ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಶಿಯ ಲಖಾ ಮೇಳದ ಭಾರತ್ ಮಿಲಾಪ್‌ನ ಆಚರಣೆ ಸಂಪ್ರದಾಯದ ವೈಭವದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಆಚರಣೆಯು ಭಾರತೀಯ ಸಂಸ್ಕೃತಿಯ ಅವಿಭಾವ್ಯ ಅಂಗ ಎಂದಿರುವ ಪ್ರಧಾನ ಮಂತ್ರಿ ಮೋದಿ ಅವರು ಇದು ಐದು ಶತಮಾನಗಳಿಂದ ಅನೂಚಾನವಾಗಿ ನಡೆದುಬಂದಿರುವ ಸಂಪ್ರದಾಯ ಎಂದು ಬಣ್ಣಿಸಿದ್ದಾರೆ. ಈ ಅನನ್ಯ ಸಂಪ್ರದಾಯದ ಆಚರಣೆಯಿರುವ ಕಾಶಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂಬಂಧ "ಎಕ್ಸ್" ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ಕಾಶಿಯಲ್ಲಿ ಲಖಾ ಮೇಳದಡಿ ನಡೆದಿರುವ ಭಾರತ್ ಮಿಲಾಪ್ ಆಚರಣೆಯು ಭಾರತದ ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಕಳೆದ ಐದು ಶತಮಾನಗಳಿಂದ ನಡೆಯುತ್ತಿರುವ ಈ ಪ್ರಸ್ತುತಿಯು ಶ್ರೀರಾಮನ ಭಕ್ತರನ್ನು ಮತ್ತೊಮ್ಮೆ ಭಾವುಕರನ್ನಾಗಿಸಿದೆ. ಕಾಶಿಯ ಪ್ರತಿನಿಧಿಸುವ ಸಂಸದನಾಗಿ ಇಂತಹ ಅಪೂರ್ವ ಆಚರಣೆ ಬಗ್ಗೆ ಹೆಮ್ಮೆಯ ಭಾವ ಮೂಡಿದೆ,ʼʼ ಎಂದು ಸಂತಸ ಹಂಚಿಕೊಂಡಿದ್ದಾರೆ.
काशी में लक्खा मेला के तहत होने वाला भरत मिलाप भारत की सनातन संस्कृति का अभिन्न हिस्सा रहा है। पिछली करीब पांच सदियों से चली आ रही इस प्रस्तुति ने एक बार फिर प्रभु श्री राम के भक्तों को भावविभोर कर दिया। काशी के सांसद होने के नाते मुझे इस परंपरा को लेकर विशेष गर्व की अनुभूति हो… pic.twitter.com/NRAIfIExBe
— Narendra Modi (@narendramodi) October 25, 2023