ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರ್ಧ ಚಕ್ರಾಸನ ಅಥವಾ ಅರ್ಧ ಚಕ್ರದ ಭಂಗಿಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದು, ಉತ್ತಮ ಹೃದಯ ಮತ್ತು ಸುಧಾರಿತ ರಕ್ತದ ಹರಿವಿಗಾಗಿ ಈ ಭಂಗಿಯನ್ನು ಅಭ್ಯಾಸ ಮಾಡುವಂತೆ ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 10 ನೇ ಆವೃತ್ತಿಗೆ ಮುಂಚಿತವಾಗಿ ಹಂಚಿಕೊಳ್ಳಲಾದ ಈ ಕ್ಲಿಪ್ನಲ್ಲಿ ನಿಂತಿರುವ ಭಂಗಿಯನ್ನು ಪ್ರದರ್ಶಿಸುತ್ತಾ ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಅದನ್ನು ವಿವರಿಸ ಲಾಗಿದೆ.
ಈ ಕುರಿತು ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
"ಉತ್ತಮ ಆರೋಗ್ಯಕ್ಕಾಗಿ ಚಕ್ರಾಸನವನ್ನು ಅಭ್ಯಾಸ ಮಾಡಿ. ಇದು ಹೃದಯಕ್ಕೆ ಉತ್ತಮವಾಗಿದೆ ಮತ್ತು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
"ಚಕ್ರಾಸನದ ನಿಯಮಿತ ಅಭ್ಯಾಸವು ದೇಹವನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ," ಎಂದು ತಿಳಿಸಿದ್ದಾರೆ.
Do practice Chakrasana for good health. It is great for the heart and also helps improve blood flow. pic.twitter.com/1bAS96Tlwz
— Narendra Modi (@narendramodi) June 15, 2024
चक्रासन का नियमित अभ्यास शरीर को स्वस्थ रखने में बहुत मददगार है। यह हृदय को सेहतमंद रखता है और रक्त संचार को बेहतर बनाता है। pic.twitter.com/lcuLJhBALb
— Narendra Modi (@narendramodi) June 15, 2024