🪷જય શ્રી રામ🪷 🪷ಜೈ ಶ್ರೀ ರಾಮ್🌸🪷జై శ్రీ రామ్🪷JaiShriRam🪷🌸 🪷জয় শ্ৰী ৰাম🪷ജയ് ശ്രീറാം🪷ଜୟ ଶ୍ରୀ ରାମ🪷🌸
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India Doubles GDP In 10 Years, Outpacing Major Economies: IMF Data

Media Coverage

India Doubles GDP In 10 Years, Outpacing Major Economies: IMF Data
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಮಾರ್ಚ್ 2025
March 23, 2025

Appreciation for PM Modi’s Effort in Driving Progressive Reforms towards Viksit Bharat