ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುವ ಹಾಗೂ ಜೀರ್ಣಕಾರಿ ಪ್ರಕ್ರಿಯೆಯನ್ನು ಸುಧಾರಿಸುವ ಶಶಾಂಕಾಸನ (ಮೊಲದ ಭಂಗಿ) ಕುರಿತಾದ ವಿಡಿಯೋದ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಈ ಆಸನವು ಬೆನ್ನುನೋವಿನ ನಿವಾರಣೆಗೆ ಸಹಕಾರಿಯಾಗಿದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಈ ಆಸನವನ್ನು ಮಾಡುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಅಂತಾರಾಷ್ಟ್ರೀಯ ಯೋಗ ದಿನದ ದಶಕಾಚರಣೆಯ ಅಂಗವಾಗಿ ಹಂಚಿಕೊಳ್ಳಲಾದ ಈ ಕ್ಲಿಪ್ ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಯಲ್ಲೂ ಶಶಾಂಕಾಸನ ಭಂಗಿಯನ್ನು ಹಂತ-ಹಂತವಾಗಿ ವಿವರಿಸುತ್ತದೆ.
ಪ್ರಧಾನಮಂತ್ರಿಯವರು Xನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಶಶಾಂಕಾಸನವನ್ನು ನಿಯಮಿತವಾಗಿ ಏಕೆ ಅಭ್ಯಾಸ ಮಾಡಬೇಕು ಎಂಬ ಅರಿವು ಇಲ್ಲಿದೆ, ಬನ್ನಿ ನೋಡೋಣ..."
Here is why you must practice Shashankasana regularly… pic.twitter.com/95kwzrKYTD
— Narendra Modi (@narendramodi) June 19, 2024
शशांकासन का नियमित अभ्यास क्यों करना चाहिए, आइए जानते हैं… pic.twitter.com/9ibVIIW5wC
— Narendra Modi (@narendramodi) June 19, 2024