Indian institutions should give different literary awards of international stature : PM
Giving something positive to the society is not only necessary as a journalist but also as an individual : PM
Knowledge of Upanishads and contemplation of Vedas, is not only an area of spiritual attraction but also a view of science : PM

ನಮಸ್ಕಾರ,

ರಾಜಸ್ಥಾನದ ರಾಜ್ಯಪಾಲರಾದ ಕಲ್ರಾಜ್ ಮಿಶ್ರಾ ಜಿ, ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜಿ, ರಾಜಸ್ಥಾನ ಪತ್ರಿಕಾದ ಗುಲಾಬ್ ಕೊಥಾರಿಜಿ  ಮತ್ತು ಪತ್ರಿಕಾ ಬಳಗದ ಇತರ ಸಿಬ್ಬಂದಿಗಳೇ, ಮಾಧ್ಯಮ ಸ್ನೇಹಿತರೇ, ಮಹಿಳೆಯರೇ ಮತ್ತು ಮಹನಿಯರೇ,

ಗುಲಾಬ್ ಕೊಥಾರಿಜಿ ಅವರಿಗೆ ನನ್ನ ಶುಭಾಶಯಗಳು ಮತ್ತು ಪತ್ರಿಕಾ ಬಳಗ ಸಂವಾದ್ ಉಪನಿಷತ್ ಮತ್ತು ಅಕ್ಷರಯಾತ್ರ ಕೃತಿಗಳನ್ನು ಹೊರತಂದಿರುವುದಕ್ಕೆ ಅಭಿನಂದನೆಗಳು. ಈ ಕೃತಿಗಳು ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆಗಳಾಗಿವೆ. ಇಂದು ರಾಜಸ್ಥಾನದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪತ್ರಿಕಾ ದ್ವಾರವನ್ನು ಲೋಕಾರ್ಪಣೆ ಮಾಡುವ ಅವಕಾಶವೂ ನನಗೆ ದೊರಕಿತ್ತು. ಇದು ಕೇವಲ ಸ್ಥಳೀಯರಿಗೆ ಮಾತ್ರವಲ್ಲ, ಪ್ರವಾಸಿಗರಿಗೂ ಕೂಡ ಆಕರ್ಷಣೀಯ ಕೇಂದ್ರವಾಗಲಿದೆ.  ಈ ಪ್ರಯತ್ನಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.

ಮಿತ್ರರೇ,

ಯಾವುದೇ ಒಂದು ಸಮಾಜದಲ್ಲಿ, ಸಮಾಜದ ಪ್ರಬುದ್ಧ ವರ್ಗದವರು, ಸಮಾಜದ ಲೇಖಕರು ಅಥವಾ ಬರಹಗಾರರು ನಮ್ಮ ಸಮಾಜದ ಮಾರ್ಗದರ್ಶಕರು ಮತ್ತು ಶಿಕ್ಷಕರಿದ್ದಂತೆ. ನಮ್ಮ ಶಾಲಾ ಶಿಕ್ಷಣ ಮುಕ್ತಾಯಗೊಳ್ಳುತ್ತದೆ. ಆದರೆ ಜೀವನ ಪರ್ಯಂತ ಪ್ರತಿ ದಿನ ನಮ್ಮ ಕಲಿಕೆ ಮುಂದುವರಿಯುತ್ತದೆ. ಅದರಲ್ಲಿ ಪುಸ್ತಕಗಳು ಮತ್ತು ಲೇಖಕರ ಅತ್ಯಂತ ಮಹತ್ವದ ಪಾತ್ರವಿದೆ. ನಮ್ಮ ದೇಶದಲ್ಲಿ ನಿರಂತರ ಬರವಣಿಗೆಯ ಪ್ರಗತಿಯಲ್ಲಿ ಭಾರತೀಯತೆ ಮತ್ತು ರಾಷ್ಟ್ರೀಯತೆಯನ್ನು ಕಾಣಬಹುದಾಗಿದೆ.

ಸ್ವಾತಂತ್ರ್ಯ ಸಂಗ್ರಾಮದ ವೇಳೆ ಪ್ರತಿಯೊಬ್ಬ ಅಗ್ರ ನಾಯಕರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಬರಹಗಳೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಾವು ಹೆಸರಾಂತ ಸಂತರು ಮತ್ತು ವಿಜ್ಞಾನಿಗಳಲ್ಲೂ ಕೂಡ ಲೇಖಕರು ಮತ್ತು ಬರಹಗಾರರಾಗಿರುವುದನ್ನು ಕಂಡಿದ್ದೇವೆ. ಆ ಸಂಪ್ರದಾಯವನ್ನು ಜೀವಂತವಾಗಿ ಇಡಲು ನೀವೆಲ್ಲಾ ನಿರಂತರ ಪ್ರಯತ್ನಗಳನ್ನು ನಡೆಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಅದರಲ್ಲಿ ಇನ್ನೊಂದು ಒಳ್ಳೆಯ ಸಂಗತಿ ಎಂದರೆ, ರಾಜಸ್ಥಾನ ಪತ್ರಿಕಾ ಬಳಗ ನಾವು ವಿದೇಶಗಳನ್ನು ಅಂಧಾಭಿಮಾನಿಯಾಗಿ ಅನುಕರಿಸುವ ಸ್ಪರ್ಧೆಯಲ್ಲಿಲ್ಲ ಎಂದು ಧೈರ್ಯವಾಗಿ ಹೇಳುತ್ತಿರುವುದು. ನೀವು ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ನಾಗರಿಕತೆಯನ್ನು ಮುಂದುವರಿಸಲು ಮತ್ತು ಮೌಲ್ಯಗಳನ್ನು ಉಳಿಸಲು ಆದ್ಯತೆ ನೀಡುತ್ತಿದ್ದೀರಿ.

ಗುಲಾಬ್ ಕೊಥಾರಿಜಿ ಅವರ ಕೃತಿಗಳಾದ ಸಂವಾದ್ ಉಪನಿಷತ್ ಮತ್ತು ಅಕ್ಷರ ಯಾತ್ರ, ಇದಕ್ಕೆ ತಾಜಾ ಉದಾಹರಣೆಯಾಗಿವೆ. ಗುಲಾಬ್ ಕೊಥಾರಿಜಿ ಅವರು ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪತ್ರಿಕಾ ಬಳಗ ಈ ಮೂಲಕ ತನ್ನ ಪರಂಪರೆ ಮುಂದುವರಿಸಿದೆ. ಕರ್ಪೂರ್ ಚಂದ್ರ ಕುಲಿಶ್ ಜಿ ಅವರು ಪತ್ರಿಕಾ ಬಳಗವನ್ನು ಭಾರತೀಯ ಸೇವೆಗೆ ಮತ್ತು ಭಾರತೀಯತೆಗೆ ಮೀಸಲಿಟ್ಟು ಆರಂಭಿಸಿದ್ದರು. ಪತ್ರಿಕೋದ್ಯಮಕ್ಕೆ ಅವರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸುತ್ತೇವೆ. ಆದರೆ ಕುಲಿಶ್ ಜಿ ಅವರು ವೇದದ ಜ್ಞಾನವನ್ನು ಸಮಾಜಕ್ಕೆ ಕೊಂಡೊಯ್ಯಲು ಮಾಡಿದ ಪ್ರಯತ್ನಗಳು ಅತ್ಯಂತ ಅದ್ಭುತ ಕೊಡುಗೆಗಳಾಗಿವೆ. ದಿವಂಗತ ಕುಲಿಶ್ ಜಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಹಲವು ಸಂದರ್ಭಗಳು ನನಗೆ ಲಭಿಸಿದ್ದವು. ಅವರು ನನ್ನನ್ನು ಇಷ್ಟಪಡುತ್ತಿದ್ದರು. ಅವರು ಸದಾ ಪತ್ರಿಕೋದ್ಯಮದಲ್ಲಿ ಸಕಾರಾತ್ಮಕತೆಯ ಮೂಲಕ ಮಹತ್ವವನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಿದ್ದರು.

ಮಿತ್ರರೇ,

ಒರ್ವ ಪತ್ರಕರ್ತನಾಗಿ ಅಥವಾ ಬರಹಗಾರಾಗಿ ಮಾತ್ರ ಸಮಾಜಕ್ಕೆ ಸಕಾರಾತ್ಮಕವಾದುದನ್ನು  ನೀಡಬೇಕು ಎಂಬ ಅಗತ್ಯವೇನಿಲ್ಲ. ಸಕಾರಾತ್ಮಕತೆ ಒರ್ವ ಸಾರ್ವಜನಿಕರಾಗಿ ನಮ್ಮೆಲ್ಲರಿಗೂ ಅಗತ್ಯವಿದೆ. ಕುಲಿಶ್ ಜಿ ಅವರ ಸಕಾರಾತ್ಮಕ ಸಿದ್ಧಾಂತ ಮತ್ತು ಬದ್ಧತೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿರುವ ಗುಲಾಬ್ ಕೋಥಾರಿಜಿ ಮತ್ತು ಪತ್ರಿಕಾ ಬಳಗದ ಕಾರ್ಯ ನನಗೆ ತೃಪ್ತಿ ತಂದಿದೆ. ಗುಲಾಬ್ ಕೋಥಾರಿಜಿ ಅವರು ಕೊರನಾ ಸಂದರ್ಭದಲ್ಲಿ ನಾನು ಹಲವು ಮುದ್ರಣ ಮಾಧ್ಯಮದ ಮಿತ್ರರ ಸಭೆ ಕರೆದಿದ್ದನ್ನು ನೆನಪು ಮಾಡಿಕೊಂಡರು, ಆಗಲೂ ನಾನು ಹೇಳಿದ್ದೆ, ನಿಮ್ಮ ಸಲಹೆ ಮತ್ತು ಸೂಚನೆಗಳು ಸದಾ ನಿಮ್ಮ ತಂದೆಯನ್ನು ನೆನಪಿಸುತ್ತದೆ ಎಂದು. ಸಂವಾದ ಉಪನಿಷತ್ ಮತ್ತು ಅಕ್ಷರ ಯಾತ್ರ ಕೃತಿಗಳು, ನೀವು ಹೇಗೆ ನಿಮ್ಮ ತಂದೆಯವರ ವೈದಿಕ ಪರಂಪರೆಯನ್ನು ಎಷ್ಟು ಪ್ರಬಲವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೀರಿ ಎಂಬುದಕ್ಕೆ ನಿದರ್ಶನವಾಗಿದೆ.

ಮಿತ್ರರೇ,

ಗುಲಾಬ್ ಜಿ ಅವರು ಕೃತಿಗಳನ್ನು ನಾನು ಓದುತ್ತಿದ್ದಾಗ, ನನಗೆ ಅವರ ಸಂಪಾದಕೀಯಗಳು ನೆನಪಾದವು. ನಾನು 2019ರ ಚುನಾವಣಾ ಫಲಿತಾಂಶದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಮಾಡಿದ ಭಾಷಣದ ಕುರಿತು ಕೋಥಾರಿಜಿ ಅವರು “ಸ್ತುತ್ಯಾ ಸಂಕಲ್ಪ’ ಬರೆದಿದ್ದರು. ನನ್ನ ಭಾಷಣ ಕೇಳಿದ ನಂತರ ಅವರು ಕೃತಿಯನ್ನು ಬರೆದಿದ್ದರು, ಅವರು ದೇಶದ 130 ಕೋಟಿ ಜನರಿಗೆ ನನ್ನ ಅನಿಸಿಕೆಗಳನ್ನು ತಲುಪಿಸಿದ್ದೀರಿ ಎಂದಿದ್ದರು. ಕೋಥಾರಿಜಿ ಅವರೇ, ನಾನು ಯಾವಾಗಲೇ ನಿಮ್ಮ ಕೃತಿಗಳ ಮೂಲಕ ಉಪನಿಷತ್ ಗಳನ್ನು ಮತ್ತು ವೈದಿಕ ಉಪನ್ಯಾಸಗಳನ್ನು ಅರ್ಥೈಸಿಕೊಳ್ಳುತ್ತೇನೆ, ಆಗೆಲ್ಲಾ ನನಗೆ ನನ್ನದೇ ಆನುಭವವನ್ನು ನಾವು ಓದುತ್ತಿದ್ದೇನೆ ಎಂದೆನಿಸುತ್ತದೆ.

ಮಾನವ ಕಲ್ಯಾಣಕ್ಕೆ ಸಂಬಂಧಿಸಿದ ಅಥವಾ ಸಾಮಾನ್ಯ ಜನರ ಸೇವೆಗೆ ಸಂಬಂಧಿಸಿದ ಯಾವುದೇ ವಿಷಯಗಳಿದ್ದರೂ ಸಹ ಅವು ಎಲ್ಲ ಹೃದಯಗಳಿಗೆ ಸಂಬಂಧಿಸಿದವು ಎಂಬುದು ನನ್ನ ಭಾವನೆ. ಹಾಗಾಗಿಯೇ ನಮ್ಮ ವೇದಗಳು, ವೇದದ ಅಭಿಪ್ರಾಯಗಳು ಸರ್ವಕಾಲಕ್ಕೂ ಪ್ರಸ್ತುತ. ವೇದ ಮಂತ್ರಗಳ ಹಿಂದೆ ಸಂತರ ದೂರದೃಷ್ಟಿಯ ಚಿಂತನೆಗಳಿವೆ, ಅವುಗಳಲ್ಲಿ ಮಾನವೀಯ ಸಿದ್ಧಾಂತ ಮತ್ತು ಸ್ಪೂರ್ತಿ ಇರುತ್ತದೆ. ಆದ್ದರಿಂದ ನಮ್ಮ ವೇದ ಮತ್ತು ನಮ್ಮ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅದೇ ರೀತಿ ಈ ಉಪನಿಷತ್ ಸಂವಾದ ಮತ್ತು ಅಕ್ಷರ ಯಾತ್ರ ಕೃತಿಗಳೂ ಸಹ ಭಾರತೀಯ ತತ್ವಶಾಸ್ತ್ರಗಳಂತೆ ನಮ್ಮ ಜನರನ್ನು ತಲುಪಲಿ ಎಂದು ಬಯಸುತ್ತೇನೆ. ಟ್ವೀಟ್ ಮತ್ತು ಪಠ್ಯಗಳ ಇಂದಿನ ಕಾಲದಲ್ಲಿ, ನಮ್ಮ ಹೊಸ ತಲೆಮಾರಿನ ಜನಾಂಗ ಗಂಭೀರ ಜ್ಞಾನದಿಂದ ದೂರವುಳಿಯುವಂತಾಗಬಾರದು.

ಮಿತ್ರರೇ,

ನಮ್ಮ ಉಪನಿಷತ್ ಗಳನ್ನು ಅರ್ಥೈಸಿಕೊಂಡಿರುವುದಕ್ಕೆ, ವೇದಗಳ ಸಿದ್ಧಾಂತ, ಅವು ಕೇವಲ ಆಧ್ಯಾತ್ಮಿಕ ಅಥವಾ ತಾತ್ವಿಕ ಆಕರ್ಷಣೆಗಲ್ಲ. ವೇದ ಮತ್ತು ವೇದಾಂತಗಳಲ್ಲಿ ಸೃಷ್ಟಿ ಮತ್ತು ವಿಜ್ಞಾನದ ಸಿದ್ಧಾಂತವಿದ್ದು, ಅದು ನಮ್ಮ ಹಲವು ವಿಜ್ಞಾನಿಗಳನ್ನು ಆಕರ್ಷಿಸಿದೆ ಮತ್ತು ಹಲವು ವಿಜ್ಞಾನಿಗಳು ಆದರ ಬಗ್ಗೆ ಅತೀವ ಆಸಕ್ತಿ ತೋರುತ್ತಿದ್ದಾರೆ.  ನಾವೆಲ್ಲಾ ನಿಕೋಲಾ ತೆಸ್ಲಾ ಅವರ ಹೆಸರನ್ನು ಕೇಳಿದ್ದೇವೆ, ತೆಸ್ಲಾ ಇಲ್ಲದೆ ಆಧುನಿಕ ಜಗತ್ತು ನಾವೀಗ ನೋಡುತ್ತಿರುವಂತೆ ಇರುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರು ಶತಮಾನಗಳ ಹಿಂದೆ ಅಮೆರಿಕಾಕ್ಕೆ ತೆರಳಿದ್ದಾಗ ಅವರು ನಿಕೋಲಾ ತೆಸ್ಲಾ ರನ್ನು ಭೇಟಿ ಮಾಡಿದ್ದರು. ವಿವೇಕಾನಂದರು ತಾವು ಉಪನಿಷತ್ ಮತ್ತು ವೇದಾಂತದಲ್ಲಿ ಜಗತ್ತಿನ ಬಗ್ಗೆ ವಿಶ್ಲೇಷಣೆಯನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದನ್ನು ಕೇಳಿ ತೆಸ್ಲಾ ಆಶ್ಚರ್ಯಚಕಿತರಾಗಿದ್ದರು.

ಜಗತ್ತನ್ನು ಸಂಸ್ಕೃತ ಪದಗಳಾದ ಆಕಾಶ ಮತ್ತು ಪ್ರಾಣದ ಹೆಸರಿನಲ್ಲಿ ವಿವರವಾಗಿ ಚರ್ಚಿಸಿರುವ ತೆಸ್ಲಾ, ಆಧುನಿಕ ವಿಜ್ಞಾನ ಭಾಷೆಯಲ್ಲಿ ಗಣಿತದ ಸಮೀಕರಣದ ಮೂಲಕ  ತರಬಹುದು ಎಂದು ಹೇಳಿದ್ದರು. ಅವರು ಈ ಜ್ಞಾನದ ಮೂಲಕ ವಿಜ್ಞಾನದ ಹಲವು ನಿಗೂಢಗಳನ್ನು ಬಯಲು ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಆದ್ದರಿಂದ ಆನಂತರ ಹಲವು ಸಂಶೋಧನೆಗಳು ನಡೆದರೂ ಸಹ, ಸ್ವಾಮಿ ವಿವೇಕಾನಂದ ಮತ್ತು ನಿಕೋಲಾ ತೆಸ್ಲಾ ನಡುವಿನ ಸಮಾಲೋಚನೆ ನಂತರ ನಮ್ಮ ಮುಂದೆ ಹಲವು ರೀತಿಯ ವಿಷಯಗಳು ಬಂದು ಹೋಗಿವೆ. ಆದರೂ ಸಹ, ಹಲವು ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಒಂದು ಸನ್ನಿವೇಶ ನಮ್ಮನ್ನು ನಮ್ಮ ಜ್ಞಾನದ ಬಗ್ಗೆ ಮರುಆಲೋಚನೆ ಮಾಡುವಂತೆ ಸ್ಪೂರ್ತಿ ನೀಡುತ್ತದೆ. ಇಂದು ನಮ್ಮ ಯುವಕರು ಅದನ್ನು ತಿಳಿದುಕೊಳ್ಳಬೇಕು, ಆಲೋಚಿಸಬೇಕು ಮತ್ತು ಆ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಸಂವಾದ ಉಪನಿಷತ್ ನಂತಹ ಪುಸಕ್ತಗಳು ಹಾಗೂ ಅಕ್ಷರ ಯಾತ್ರದ ಕೃತಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು, ಅವು ನಮ್ಮ ಯುವಕರಿಗೆ ಹೊಸ ಆಯಾಮಗಳ ಬಗ್ಗೆ ತೆರೆದುಕೊಳ್ಳಲು ಮತ್ತು ಅವರ ತಾತ್ವಿಕ ಜ್ಞಾನವನ್ನು ಹೆಚ್ಚಿಸಲು ನೆರವಾಗುತ್ತವೆ.

ಮಿತ್ರರೇ,

ನಮ್ಮ ಭಾಷೆಗಳಲ್ಲಿನ ಮೊದಲನೇ ಪಾಠದಲ್ಲಿ ಅಕ್ಷರಗಳು ಮತ್ತು ಅವುಗಳ ಭಾವನೆಗಳಿರುತ್ತವೆ. ಸಂಸ್ಕೃತದಲ್ಲಿನ ಅಕ್ಷರಗಳ ಅರ್ಥವನ್ನು ಅಳಿಸಲಾಗದು, ಅಂದರೆ ಅವು ಸದಾ ನಮ್ಮೊಂದಿಗಿರುತ್ತದೆ. ಇದು ಪರಿಕಲ್ಪನೆಯ ಶಕ್ತಿ, ಅದೇ ಸಾಮರ್ಥ್ಯ. ಸಾವಿರಾರು ವರ್ಷಗಳ ಹಿಂದೆ ಸಂತರು, ಶ್ರೀಗಳು, ವಿಜ್ಞಾನಿಗಳು ಅಥವಾ ತತ್ವಜ್ಞಾನಿಗಳ ಪರಿಕಲ್ಪನೆಗಳು ಮತ್ತು ಜ್ಞಾನ, ಈಗಲೂ ಸಹ ಇಡೀ ಪ್ರಪಂಚವನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಆದ್ದರಿಂದ ನಮ್ಮ ಉಪನಿಷತ್ ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಅಕ್ಷರ ಬ್ರಹ್ಮನ ಬಗ್ಗೆ ಉಲ್ಲೇಖವಿದೆ ಮತ್ತು ಅ ಕುರಿತ ಸಿದ್ದಾಂತ  ‘अक्षरम् ब्रह्म परमम्’ ಉಲ್ಲೇಖವೂ ಇದೆ.  ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಹೀಗೆ  -“शब्द ब्रह्मणि निष्णातः परम् ब्रह्माधि गच्छति” ಹೇಳಲಾಗಿದೆ, ಅಂದರೆ ಇಡೀ ಪ್ರಪಂಚ. ಯಾರು ಈ ಇಡೀ ಪ್ರಪಂಚವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅವರು ಮುಕ್ತ ಅಥವಾ ಸಾಕ್ಷಾತ್ಕಾರ ಪಡೆಯಲು ಸಾಧ್ಯವೆಂದು.

ಅಕ್ಷರವನ್ನೇ ದೇವರು ಎಂದು ಬಣ್ಣಿಸಿರುವ ಮತ್ತು ಅಕ್ಷರವನ್ನೇ ವೈಭವ ಎಂದು ಉದಾಹರಣೆ ನೀಡಿರುವುದನ್ನು ನಾವೆಲ್ಲೂ ಕಾಣಲಾಗದು. ಆದ್ದರಿಂದ ಅಕ್ಷರಗಳ ಮೂಲಕ ಸತ್ಯವನ್ನು ನುಡಿಯುವುದು ಮತ್ತು ಪದಗಳ ಮೂಲಕ ಸಕಾರಾತ್ಮಕ ಶಕ್ತಿ ನೀಡುವುದು, ಅಕ್ಷರ ಸೃಷ್ಟಿ ಹಿಂದಿನ ಚಿಂತನೆಯಾಗಿದೆ, ಇದು ಭಾರತೀಯರ ಮನ್ಸದಸಿನ ಸ್ವಭಾವವಾಗಿದೆ. ಇದು ನಮ್ಮ ಪ್ರಕೃತಿ. ನಾವು ಈ ಸಾಮರ್ಥ್ಯವನ್ನು ಅರಿತುಕೊಂಡರೆ, ನಾವು ಒರ್ವ ಲೇಖಕರಾಗಿ ಅಥವಾ ಬರಹಗಾರರಾಗಿ ಸಮಾಜದ ಬಗೆಗಿನ ನಮ್ಮ ಪ್ರಾಮುಖ್ಯತೆ ಮತ್ತು ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳಬಹುದಾಗಿದೆ.

ಬಡವರಿಗೆ ಉಚಿತ ಶೌಚಾಲಯಗಳನ್ನು ನಿರ್ಮಿಸಿಕೊಡುವ ಸ್ವಚ್ಛ ಭಾರತ್ ಅಭಿಯಾನವಾಗಿರಬಹುದು, ಹಲವು ಕಾಯಿಲೆಗಳ ಬಗ್ಗೆ ಅಥವಾ ಸೌದೆಯ ಹೊಗೆಯಿಂದ ನಮ್ಮ ತಾಯಂದಿರು ಮತ್ತು ಸಹೋದರಿಯನ್ನು ರಕ್ಷಿಸುವ ಉಜ್ವಲ ಅನಿಲ ಯೋಜನೆ ಆಗಿರಬಹುದು ಅಥವಾ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಆಗಿರಬಹುದು ಸರ್ಕಾರದ ಹಲವು ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಧ್ಯಮಗಳು ಮಾಡುತ್ತಿರುವುದನ್ನು ನೀವು ನೋಡಿರಬಹುದು.ಈ ಸಾಂಕ್ರಾಮಿಕದ ಸಮಯದಲ್ಲಿ ಕೊರೊನಾ ವಿರುದ್ಧ ಜನ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಅಸಾಧಾರಣ ಸೇವೆಯನ್ನು ಸಲ್ಲಿಸುತ್ತಿವೆ. ನಮ್ಮ ಮಾಧ್ಯಮಗಳು ಸರ್ಕಾದ ಕೆಲಸ ಕಾರ್ಯಗಳನ್ನು ವಿಶ್ಲೇಷಿಸುವ ಕಾರ್ಯವನ್ನೂ ಸಹ ಉತ್ತಮವಾಗಿ ಮಾಡುತ್ತಿವೆ, ಕೆಲವು ಅಂಶಗಳನ್ನು ಬೊಟ್ಟು ಮಾಡಿ ತೋರಿಸುವುದು ಅಥವಾ ತಳಮಟ್ಟದಲ್ಲಿ ಸರ್ಕಾರದ ಯೋಜನೆಗಳಲ್ಲಿನ ನೂನ್ಯತೆಗಳನ್ನು ಎತ್ತಿ ತೋರಿಸಿ ಟೀಕೆ ಮಾಡುವುದನ್ನೂ ನೋಡಿದ್ದೇವೆ. ಕೆಲವೊಮ್ಮೆ ಮಾಧ್ಯಮಗಳೂ ಕೂಡ ಟೀಕೆಗೆ ಒಳಪಡುವ ಸಂದರ್ಭಗಳನ್ನೂ ಕಾಣಬಹುದಾಗಿದೆ, ಇದು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು. ಆದರೆ ಟೀಕೆಗಳಿಂದಲೂ ಕಲಿಯುವುದು ಸಾಕಷ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಕೂಡ ಅಷ್ಟೇ ಮುಖ್ಯ. ಆದ್ದರಿಂದ ಇಂದು ನಮ್ಮ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಬಲವರ್ಧನೆಯಾಗಿದೆ.

ಮಿತ್ರರೇ,

ನಮ್ಮ ಪರಂಪರೆ, ವಿಜ್ಞಾನ, ಸಂಸ್ಕೃತಿ ಮತ್ತು ನಮ್ಮ ಸಾಮರ್ಥ್ಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಮತ್ತು ಅದೇ ಆತ್ಮ ವಿಶ್ವಾಸದೊಂದಿಗೆ ಅವುಗಳನ್ನು ಮುನ್ನಡೆಸಿಕೊಂಡು ಹೋಗಬೇಕು. ನಾವು ಆತ್ಮ ನಿರ್ಭರ ಭಾರತದ ಬಗ್ಗೆ ಅಥವಾ ಸ್ಥಳೀಯ ಉತ್ಪನ್ನಗಳಿಗೆ ಧನಿ (ವೋಕಲ್ ಫಾರ್ ಲೋಕಲ್ ) ಆಗುವ ಬಗ್ಗೆ ಮಾತನಾಡುವಾಗ, ನಾವು ದೊಡ್ಡ ಅಭಿಯಾನವನ್ನು ರೂಪಿಸಲು ಮಾಧ್ಯಮಗಳು ನಮಗೆ ಬೆಂಬಲ ನೀಡುವ ಸಂಕಲ್ಪ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಮಿತ್ರರೇ, ನಾವು ಈ ದೂರದೃಷ್ಟಿಯ ಕನಸವನ್ನು ಇನ್ನಷ್ಟು ವಿಸ್ತಾರಗೊಳಿಸಬೇಕಿದೆ.

ಭಾರತದ ಸ್ಥಳೀಯ ಉತ್ಪನ್ನಗಳು ಇಂದು ಜಾಗತಿಕವಾಗುತ್ತಿವೆ, ಆದರೆ ಭಾರತದ ಧ್ವನಿಯೂ ಕೂಡ ಜಾಗತಿಕವಾಗುತ್ತಿದೆ. ಇದೀಗ ಇಡೀ ವಿಶ್ವ ಭಾರತವನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸುತ್ತಿದೆ. ಬಹುತೇಕ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಭಾರತದ ಇರುವಿಕೆ ಎದ್ದುಕಾಣುತ್ತಿದೆ. ಅಂತೆಯೇ ಭಾರತೀಯ ಮಾಧ್ಯಮಗಳೂ ಕೂಡ ಜಾಗತಿಕವಾಗುವ ಅಗತ್ಯವಿದೆ. ನಮ್ಮ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಜಾಗತಿಕ ಮನ್ನಣೆಗಳಿಸಬೇಕಾಗಿದೆ, ಇಂದಿನ ಡಿಜಿಟಲ್ ಯುಗದಲ್ಲಿ ನಾವು ಇಡೀ ವಿಶ್ವವನ್ನು ಡಿಜಿಟಲ್ ಮೂಲಕ ತಲುಪಬೇಕಿದೆ, ಭಾರತೀಯ ಸಂಸ್ಥೆಗಳು ಜಗತ್ತಿನ ನಾನಾ ಕಡೆ ಇರುವವರನ್ನು ಗುರ್ತಿಸಿ ನಾನಾ ಬಗೆಯ ಸಾಹಿತ್ಯ ಪ್ರಶಸ್ತಿಗಳನ್ನು ನೀಡಬೇಕು, ಇದು ಇಂದಿನ ದಿನಮಾನದಲ್ಲಿ ಅತ್ಯಂತ ಅಗತ್ಯವಾಗಿದೆ ಮತ್ತು ದೇಶಕ್ಕೂ ಕೂಡ ಇದು ಅತ್ಯಗತ್ಯವಾಗಿದೆ.

ಶ್ರೀ ಕರ್ಪೂರ್ ಚಂದ್ರ ಕುಲಿಶ್ ಜಿ ಅವರ ನೆನಪಿನಲ್ಲಿ ಪತ್ರಿಕಾ ಬಳಗ ಅಂತಾರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಆರಂಭಿಸಿದೆ ಎಂದು ನಾನು ಕೇಳಿ ತಿಳಿದಿದ್ದೇನೆ. ಅದಕ್ಕಾಗಿ ನಾನು ಬಳಗವನ್ನು ಅಭಿನಂದಿಸುತ್ತೇನೆ. ಇದರಿಂದ ಜಾಗತಿಕ ಮಾಧ್ಯಮ ವೇದಿಕೆಯಲ್ಲಿ ಭಾರತಕ್ಕೆ ಹೊಸ ಹೆಗ್ಗುರುತು ನೀಡಲಿದೆ ಎಂಬ ವಿಶ್ವಾಸ ನನಗಿದೆ. ಕೊರೊನಾ ಸಮಯದಲ್ಲಿ ಸಾರ್ವಜನಿಕ ಜಾಗೃತಿಗೆ ಒತ್ತು ನೀಡಿದ್ದಕ್ಕಾಗಿ ಮತ್ತೊಮ್ಮೆ ನಾನು ಪತ್ರಿಕಾ ಬಳಗವನ್ನು ಅಭಿನಂದಿಸಲು ಬಯಸುತ್ತೇನೆ. ಆ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಬೇಕಿದೆ. ನಮ್ಮ ದೇಶದ ಜನರು ಆರೋಗ್ಯದಿಂದಿರಬೇಕು ಮತ್ತು ಆರ್ಥಿಕತೆಯೂ ಚುರುಕುಗೊಳ್ಳಬೇಕು, ಇಂದು ಇದು ನಮ್ಮ ದೇಶದ ಆದ್ಯತೆಯಾಗಿದೆ. ದೇಶ ಸದ್ಯದಲ್ಲೇ ಕೊರೊನಾ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಲಿದೆ ಮತ್ತು ದೇಶದ ಪಯಣವೂ ಕೂಡ ಅಕ್ಷರ ಯಾತ್ರೆಯಾಗಲಿದೆ ಎಂಬ ವಿಶ್ವಾಸ ನನಗಿದೆ.

ಇದರೊಂದಿಗೆ ಎಲ್ಲರಿಗೂ ಶುಭ ಕಾಮನೆಗಳು, ಎಲ್ಲರಿಗೂ ಅನಂತ, ಅನಂತ ಧನ್ಯವಾದಗಳು..!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi