ಬಜೆಟ್ ನಲ್ಲಿ ಘೋಷಿಸಲಾಗಿರುವ ಹೊಸ ಸುಧಾರಣೆಗಳು ಆರ್ಥಿಕತೆಗೆ ಉತ್ತೇಜನ ನೀಡಲಿವೆ: ಪ್ರಧಾನಮಂತ್ರಿ
ದೇಶದ ಪ್ರತಿಯೊಬ್ಬ ನಾಗರಿಕನ ಆರ್ಥಿಕ ಸಬಲೀಕರಣ ಗುರಿಯನ್ನು ಬಜೆಟ್ ಹೊಂದಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಸಮಗ್ರ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಕೇಂದ್ರ ಬಜೆಟ್ ಅನ್ನು ದೂರದೃಷ್ಟಿಯ ಮತ್ತು ಕ್ರಿಯೆ ಆಧಾರಿತ ಬಜೆಟ್ ಎಂದು ಬಣ್ಣಿಸಿದ್ದಾರೆ.

ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಬಂಡನೆಯ ನಂತರ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, “ಬಜೆಟ್ ನಲ್ಲಿ ಘೋಷಿಸಲಾಗಿರುವ ಹೊಸ ಸುಧಾರಣೆಗಳು ಕೇವಲ ಆರ್ಥಿಕತೆ ಉತ್ತೇಜನ ನೀಡುವುದಲ್ಲದೆ, ದೇಶದ ಪ್ರತಿಯೊಬ್ಬ ಪ್ರಜೆಯ ಆರ್ಥಿಕ ಸಬಲೀಕರಣದ ಗುರಿಯನ್ನೂ ಸಹ ಹೊಂದಿದೆ” ಎಂದರು.

“ಈ ಬಜೆಟ್ ಹೊಸ ದಶಕದಲ್ಲಿ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ  ಕಾರ್ಯದಲ್ಲಿ ನೆರವಾಗಲಿದೆ” ಎಂದು ಹೇಳಿದರು.

ಉದ್ಯೋಗ ಸೃಷ್ಟಿಗೆ ಒತ್ತು:

            2020ರ ಬಜೆಟ್ ನಲ್ಲಿ ಮೂರು ಪ್ರಮುಖ ಉದ್ಯೋಗಸೃಷ್ಟಿ ವಲಯಗಳಾದ ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನ ವಲಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

“16 ಅಂಶಗಳ ಕಾರ್ಯಕ್ರಮ ರೈತರ ಆದಾಯ ದುಪ್ಪಟ್ಟುಗೊಳಿಸಲು ನೆರವಾಗುವುದಲ್ಲದೆ, ಗ್ರಾಮೀಣ ಭಾಗದಲ್ಲಿ ಉದ್ಯೋಗಸೃಷ್ಟಿ ಹೆಚ್ಚಳಕ್ಕೂ ಸಹಕಾರಿಯಾಗಲಿದೆ” ಎಂದರು.

“ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯದಲ್ಲಿ ಸಮಗ್ರ ಪದ್ಧತಿಗಳ ಅಳವಡಿಕೆಗೆ ಒತ್ತು ನೀಡಲಾಗಿದೆ ಅದರಲ್ಲಿ ಸಾಂಪ್ರದಾಯಿಕ ರೀತಿಯ ಬೆಳೆ ಬೆಳೆಯುವ ಜೊತೆಗೆ ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆಗಳಿಂದ ಮೌಲ್ಯವರ್ಧನೆ ಮಾಡುವುದು ಮತ್ತು ಆ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕೆ ಆದ್ಯತೆ ನೀಡಲಾಗಿದೆ” ಎಂದು ಹೇಳಿದರು.

“ನೀಲಿ ಆರ್ಥಿಕತೆಯ ಪ್ರಯತ್ನಗಳಿಂದ ಯುವಕರಿಗೆ ಮೀನು ಸಂಸ್ಕರಣೆ  ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ” ಎಂದರು.

ಜವಳಿ ವಲಯ:

            ಪ್ರಧಾನಮಂತ್ರಿ ಅವರು, ತಾಂತ್ರಿಕ ಟೆಕ್ಸ್ ಟೈಲ್ ಗಳಲ್ಲಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಜೆಟ್ ನಲ್ಲಿ ಕಚ್ಚಾ ಸಾಮಗ್ರಿ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪ್ರಕಟಿಸಲಾಗಿದೆ. ಇದರಿಂದಾಗಿ ಭಾರತದಲ್ಲಿ ಮನುಷ್ಯರು ಉತ್ಪಾದಿಸಿದ ಜವಳಿ ಉತ್ಪಾದನೆ ಹೆಚ್ಚಾಗಲಿದೆ ಎಂದರು. ಅಲ್ಲದೆ ಕಳೆದ ಮೂರು ದಶಕಗಳಿಂದೀಚೆಗೆ ಈ ಸುಧಾರಣೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಪ್ರಧಾನಮಂತ್ರಿಗಳು ಹೇಳಿದರು.

ಆರೋಗ್ಯ ವಲಯ:

            “ಆಯುಷ್ಮಾನ್ ಭಾರತ್ ಕಾರ್ಯಕ್ರಮ ದೇಶದಲ್ಲಿ ಆರೋಗ್ಯ ವಲಯದ ವ್ಯಾಪ್ತಿಯನ್ನು ವಿಸ್ತರಿಸಿದೆ. ಅಲ್ಲದೆ ಇದು ಮಾನವಸಂಪನ್ಮೂಲ ಮಾತ್ರವಲ್ಲದೆ ವೈದ್ಯರು, ನರ್ಸ್ ಗಳು ಮತ್ತು ಶುಶ್ರೂಷಕರ ವ್ಯಾಪ್ತಿಯನ್ನು ವಿಸ್ತರಿಸುವ ಜೊತೆಗೆ ದೇಶದಲ್ಲಿ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಿದೆ. ಆ ನಿಟ್ಟಿನಲ್ಲಿ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

ತಂತ್ರಜ್ಞಾನ ವಲಯ:

            ಪ್ರಧಾನಮಂತ್ರಿ ಅವರು, ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಸೃಷ್ಟಿ ಸುಧಾರಣೆಗೆ ಸರ್ಕಾರ ಹಲವು ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. “ಸ್ಮಾರ್ಟ್ ಸಿಟಿ ಗಳ ನಿರ್ಮಾಣ, ವಿದ್ಯುನ್ಮಾನ ಉತ್ಪಾದನೆ, ಡಾಟಾ ಸೆಂಟರ್ ಪಾರ್ಕ್ ಗಳು, ಜೈವಿಕ ತಂತ್ರಜ್ಞಾನ ಮತ್ತು ಕ್ವಾಂಟಮ್ ತಂತ್ರಜ್ಞಾನಗಳ ನಿಟ್ಟಿನಲ್ಲಿ ಹಲವು ನೀತಿ–ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಕ್ರಮಗಳಿಂದಾಗಿ ಭಾರತ, ಜಾಗತಿಕ ಮೌಲ್ಯ ಸರಣಿಯ ಅವಿಭಜಿತ ಭಾಗವಾಗಿದೆ” ಎಂದರು.

        “ಹೊಸ ಮತ್ತು ವಿನೂತನ ಉಪಕ್ರಮಗಳಾದ ಪದವಿ ಕೋರ್ಸ್ ಗಳು, ಸ್ಥಳೀಯ ಸಂಸ್ಥೆಗಳಲ್ಲಿ ಪ್ರಶಿಕ್ಷಣ (ಇಂಟರ್ನ್ ಶಿಪ್) ಮತ್ತು ಆನ್ ಲೈನ್ ಪದವಿ ಕೋರ್ಸ್ ಗಳ ಮೂಲಕ ಯುವಜನರ ಕೌಶಲ್ಯಾಭಿವೃದ್ಧಿಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ” ಎಂದು ಹೇಳಿದರು.

        ಎಂಎಸ್ಎಂಇ ಮತ್ತು ರಫ್ತು ವಲಯಗಳು ಉದ್ಯೋಗಸೃಷ್ಟಿಯ ಮೂಲಗಳು ಎಂದ ಅವರು, ಬಜೆಟ್ ನಲ್ಲಿ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಆರ್ಥಿಕ ನೆರವು ನೀಡುವ ಜೊತೆಗೆ ರಫ್ತು ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಮೂಲಸೌಕರ್ಯ:

        ಆಧುನಿಕ ಭಾರತಕ್ಕೆ ಆಧುನಿಕ ಮೂಲಸೌಕರ್ಯ ಅಗತ್ಯವಾಗಿದ್ದು, ಈ ವಲಯದಲ್ಲಿ ಭಾರೀ ಉದ್ಯೋಗಾವಕಾಶಗಳ ಸೃಷ್ಟಿಯಾಗಲಿವೆ ಎಂದು ಹೇಳಿದರು.

“ಸುಮಾರು 6500 ಯೋಜನೆಗಳಲ್ಲಿ ಸುಮಾರು ನೂರು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದ್ದು, ಇದರಿಂದ ಭಾರೀ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ, ರಾಷ್ಟ್ರೀಯ ಸಾಗಾಣಿಕೆ ನೀತಿ, ವ್ಯಾಪಾರ, ಉದ್ಯಮ ಮತ್ತು ಉದ್ಯೋಗಾವಕಾಶಗಳಿಗೆ ನೆರವಾಗಲಿದೆ” ಎಂದು ಹೇಳಿದರು.

“ಹೊಸದಾಗಿ ನೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ ಮಾಡುವ ಘೋಷಣೆ, ದೇಶದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ, ಅದರ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಯ ಭಾರಿ ಅವಕಾಶಗಳು ದೊರಕುತ್ತವೆ ಎಂದು ಹೇಳಿದರು.

ಬಂಡವಾಳ:

            ಉದ್ಯೋಗಾವಕಾಶಗಳ ಸೃಷ್ಟಿಗೆ ಅತ್ಯಂತ ಪ್ರಮುಖವಾಗಿ ಬೇಕಾದ ಬಂಡವಾಳ ಉತ್ತೇಜನಕ್ಕೆ ಬಜೆಟ್ ನಲ್ಲಿ ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

            “ಬಾಂಡ್ ಮಾರುಕಟ್ಟೆ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ದೀರ್ಘಕಾಲ ಹಣಕಾಸು ನೀಡುವುದನ್ನು ಬಲವರ್ಧನೆಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಲಾಭಾಂಶ ವಿತರಣಾ  ತೆರಿಗೆ ರದ್ದು ಗೊಳಿಸುವ ನಿರ್ಧಾರದಿಂದಾಗಿ ಸುಮಾರು 25 ಸಾವಿರ ಕೋಟಿ ರೂ.ವರೆಗೆ ವಹಿವಾಟು ಹೊಂದಿರುವ ಕಂಪನಿಗಳು ಮತ್ತಷ್ಟು ಬಂಡವಾಳವನ್ನು ಹೂಡಬಹುದಾಗಿದೆ” ಎಂದು ಹೇಳಿದರು.

        “ವಿದೇಶಿ ನೇರ ಬಂಡವಾಳ(ಎಫ್ ಡಿ ಐ) ಆಕರ್ಷಣೆಗೆ ಹಲವು ತೆರಿಗೆ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ” ಎಂದು ಹೇಳಿದರು.

        “ಅದೇ ರೀತಿ ನವೋದ್ಯಮಗಳಿಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ ವಲಯಕ್ಕೂ ಹಲವು ತೆರಿಗೆ ಪ್ರಯೋಜನಗಳನ್ನು ಕಲ್ಪಿಸಲಾಗಿದೆ” ಎಂದು ಹೇಳಿದರು.

ತೆರಿಗೆಯಲ್ಲಿ ವಿಶ್ವಾಸವೃದ್ಧಿಗೆ ಆದ್ಯತೆ:

ಸರ್ಕಾರ ಯಾವುದೇ ವ್ಯಾಜ್ಯಗಳಿಲ್ಲದಂತಹ ವಾತಾವರಣವನ್ನು ಸೃಷ್ಟಿಸುತ್ತಿದೆ ಮತ್ತು ಆದಾಯ ತೆರಿಗೆಯಲ್ಲಿ ವಿಶ್ವಾಸ ಇಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

“ಕಂಪನಿ ಕಾನೂನಿನಲ್ಲಿ ಸಣ್ಣ ತಪ್ಪುಗಳನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಇದೀಗ ಅಂತಹ ಕ್ರಮಗಳನ್ನು ಅಪರಾಧರಹಿತಗೊಳಿಸುವ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ” ಎಂದರು.

“ನಾವು ತೆರಿಗೆ ಪಾವತಿದಾರರ ಸನ್ನದು ಆರಂಭಿಸಿದ್ದೇವೆ. ಅದರಲ್ಲಿ ತೆರಿಗೆ ಪಾವತಿದಾರರ ಹಕ್ಕುಗಳನ್ನು ಪಟ್ಟಿ ಮಾಡಲಾಗಿದೆ” ಎಂದು ಹೇಳಿದರು.

ಅದೇ ನಿಟ್ಟಿನಲ್ಲಿ ವಿಶ್ವಾಸವೃದ್ಧಿಗಾಗಿ, 5 ಕೋಟಿ ರೂಪಾಯಿಗಳವರೆಗೆ ವಹಿವಾಟು ಹೊಂದಿರುವ ಎಂಎಸ್ಎಂಇಗಳಿಗೆ ಈವರೆಗೆ ಇದ್ದ ಕಡ್ಡಾಯ ಆಡಿಟ್ ಅನ್ನು ತೆಗೆದು ಹಾಕಲಾಗಿದೆ ಎಂದು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದರು.  

“ಮೊದಲು ಒಂದು ಕೋಟಿ ರೂಪಾಯಿವರೆಗೆ ಮಿತಿ ಇತ್ತು, ಇದೀಗ ಆ ಮಿತಿಯನ್ನು 5 ಕೋಟಿಗೆ ಹೆಚ್ಚಿಸಲಾಗಿದೆ” ಎಂದರು.

ಸರ್ಕಾರಿ ಉದ್ಯೋಗಗಳಿಗೆ ಏಕರೂಪದ ಪರೀಕ್ಷೆ:

            “ದೇಶದಲ್ಲಿ ಪ್ರಸ್ತುತ ಯುವಜನರು ನಾನಾ ರೀತಿಯ ಸರ್ಕಾರಿ ಉದ್ಯೋಗಗಳಿಗೆ ನಾನಾ ಬಗೆಯ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ತರುವ ಉದ್ದೇಶದಿಂದ ಇದೀಗ ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಆರಂಭಿಸಲಾಗಿದ್ದು, ಬ್ಯಾಂಕ್, ರೈಲ್ವೆ ಅಥವಾ ಇನ್ನಾವುದೇ ಸರ್ಕಾರಿ ಉದ್ಯೋಗಗಳು ಇದ್ದರೂ ಅವುಗಳ ನೇಮಕಕ್ಕೆ ಏಕರೂಪದ ಆನ್ ಲೈನ್ ಸಾಮಾನ್ಯ ಪರೀಕ್ಷೆಯನ್ನು ನಡೆಸಲಾಗುವುದು’’ ಎಂದು ಹೇಳಿದರು.

ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ:

            ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತವನ್ನು ಗುರಿಯಾಗಿಟ್ಟುಕೊಂಡು ಸ್ವಯಂ ನೋಂದಣಿ, ಫೇಸ್ ಲೆಸ್ ಅಪೀಲ್(ವ್ಯಕ್ತಿ ಉಪಸ್ಥಿತರಿಲ್ಲದೆ ಮೇಲ್ಮನವಿ) ಸರಳೀಕೃತ ನೇರ ತೆರಿಗೆ, ಪಿಎಸ್ ಯುಗಳಲ್ಲಿ ಬಂಡವಾಳ ಹಿಂತೆಗೆತಕ್ಕೆ ಕ್ರಮ, ಏಕರೂಪದ ಖರೀದಿ ವ್ಯವಸ್ಥೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸುಲಭ ವ್ಯಾಪಾರ ಮತ್ತು ಸುಲಭ ಜೀವನ:

            ಬಜೆಟ್ ನಲ್ಲಿ ಬ್ರಾಡ್ ಬ್ಯಾಂಡ್ ಅಂತರ್ಜಾಲ ಸಂಪರ್ಕದ ಮೂಲಕ ಸುಮಾರು ಒಂದು ಲಕ್ಷ ಗ್ರಾಮ ಪಂಚಾಯಿತಿಗಳನ್ನು, ಅಂಗನವಾಡಿಗಳು, ಶಾಲೆಗಳು, ಸೌಖ್ಯ ಕೇಂದ್ರಗಳು ಮತ್ತು ಪೊಲೀಸ್ ಠಾಣೆಗಳ ಜೊತೆ ಸಂಯೋಜಿಸಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇದರಿಂದಾಗಿ “ಸುಲಭವಾಗಿ ವ್ಯಾಪಾರ ಮಾಡುವುದು ಮತ್ತು ಸರಳವಾಗಿ ಜೀವನ ನಡೆಸುವುದಕ್ಕೆ” ಸಹಕಾರಿಯಾಗಲಿದೆ.

“ಇದರಿಂದಾಗಿ ಬ್ರಾಡ್ ಬ್ಯಾಂಡ್ ಮೂಲಕ ಹಲವು ದೂರದ ಗುಡ್ಡಗಾಡು ಗ್ರಾಮಗಳನ್ನು ಬೆಸೆಯುತ್ತದೆ” ಎಂದು ಹೇಳಿದರು.

ಒಟ್ಟಾರೆ 2020ರ ಕೇಂದ್ರ ಬಜೆಟ್, ಆದಾಯ ಮತ್ತು ಬಂಡವಾಳ ಹೂಡಿಕೆಯನ್ನು ಹಾಗೂ ಬೇಡಿಕೆ ಮತ್ತು ಬಳಕೆ ಬಲವರ್ಧನೆಗೊಳಿಸಲಿದೆ, ಆರ್ಥಿಕ ವ್ಯವಸ್ಥೆ ಮತ್ತು ಸಾಲದ ಹರಿವಿನಲ್ಲಿ ಹೊಸ ಸ್ಫೂರ್ತಿ ಮೂಡಿಸುತ್ತದೆ ಎಂದು ಅವರು ಸಾರವನ್ನು ವಿವರಿಸಿದರು. 

 

 

 

 

 

 

 

 

 

 

 

 

 

 

 

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Waqf Law Has No Place In The Constitution, Says PM Modi

Media Coverage

Waqf Law Has No Place In The Constitution, Says PM Modi
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.