ಗೌರವಾನ್ವಿತರೇ

ನಮಸ್ಕಾರ!

ಇಂದು ನೀವು “ಒಂದು ಸೂರ್ಯ, ಒಂದು ವಿಶ್ವ, ಒಂದು ಜಾಲ” ಆರಂಭಕ್ಕೆ  ಸ್ವಾಗತಿಸಲ್ಪಡುತ್ತಿದ್ದೀರಿ. ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ಮತ್ತು ಯು.ಕೆ.ಯ ಹಸಿರು ಜಾಲ ಉಪಕ್ರಮಗಳಿಂದ ಆಯೋಜನೆಯಾಗಿರುವ, ನನ್ನ ಹಲವು ವರ್ಷಗಳ ಹಳೆಯ ಕನಸಾದ “ಒಂದು ಸೂರ್ಯ, ಒಂದು ವಿಶ್ವ, ಒಂದು ಜಾಲ” ಯೋಜನೆಗೆ ದೃಢವಾದ ರೂಪವಿಂದು ಲಭಿಸಿದೆ. ಗೌರವಾನ್ವಿತರೇ, ಕೈಗಾರಿಕಾ ಕ್ರಾಂತಿಗೆ ಶಕ್ತಿ ತುಂಬಿದ್ದು ಪಳೆಯುಳಿಕೆ ಇಂಧನಗಳು. ಹಲವು ದೇಶಗಳು ಈ ಪಳೆಯುಳಿಕೆ ಇಂಧನ ಬಳಕೆಯಿಂದ ಸಮೃದ್ಧಿ ಸಾಧಿಸಿದವು. ಆದರೆ ನಮ್ಮ ಭೂಮಿ, ನಮ್ಮ ಪರಿಸರ ಮಾತ್ರ ಬಡವಾಯಿತು. ಪಳೆಯುಳಿಕೆ ಇಂಧನಕ್ಕಾಗಿ ಓಟ, ಸ್ಪರ್ಧೆ ಭೂ-ರಾಜಕೀಯ ಉದ್ವಿಗ್ನತೆಗಳನ್ನು ಉಂಟು ಮಾಡಿತು. ಆದರೆ ಇಂದು ತಂತ್ರಜ್ಞಾನ ನಮಗೆ ಬಹಳ ದೊಡ್ಡ ಪರ್ಯಾಯವನ್ನು ಒದಗಿಸಿಕೊಟ್ಟಿದೆ.

ಗೌರವಾನ್ವಿತರೇ,

ಸಾವಿರಾರು ವರ್ಷಗಳ ಹಿಂದಿನ ಸೂರ್ಯ ಉಪನಿಷದ್ ನಲ್ಲಿ ಹೇಳಲಾಗಿದೆ, सूर्याद् भवन्ति भूतानि, सूर्येण पालितानि तु॥(ಸೂರ್ಯಾದ್ ಭವಂತಿ ಬೂತಾನಿ, ಸೂರ್ಯೇನ್ ಪಾಲಿತಾನಿ ತು) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಪ್ರತಿಯೊಂದೂ ಸೂರ್ಯನಿಂದ ಉದ್ಭವಿಸಿದೆ, ಎಲ್ಲಾ ಶಕ್ತಿಗಳ ಮೂಲ ಸೂರ್ಯ ಮತ್ತು ಪ್ರತಿಯೊಂದೂ ಸೂರ್ಯನ ಶಕ್ತಿಯಿಂದ ಉಳಿದುಕೊಂಡಿದೆ. ಭೂಮಿಯಲ್ಲಿ ಜೀವಿಗಳ ಉದಯ ಆರಂಭಗೊಂಡಂದಿನಿಂದ, ಎಲ್ಲಾ ಜೀವಿಗಳ ಜೀವನ ಚಕ್ರ ಮತ್ತು ಅವುಗಳ ದೈನಂದಿನ ಚಟುವಟಿಕೆ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಜೊತೆ ಸಂಯೋಜಿಸಲ್ಪಟ್ಟಿದೆ. ಈ ನೈಸರ್ಗಿಕ ಸಂಯೋಜನೆ ಮುಂದುವರಿಯುವಷ್ಟು ಕಾಲವೂ ನಮ್ಮ ಭೂಗ್ರಹ ಆರೋಗ್ಯಪೂರ್ಣವಾಗಿರುತ್ತದೆ. ಆದರೆ ಆಧುನಿಕ ಕಾಲದಲ್ಲಿ ಮನುಷ್ಯರು ಸೂರ್ಯನು ನಿಗದಿಪಡಿಸಿದ ಚಕ್ರವನ್ನು ಹಿಂದಿಕ್ಕುವ ಓಟದಲ್ಲಿದ್ದಾರೆ. ಇದರಿಂದ ನೈಸರ್ಗಿಕ ಸಮತೋಲನ ಅಲುಗಾಡತೊಡಗಿದೆ. ಮತ್ತು ಆತನ ಪರಿಸರಕ್ಕೆ ಬಹಳ ದೊಡ್ಡ ಹಾನಿಯುಂಟಾಗಿದೆ. ನಾವು ನಿಸರ್ಗದ ಜೊತೆ ಸಮತೋಲಿತ ಜೀವನವನ್ನು ಮರು ಸ್ಥಾಪಿಸಬೇಕಾಗಿದ್ದರೆ, ಅದರ ಹಾದಿಯನ್ನು ನಮ್ಮ ಸೂರ್ಯನಿಂದ ಬೆಳಗಬೇಕು. ಮಾನವತೆಯ ಭವಿಷ್ಯವನ್ನು ರಕ್ಷಿಸಬೇಕಿದ್ದರೆ ನಾವು ಮತ್ತೆ ಸೂರ್ಯನೊಂದಿಗೆ ನಡೆಯಬೇಕು.

ಗೌರವಾನ್ವಿತರೇ,

ವರ್ಷವೊಂದರಲ್ಲಿ ಇಡೀ ಮಾನವ ಕುಲ ಬಳಸುತ್ತಿರುವ ಇಂಧನ ಪ್ರಮಾಣದಷ್ಟು ಶಕ್ತಿಯನ್ನು  ಸೂರ್ಯ  ಭೂಮಿಗೆ ಒಂದು ತಾಸಿನಲ್ಲಿ ಒದಗಿಸುತ್ತಿದ್ದಾನೆ. ಮತ್ತು ಈ ಭಾರೀ ಪ್ರಮಾಣದ ಶಕ್ತಿ ಸಂಪೂರ್ಣವಾಗಿ ಸ್ವಚ್ಛ, ಮತ್ತು ಸುಸ್ಥಿರ. ಒಂದೇ ಸವಾಲೆಂದರೆ ಸೂರ್ಯ ಶಕ್ತಿ ಹಗಲಿನಲ್ಲಿ ಮಾತ್ರವೇ ಲಭಿಸುತ್ತದೆ. ಮತ್ತು ಅದು ಹವಾಮಾನ ಆಧರಿತವಾಗಿರುತ್ತದೆ. “ಒಂದು ಸೂರ್ಯ, ಒಂದು ವಿಶ್ವ, ಒಂದು ಜಾಲ” ಈ ಸವಾಲಿಗೊಂದು ಪರಿಹಾರ. ವಿಶ್ವವ್ಯಾಪೀ ಜಾಲದಿಂದ ಸ್ವಚ್ಛ ಇಂಧನ ಅಥವಾ ಶಕ್ತಿ ಎಲ್ಲಾ ಕಾಲದಲ್ಲಿಯೂ ಎಲ್ಲಾ ಕಡೆಯೂ ಲಭ್ಯವಾಗುತ್ತದೆ.ಇದರಿಂದ ದಾಸ್ತಾನಿನ ಅವಶ್ಯಕತೆ ಕಡಿಮೆಯಾಗುತ್ತದೆ ಮತ್ತು ಸೌರ ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆ ಅಥವಾ ಉಪಯುಕ್ತತೆ ಹೆಚ್ಚುತ್ತದೆ. ಈ ರಚನಾತ್ಮಕ ಉಪಕ್ರಮ ಇಂಧನದ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಯಾವುದೇ ವಸ್ತು ಬಳಸುವ ಇಂಧನದ ಮೂಲಕ ಉತ್ಪಾದನೆಯಾಗುವ ಕಾರ್ಬನ್ ಪ್ರಮಾಣವನ್ನು  ಲೆಕ್ಕ ಹಾಕುವ  ಕಾರ್ಬನ್ ಫುಟ್ ಪ್ರಿಂಟ್  ಪ್ರಮಾಣವನ್ನೂ  ಕಡಿಮೆ ಮಾಡುತ್ತದೆ. ಮತ್ತು ಇಂಧನದ ವೆಚ್ಚವೂ ಕಡಿಮೆಯಾಗುತ್ತದೆ. ಮತ್ತು ಇದು ವಿವಿಧ ವಲಯಗಳು ಹಾಗು ದೇಶಗಳ ನಡುವೆ ಸಹಕಾರದ ಹೊಸ ಅವಕಾಶಗಳನ್ನು ತೆರೆಯುತ್ತದೆ. “ಒಂದು ಸೂರ್ಯ;ಒಂದು ವಿಶ್ವ :ಒಂದು ಜಾಲ”  ಮತ್ತು ಹಸುರು ಜಾಲ ಉಪಕ್ರಮಗಳು

ಸಂಯೋಜಿತ  ಮತ್ತು ದೃಢವಾದ ಜಾಗತಿಕ ಜಾಲದ ಅಭಿವೃದ್ಧಿಗೆ ಕಾರಣವಾಗುತ್ತವೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ.

ನಮ್ಮ ಬಾಹ್ಯಾಕಾಶ ಏಜೆನ್ಸಿ, ಇಸ್ರೋ ಜಗತ್ತಿಗೆ ಸೌರ ಲೆಕ್ಕಾಚಾರದ ಗಣಕ  ಅಪ್ಲಿಕೇಶನನ್ನು ಒದಗಿಸಲಿದೆ ಎಂಬುದನ್ನು ಕೂಡಾ ನಾನಿಂದು ತಿಳಿಸಲು ಬಯಸುತ್ತೇನೆ. ಈ ಕ್ಯಾಲಿಕುಲೇಟರ್(ಗಣಕ) ಮೂಲಕ ಜಗತ್ತಿನ ಯಾವುದೇ ಸ್ಥಳದ ಸೌರ ವಿದ್ಯುತ್ ಸಾಮರ್ಥ್ಯವನ್ನು ಉಪಗ್ರಹ ದತ್ತಾಂಶ ಆಧಾರದ ಮೂಲಕ ಅಳೆಯಬಹುದು. ಈ ಅಪ್ಲಿಕೇಷನ್ ಸೌರ ಯೋಜನೆಗಳ ಸ್ಥಳ ನಿರ್ಧಾರ ಮಾಡಲು ಉಪಯುಕ್ತವಾಗಲಿದೆ ಮತ್ತು ಅದು “ಒಂದು ಸೂರ್ಯ, ಒಂದು ವಿಶ್ವ , ಒಂದು ಜಾಲ” ವನ್ನು ಬಲಪಡಿಸಲೂ ನೆರವಾಗಲಿದೆ.

ಗೌರವಾನ್ವಿತರೇ

ಮತ್ತೊಮ್ಮೆ,   ನಾನು ಐ.ಎಸ್.ಎ ಯನ್ನು ಅಭಿನಂದಿಸುತ್ತೇನೆ ಮತ್ತು ಸಹಕಾರಕ್ಕಾಗಿ ನನ್ನ ಸ್ನೇಹಿತ ಬೋರಿಸ್ ರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇತರ ಎಲ್ಲಾ ದೇಶಗಳ ನಾಯಕರಿಗೂ ಅವರ ಹಾಜರಾತಿಗಾಗಿ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
25% of India under forest & tree cover: Government report

Media Coverage

25% of India under forest & tree cover: Government report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi