ದಕ್ಷಿಣ ಆಫ್ರಿಕಾ ಅಧ್ಯಕ್ಷ ಮಟೆಮೆಲಾ ಸಿರಿಲ್ ರಾಮಫೋಸಾ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೂರವಾಣಿ ಮೂಲಕ ಮಾತುಕತೆ ನಡೆಸಿದರು.
2023 ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ರಾಜತಾಂತ್ರಿಕ ಬಾಂಧವ್ಯದ 30ನೇ ವರ್ಷವಾಗಿದ್ದು, ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ಪ್ರಗತಿ ಪರಾಮರ್ಶೆ ನಡೆಸಿದರು.
2023ರ ಆಗಸ್ಟ್ 22 ರಿಂದ 24ರವರೆಗೆ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿರುವ ಬ್ರಿಕ್ ಶೃಂಗಸಭೆಗೆ ಅಧ್ಯಕ್ಷ ರಾಮಫೋಸಾ ಪ್ರಧಾನಮಂತ್ರಿಗಳಿಗೆ ಇದೇ ವೇಳೆ ಆಮಂತ್ರಣ ನೀಡಿದರು.
ಶೃಂಸಭೆಯ ಸಿದ್ಧತೆಗಳ ಬಗ್ಗೆಯೂ ಸಂಕ್ಷಿಪ್ತವಾಗಿ ವಿವರಿಸಿದರು. ಆಹ್ವಾನಕ್ಕೆ ಪ್ರಧಾನಮಂತ್ರಿ ಸಮ್ಮತಿಸಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋಹಾನ್ಸ್ ಬರ್ಗ್
ಭೇಟಿಗೆ ಎದುರುನೋಡುತ್ತಿರುವುದಾಗಿ ಪ್ರಧಾನಿ ಹೇಳಿದರು.
ಉಭಯ ಹಿತಾಸಕ್ತಿಯ ಅನೇಕ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಇಬ್ಬರು ನಾಯಕರು ಪರಸ್ಪರ ಚರ್ಚೆ ನಡೆಸಿದರು.
ಭಾರತದ ಜಿ-20 ಅಧ್ಯಕ್ಷತೆಯ ಈ ಸಂದರ್ಭದಲ್ಲಿ ಭಾರತದ ಉಪಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಧ್ಯಕ್ಷ ರಾಮಫೋಸಾ ಇದೇ ವೇಳೆ ಭರವಸೆ ನೀಡಿದರು. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತ ಭೇಟಿ ಎದುರು ನೋಡುತ್ತಿರುವುದಾಗಿಯೂ ಅವರು ತಿಳಿಸಿದರು.
ಉಭಯ ನಾಯಕರು ಪರಸ್ಪರದ ಸಂಪರ್ಕದಲ್ಲಿರಲು ಸಮ್ಮತಿಸಿದರು.