ರಾಜ್ಯ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ 5 ವರ್ಷಗಳಲ್ಲಿ ಸರ್ಕಾರ, ಉತ್ತಮ ಆಡಳಿತಕ್ಕೆ ಹೊಸ ಚಿಂತನೆಗಳು ಮತ್ತು ಕ್ರಮಗಳನ್ನು ಜಾರಿಗೆ ತಂದಿದೆ ಎಂದರು. ಡಿಜಿಟಲ್ ಇಂಡಿಯಾ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಗಳು ಇದು ಆಡಳಿತದಲ್ಲಿ ಹೊಸ ವಿಧಾನಗಳು ಮತ್ತು ಹೊಸ ಆಲೋಚನೆಗಳಿಗೆ ಉತ್ತಮ ಉದಾಹರಣೆಯಾಗಿದೆ, 2014 ಕ್ಕೂ ಮೊದಲು ಕೇವಲ 59 ಗ್ರಾಮ ಪಂಚಾಯತ್ ಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಇತ್ತು ಆದರೆ ಕಳೆದ 5 ವರ್ಷಗಳಲ್ಲಿ 1.25 ಲಕ್ಷ ಪಂಚಾಯತ್ ಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸಲಾಗಿದೆ ಎಂದು ಹೇಳಿದರು.   

2014 ರಲ್ಲಿ ದೇಶದಲ್ಲಿ 80 ಸಾವಿರ ಸಾಮಾನ್ಯ ಸೇವಾ ಕೇಂದ್ರಗಳಿದ್ದವು ಆದರೆ ಇಂದು ಇವುಗಳ ಸಂಖ್ಯೆ 3 ಲಕ್ಷ 6 ಸಾವಿರಕ್ಕೇರಿದೆ ಎಂದೂ ಹೇಳಿದರು. ಈ ಕೇಂದ್ರಗಳಲ್ಲಿ ಸುಮಾರು 12 ಲಕ್ಷ ಗ್ರಾಮೀಣ ಯುವಜನತೆಗೆ ಎಲ್ಲ ಸರ್ಕಾರಿ ಸೇವೆಗಳ ಆನ್ ಲೈನ್ ಸಲ್ಲಿಕೆಯಾಗುತ್ತಿದೆ. 

ಭೀಮ್ ಆಪ್ ಜಾಗತಿಕವಾಗಿ ಒಂದು ಸುರಕ್ಷಿತ ಡಿಜಿಟಲ್ ವ್ಯವಹಾರದ ವೇದಿಕೆಯೆಂದು ಪರಿಗಣಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಜನವರಿ ತಿಂಗಳಲ್ಲಿ ಭೀಮ್ ಆಪ್ ಮೂಲಕ ರೂ 2 ಲಕ್ಷ 16 ಸಾವಿರ ಕೋಟಿಗೂ ಹೆಚ್ಚು  ದಾಖಲೆಯ ವ್ಯವಹಾರವಾಗಿದೆ ಎಂದು ಅವರು ಹೇಳಿದರು. ರುಪೆ ಕಾರ್ಡ್ ಕೂಡಾ ಬಹಳಷ್ಟು ರಾಷ್ಟ್ರಗಳಲ್ಲಿ ಮಾನ್ಯತೆಯನ್ನು ಪಡೆಯುತ್ತಿದೆ ಎಂದು ಅವರು ತಿಳಿಸಿದರು.

ಜಲ್ ಜೀವನ್ ಮಿಷನ್

ಸರ್ಕಾರಿ ವಿಧಾನದ ಮತ್ತೊಂದು ನಿದರ್ಶನವೆಂದರೆ ಜಲ್ ಜೀವನ್ ಯೋಜನೆ ಎಂದು ಪ್ರಧಾನ ಮಂತ್ರಿ ಹೇಳಿದರು. ಪ್ರತಿ ಮನೆಗೂ ನೀರು ಸರಬರಾಜು ಪೈಪ್ ಅಳವಡಿಸುವುದೇ ಈ ಯೋಜನೆಯ ಗುರಿಯಾಗಿದೆ, ಜೊತೆಗೆ ಇದು ಸ್ಥಳೀಯ ಆಡಳಿತದ ಉತ್ತಮ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು. 

ಈ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದ್ದರೂ ಇದರ ನಿರ್ವಹಣೆ ಗ್ರಾಮ ಮಟ್ಟದಲ್ಲಿರುತ್ತದೆ. ಗ್ರಾಮ ಪಂಚಾಯ್ತಿಗಳು ಇದನ್ನು ಕಾರ್ಯರೂಪಕ್ಕೆ ತರುತ್ತವೆ, ಹಣಕಾಸು ನಿರ್ವಹಣೆ ಮಾಡುತ್ತವೆ ಮತ್ತು ಪೈಪ್ ಲೈನ್ ಅಳವಡಿಕೆ, ಟ್ಯಾಂಕ್ ಗಳ ನಿರ್ಮಾಣ ಇತ್ಯಾದಿಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ತೆಗೆದುಕೊಳ್ಳುತ್ತವೆ ಎಂದು ಅವರು ಹೇಳಿದರು.

 

ಸಹಕಾರಿ ಸಂಯುಕ್ತತೆಯ ಉತ್ತಮ ಉದಾಹರಣೆ : ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ

ದೇಶದ ಸುಮಾರು 100 ಕ್ಕೂ  ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಹುರುಪಿನಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು.  ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮಗಳು ಜಿಲ್ಲೆಯನ್ನೇ ತಮ್ಮ ಕಾರ್ಯಕ್ಷೇತ್ರವಾಗಿಟ್ಟುಕೊಂಡು ಹೊರಹೊಮ್ಮುತ್ತಿರುವುದು ಸಹಕಾರಿ ಸಂಯುಕ್ತತೆಯ ಉತ್ತಮ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು. ಈ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಬಡವರು, ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು.

ಸಮಾಜದ ಎಲ್ಲ ವರ್ಗಗಳಿಗಾಗಿ ಸೂಕ್ಷ್ಮವಾಗಿ ಕಾರ್ಯ ನಿರ್ವಹಣೆ 

ಕಳೆದ 5 ವರ್ಷಗಳಲ್ಲಿ ದೇಶದ ಎಲ್ಲ ಬುಡಕಟ್ಟು ಯೋಧರನ್ನು ಗೌರವಿಸುವ ಕೆಲಸ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ದೇಶದೆಲ್ಲೆಡೆ ಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಬುಡಕಟ್ಟು ಕಲೆ ಹಾಗೂ ಸಾಹಿತ್ಯವನ್ನು ಡಿಜಿಟಲ್ ರೂಪಕ್ಕೆ ಬದಲಾಯಿಸಲಾಗುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿರುವ ಕೌಶಲ್ಯಯುತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಏಕಲವ್ಯ ಮಾದರಿಯ ವಸತಿ ಶಾಲೆಗಳ ಸ್ಥಾಪನೆ ಮಾಡಲಾಗುತ್ತಿದೆ.

“ಇಷ್ಟೇ ಅಲ್ಲದೆ, ಅರಣ್ಯದಿಂದ ಹೆಚ್ಚಿನ ಆದಾಯ ಸಂಗ್ರಹಣೆಗೆ ಬುಡಕಟ್ಟು ಪ್ರದೇಶಗಳಲ್ಲಿ 3 ಸಾವಿರಕ್ಕೂ ಹೆಚ್ಚು ಅರಣ್ಯ ಸಂಪತ್ತು ಕೇಂದ್ರಗಳನ್ನು ತೆರೆಯಲಾಗಿದೆ. ಇದು 30 ಸಾವಿರ ಸ್ವಸಹಾಯ ಗುಂಪುಗಳನ್ನು ಒಳಗೊಳ್ಳಲಿದೆ. ಇವುಗಳಲ್ಲಿ 900 ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದ್ದು 2,5 ಲಕ್ಷಕ್ಕೂ ಹೆಚ್ಚು ಬುಡಕಟ್ಟು ಜನರು ಅವುಗಳೊಂದಿಗೆ ಜೊತೆಗೂಡಿದ್ದಾರೆ” ಎಂದು ಪ್ರಧಾನ ಮಂತ್ರಿಗಳು ಹೇಳಿದರು.  

ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ

ಈ ಸರ್ಕಾರ  ಮಹಿಳಾ ಸಬಲೀಕರಣಕ್ಕಾಗಿ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. “ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಿಲಿಟರಿ ಶಾಲೆಯಲ್ಲಿ ಹೆಣ್ಣು ಮಕ್ಕಳ ಪ್ರವೇಶಾತಿಗೆ ಮಾನ್ಯತೆ ನೀಡಲಾಗಿದೆ. ಮಿಲಿಟರಿ ಪೋಲಿಸ್ ಪಡೆಯಲ್ಲಿ ಮಹಿಳಾ ಸಿಬ್ಬಂದಿ ನೇಮಕಾತಿ ಕೂಡಾ ಜಾರಿಯಲ್ಲಿದೆ” ಎಂದು ಪ್ರಧಾನ ಮಂತ್ರಿಗಳು ಹೇಳಿದರು.

ದೇಶದ ಮಹಿಳೆಯರ ಸುರಕ್ಷತೆಗಾಗಿ 600 ಕ್ಕೂ ಹೆಚ್ಚು ಒನ್ ಸ್ಟಾಪ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 6 ನೇ ತರಗತಿಯಿಂದ 12 ನೇ ತರಗತಿಯ ಮಕ್ಕಳಿಗೆ ಪ್ರತಿ ಶಾಲೆಯಲ್ಲೂ ಸ್ವಯಂ ರಕ್ಷಣಾ ತರಬೇತಿಯನ್ನು ನೀಡಲಾಗುತ್ತಿದೆ. ಲೈಂಗಿಕ ಕಿರುಕುಳ ನೀಡುವವರನ್ನು ಪತ್ತೆ ಹಚ್ಚಲು ಮತ್ತು ಅವರ ಮೇಲೆ ನಿಗಾವಹಿಸಲು ಒಂದು ರಾಷ್ಟ್ರೀಯ ದತ್ತಾಂಶ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ದೇಶದ ಪ್ರತಿ ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕೇಂದ್ರಗಳ ಸ್ಥಾಪನೆಯ ಯೋಜನೆ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಲೈಂಗಿಕ ಕಿರುಕುಳದ ಗಂಭೀರ ಪ್ರಕರಣಗಳನ್ನು ನಿಭಾಯಿಸಲು ಪೊಸ್ಕೊ ಕಾಯ್ದೆಗೆ ತಿದ್ದುಪಡಿ ಮಾಡಿ ಕಾಯ್ದೆಯ ವ್ಯಾಪ್ತಿಯನ್ನು ವಿಶಾಲಗೊಳಿಸಲಾಗಿದೆ. ಸೂಕ್ತ ಸಮಯಕ್ಕೆ ನ್ಯಾಯ ಒದಗಿಸಲೆಂದು ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.   

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"Huge opportunity": Japan delegation meets PM Modi, expressing their eagerness to invest in India
NM on the go

Nm on the go

Always be the first to hear from the PM. Get the App Now!
...
Prime Minister expresses concern over earthquake in Myanmar and Thailand
March 28, 2025

The Prime Minister Shri Narendra Modi expressed concern over the devastating earthquakes that struck Myanmar and Thailand earlier today.

He extended his heartfelt prayers for the safety and well-being of those impacted by the calamity. He assured that India stands ready to provide all possible assistance to the governments and people of Myanmar and Thailand during this difficult time.

In a post on X, he wrote:

“Concerned by the situation in the wake of the Earthquake in Myanmar and Thailand. Praying for the safety and wellbeing of everyone. India stands ready to offer all possible assistance. In this regard, asked our authorities to be on standby. Also asked the MEA to remain in touch with the Governments of Myanmar and Thailand.”