ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಸ್ಲಾಮಿಕ್ ಇರಾನ್ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಡಾ. ಸಯ್ಯದ್ ಇಬ್ರಾಹಿಂ ರೈಸಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ಮಹತ್ವದ ವಿಚಾರಗಳ ಬಗ್ಗೆ ಉಭಯ ನಾಯಕರ ಚರ್ಚೆ ನಡೆಸಿದರು.
ಭಾರತ ಹಾಗೂ ಇರಾನ್ ನಡುವೆ ಐತಿಹಾಸಿಕ, ನಾಗರಿಕ ಸಂಬಂಧಗಳು ಹಾಗೂ ಉಭಯ ರಾಷ್ಟಗಳ ಜನರ ಸಂಪರ್ಕದ ತಳಹದಿಯ ಮೇಲೆ ಬಾಂಧವ್ಯದ ಬಗ್ಗೆ ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು.
ಚಬಾಹರ್ ಬಂದರನ್ನು ಸಂಪರ್ಕದ ಕೇಂದ್ರವನ್ನಾಗಿ ರೂಪಿಸುವುದು ಸೇರಿದಂತೆ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವಲ್ಲಿನ ಬದ್ಧತೆ ಕುರಿತಂತೆ ಉಭಯ ನಾಯಕರು ಪುನರುಚ್ಚಾರ ಮಾಡಿದರು.
ಹಾಗೆಯೇ 'ಬ್ರಿಕ್ಸ್' ವಿಸ್ತರಣೆಯಂತಹ ಬಹುಮುಖಿ ವೇದಿಕೆಯಲ್ಲಿನ ಸಹಕಾರ ಹಾಗೂ ದಕ್ಷಿಣ ಆಫ್ರಿಕಾ ದಲ್ಲಿ ಮುಂದೆ ನಡೆಯಲಿರುವ 'ಬ್ರಿಕ್ಸ್' ಸಮ್ಮೇಳನದಲ್ಲಿನ ಸಭೆಯ ಕುರಿತು ಉಭಯ ನಾಯಕರು ಸಮಾಲೋಚಿಸಿದರು.