ಸ್ನೇಹಿತರೆ,
ನಮಗೆ ಆಡಳಿತಾತ್ಮಕ ನಿರ್ವಹಣೆ(ಟ್ರೋಕಾ) ಸ್ಫೂರ್ತಿಯಲ್ಲಿ ಸಂಪೂರ್ಣ ನಂಬಿಕೆ ಇದೆ.
ನಾವು ಬ್ರೆಜಿಲ್‌ಗೆ ನಮ್ಮ ಅಚಲ ಬೆಂಬಲ ನೀಡುವ ಸಂಕಲ್ಪ ಮಾಡುತ್ತೇವೆ. ಅವರ ನಾಯಕತ್ವ ಸಮಯದಲ್ಲಿ ಜಿ-20 ಶೃಂಗದ ನಮ್ಮ ಸಾಮಾನ್ಯ ಉದ್ದೇಶಗಳನ್ನು ಮತ್ತಷ್ಟು ಮುನ್ನಡೆಸುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ.
ನಾನು ಬ್ರೆಜಿಲ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಅಭಿನಂದನಯೊಂದಿಗೆ ನಾನು ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡುತ್ತೇನೆ. ಇದೇ ಸಂದರ್ಭದಲ್ಲಿ ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ಅಧ್ಯಕ್ಷ ಲೂಲಾ ಅವರನ್ನು ಆಹ್ವಾನಿಸುತ್ತೇನೆ.
ಅಧ್ಯಕ್ಷ ಲೂಲಾ ಅವರ ಭಾಷಣ
ಗೌರವಾನ್ವಿತ ಗಣ್ಯರೆ,
ನಿಮಗೆ ತಿಳಿದಿರುವಂತೆ, ಭಾರತವು ನವೆಂಬರ್ ವರೆಗೆ ಜಿ-20 ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ.
ಈ ಎರಡು ದಿನಗಳಲ್ಲಿ ನೀವೆಲ್ಲರೂ ಅನೇಕ ವಿಷಯಗಳನ್ನು ಮಂಡಿಸಿದ್ದೀರಿ, ಸಲಹೆಗಳನ್ನು ನೀಡಿದ್ದೀರಿ, ಅನೇಕ ಪ್ರಸ್ತಾಪಗಳನ್ನು ಮಾಡಿದ್ದೀರಿ.
ನಮ್ಮ ಮುಂದೆ ಬಂದಿರುವ ಸಲಹೆಗಳನ್ನು ಮತ್ತೊಮ್ಮೆ ನೋಡುವುದು, ಅವುಗಳ ಪ್ರಗತಿಯನ್ನು ಹೇಗೆ ವೇಗಗೊಳಿಸಬಹುದು ಎಂಬುದನ್ನು ನೋಡುವುದು ನಮ್ಮ ಜವಾಬ್ದಾರಿಯಾಗಿದೆ.
ನಾವು ನವೆಂಬರ್ ಅಂತ್ಯದಲ್ಲಿ ಜಿ-20 ಶೃಂಗಸಭೆಯ ಮತ್ತೊಂದು ವರ್ಚುವಲ್ ಅಧಿವೇಶನ ನಡೆಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ. ಆ ಅಧಿವೇಶನದಲ್ಲಿ ನಾವು ಈ ಶೃಂಗಸಭೆಯಲ್ಲಿ ನಿರ್ಧರಿಸಿದ ವಿಷಯಗಳನ್ನು ಪರಿಶೀಲಿಸಬಹುದು. ನಮ್ಮ ತಂಡವು ಈ ಎಲ್ಲದರ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ.
ನೀವೆಲ್ಲರೂ ಇದರಲ್ಲಿ ಕೈಜೋಡಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.
ಗೌರವಾನ್ವಿತ ಗಣ್ಯರೆ,
ಈ ಮಾತುಗಳೊಂದಿಗೆ, ನಾನು ಅಧಿಕೃತವಾಗಿ ಈ ಜಿ-20 ಶೃಂಗಸಭೆಯನ್ನು ಮುಕ್ತಾಯಗೊಳಿಸುತ್ತೇನೆ.
ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಕಡೆಗಿನ ನಮ್ಮೆಲ್ಲರ ಮಾರ್ಗವು ಆಹ್ಲಾದಕರವಾಗಿರಲಿ.
ಸ್ವಸ್ತಿ ಅಸ್ತು ವಿಶ್ವಸ್ಯ!
ಅಂದರೆ ಇಡೀ ಜಗತ್ತಿನಲ್ಲಿ ಭರವಸೆ ಮತ್ತು ಶಾಂತಿ ಇರಲಿ.
140 ಕೋಟಿ ಭಾರತೀಯರ ಶುಭ ಹಾರೈಕೆಗಳೊಂದಿಗೆ, ನಾನು ನಿಮ್ಮೆಲ್ಲರಿಗೂ ನಮ್ಮ ಪ್ರಾಮಾಣಿಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ!
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.