“ನಾನು ಭಾಷಣ ಆರಂಭಿಸುವ ಮುನ್ನ, ಲತಾ ದೀದಿ ಅವರಿಗೆ ಸಂತಾಪ ಸೂಚಿಸಲು ಬಯಸುತ್ತೇನೆ. ಸಂಗೀತದ ಮೂಲಕ ಅವರು ನಮ್ಮ ದೇಶವನ್ನು ಒಗ್ಗೂಡಿಸಿದರು”
“ಮುಂಬರುವ ವರ್ಷಗಳಲ್ಲಿ ಭಾರತ ಹೇಗೆ ಜಾಗತಿಕ ನಾಯಕತ್ವ ಪಾತ್ರ ವಹಿಸುತ್ತದೆ ಎಂಬುದನ್ನು ಆಲೋಚಿಸಲು ‘ಆಜಾದಿ ಕಾ ಅಮೃತ ಮಹೋತ್ಸವ’ ಪರಿಪಕ್ವ ಸಮಯವಾಗಿದೆ.”
“ಟೀಕೆ, ವಿಮರ್ಶೆ ಎಂಬುದು ಪ್ರಜಾಪ್ರಭುತ್ವದ ಅಗತ್ಯ ಭಾಗ; ಆದರೆ, ಪ್ರತಿಯೊಂದಕ್ಕೂ ಕುರುಡುತನದ ವಿರೋಧ, ಪ್ರತಿರೋಧ ತರವಲ್ಲ”
“ನಾವು ‘ವೋಕಲ್ ಫಾರ್ ಲೋಕಲ್’ ಪರವಾಗಿ ಧ್ವನಿ ಎತ್ತುತ್ತಿದ್ದರೆ, ಅದು ನಾವು ಮಹಾತ್ಮ ಗಾಂಧಿ ಕನಸುಗಳನ್ನು ಈಡೇರಿಸಿದಂತಲ್ಲವೆ? ಹಾಗಿದ್ದಲ್ಲಿ, ಅದನ್ನು ಪ್ರತಿಪಕ್ಷಗಳು ಏಕೆ ಅಣಕಿಸುತ್ತಿವೆ?”
"ಜಾಗತಿಕ ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ"
ಕೋವಿಡ್-19 “ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ದೇಶದ 80 ಕೋಟಿಗಿಂತ ಹೆಚ್ಚಿನ ಬಡವರಿಗೆ ಭಾರತ ಸರ್ಕಾರ ಉಚಿತ ಪಡಿತರ ಖಚಿತಪಡಿಸಿದೆ; ಯಾವ ಭಾರತೀಯನೂ ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಬದ್ಧತೆಯಾಗಿದೆ”
“ಭಾರತದ ಪ್ರಗತಿಗೆ, ಸಣ್ಣ ರೈತರನ್ನು ಸಬಲೀಕರಣಗೊಳಿಸುವುದು ಮುಖ್ಯ; ಸಣ್ಣ ರೈತ ಭಾರತದ ಪ್ರಗತಿಯನ್ನು ಬಲಪಡಿಸುತ್ತಾನೆ”
"ಪಿಎಂ ಗತಿ ಶಕ್ತಿಯು ನಮ್ಮ ಮೂಲಸೌಕರ್ಯ ಸವಾಲುಗಳನ್ನು ಪರಿಹರಿಸಲು ಸಮಗ್ರ ವಿಧಾನವನ್ನು ಪ್ರಸ್ತುತಪಡಿಸುತ್ತದೆ.
“ನಾನು ಭಾಷಣ ಆರಂಭಿಸುವ ಮುನ್ನ ಲತಾ ದೀದಿ ಅವರಿಗೆ ಗೌರವ ನಮನ ಸಲ್ಲಿಸಲು ಬಯಸುತ್ತೇನೆ. ಅವರು ಸಂಗೀತದ ಮೂಲಕ ನಮ್ಮ ದೇಶವನ್ನು ಒಂದುಗೂಡಿಸಿದರು” ಎಂದರು.
ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಲೋಕಸಭೆಯಲ್ಲಿ ರಾಷ್ಟ್ರಪತಿ ಅವರು ಮಾಡಿದ ಭಾಷಣಕ್ಕೆ ಸಲ್ಲಿಸಿದ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ನೀಡಿದರು.
ಭಾಷಣ ಆರಂಭಿಸುವ ಮುನ್ನ ಅವರು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂತಾಪ ಸೂಚಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಭಾರತವು ಹಲವಾರು ಅಭಿವೃದ್ಧಿಯ ದಾಪುಗಾಲುಗಳನ್ನು ಇಟ್ಟಿದೆ ಎಂಬುದು ಅಷ್ಟೇ ಸತ್ಯ” ಎಂದು ಪ್ರಧಾನಿ ಹೇಳಿದರು.

ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಲೋಕಸಭೆಯಲ್ಲಿ ರಾಷ್ಟ್ರಪತಿ ಅವರು ಮಾಡಿದ ಭಾಷಣಕ್ಕೆ ಸಲ್ಲಿಸಿದ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ನೀಡಿದರು. ಭಾಷಣ ಆರಂಭಿಸುವ ಮುನ್ನ ಅವರು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂತಾಪ ಸೂಚಿಸಿದರು. “ನಾನು ಭಾಷಣ ಆರಂಭಿಸುವ ಮುನ್ನ ಲತಾ ದೀದಿ ಅವರಿಗೆ ಗೌರವ ನಮನ ಸಲ್ಲಿಸಲು ಬಯಸುತ್ತೇನೆ. ಅವರು ಸಂಗೀತದ ಮೂಲಕ ನಮ್ಮ ದೇಶವನ್ನು ಒಂದುಗೂಡಿಸಿದರು” ಎಂದರು.

ಹೊಸ ಸಂಕಲ್ಪಗಳನ್ನು ಮಾಡಲು ಮತ್ತು ರಾಷ್ಟ್ರವನ್ನು ಸದೃಢವಾಗಿ ಕಟ್ಟುವ ಕಾರ್ಯಕ್ಕೆ ಮರುಸಮರ್ಪಿಸಲು ಪ್ರಸ್ತುತ ಕಾಲಘಟ್ಟ ಮಹತ್ವಪೂರ್ಣವಾಗಿದೆ. ಮುಂದಿನ ವರ್ಷಗಳಲ್ಲಿ ಭಾರತವು ಹೇಗೆ ಜಾಗತಿಕ ನಾಯಕತ್ವ ಪಾತ್ರವನ್ನು ವಹಿಸುತ್ತದೆ ಎಂಬುದರ ಕುರಿತು ಆಲೋಚಿಸಲು 'ಆಜಾದಿ ಕಾ ಅಮೃತ್ ಮಹೋತ್ಸವ' ಪರಿಪಕ್ವ ಸಮಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಹಲವಾರು ಅಭಿವೃದ್ಧಿಯ ದಾಪುಗಾಲುಗಳನ್ನು ಇಟ್ಟಿದೆ  ಎಂಬುದು ಅಷ್ಟೇ ಸತ್ಯ” ಎಂದು ಪ್ರಧಾನಿ ಹೇಳಿದರು. ಇದಲ್ಲದೆ, ಕೊರೊನೊ ನಂತರದ ಅವಧಿಯಲ್ಲಿ ಹೊಸ ವಿಶ್ವ ಕ್ರಮವು ವೇಗವಾಗಿ ರೂಪುಗೊಳ್ಳುತ್ತಿದೆ. "ಭಾರತವು ಒಂದು ದೇಶವಾಗಿ ನಾವು ಈ ಅವಕಾಶವನ್ನು ಕಳೆದುಕೊಳ್ಳದೆ, ನಿರಂತರ ಮುಂದುವರಿಯಬೇಕು ಎಂಬುದೇ ನಿರ್ಣಾಯಕ ಅಂಶವಾಗಿದೆ" ಎಂದು ಅವರು ಹೇಳಿದರು.

ಸರಕಾರದ ನಾನಾ ಸೌಲಭ್ಯಗಳ ಮೂಲಕ ಸೌಲಭ್ಯ ವಂಚಿತರು ಮತ್ತು ಬಡವರ ಜೀವನ ಸ್ಥಿತಿ ಬದಲಾಗುತ್ತಿದೆ. ಇದೀಗ ಅವರೆಲ್ಲರೂ ಹೊಸ ಘನತೆಯ ಜೀವನ ನಡೆಸುತ್ತಿದ್ದಾರೆ. "ಮೊದಲು, ಗ್ಯಾಸ್ ಸಂಪರ್ಕ ಬದುಕಿನ ಸ್ಥಿತಿಗತಿಯ ಸಂಕೇತವಾಗಿತ್ತು. ಈಗ, ಬಡವರಲ್ಲಿ ಬಡವರಿಗೂ ಸಹ ಗ್ಯಾಸ್ ಸಂಪರ್ಕ ದೊರೆಯುತ್ತಿದೆ. ಇದು ತುಂಬಾ ಸಂತೋಷದ  ಸಂಗತಿಯಾಗಿದೆ. ಬಡವರಿಗೆ ಬ್ಯಾಂಕ್ ಖಾತೆಗಳನ್ನು ಒದಗಿಸಲಾಗುತ್ತಿದೆ. ಡಿಬಿಟಿ ಸೇವಾ ವಿತರಣೆಯಲ್ಲಿ ಸಹಾಯ ಮಾಡಲಾಗುತ್ತಿದೆ. ಇವೆಲ್ಲವೂ ಬಡವರ ಪಾಲಿಗೆ ಬಂದೊದಗಿದ ಪ್ರಮುಖ ಬದಲಾವಣೆಗಳಾಗಿವೆ” ಎಂದು ಪ್ರಧಾನಿ ಹೇಳಿದರು. ಬಡವರು ತಮ್ಮ ಮನೆಯಲ್ಲಿ ವಿದ್ಯುತ್‌ ಬೆಳಕಿನಿಂದ  ಸಂತೋಷ ಅನುಭವಿಸಿದಾಗ, ಅವರ ಸಂತೋಷವು ರಾಷ್ಟ್ರದ ಸಂತೋಷಕ್ಕೆ ಶಕ್ತಿ ನೀಡುತ್ತದೆ. ಉಚಿತ ಗ್ಯಾಸ್ ಸಂಪರ್ಕದಿಂದ ಬಡವರ ಮನೆಯಲ್ಲಿ ಹೊಗೆರಹಿತ ಅಡುಗೆ ಮನೆಯ ಆನಂದ ಇಡೀ ದೇಶಕ್ಕೆ ಆನಂದ ತರುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಪ್ರಜಾಪ್ರಭುತ್ವದ ಸಮರ್ಪಕ ಕಾರ್ಯ ನಿರ್ವಹಣೆಯ ಪ್ರಾಮುಖ್ಯತೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಭಾರತದ ಪ್ರಜಾಪ್ರಭುತ್ವ ಸಂಪ್ರದಾಯ ಶತಮಾನಗಳಷ್ಟು ಹಳೆಯದು, ಮೌಲ್ಯಯುತವಾದದ್ದು. “ನಾವು ಪ್ರಜಾಪ್ರಭುತ್ವದಲ್ಲಿ ದೃಢ ನಂಬಿಕೆಯುಳ್ಳವರು. ಟೀಕೆ, ವಿಮರ್ಶೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಗತ್ಯ ಭಾಗ ಎಂಬುದನ್ನು ನಾವು ನಂಬುತ್ತೇವೆ. ಆದರೆ, ಎಲ್ಲದಕ್ಕೂ ಮಾಡುವ ಕುರುಡು ವಿರೋಧ, ಪ್ರತಿರೋಧವು ಎಂದಿಗೂ ಮುನ್ನಡೆಯದು” ಎಂದು ಪ್ರಧಾನಿ ಸ್ಪಷ್ಟಪಡಿಸಿದರು. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಸಂಕಷ್ಟ ಸಮಯವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ಲಾಕ್‌ಡೌನ್‌ ಅನುಸರಿಸುತ್ತಿರುವ ಜನರ ದಾರಿ ತಪ್ಪಿಸುವ ಕೆಲಸಗಳನ್ನು ಅವರು ಆಕ್ಷೇಪಿಸಿದರು. ಕೋವಿಡ್ ಜನರು ಇರುವಲ್ಲಿಯೇ ಮಾರ್ಗಸೂಚಿಗಳು ಇರಬೇಕೆಂದು ಸೂಚಿಸಿದಾಗ, ಮುಂಬೈ ಮತ್ತು ದೆಹಲಿಯಲ್ಲಿದ್ದ ಜನರನ್ನು ಉತ್ತರ ಪ್ರದೇಶ ಮತ್ತು ಬಿಹಾರದ ತಮ್ಮ ಊರುಗಳಿಗೆ ವಾಪಸಾಗುವಂತೆ ಹೆದರಿಸಲಾಯಿತು. ಸಾಂಕ್ರಾಮಿಕ ಸೋಂಕು ತಡೆಯಬೇಕಾದ ಜನರು, ಅದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ಪ್ರಧಾನ ಮಂತ್ರಿ ಬೇಸರ ವ್ಯಕ್ತಪಡಿಸಿದರು.

ಸಾರ್ವತ್ರಿಕವಾಗಿ ಬೆಂಬಲಿಸಬೇಕಾದ ಪ್ರಯತ್ನಗಳಿಗೆ ಕೆಲವರು ಕುರುಡು ವಿರೋಧ ಮಾಡುತ್ತಾರೆ. “ನಾವು ‘ವೋಕಲ್ ಫಾರ್ ಲೋಕಲ್’ ಪರವಾಗಿ ಧ್ವನಿ ಎತ್ತಿದರೆ,  ನಾವು ಮಹಾತ್ಮ ಗಾಂಧಿಯವರ ಕನಸುಗಳನ್ನು ಈಡೇರಿಸಿದಂತಲ್ಲವೇ? ಹೀಗಿರುವಾಗ ಪ್ರತಿಪಕ್ಷಗಳು ಏಕೆ ಅಪಹಾಸ್ಯ ಮಾಡುತ್ತಿವೆ? ನಾವು ಯೋಗ ಮತ್ತು ಫಿಟ್ ಇಂಡಿಯಾದ ಬಗ್ಗೆ ಮಾತನಾಡಿದ್ದೇವೆ, ಆದರೆ ಅದನ್ನು ಪ್ರತಿಪಕ್ಷಗಳು ಅಣಕಿಸುತ್ತಿವೆ. ಕೋವಿಡ್ ಸಾಂಕ್ರಾಮಿಕ ಸೋಂಕಿನ ಸಂಕಷ್ಟದ ನಡುವೆ ಭಾರತದ ಆರ್ಥಿಕ ಪ್ರಗತಿಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ " ಎಂದು ಅವರು ಹೇಳಿದರು.

100 ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಫ್ಲೂ ಸಾಂಕ್ರಾಮಿಕ ರೋಗವನ್ನು ಪ್ರಧಾನಿಯವರು ನೆನಪಿಸಿಕೊಂಡರು. ಆಗ ಹೆಚ್ಚಿನ ಸಾವುಗಳು ಹಸಿವಿನಿಂದ ಸಂಭವಿಸಿದವು. ಆದರೆ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದಲ್ಲಿ, ಯಾವುದೇ ಭಾರತೀಯ ಹಸಿವಿನಿಂದ ಸಾಯಲು ಅವಕಾಶ ಇಲ್ಲದಂತೆ, ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದೆವು.  “ಸಾಂಕ್ರಾಮಿಕ ಸೋಂಕಿನ ನಡುವೆ 80 ಕೋಟಿಗಿಂತ ಹೆಚ್ಚಿನ ಬಡವರಿಗೆ ಉಚಿತ ಪಡಿತರವನ್ನು ಭಾರತ ಸರ್ಕಾರ ಖಚಿತಪಡಿಸಿದೆ. ಯಾವುದೇ ಭಾರತೀಯ ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಬದ್ಧತೆಯಾಗಿದೆ” ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿ ಬಡತನ ನಿಭಾಯಿಸುವ ಏಕೈಕ ಪರಿಣಾಮಕಾರಿ ಮಾರ್ಗವೆಂದರೆ ಸಣ್ಣ ರೈತರ ಕಾಳಜಿ ಕಾಪಾಡುವುದಾಗಿದೆ. ಬಹಳ ದಿನಗಳಿಂದ ಸಣ್ಣ ರೈತರನ್ನು ಕಡೆಗಣಿಸುತ್ತಾ ಬರಲಾಗಿದೆ. “ಇಷ್ಟು ವರ್ಷಗಳ ಕಾಲ ದೇಶವನ್ನು ಆಳಿದ ಮತ್ತು ಅರಮನೆಗಳಲ್ಲಿ ವಾಸಿಸುತ್ತಿರುವವರು ಸಣ್ಣ ರೈತರ ಕಲ್ಯಾಣದ ಬಗ್ಗೆ ಮಾತನಾಡುವುದನ್ನು ಮರೆತಿದ್ದಾರೆ. ಭಾರತದ ಪ್ರಗತಿಗೆ ಸಣ್ಣ ರೈತನನ್ನು ಸಶಕ್ತೀಕರಣಗೊಳಿಸುವುದು ಮುಖ್ಯ. ವಾಸ್ತವವೆಂದರೆ, ದೇಶದ ಸಣ್ಣ ರೈತ ಭಾರತದ ಪ್ರಗತಿಯನ್ನು ಬಲಪಡಿಸುತ್ತಾನೆ. ಆಡಳಿತ ಮತ್ತು ಯೋಜನೆ ವಿತರಣೆಯ ಹೊಸ ವಿಧಾನ ಇಂದಿನ ಅಗತ್ಯವಾಗಿದೆ. ಪ್ರಸ್ತುತ ಸರ್ಕಾರವು ಉತ್ತರ ಪ್ರದೇಶದ ಸರಯು ನಹರ್ ರಾಷ್ಟ್ರೀಯ ಯೋಜನೆಯಂತಹ ದೀರ್ಘಾವಧಿಯ ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಿದ್ದನ್ನು ಅವರು ಉಲ್ಲೇಖಿಸಿದರು. ಮೂಲಸೌಕರ್ಯ ಸವಾಲುಗಳನ್ನು ಪರಿಹರಿಸಲು ಸಮಗ್ರ ವಿಧಾನವನ್ನು ಪ್ರಸ್ತುತಪಡಿಸುವ ಪಿಎಂ ಗತಿ ಶಕ್ತಿ ಯೋಜನೆಯನ್ನು ಪ್ರಧಾನಿ ಅವರು ಉಲ್ಲೇಖಿಸಿದರು. ಉದ್ಯಮದ ಸರಕು ಸಾಗಣೆ ಆಯ್ಕೆಯನ್ನು ಇದು ಕಡಿಮೆ ಮಾಡುತ್ತದೆ. ಸಮರ್ಪಕ ಸಂಪರ್ಕ ಯೋಜನೆಗಳಿಗೆ ಒತ್ತು ನೀಡುವುದಾಗಿ ಪ್ರಧಾನಿ ಪುನರುಚ್ಚರಿಸಿದರು. "ನಮ್ಮ ಸರ್ಕಾರವು ಎಂಎಸ್ಎಂಇಗಳ ವ್ಯಾಖ್ಯಾನವನ್ನು ಬದಲಾಯಿಸಿದೆ ಮತ್ತು ಪಿಎಂ ಗತಿಶಕ್ತಿ ಯೋಜನೆಯು ಈ ವಲಯಕ್ಕೆ ಸಹಾಯ ಮಾಡುತ್ತಿದೆ" ಎಂದು ಅವರು ಹೇಳಿದರು.

ನವೀನ ನೀತಿಗಳಿಂದ ಕೂಡಿರುವ ಆತ್ಮನಿರ್ಭರ್ ಹೊಸ ಮನಸ್ಥಿತಿಯು  ಹೊಸ ಕ್ಷೇತ್ರಗಳನ್ನು ತೆರೆಯುವ ಮೂಲಕ ದೇಶದ ಪ್ರತಿಭೆ ಮತ್ತು ಯುವಕರನ್ನು ಬಳಸಿಕೊಳ್ಳುತ್ತಿದೆ. "ಸರ್ಕಾರಗಳು ಮಾತ್ರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ನಾವು ನಂಬುವುದಿಲ್ಲ. ನಾವು ರಾಷ್ಟ್ರದ ಜನರನ್ನು, ರಾಷ್ಟ್ರದ ಯುವಕರನ್ನು ನಂಬುತ್ತೇವೆ. ಉದಾಹರಣೆಗೆ ನವೋದ್ಯಮ ವಲಯವನ್ನೇ ತೆಗೆದುಕೊಳ್ಳಿ. ನವೋದ್ಯಮಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದು ನಮ್ಮ ಯುವ ಜನರ ಶಕ್ತಿಯನ್ನು ತೋರಿಸುತ್ತಿದೆ”. ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಯುನಿಕಾರ್ನ್‌ನ ಏರಿಕೆ ಆಗುತ್ತಿದೆ. ನಮ್ಮ ಯುವಕರು, ಸಂಪತ್ತು ಸೃಷ್ಟಿಕರ್ತರು ಮತ್ತು ಉದ್ಯಮಿಗಳನ್ನು ಹೆದರಿಸುವ, ಬೆದರಿಸುವ ಕಾರ್ಯ ವಿಧಾನವನ್ನು ನಾವು ಒಪ್ಪುವುದಿಲ್ಲ. 2014ಕ್ಕಿಂತ ಮೊದಲು ಕೇವಲ 500 ನವೋದ್ಯಮಗಳು ದೇಶದಲ್ಲಿದ್ದವು. ಕಳೆದ 7 ವರ್ಷಗಳಲ್ಲಿ 60 ಸಾವಿರ ನವೋದ್ಯಮಗಳು ಹೊರಹೊಮ್ಮಿವೆ. ಭಾರತವು ಯುನಿಕಾರ್ನ್‌ಗಳ ಶತಮಾನದತ್ತ ಸಾಗುತ್ತಿದೆ. ನವೋದ್ಯಮಗಳಿಗೆ ಸಂಬಂಧಿಸಿದಂತೆ ಭಾರತವು ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ ಎಂದು ಪ್ರಧಾನಿ ತಿಳಿಸಿದರು.

‘ಮೇಕ್ ಇನ್ ಇಂಡಿಯಾ’ವನ್ನು ಅಪಹಾಸ್ಯ ಮಾಡುವುದು ಭಾರತದ ಉದ್ಯಮಶೀಲತೆ, ಭಾರತದ ಯುವಜನತೆ ಮತ್ತು ಕೈಗಾರಿಕಾ ವಲಯವನ್ನು ಅಪಹಾಸ್ಯ ಮಾಡಿದಂತೆ. ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗಿರುವುದು ಅತಿದೊಡ್ಡ ರಾಷ್ಟ್ರೀಯ ಸೇವೆಯಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಜಾಗತಿಕ ಆರ್ಥಿಕ ಸಮಸ್ಯೆಗಳಿಂದಾಗಿ ಹಿಂದೆ ಹಣದುಬ್ಬರ ಏರಿಕೆ ಕಂಡಿತ್ತು. ಆದರೀಗ ಭಾರತವು ಜಾಗತಿಕ ಸಾಂಕ್ರಾಮಿಕ ಸೋಂಕಿನ ಕಷ್ಟದ ಸನ್ನಿವೇಶದ ಹೊರತಾಗಿಯೂ ಹಣದುಬ್ಬರವನ್ನು ನಿಯಂತ್ರಿಸುತ್ತಿದೆ ಎಂದು ಅವರು ಹೇಳಿದರು.

"ರಾಷ್ಟ್ರ, ನಮಗೆ ಜೀವಂತ ಆತ್ಮವಾಗಿದೆ, ಕೇವಲ ಅಧಿಕಾರ ಅಥವಾ ಸರ್ಕಾರದ ವ್ಯವಸ್ಥೆ ಅಲ್ಲ". ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಪುರಾಣಗಳು ಮತ್ತು ಸುಬ್ರಹ್ಮಣ್ಯ ಭಾರತಿ ಅವರ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಇಡೀ ಭಾರತವನ್ನು ಜೀವಂತ ಆತ್ಮವೆಂದು ಪರಿಗಣಿಸುವ ಭಾರತದ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಪ್ರಗತಿಯ ಪರಿಕಲ್ಪನೆಯನ್ನು ವಿವರಿಸಿದರು. ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ತಮಿಳುನಾಡಿನ ಜನರು ನೀಡಿದ ಗೌರವವನ್ನು ಪ್ಯಾನ್-ಇಂಡಿಯಾ ರಾಷ್ಟ್ರೀಯ ಭಾವನೆಗೆ ಉದಾಹರಣೆಯಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.

ಸ್ವಾತಂತ್ರ್ಯ ಗಳಿಸಿದ ಅಮೃತ ಕಾಲದ ಶುಭ ಅವಧಿಯಲ್ಲಿ ಸಕಾರಾತ್ಮಕ ಭಾವನೆಯೊಂದಿಗೆ ಕೊಡುಗೆ ನೀಡುವಂತೆ ರಾಜಕೀಯ ಪಕ್ಷಗಳು, ನಾಗರಿಕರು ಮತ್ತು ಯುವಕರನ್ನು ಉತ್ತೇಜಿಸುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi