ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
ಸೆಪ್ಟೆಂಬರ್ 2023 ರಲ್ಲಿ ಯುವರಾಜರು ಭಾರತಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಉಭಯ ನಾಯಕರು ಕಾರ್ಯತಂತ್ರದ ದ್ವಿಪಕ್ಷೀಯ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು. ಇಬ್ಬರೂ ಭವಿಷ್ಯದ ದ್ವಿಪಕ್ಷೀಯ ಪಾಲುದಾರಿಕೆ ಬಗ್ಗೆಯೂ ಚರ್ಚಿಸಿದರು.
ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಾಯಕರು ಭಯೋತ್ಪಾದನೆ, ಹಿಂಸಾಚಾರ ಮತ್ತು ನಾಗರಿಕ ಜೀವಹಾನಿಯ ಬಗ್ಗೆ ಆಳವಾದ ಕಳವಳವನ್ನು ವ್ಯಕ್ತಪಡಿಸಿದರು.
ಇಸ್ರೇಲ್ ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲದ ಮತ್ತು ತತ್ವಬದ್ಧ ನಿಲುವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಸಂತ್ರಸ್ತ ಜನರಿಗೆ ನಿರಂತರ ಮಾನವೀಯ ನೆರವು ನೀಡುವಂತೆ ಕರೆ ನೀಡಿದರು. ಆ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಗಾಗಿ ಒಟ್ಟಾಗಿ ಕೆಲಸ ಮಾಡಲು ಉಭಯ ನಾಯಕರು ಸಹಮತಿಯನ್ನು ವ್ಯಕ್ತಪಡಿಸಿದರು. ಕಡಲ ಭದ್ರತೆ ಮತ್ತು ನೌಕಾಯಾನದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು.
ಎಕ್ಸ್ಪೋ 2030 ಮತ್ತು ಫಿಫಾ ಫುಟ್ಬಾಲ್ ವಿಶ್ವಕಪ್ 2034 ರ ಆತಿಥೇಯರಾಗಿ ಆಯ್ಕೆಯಾದ ಸೌದಿ ಅರೇಬಿಯಾವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.
ಉಭಯ ನಾಯಕರು ನಿತ್ಯ ಸಂಪರ್ಕದಲ್ಲಿರವಲು ಒಪ್ಪಿಕೊಂಡರು.
Held a good conversation with my Brother HRH Prince Mohammed bin Salman bin Abdulaziz Al Saud on the future of Strategic Partnership between India and Saudi Arabia. We exchanged views on the West Asia situation and shared concerns regarding terrorism, violence and the loss of…
— Narendra Modi (@narendramodi) December 26, 2023