ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸೌರಾಷ್ಟ್ರ ತಮಿಳು ಸಂಗಮಂನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅತಿಥಿಗೆ ಆತಿಥ್ಯ ನೀಡುವುದು ವಿಶೇಷ ಅನುಭವ, ಆದರೆ ದಶಕಗಳ ನಂತರ ಮನೆಗೆ ಮರಳುವ ಅನುಭವ ಮತ್ತು ಸಂತೋಷಕ್ಕೆ ಸಾಟಿಯಿಲ್ಲ ಎಂಬ ಅಂಶದ ಬಗ್ಗೆ ಗಮನ ಸೆಳೆದರು. ಅದೇ ಉತ್ಸಾಹದಿಂದ ರಾಜ್ಯಕ್ಕೆ ಭೇಟಿ ನೀಡುತ್ತಿರುವ ತಮಿಳುನಾಡಿನ ಸ್ನೇಹಿತರಿಗೆ ಸೌರಾಷ್ಟ್ರದ ಜನರು ಕೆಂಪು ಹಾಸಿನ ಸ್ವಾಗತ ನೀಡುತ್ತಿದ್ದಾರೆ ಎಂಬುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ 2010ರಲ್ಲಿ ಇದೇ ರೀತಿಯ ಸೌರಾಷ್ಟ್ರ ತಮಿಳು ಸಂಗಮವನ್ನು ಮಧುರೈನಲ್ಲಿ ಆಯೋಜಿಸಿದ್ದು, ಸೌರಾಷ್ಟ್ರದಿಂದ 50,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂಬುದನ್ನು ಪ್ರಧಾನಿ ಸ್ಮರಿಸಿದರು. ತಮಿಳುನಾಡಿನಿಂದ ಸೌರಾಷ್ಟ್ರಕ್ಕೆ ಆಗಮಿಸಿರುವ ಅತಿಥಿಗಳಲ್ಲಿಯೂ ಇದೇ ರೀತಿಯ ವಾತ್ಸಲ್ಯ ಮತ್ತು ಉತ್ಸಾಹ ಇರುವುದನ್ನು ಪ್ರಧಾನಿ ಉಲ್ಲೇಖಿಸಿದರು. ಅತಿಥಿಗಳು ಪ್ರವಾಸೋದ್ಯಮದಲ್ಲಿ ತೊಡಗಿದ್ದಾರೆ ಮತ್ತು ಈಗಾಗಲೇ ಕೆವಾಡಿಯಾದಲ್ಲಿನ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ ಪ್ರಧಾನಿ, ಸೌರಾಷ್ಟ್ರ ತಮಿಳು ಸಂಗಮದಲ್ಲಿ ಗತಕಾಲದ ಅಮೂಲ್ಯ ನೆನಪುಗಳು, ವರ್ತಮಾನದ ಸಂಬಂಧ ಮತ್ತು ಅನುಭವಗಳು ಹಾಗು ಭವಿಷ್ಯದ ಸಂಕಲ್ಪಗಳು ಮತ್ತು ಪ್ರೇರಣೆಗಳೂ ಅಡಕವಾಗಿರುವುದನ್ನು ಯಾರೇ ಆದರೂ ಕಾಣಬಹುದು ಎಂದರು. ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸೌರಾಷ್ಟ್ರ ಮತ್ತು ತಮಿಳುನಾಡಿನ ಪ್ರತಿಯೊಬ್ಬರನ್ನೂ ಅವರು ಅಭಿನಂದಿಸಿದರು.
ಭಾರತದ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಾವು ಸೌರಾಷ್ಟ್ರ ತಮಿಳು ಸಂಗಮದಂತಹ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದ್ದೇವೆ, ಇದು ಕೇವಲ ತಮಿಳುನಾಡು ಮತ್ತು ಸೌರಾಷ್ಟ್ರದ ಸಂಗಮವಲ್ಲ, ಆದರೆ ದೇವಿ ಮೀನಾಕ್ಷಿ ಮತ್ತು ದೇವಿ ಪಾರ್ವತಿ ರೂಪದಲ್ಲಿ ಶಕ್ತಿಯ ಆರಾಧನೆಯ ಉತ್ಸವವಾಗಿದೆ ಎಂದು ಪ್ರಧಾನಿ ಹೇಳಿದರು. ಅಲ್ಲದೆ, ಭಗವಾನ್ ಸೋಮನಾಥ ಮತ್ತು ಭಗವಾನ್ ರಾಮನಾಥ್ ರೂಪದಲ್ಲಿ ಶಿವನ ಸ್ಪೂರ್ತಿಯ ಹಬ್ಬವೂ ಇದಾಗಿದೆ. ಅಂತೆಯೇ, ಇದು ಸುಂದರೇಶ್ವರ ಮತ್ತು ನಾಗೇಶ್ವರ ಭೂಮಿಯ ಸಂಗಮವಾಗಿದೆ, ಇದು ಶ್ರೀ ಕೃಷ್ಣ ಮತ್ತು ಶ್ರೀ ರಂಗನಾಥ, ನರ್ಮದಾ ಮತ್ತು ವಾಗೈ, ದಾಂಡಿಯಾ ಮತ್ತು ಕೋಲಾಟಂ ಹಾಗು ದ್ವಾರಕಾ ಮತ್ತು ಪುರಿಯಂತಹ ಪವಿತ್ರ ಸಂಪ್ರದಾಯಗಳ ಸಂಗಮವಾಗಿದೆ ಎಂದೂ ಅವರು ಹೇಳಿದರು. "ತಮಿಳು ಸೌರಾಷ್ಟ್ರ ಸಂಗಮವು ಸರ್ದಾರ್ ಪಟೇಲ್ ಮತ್ತು ಸುಬ್ರಮಣ್ಯ ಭಾರತಿ ಅವರ ದೇಶಭಕ್ತಿಯ ಅಚಲ ನಿರ್ಧಾರದ ಸಂಗಮವಾಗಿದೆ. ಈ ಪರಂಪರೆಯೊಂದಿಗೆ ನಾವು ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯಬೇಕಿದೆ", ಎಂದೂ ಪ್ರಧಾನಿ ಅಭಿಪ್ರಾಯಪಟ್ಟರು.
"ಭಾರತವು ತನ್ನ ವೈವಿಧ್ಯತೆಯನ್ನು ಒಂದು ವಿಶೇಷತೆಯಾಗಿ ನೋಡುವ ದೇಶವಾಗಿದೆ" ಎಂದು ದೇಶಾದ್ಯಂತ ಇರುವ ವಿವಿಧ ಭಾಷೆಗಳು ಮತ್ತು ಉಪಭಾಷೆಗಳು, ಕಲಾ ಪ್ರಕಾರಗಳು ಮತ್ತು ಪ್ರಕಾರಗಳನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು. ಭಾರತವು ತನ್ನ ನಂಬಿಕೆ ಮತ್ತು ಆಧ್ಯಾತ್ಮಿಕತೆಯಲ್ಲಿ ವೈವಿಧ್ಯತೆಯನ್ನು ಕಂಡುಕೊಳ್ಳುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಶಿವ ಮತ್ತು ಬ್ರಹ್ಮ ದೇವರನ್ನು ಪೂಜಿಸುವ ಮತ್ತು ಈ ನೆಲದ ಪವಿತ್ರ ನದಿಗಳಿಗೆ ನಮ್ಮದೇ ಆದ ವೈವಿಧ್ಯಮಯ ರೀತಿಯಲ್ಲಿ ತಲೆ ಬಾಗಿಸುವ ಉದಾಹರಣೆಯನ್ನು ನೀಡಿದರು. ಈ ವೈವಿಧ್ಯತೆಯು ನಮ್ಮನ್ನು ವಿಭಜಿಸುವುದಿಲ್ಲ, ಆದರೆ ನಮ್ಮ ಬಂಧಗಳು ಮತ್ತು ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನುಡಿದರು. . ವಿವಿಧ ತೊರೆಗಳು ಒಗ್ಗೂಡಿದಾಗ ಸಂಗಮ ಸೃಷ್ಟಿಯಾಗುತ್ತದೆ ಎಂದು ಒತ್ತಿಹೇಳಿದ ಅವರು, ಶತಮಾನಗಳಿಂದ ಕುಂಭದಂತಹ ಕಾರ್ಯಕ್ರಮಗಳಲ್ಲಿ ನದಿಗಳ ಸಂಗಮದ ಮೂಲಕ ವಿಚಾರಗಳ ಸಂಗಮದ ಕಲ್ಪನೆಯನ್ನು ಭಾರತ ಪೋಷಿಸುತ್ತಿದೆ ಎಂದು ಹೇಳಿದರು. "ಇದೇ ಸಂಗಮದ ಶಕ್ತಿಯಾಗಿದ್ದು, ಸೌರಾಷ್ಟ್ರ ತಮಿಳು ಸಂಗಮವು ಇಂದು ಹೊಸ ರೂಪದಲ್ಲಿ ಮುನ್ನಡೆಯುತ್ತಿದೆ", ಎಂದು ಪ್ರಧಾನಿ ಹೇಳಿದರು. ಸರ್ದಾರ್ ಪಟೇಲ್ ಸಾಹೇಬರ ಆಶೀರ್ವಾದದಿಂದ ದೇಶದ ಏಕತೆ ಇಂತಹ ಮಹಾನ್ ಹಬ್ಬಗಳ ರೂಪದಲ್ಲಿ ರೂಪುಗೊಳ್ಳುತ್ತಿದೆ ಎಂದು ಅವರು ವಿವರಿಸಿದರು. ಇದು ತಮ್ಮ ಜೀವನವನ್ನು ತ್ಯಾಗ ಮಾಡಿದ ಮತ್ತು 'ಏಕ್ ಭಾರತ್ ಶ್ರೇಷ್ಠ ಭಾರತ್' ಕನಸು ಕಂಡ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳ ಈಡೇರಿಕೆಯಾಗಿದೆ ಎಂದೂ ಪ್ರಧಾನಿ ಒತ್ತಿ ಹೇಳಿದರು.
ಪರಂಪರೆಯಲ್ಲಿ ಹೆಮ್ಮೆಯ 'ಪಂಚ ಪ್ರಾಣ'ವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, "ನಾವು ಅದನ್ನು ತಿಳಿದುಕೊಂಡಾಗ, ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗುವ ಮೂಲಕ ನಮ್ಮನ್ನು ನಾವು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಹೆಚ್ಚಾಗುತ್ತದೆ" ಎಂದು ಹೇಳಿದರು. ಕಾಶಿ ತಮಿಳು ಸಂಗಮಂ ಮತ್ತು ಸೌರಾಷ್ಟ್ರ ತಮಿಳು ಸಂಗಮಂನಂತಹ ಕಾರ್ಯಕ್ರಮಗಳು ಈ ದಿಕ್ಕಿನಲ್ಲಿ ಪರಿಣಾಮಕಾರಿ ಆಂದೋಲನವಾಗುತ್ತಿವೆ ಎಂದು ಅವರು ಹೇಳಿದರು. ಗುಜರಾತ್ ಮತ್ತು ತಮಿಳುನಾಡಿನ ನಡುವಿನ ಆಳವಾದ ಸಂಪರ್ಕವನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. "ಪೌರಾಣಿಕ ಕಾಲದಿಂದಲೂ ಈ ಎರಡು ರಾಜ್ಯಗಳ ನಡುವೆ ಆಳವಾದ ಸಂಬಂಧವಿದೆ. ಸೌರಾಷ್ಟ್ರ ಮತ್ತು ತಮಿಳುನಾಡು ನಡುವಣ ಸಾಂಸ್ಕೃತಿಕ ಸಂಗಮವು ಪಶ್ಚಿಮ ಮತ್ತು ದಕ್ಷಿಣದ ನಡುವೆ ಸಾವಿರಾರು ವರ್ಷಗಳಿಂದ ಚಲನೆಯಲ್ಲಿರುವ ಸಾಂಸ್ಕೃತಿಕ ಹರಿವು. ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.
2047ರ ಗುರಿ, ಗುಲಾಮಗಿರಿಯ ಸವಾಲುಗಳು ಮತ್ತು 7 ದಶಕಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ದಿಕ್ಕುತಪ್ಪಿಸುವ ಮತ್ತು ವಿನಾಶಕಾರಿ ಶಕ್ತಿಗಳ ವಿರುದ್ಧ ಎಚ್ಚರಿಸಿದರು. "ಕಠಿಣ ಸಂದರ್ಭಗಳಲ್ಲಿಯೂ ಆವಿಷ್ಕಾರ ಮಾಡುವ ಶಕ್ತಿ ಭಾರತಕ್ಕೆ ಇದೆ, ಸೌರಾಷ್ಟ್ರ ಮತ್ತು ತಮಿಳುನಾಡಿನ ಹಂಚಿಕೆಯ ಇತಿಹಾಸವು ನಮಗೆ ಈ ಭರವಸೆ ನೀಡುತ್ತದೆ" ಎಂದು ಅವರು ಹೇಳಿದರು. ಸೋಮನಾಥನ ಮೇಲಿನ ದಾಳಿ ಮತ್ತು ಅದರ ಪರಿಣಾಮವಾಗಿ ತಮಿಳುನಾಡಿಗೆ ವಲಸೆಯಾದುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಲಸೆ ಹೋಗುವವರು ಹೊಸ ಭಾಷೆ, ಅಲ್ಲಿಯ ಜನರು ಮತ್ತು ಪರಿಸರದ ಬಗ್ಗೆ ಎಂದಿಗೂ ಚಿಂತಿಸಲಿಲ್ಲ ಎಂಬುದನ್ನು ನೆನಪು ಮಾಡಿಕೊಂಡರು. ತಮ್ಮ ನಂಬಿಕೆ ಮತ್ತು ಗುರುತನ್ನು ರಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ಸೌರಾಷ್ಟ್ರದಿಂದ ತಮಿಳುನಾಡಿಗೆ ವಲಸೆ ಬಂದರು ಮತ್ತು ತಮಿಳುನಾಡಿನ ಜನರು ಅವರನ್ನು ತೆರೆದ ತೋಳುಗಳಿಂದ ಸ್ವಾಗತಿಸಿದರು ಮತ್ತು ಹೊಸ ಜೀವನಕ್ಕಾಗಿ ಅವರಿಗೆ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಿದರು ಎಂಬುದನ್ನು ಅವರು ಪುನರುಚ್ಚರಿಸಿದರು. "ಏಕ್ ಭಾರತ್, ಶ್ರೇಷ್ಠ ಭಾರತ'ಕ್ಕೆ ಇದಕ್ಕಿಂತ ದೊಡ್ಡ ಮತ್ತು ಉನ್ನತ ಉದಾಹರಣೆ ಇನ್ನೇನು ಬೇಕು?" ಎಂದು ಪ್ರಧಾನಿ ಉದ್ಗರಿಸಿದರು.
ಮಹಾನ್ ಸಂತ ತಿರುವಳ್ಳುವರ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ತಮ್ಮ ಮನೆಗಳಿಗೆ ಇತರರನ್ನು ಸಂತೋಷದಿಂದ ಸ್ವಾಗತಿಸುವವರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಬರುತ್ತದೆ ಎಂದರು. ಸಾಮರಸ್ಯ ಮತ್ತು ಸಾಂಸ್ಕೃತಿಕ ಘರ್ಷಣೆಗಳನ್ನು ದೂರವಿಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. "ನಾವು ಹೋರಾಟಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿಲ್ಲ, ನಾವು ಸಂಗಮಗಳು ಮತ್ತು ಸಮಾಗಮಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು. ನಾವು ಭಿನ್ನಾಭಿಪ್ರಾಯಗಳನ್ನು ಹುಡುಕಲು ಬಯಸುವುದಿಲ್ಲ, ನಾವು ಭಾವನಾತ್ಮಕ ಸಂಪರ್ಕಗಳನ್ನು ಹೊಂದಲು ಬಯಸುತ್ತೇವೆ", ಎಂದು ಸೌರಾಷ್ಟ್ರ ಮೂಲದ ಜನರನ್ನು ತಮಿಳುನಾಡಿನಲ್ಲಿ ನೆಲೆಸಲು ಸ್ವಾಗತಿಸಿದ ತಮಿಳುನಾಡಿನ ಜನರನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು. ಎಲ್ಲರನ್ನೂ ಒಳಗೊಳಿಸಿಕೊಂಡು ಹೋಗುವ ಮತ್ತು ಮುಂದೆ ಸಾಗುವ ಭಾರತದ ಅಮರ ಸಂಪ್ರದಾಯವನ್ನು ತಮಿಳು ಸಂಸ್ಕೃತಿಯನ್ನು ಅಳವಡಿಸಿಕೊಂಡವರು ಪ್ರದರ್ಶಿಸಿದ್ದಾರೆ ಆದರೆ ಅದೇ ಸಮಯದಲ್ಲಿ ಸೌರಾಷ್ಟ್ರದ ಭಾಷೆ, ಆಹಾರ ಮತ್ತು ಪದ್ಧತಿಗಳನ್ನು ನೆನಪಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ನಮ್ಮ ಪೂರ್ವಜರ ಕೊಡುಗೆಗಳನ್ನು ಕರ್ತವ್ಯ ಪ್ರಜ್ಞೆಯೊಂದಿಗೆ ಮುಂದೆ ಕೊಂಡೊಯ್ಯಲಾಗುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಸ್ಥಳೀಯ ಮಟ್ಟದಲ್ಲಿ ದೇಶದ ವಿವಿಧ ಭಾಗಗಳ ಜನರನ್ನು ಆಹ್ವಾನಿಸಿ ಅವರಿಗೆ ಭಾರತದಲ್ಲಿ ಬದುಕಲು ಮತ್ತು ಉಸಿರಾಡಲು ಅವಕಾಶ ನೀಡುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸಿದರು. ಸೌರಾಷ್ಟ್ರ ತಮಿಳು ಸಂಗಮವು ಈ ದಿಕ್ಕಿನಲ್ಲಿ ಒಂದು ಐತಿಹಾಸಿಕ ಉಪಕ್ರಮವೆಂದು ಸಾಬೀತಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಹಿನ್ನೆಲೆ
ದೇಶದ ವಿವಿಧ ಭಾಗಗಳಲ್ಲಿನ ಜನರ ನಡುವಿನ ಹಳೆಯ ಸಂಬಂಧಗಳನ್ನು ಮರುಸ್ಥಾಪಿಸಲು ಸಹಾಯ ಮಾಡುವ ಉಪಕ್ರಮಗಳ ಮೂಲಕ ಏಕ್ ಭಾರತ್ ಶ್ರೇಷ್ಠ ಭಾರತದ ಸ್ಫೂರ್ತಿಯನ್ನು ಉತ್ತೇಜಿಸುವ ಪ್ರಧಾನಮಂತ್ರಿಯವರ ಚಿಂತನೆ ಈ ಕಾರ್ಯಕ್ರಮದ ಹಿಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಾಶಿ ತಮಿಳು ಸಂಗಮವನ್ನು ಈ ಹಿಂದೆ ಆಯೋಜಿಸಲಾಗಿತ್ತು ಮತ್ತು ಸೌರಾಷ್ಟ್ರ ತಮಿಳು ಸಂಗಮಂ ಗುಜರಾತ್ ಮತ್ತು ತಮಿಳುನಾಡಿನ ನಡುವಿನ ಪರಸ್ಪರ ಹಂಚಿಕೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವ ಮೂಲಕ ಈ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.
ಶತಮಾನಗಳ ಹಿಂದೆ, ಸೌರಾಷ್ಟ್ರ ಪ್ರದೇಶದಿಂದ ಅನೇಕ ಜನರು ತಮಿಳುನಾಡಿಗೆ ವಲಸೆ ಬಂದರು. ಸೌರಾಷ್ಟ್ರ ತಮಿಳು ಸಂಗಮವು ಸೌರಾಷ್ಟ್ರ ತಮಿಳರಿಗೆ ತಮ್ಮ ಬೇರುಗಳೊಂದಿಗೆ ಮರುಸಂಪರ್ಕಿಸಲು ಅವಕಾಶವನ್ನು ಒದಗಿಸಿತು. 10 ದಿನಗಳ ಸಂಗಮದಲ್ಲಿ 3000 ಕ್ಕೂ ಹೆಚ್ಚು ಸೌರಾಷ್ಟ್ರ ತಮಿಳರು ವಿಶೇಷ ರೈಲಿನಲ್ಲಿ ಸೋಮನಾಥಕ್ಕೆ ಬಂದರು. ಕಾರ್ಯಕ್ರಮವು ಏಪ್ರಿಲ್ 17 ರಂದು ಪ್ರಾರಂಭವಾಯಿತು, ಅದರ ಸಮಾರೋಪ ಸಮಾರಂಭವು ಈಗ ಏಪ್ರಿಲ್ 26 ರಂದು ಸೋಮನಾಥದಲ್ಲಿ ನಡೆಯಿತು.
आज आजादी के अमृतकाल में हम सौराष्ट्र-तमिल संगमम् जैसे सांस्कृतिक आयोजनों की एक नई परंपरा के गवाह बन रहे हैं। pic.twitter.com/YEybyX7sZb
— PMO India (@PMOIndia) April 26, 2023
भारत विविधता को विशेषता के रूप में जीने वाला देश है। pic.twitter.com/xcU41P34xD
— PMO India (@PMOIndia) April 26, 2023
देश ने अपनी ‘विरासत पर गर्व’ के ‘पंच प्राण’ का आवाहन किया है। pic.twitter.com/fWfJka9Dqu
— PMO India (@PMOIndia) April 26, 2023
भारत कठिन से कठिन हालातों में भी कुछ नया करने की ताकत रखता है। pic.twitter.com/iVHtCgemJ4
— PMO India (@PMOIndia) April 26, 2023
भारत की अमर परंपरा है - सबको साथ लेकर समावेश के साथ आगे बढ़ने की, सबको स्वीकार करके आगे बढ़ने की। pic.twitter.com/LIJzKnlpwL
— PMO India (@PMOIndia) April 26, 2023