"ತಮಿಳುನಾಡು ಭಾರತೀಯ ರಾಷ್ಟ್ರೀಯತೆಯ ಭದ್ರಕೋಟೆಯಾಗಿದೆ"
"ಅಧೀನಮ್ ಮತ್ತು ರಾಜಾ ಜಿ ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಪವಿತ್ರ ಪ್ರಾಚೀನ ತಮಿಳು ಸಂಸ್ಕೃತಿಯಿಂದ ಆಶೀರ್ವಾದದ ಮಾರ್ಗವನ್ನು ಕಂಡುಕೊಂಡಿದ್ದೇವೆ - ಸೆಂಗೋಲ್ ಮಾಧ್ಯಮದ ಮೂಲಕ ಅಧಿಕಾರದ ವರ್ಗಾವಣೆಯ ಮಾರ್ಗ"
“1947ರಲ್ಲಿ ತಿರುವಾಡುತುರೈ ಅಧೀನಂ ಅವರು ವಿಶೇಷ ರಾಜದಂಡ(ಸೆಂಗೋಲ್) ಅನ್ನು ನಿರ್ಮಿಸಿದರು. ಇಂದು, ಆ ಕಾಲದ ಚಿತ್ರಗಳು ತಮಿಳು ಸಂಸ್ಕೃತಿ ಮತ್ತು ಆಧುನಿಕ ಪ್ರಜಾಪ್ರಭುತ್ವವಾಗಿ ಭಾರತದ ವಿಧಿಯ ನಡುವಿನ ಆಳವಾದ ಭಾವನಾತ್ಮಕ ಬಂಧವನ್ನು ನಮಗೆ ನೆನಪಿಸುತ್ತಿವೆ.
"ಅಧೀನಂ ಅವರ ಸೆಂಗೋಲ್ ನೂರಾರು ವರ್ಷಗಳ ಗುಲಾಮಗಿರಿಯ ಪ್ರತೀಕದಿಂದ ಭಾರತವನ್ನು ಮುಕ್ತಗೊಳಿಸುವ ಆರಂಭವಾಗಿದೆ"
"ಗುಲಾಮಗಿರಿಯ ಮೊದಲು ಅಸ್ತಿತ್ವದಲ್ಲಿದ್ದ ರಾಷ್ಟ್ರದ ಯುಗಕ್ಕೆ ಸ್ವತಂತ್ರ ಭಾರತವನ್ನು ಸೇರಿಸಿದ್ದೇ ಸೆಂಗೋಲ್"
"ಪ್ರಜಾಪ್ರಭುತ್ವದ ದೇವಾಲಯದಲ್ಲಿ ಸೆಂಗೋಲ್ ಅರ್ಹವಾದ ಸ್ಥಾನವನ್ನು ಪಡೆಯುತ್ತಿದೆ"

ನೂತನ ಸಂಸತ್ ಭವನದಲ್ಲಿ ನಾಳೆ ಸೆಂಗೋಲ್ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧೀನರಿಂದ(ಪುರೋಹಿತರು) ಇಂದು ಆಶೀರ್ವಾದ ಪಡೆದರು.

ನಂತರ ಅಧೀನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಅವರ ನಿವಾಸದಲ್ಲಿ ತಮ್ಮೆಲ್ಲರ ಉಪಸ್ಥಿತಿಯು ಒಂದು ದೊಡ್ಡ ಅದೃಷ್ಟದ ಸಂಗತಿಯಾಗಿದೆ. ಭಗವಾನ್ ಶಿವನ ಆಶೀರ್ವಾದದಿಂದಲೇ ನಾನು ಶಿವನ ಎಲ್ಲಾ ಶಿಷ್ಯ ವೃಂದದೊಂದಿಗೆ ಏಕಕಾಲದಲ್ಲಿ ಸಂವಹನ ಮತ್ತು ಸಂವಾದ ನಡೆಸಲು ಸಾಧ್ಯವಾಯಿತು. ನಾಳೆ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಅಧೀನರು ಉಪಸ್ಥಿತರಿದ್ದು, ಆಶೀರ್ವಾದ ಧಾರೆಯೆರೆಯಲಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳುನಾಡಿನ ಪಾತ್ರವನ್ನು ಪ್ರಧಾನಮಂತ್ರಿ ಎತ್ತಿ ಹಿಡಿದ ಪ್ರಧಾನ ಮಂತ್ರಿ ಅವರು, ತಮಿಳುನಾಡು ಭಾರತೀಯ ರಾಷ್ಟ್ರೀಯತೆಯ ಭದ್ರಕೋಟೆಯಾಗಿದೆ. ತಮಿಳು ಜನರು ಯಾವಾಗಲೂ ಭಾರತ ಮಾತೆಯ ಸೇವಾ ಮನೋಭಾವ ಮತ್ತು ಕಲ್ಯಾಣವನ್ನು ಹೊಂದಿದ್ದರು. ಸ್ವಾತಂತ್ರ್ಯದ ನಂತರದ ವರ್ಷಗಳಲ್ಲಿ ತಮಿಳು ಕೊಡುಗೆಗೆ ಸೂಕ್ತ ಮನ್ನಣೆ ನೀಡಲಾಗಿಲ್ಲ. ಆದರೆ ಈಗ ಈ ಸಮಸ್ಯೆಗೆ ಸೂಕ್ತ ಗಮನ ನೀಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಸ್ವಾತಂತ್ರ್ಯದ ಸಮಯದಲ್ಲಿ, ಅಧಿಕಾರದ ಹಸ್ತಾಂತರದ ಸಂಕೇತದ ಬಗ್ಗೆ ಪ್ರಶ್ನೆ ಉದ್ಭವಿಸಿತ್ತು, ಈ ವಿಷಯದಲ್ಲಿ ವಿಭಿನ್ನ ಸಂಪ್ರದಾಯಗಳು ಇದ್ದವು. "ಆ ಸಮಯದಲ್ಲಿ ಅಧೀನಂ ಮತ್ತು ರಾಜಾ ಜಿ ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಪವಿತ್ರ ಪ್ರಾಚೀನ ತಮಿಳು ಸಂಸ್ಕೃತಿಯಿಂದ ಆಶೀರ್ವಾದದ ಮಾರ್ಗ ಕಂಡುಕೊಂಡಿದ್ದೇವೆ. ಸೆಂಗೋಲ್ ಮಾಧ್ಯಮದ ಮೂಲಕ ಅಧಿಕಾರ ವರ್ಗಾವಣೆಯ ಮಾರ್ಗ ಹುಡುಕಿದ್ದೇವೆ. ಸೆಂಗೋಲ್ ಹೊಂದಿದ ವ್ಯಕ್ತಿಯು ದೇಶದ ಸಂಪೂರ್ಣ ಕಲ್ಯಾಣದ ಜವಾಬ್ದಾರಿಯನ್ನು ಹೊಂದಿದ್ದರು ಎಂದು ಪ್ರಧಾನಿ ನೆನಪಿಸಿಕೊಂಡರು, ಅವರು ಎಂದಿಗೂ ಕರ್ತವ್ಯದ ಹಾದಿಯಿಂದ ಹೊರಗುಳಿಯುವುದಿಲ್ಲ. 1947ರ ಆ ಸಮಯದಲ್ಲಿ ತಿರುವಡುತುರೈ ಅಧೀನಂ ಅವರು ವಿಶೇಷ ರಾಜದಂಡ(ಸೆಂಗೋಲ್)ವನ್ನು ತಯಾರಿಸಿದರು. ಇಂದು ಆ ಯುಗದ ಚಿತ್ರಗಳು ತಮಿಳು ಸಂಸ್ಕೃತಿ ಮತ್ತು ಆಧುನಿಕ ಪ್ರಜಾಪ್ರಭುತ್ವವಾಗಿ ಭಾರತದ ವಿಧಿಯ ನಡುವಿನ ಆಳವಾದ ಭಾವನಾತ್ಮಕ ಬಂಧವನ್ನು ನಮಗೆ ನೆನಪಿಸುತ್ತಿವೆ. ಇಂದು ಈ ಆಳವಾದ ಬಂಧದ ಈ ಸಾಹಸಗಾಥೆಯು ಇತಿಹಾಸದ ಪುಟಗಳಲ್ಲಿ ಜೀವಂತವಾಗಿದೆ. ಆ ಕಾಲದ ಘಟನೆಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡಲು ಇದು ನಮಗೆ ಒಂದು ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಈ ಪವಿತ್ರ ಚಿಹ್ನೆಯನ್ನು ಹೇಗೆ ಪರಿಗಣಿಸಲಾಗಿದೆ ಎಂಬುದನ್ನು ಸಹ ನಾವು ತಿಳಿದುಕೊಳ್ಳುತ್ತೇವೆ ಎಂದು ಪ್ರಧಾನಿ ಹೇಳಿದರು.

ವಿಶೇಷವಾಗಿ ರಾಜಾ ಜಿ ಮತ್ತು ಇತರೆ ಅಧೀನರು(ಪುರೋಹಿತರು) ಹೊಂದಿದ್ದ ದೂರದೃಷ್ಟಿಗೆ ಪ್ರಧಾನ ಮಂತ್ರಿ ಅವರು ತಲೆಬಾಗಿ ನಮಿಸಿದರು. ನೂರಾರು ವರ್ಷಗಳ ಗುಲಾಮಗಿರಿಯ ಪ್ರತಿಯೊಂದು ಚಿಹ್ನೆಯಿಂದ ಸ್ವಾತಂತ್ರ್ಯವನ್ನು ಪ್ರಾರಂಭಿಸಲು  ಸೆಂಗೋಲ್ ಸಹಾಯ ಮಾಡಿದೆ. ಗುಲಾಮಗಿರಿಯ ಮೊದಲು ಅಸ್ತಿತ್ವದಲ್ಲಿದ್ದ ರಾಷ್ಟ್ರದ ಯುಗಾಂತರಕ್ಕೆ ಸ್ವತಂತ್ರ ಭಾರತವನ್ನು ಸಂಯೋಜಿಸಿದ್ದೇ ಸೆಂಗೋಲ್. ಇದು 1947ರಲ್ಲಿ ದೇಶವು ಸ್ವತಂತ್ರವಾದಾಗ ಅಧಿಕಾರದ ವರ್ಗಾವಣೆಯನ್ನು ಸೂಚಿಸಿತು. ಸೆಂಗೋಲ್‌ನ ಮತ್ತೊಂದು ಪ್ರಾಮುಖ್ಯತೆ ಏನೆಂದರೆ, ಇದು ಭಾರತದ ಗತಕಾಲದ ವೈಭವದ ವರ್ಷಗಳು ಮತ್ತು ಸಂಪ್ರದಾಯಗಳನ್ನು ಸ್ವತಂತ್ರ ಭಾರತದ ಭವಿಷ್ಯದೊಂದಿಗೆ ಸಂಪರ್ಕಿಸುತ್ತದೆ. ಪವಿತ್ರ ಸೆಂಗೋಲ್‌ಗೆ ಅರ್ಹವಾದ ಮತ್ತು ಸೂಕ್ತವಾದ ಗೌರವ ಸಿಗಲಿಲ್ಲ. ಅದನ್ನು ಪ್ರಯಾಗ್‌ರಾಜ್‌ನ ಆನಂದ ಭವನದಲ್ಲಿ ವಾಕಿಂಗ್ ಸ್ಟಿಕ್ ಆಗಿ ಪ್ರದರ್ಶಿಸಲಾಯಿತು ಎಂದು ಪ್ರಧಾನಿ ವಿಷಾದಿಸಿದರು. ಸೆಂಗೋಲ್ ಅನ್ನು ಆನಂದ ಭವನದಿಂದ ಹೊರಗೆ ತಂದದ್ದು ಈಗಿನ ಸರ್ಕಾರ. ಇದರೊಂದಿಗೆ, ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಸ್ಥಾಪನೆಯ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯದ ಮೊದಲ ಕ್ಷಣವನ್ನು ಮೆಲುಕು ಹಾಕಲು ನಮಗೆ ಅವಕಾಶ ಸೃಷ್ಟಿಯಾಗಿದೆ. ಪ್ರಜಾಪ್ರಭುತ್ವದ ದೇಗುಲದಲ್ಲಿ ಸೆಂಗೋಲ್ ಅರ್ಹವಾದ ಸ್ಥಾನವನ್ನು ಪಡೆಯುತ್ತಿದೆ. ನೂತನ ಸಂಸತ್ ಭವನದಲ್ಲಿ ಭಾರತದ ಶ್ರೇಷ್ಠ ಸಂಪ್ರದಾಯಗಳ ಪ್ರತೀಕವಾದ ಸೆಂಗೋಲ್ ಸ್ಥಾಪನೆಯಾಗಲಿದೆ. ಕರ್ತವ್ಯ ಪಥದಲ್ಲಿ ನಿರಂತರವಾಗಿ ಸಾಗಲು ಮತ್ತು ಸಾರ್ವಜನಿಕರಿಗೆ ಉತ್ತರ ನೀಡಲು ಸೆಂಗೋಲ್ ನಮ್ಮೆಲ್ಲರನ್ನು ನೆನಪಿಸಲಿದೆ ಎಂದು ಪ್ರಧಾನಿ ತಿಳಿಸಿದರು.

ಅಧೀನಂ ಅವರ ಶ್ರೇಷ್ಠ ಸ್ಫೂರ್ತಿದಾಯಕ ಸಂಪ್ರದಾಯವು ಜೀವಂತ ಧಾರ್ಮಿಕ ಶಕ್ತಿಯ ಸಂಕೇತವಾಗಿದೆ. ಅವರ ಶೈವ ಸಂಪ್ರದಾಯವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, ತಮ್ಮ ತತ್ತ್ವಶಾಸ್ತ್ರದಲ್ಲಿ ಏಕ್ ಭಾರತ ಶ್ರೇಷ್ಠ ಭಾರತವನ್ನು ಶ್ಲಾಘಿಸಿದರು. ಅನೇಕ ಅಧೀನರ ಹೆಸರುಗಳು ಈ ಚೈತನ್ಯವನ್ನು ತಿಳಿಸುತ್ತವೆ. ಏಕೆಂದರೆ ಈ ಕೆಲವು ಪವಿತ್ರ ಹೆಸರುಗಳು ಕೈಲಾಸವನ್ನು ಉಲ್ಲೇಖಿಸುತ್ತವೆ, ಇದು ದೂರದ ಹಿಮಾಲಯದಲ್ಲಿದ್ದರೂ ಅವರ ಹೃದಯಕ್ಕೆ ಹತ್ತಿರದಲ್ಲಿದೆ. ಮಹಾನ್ ಶೈವ ಸಂತ ತಿರುಮುಲರ್ ಶಿವಭಕ್ತಿಯನ್ನು ಹರಡಲು ಕೈಲಾಸದಿಂದ ಬಂದನೆಂದು ಹೇಳಲಾಗುತ್ತದೆ. ಅಂತೆಯೇ, ಉಜ್ಜಯಿನಿ, ಕೇದಾರನಾಥ ಮತ್ತು ಗೌರಿಕುಂಡವನ್ನು ಗೌರವದಿಂದ ಉಲ್ಲೇಖಿಸಿದ ತಮಿಳುನಾಡಿನ ಅನೇಕ ಮಹಾನ್ ಸಂತರನ್ನು ಪ್ರಧಾನಿ ಸ್ಮರಿಸಿದರು.

ತಮಿಳುನಾಡಿನಿಂದ ಕಾಶಿಗೆ ಹೋಗಿ ಬನಾರಸ್‌ನ ಕೇದಾರ್ ಘಾಟ್‌ನಲ್ಲಿ ಕೇದಾರೇಶ್ವರ ದೇವಾಲಯ ಸ್ಥಾಪಿಸಿದ ಧರ್ಮಪುರಂ ಅಧೀನಂ ಸ್ವಾಮಿ ಕುಮಾರ ಗುರುಪರ ಅವರ ಸಾಧನೆಯನ್ನು ವಾರಣಾಸಿ ಸಂಸತ್ ಸದಸ್ಯರಾಗಿ, ಪ್ರಧಾನಿ ಸ್ಮರಿಸಿದರು. ತಮಿಳುನಾಡಿನ ತಿರುಪ್ಪನಂದಾಲ್‌ನಲ್ಲಿರುವ ಕಾಶಿ ಮಠಕ್ಕೂ ಕಾಶಿಯ ಹೆಸರನ್ನು ಇಡಲಾಗಿದೆ. ಈ ಮಠದ ಬಗ್ಗೆ ಕುತೂಹಲಕಾರಿ ಸಂಗತಿಯೊಂದರ ಮೇಲೆ ಬೆಳಕು ಚೆಲ್ಲಿದ  ಪ್ರಧಾನಿ, ತಿರುಪ್ಪಾನಂದಾಳ್ ಕಾಶಿ ಮಠವು ಯಾತ್ರಾರ್ಥಿಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿತ್ತು. ಅಲ್ಲಿ ತಮಿಳುನಾಡಿನ ಕಾಶಿ ಮಠಕ್ಕೆ ಹಣ ಠೇವಣಿ ಇಡಬಹುದು ಮತ್ತು ಕಾಶಿಯಲ್ಲಿ ಪ್ರಮಾಣಪತ್ರ ತೋರಿಸಿ ಹಿಂಪಡೆಯಬಹುದು. "ಈ ರೀತಿಯಾಗಿ, ಶೈವ ಸಿದ್ಧಾಂತದ ಅನುಯಾಯಿಗಳು ಶಿವಭಕ್ತಿಯನ್ನು ಹರಡುವುದು ಮಾತ್ರವಲ್ಲದೆ, ನಮ್ಮನ್ನು ಪರಸ್ಪರ ಹತ್ತಿರಕ್ಕೆ ತರುವ ಕೆಲಸವನ್ನೂ ಮಾಡಿದರು" ಎಂದು ಪ್ರಧಾನಿ ಸ್ಮರಿಸಿದರು.

ನೂರಾರು ವರ್ಷಗಳ ಗುಲಾಮಗಿರಿಯ ನಂತರವೂ ತಮಿಳು ಸಂಸ್ಕೃತಿಯನ್ನು ಜೀವಂತವಾಗಿಡುವಲ್ಲಿ ಅಧೀನಂರ ಶ್ರೇಷ್ಠ ಸಂಪ್ರದಾಯದ ಪಾತ್ರವನ್ನು ಪ್ರಧಾನಿ ಸ್ಮರಿಸಿದರು. ಅದನ್ನು ಪೋಷಿಸಿದ ಶೋಷಿತ ಮತ್ತು ವಂಚಿತ ಜನಸಮೂಹಕ್ಕೂ ಅವರು ಸಲ್ಲುತ್ತಾರೆ. “ನಿಮ್ಮ ಎಲ್ಲಾ ಸಂಸ್ಥೆಗಳು ರಾಷ್ಟ್ರಕ್ಕೆ ಕೊಡುಗೆ ನೀಡುವ ವಿಷಯದಲ್ಲಿ ಅತ್ಯಂತ ವೈಭವಯುತವಾದ ಇತಿಹಾಸ ಹೊಂದಿವೆ. ಈ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಮುಂದಿನ ಪೀಳಿಗೆಗೆ ಕೆಲಸ ಮಾಡಲು ಪ್ರೇರೇಪಿಸುವ ಸಮಯ ಇದು”, ಎಂದು ಪ್ರಧಾನ ಮಂತ್ರಿ ಹೇಳಿದರು.

ಮುಂದಿನ 25 ವರ್ಷಗಳ ಗುರಿಗಳಿಗೆ ಒತ್ತು ನೀಡಿದ ಪ್ರಧಾನ ಮಂತ್ರಿ, ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ತಲುಪುವ ವೇಳೆಗೆ ಬಲಿಷ್ಠ, ಸ್ವಾವಲಂಬಿ, ಎಲ್ಲರನ್ನೂ ಒಳಗೊಂಡ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. 2047ರ ಗುರಿಯೊಂದಿಗೆ ದೇಶವು ಮುನ್ನಡೆಯುತ್ತಿರುವಾಗ ಅಧೀನಂರ ಪಾತ್ರ ಬಹಳ ಮುಖ್ಯ. 1947ರಲ್ಲಿ ಲಕ್ಷಾಂತರ ದೇಶವಾಸಿಗಳು ಅಧೀನರ ಪಾತ್ರದ ಬಗ್ಗೆ ಮರುಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಸಂಸ್ಥೆಗಳು ಯಾವಾಗಲೂ ಸೇವೆಯ ಮೌಲ್ಯಗಳನ್ನು ಸಾಕಾರಗೊಳಿಸಿವೆ. ಜನರನ್ನು ಪರಸ್ಪರ ಸಂಪರ್ಕಿಸುವ, ಅವರಲ್ಲಿ ಸಮಾನತೆಯ ಭಾವವನ್ನು ಮೂಡಿಸುವ ಉತ್ತಮ ಉದಾಹರಣೆಯನ್ನು ನೀವು ಪ್ರಸ್ತುತಪಡಿಸಿದ್ದೀರಿ" ಎಂದು ಅವರು ಶ್ಲಾಘಿಸಿದರು.

ಭಾರತದ ಶಕ್ತಿಯು ಅದರ ಏಕತೆಯ ಮೇಲೆ ಅವಲಂಬಿತವಾಗಿದೆ. ರಾಷ್ಟ್ರದ ಪ್ರಗತಿಗೆ ಅಡ್ಡಿಪಡಿಸುವ ಮತ್ತು ವಿವಿಧ ಸವಾಲುಗಳನ್ನು ಒಡ್ಡುವವರ ಬಗ್ಗೆ ಎಚ್ಚರಿಕೆ ನೀಡಿದ ಅವರು, ಭಾರತದ ಪ್ರಗತಿಗೆ ಅಡ್ಡಿಪಡಿಸುವವರು ನಮ್ಮ ಏಕತೆಯನ್ನು ಮುರಿಯಲು ಪ್ರಯತ್ನಿಸುತ್ತಾರೆ. ಆದರೆ ನಿಮ್ಮ ಸಂಸ್ಥೆಗಳಿಂದ ದೇಶವು ಪಡೆಯುತ್ತಿರುವ ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಶಕ್ತಿಯೊಂದಿಗೆ ನಾವು ಪ್ರತಿ ಸವಾಲನ್ನು ಎದುರಿಸುತ್ತೇವೆ ಎಂದು ನನಗೆ ಖಾತ್ರಿಯಿದೆ” ಎಂದು ಪ್ರಧಾನ ಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು. 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones