ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ  ಪ್ರಧಾನಿ ಶ್ರೀ ನರೇಂದ್ರ ಮೋದಿ, ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ಭಾಷಣವು ಭರವಸೆಯ ಮನೋಭಾವವನ್ನು ಹುಟ್ಟುಹಾಕುತ್ತದೆ ಮತ್ತು ಭವಿಷ್ಯದಲ್ಲಿ ರಾಷ್ಟ್ರವನ್ನು ಮುಂದೆ ಕೊಂಡೊಯ್ಯುವ ಮಾರ್ಗಸೂಚಿಯನ್ನು ಒದಗಿಸುತ್ತದೆ ಎಂದು ಹೇಳಿದರು.
"ನಾವು ಈ ಶತಮಾನದ ಮೂರನೇ ದಶಕವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಅವರ ಭಾಷಣ ಬಂದಿದೆ. ರಾಷ್ಟ್ರಪತಿಯವರ ಭಾಷಣವು ಭರವಸೆಯ ಮನೋಭಾವವನ್ನು ಹುಟ್ಟುಹಾಕುತ್ತದೆ ಮತ್ತು ಇದು ಮುಂದಿನ ದಿನಗಳಲ್ಲಿ ರಾಷ್ಟ್ರವನ್ನು ಮುಂದೆ ಕೊಂಡೊಯ್ಯಲು ಒಂದು ಮಾರ್ಗಸೂಚಿಯನ್ನು ಒದಗಿಸುತ್ತದೆ ”ಎಂದು ಪ್ರಧಾನಿ ಹೇಳಿದರು.
ಈಗ ದೇಶದ ಜನರು ಕಾಯಲು ಸಿದ್ಧರಿಲ್ಲ ಎಂದು ಪ್ರಧಾನಿ ಹೇಳಿದರು. ಅವರು ವೇಗ ಮತ್ತು ಪ್ರಮಾಣ, ದೃಢ ನಿರ್ಣಯ ಮತ್ತು ಖಚಿತ ನಿರ್ಧಾರ, ಸೂಕ್ಷ್ಮತೆ ಮತ್ತು ಪರಿಹಾರವನ್ನು ಬಯಸುತ್ತಾರೆ. ನಮ್ಮ ಸರ್ಕಾರ ವೇಗವಾಗಿ ಕೆಲಸ ಮಾಡಿದೆ. ಇದರ ಫಲಿತಾಂಶವೆಂದರೆ ಐದು ವರ್ಷಗಳಲ್ಲಿ 37 ಮಿಲಿಯನ್ ಜನರು ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ, 11 ಮಿಲಿಯನ್ ಜನರು ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ಹೊಂದಿದ್ದಾರೆ, 13 ಮಿಲಿಯನ್ ಜನರು ತಮ್ಮ ಮನೆಗಳಲ್ಲಿ ಅಡುಗೆ ಅನಿಲ ಸಂಪರ್ಕವನ್ನು ಹೊಂದಿದ್ದಾರೆ. 2 ಕೋಟಿ ಜನರು ಸ್ವಂತ ಮನೆ ಹೊಂದಬೇಕೆಂಬ ಕನಸು ನನಸಾಗಿದೆ. ದೆಹಲಿಯ 1700 ಕ್ಕೂ ಹೆಚ್ಚು ಅಕ್ರಮ ಕಾಲೋನಿಗಳಲ್ಲಿ ಮನೆಗಾಗಿ 40 ಲಕ್ಷ ಜನರ ದೀರ್ಘಕಾಲದ  ಕಾಯುವಿಕೆ ಕೊನೆಗೊಂಡಿದೆ ಎಂದು ಅವರು ಹೇಳಿದರು.
ಕೃಷಿ ಬಜೆಟ್ ಐದು ಪಟ್ಟು ಹೆಚ್ಚಳ
ರೈತರ ಆದಾಯವನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. ಹೆಚ್ಚಿನ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ನೀರಾವರಿ ಸಂಬಂಧಿತ ಯೋಜನೆಗಳ ಸಮಸ್ಯೆಗಳು ದಶಕಗಳಿಂದ ಬಾಕಿ ಉಳಿದಿವೆ. ನಾವು ಬೆಂಬಲ ಬೆಲೆಯನ್ನು ಒಂದೂವರೆ ಪಟ್ಟು ಹೆಚ್ಚಿಸಿದ್ದೇವೆ ಮತ್ತು ಸ್ಥಗಿತಗೊಂಡ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ ಎಂದರು.
“ಐದೂವರೆ ಕೋಟಿಗೂ ಹೆಚ್ಚು ರೈತರು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಗೆ ಸೇರಿದ್ದಾರೆ. ರೈತರಿಗೆ ಹದಿಮೂರೂವರೆ ಕೋಟಿ ರೂಪಾಯಿಗಳ ಪ್ರೀಮಿಯಂ ನೀಡಲಾಗಿದೆ, 56 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಿಮಾ ಹಕ್ಕುಗಳನ್ನು ಇತ್ಯರ್ಥಪಡಿಸಲಾಗಿದೆ ”ಎಂದು ಪ್ರಧಾನಿ ಹೇಳಿದರು. ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಕೃಷಿ ಬಜೆಟ್ ಐದು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. "ಪಿಎಂ-ಕಿಸಾನ್ ಸಮ್ಮಾನ ಯೋಜನೆ ಅನೇಕ ರೈತರ ಜೀವನವನ್ನು ಸುಧಾರಿಸುತ್ತಿದೆ. 45,000 ಕೋಟಿ ರೂ.ಗಳನ್ನು ಇದಕ್ಕಾಗಿ ವರ್ಗಾವಣೆ ಮಾಡಲಾಗಿದ್ದು, ಇದರಿಂದ ಹಲವಾರು ರೈತರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ ಮತ್ತು ಹೆಚ್ಚುವರಿ ಕಡತಗಳ ಕೆಲಸ ಇಲ್ಲ "ಎಂದು ಅವರು ಹೇಳಿದರು.
ಹೆಚ್ಚಿನ ಹೂಡಿಕೆ, ಉತ್ತಮ ಮೂಲಸೌಕರ್ಯ ಮತ್ತು ಗರಿಷ್ಠ ಉದ್ಯೋಗ ಸೃಷ್ಟಿಯೇ ನಮ್ಮ ದೃಷ್ಟಿ
ತಮ್ಮ ಸರ್ಕಾರವು ವಿತ್ತೀಯ ಕೊರತೆಯನ್ನು ನಿಯಂತ್ರಿಸಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಬೆಲೆ ಏರಿಕೆ ಕೂಡ ನಿಯಂತ್ರಣದಲ್ಲಿದೆ ಮತ್ತು ಸ್ಥೂಲ ಆರ್ಥಿಕ ಸ್ಥಿರತೆ ಇದೆ" ಎಂದು ಅವರು ಹೇಳಿದರು.
ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಸರ್ಕಾರ ಕೈಗೊಂಡ ಹಲವು ಕ್ರಮಗಳ ಬಗ್ಗೆ ಶ್ರೀ ಮೋದಿ ತಿಳಿಸಿದರು.
"ಕೈಗಾರಿಕೆ, ನೀರಾವರಿ, ಸಾಮಾಜಿಕ ಮೂಲಸೌಕರ್ಯ, ಗ್ರಾಮೀಣ ಮೂಲಸೌಕರ್ಯ, ಬಂದರುಗಳು, ಜಲಮಾರ್ಗಗಳಲ್ಲಿ ನಾವು ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ" ಎಂದು ಅವರು ಹೇಳಿದರು.
"ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಮುದ್ರಾ ಅನೇಕರ ಜೀವನದಲ್ಲಿ ಸಮೃದ್ಧಿಯನ್ನು ತಂದಿವೆ. ಮುದ್ರಾ ಫಲಾನುಭವಿಗಳಲ್ಲಿ ಹೆಚ್ಚಿನವರು ಮಹಿಳೆಯರು. ಮುದ್ರಾ ಯೋಜನೆಯಡಿ 22 ಕೋಟಿ ರೂ.ಗಳಿಗಿಂತ ಹೆಚ್ಚಿನ ಸಾಲವನ್ನು ಕೋಟ್ಯಂತರ ಯುವಕರಿಗೆ ನೀಡಲಾಗಿದೆ ”
"ಸರ್ಕಾರವು ಕಾರ್ಮಿಕ ಸುಧಾರಣೆಗಳ ಬಗ್ಗೆಯೂ ಕೆಲಸ ಮಾಡುತ್ತಿದೆ ಮತ್ತು ಅದೂ ಸಹ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚರಿಸಿದ ನಂತರ" ಎಂದು ಪ್ರಧಾನಿ ಹೇಳಿದರು.
 “ನಮಗೆ ಮೂಲಸೌಕರ್ಯವು ಆಕಾಂಕ್ಷೆಗಳು ಮತ್ತು ಸಾಧನೆಗಳ ಸಂಯೋಜನೆಯಾಗಿದೆ, ಮೂಲಸೌಕರ್ಯವು ಜನರನ್ನು ಅವರ ಕನಸುಗಳಿಗೆ ಸಂಪರ್ಕಿಸುತ್ತದೆ, ಮಗುವನ್ನು ಅದರ ಶಾಲೆಗೆ, ರೈತನನ್ನು ಮಾರುಕಟ್ಟೆಗೆ, ಉದ್ಯಮಿಗಳನ್ನು ತನ್ನ ಗ್ರಾಹಕರಿಗೆ ಸಂಪರ್ಕಿಸುತ್ತಿದೆ. ಇದು ಜನರನ್ನು ಜನರೊಂದಿಗೆ ಬೆಸೆಯುವ ಬಗೆಗಿನದು ” ಎಮದು ಪ್ರಧಾನಿ ಹೇಳಿದರು.
ಮುಂದಿನ ಪೀಳಿಗೆಯ ಮೂಲಸೌಕರ್ಯವು ಭಾರತದ ಪ್ರಗತಿಗೆ ಕಾರಣವಾಗುವ ವಿಷಯಗಳಲ್ಲೊಂದು ಎಂದು ಪ್ರಧಾನಿ ಹೇಳಿದರು.
"ಹಿಂದೆ, ಮೂಲಸೌಕರ್ಯ ಸೃಷ್ಟಿಯು ಆಯ್ದ ಕೆಲವರಿಗೆ "ಆರ್ಥಿಕ ಅವಕಾಶಗಳನ್ನು" ನೀಡುತ್ತಿತ್ತು. ಇನ್ನು ಹಾಗುವುದಿಲ್ಲ. ನಾವು ಈ ವಲಯವನ್ನು ಪಾರದರ್ಶಕಗೊಳಿಸಿದ್ದೇವೆ ಮತ್ತು ಸಂಪರ್ಕವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ ”ಎಂದು ಅವರು ಹೇಳಿದರು
ಮುಂದಿನ ದಿನಗಳಲ್ಲಿ ನಾವು ಮೂಲಸೌಕರ್ಯ ವಲಯದಲ್ಲಿ 100 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದ್ದೇವೆ. ಇದು ಪ್ರಗತಿ, ಆರ್ಥಿಕತೆ ಮತ್ತು ಉದ್ಯೋಗ ವೃದ್ಧಿಗೆ ಕಾರಣವಾಗುತ್ತದೆ ”ಎಂದು ಅವರು ಹೇಳಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'New India's Aspirations': PM Modi Shares Heartwarming Story Of Bihar Villager's International Airport Plea

Media Coverage

'New India's Aspirations': PM Modi Shares Heartwarming Story Of Bihar Villager's International Airport Plea
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಮಾರ್ಚ್ 2025
March 07, 2025

Appreciation for PM Modi’s Effort to Ensure Ek Bharat Shreshtha Bharat