ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನವದೆಹಲಿಯ ಪ್ರಗತಿ ಮೈದಾನದಲ್ಲಿ ಒಂದು ಪೃಥ್ವಿ ಒಂದು ಆರೋಗ್ಯ - ಅಡ್ವಾಂಟೇಜ್ ಹೆಲ್ತ್‌ಕೇರ್ ಇಂಡಿಯಾ - 2023 ಸಮಾವೇಶದ 6ನೇ ಆವೃತ್ತಿಯನ್ನು ಉದ್ಘಾಟಿಸಿ, ಮಾತನಾಡಿದರು.
ವಿಶ್ವದೆಲ್ಲೆಡೆಯಿಂದ ಆಗಮಿಸಿರುವ ಆರೋಗ್ಯ ಸಚಿವರು ಮತ್ತು ಪಶ್ಚಿಮ ಏಷ್ಯಾ, ಸಾರ್ಕ್, ಆಸಿಯಾನ್ ಮತ್ತು ಆಫ್ರಿಕಾ ಭಾಗದ ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ ಕೋರಿದರು. 'ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ರೋಗಗಳಿಂದ ಮುಕ್ತರಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಮತ್ತು ಯಾರೂ ದುಃಖದಿಂದ ಬಳಲದಿರಲಿ' ಎಂಬ ಭಾರತೀಯ ಗ್ರಂಥವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, ರಾಷ್ಟ್ರದ ಎಲ್ಲರನ್ನೂ ಒಳಗೊಂಡ ದೃಷ್ಟಿಕೋನ ಮತ್ತು ಭಾರತದ ದೃಷ್ಟಿಕೋನವನ್ನು ಪ್ರಸ್ತಾಪಿಸಿದರು. ಸಾವಿರಾರು ವರ್ಷಗಳ ಹಿಂದೆ ಯಾವುದೇ ಜಾಗತಿಕ ಸಾಂಕ್ರಾಮಿಕ ರೋಗಗಳು ಇಲ್ಲದಿದ್ದಾಗಲೂ ಆರೋಗ್ಯವು ಸಾರ್ವತ್ರಿಕವಾಗಿತ್ತು. “ಒಂದು ಪೃಥ್ವಿ ಒಂದು ಆರೋಗ್ಯ”ವು ಒಂದೇ ರೀತಿಯ ನಂಬಿಕೆಗಳನ್ನು ಅನುಸರಿಸುತ್ತದೆ. ಅದೇ ಚಿಂತನಾ ಕ್ರಿಯೆಯ ಉದಾಹರಣೆಯಾಗಿದೆ. “ನಮ್ಮ ದೃಷ್ಟಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ಇಡೀ ಪರಿಸರ ವ್ಯವಸ್ಥೆಗೆ ವಿಸ್ತರಿಸುತ್ತದೆ. ಸಸ್ಯಗಳಿಂದ ಪ್ರಾಣಿಗಳವರೆಗೆ, ಮಣ್ಣಿನಿಂದ ನದಿಗಳವರೆಗೆ, ನಮ್ಮ ಸುತ್ತಲಿನ ಎಲ್ಲವೂ ಆರೋಗ್ಯಕರವಾಗಿದ್ದಾಗ, ನಾವು ಸಹ ಆರೋಗ್ಯವಾಗಿರಬಹುದು”, ಎಂದು ಪ್ರಧಾನ ಮಂತ್ರಿ ಹೇಳಿದರು.
ಅನಾರೋಗ್ಯ ಕೊರತೆಯು ಉತ್ತಮ ಆರೋಗ್ಯದಂತೆಯೇ ಇರುತ್ತದೆ ಎಂಬ ಜನಪ್ರಿಯ ಕಲ್ಪನೆಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದ ಆರೋಗ್ಯದ ದೃಷ್ಟಿಕೋನವು ಅನಾರೋಗ್ಯದ ಕೊರತೆಯಿಂದ ಮಾತ್ರ ನಿಲ್ಲುವುದಿಲ್ಲ. ಪ್ರತಿಯೊಬ್ಬರ ಕ್ಷೇಮ ಮತ್ತು ಕಲ್ಯಾಣದ ಮೇಲೆ ಗುರಿ ಕೇಂದ್ರೀಕರಿಸುತ್ತದೆ. "ನಮ್ಮ ಗುರಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮ" ಎಂದು ಅವರು ಹೇಳಿದರು.
'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ವಿಷಯದೊಂದಿಗೆ ಜಿ-20 ಅಧ್ಯಕ್ಷೀಯ ಸ್ಥಾನ ಅಲಂಕರಿಸಿರುವ ಭಾರತದ ಪಯಣದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಈ ದೃಷ್ಟಿಕೋನವನ್ನು ಪೂರೈಸುವಲ್ಲಿ ಚೇತರಿಸಿಕೊಳ್ಳುವ ಜಾಗತಿಕ ಆರೋಗ್ಯ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ಅರಿಯಬೇಕು. ವೈದ್ಯಕೀಯ ಮೌಲ್ಯದ ಪ್ರಯಾಣ ಮತ್ತು ಆರೋಗ್ಯ ಕಾರ್ಯಪಡೆಯ ಚಲನಶೀಲತೆಯು ಆರೋಗ್ಯಕರ ಪೃಥ್ವಿಗೆ ಪ್ರಮುಖ ಅಂಶಗಳಾಗಿವೆ. ‘ಒಂದು ಭೂಮಿ, ಒಂದು ಆರೋಗ್ಯ - ಅಡ್ವಾಂಟೇಜ್ ಹೆಲ್ತ್‌ಕೇರ್ ಇಂಡಿಯಾ 2023’ ಸಮಾವೇಶವು ಈ ದಿಕ್ಕಿನಲ್ಲಿ ಮಹತ್ವದ ಪ್ರಯತ್ನವಾಗಿದೆ. ಇಂದಿನ ಸಂದರ್ಭವು ಭಾರತದ ಜಿ-20 ಅಧ್ಯಕ್ಷೀಯ ಧ್ಯೇಯದೊಂದಿಗೆ ಪ್ರತಿಧ್ವನಿಸುತ್ತಿದೆ. ಇದು ಹಲವಾರು ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ‘ವಸುಧೈವ ಕುಟುಂಬಕಂ’ ಎಂದರೆ ಜಗತ್ತೇ ಒಂದು ಕುಟುಂಬ ಎಂಬ ಭಾರತೀಯ ತತ್ತ್ವಶಾಸ್ತ್ರವನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ವೃತ್ತಿಪರ ಮತ್ತು ಶೈಕ್ಷಣಿಕ ಕ್ಷೇತ್ರಗಳ ಪಾಲುದಾರರು ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಸಮಗ್ರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಶಕ್ತಿಗೆ ಒತ್ತು ನೀಡಿದ ಪ್ರಧಾನ ಮಂತ್ರಿ, ಭಾರತದ ಪ್ರತಿಭೆ, ತಂತ್ರಜ್ಞಾನ, ದಾಖಲೆ ಮತ್ತು ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲಿದರು. ಭಾರತೀಯ ವೈದ್ಯರು, ದಾದಿಯರು ಮತ್ತು ಆರೈಕೆ ಮಾಡುವವರ ಪ್ರಭಾವಕ್ಕೆ ಜಗತ್ತು ಸಾಕ್ಷಿಯಾಗಿದೆ. ಅವರ ಸಾಮರ್ಥ್ಯ, ಬದ್ಧತೆ ಮತ್ತು ಪ್ರತಿಭೆಗಾಗಿ ಅವರೆಲ್ಲರೂ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ. ವಿಶ್ವಾದ್ಯಂತ ಅನೇಕ ಆರೋಗ್ಯ ವ್ಯವಸ್ಥೆಗಳು ಭಾರತೀಯ ವೃತ್ತಿಪರರ ಪ್ರತಿಭೆಯಿಂದ ಪ್ರಯೋಜನ ಪಡೆದಿವೆ. "ಭಾರತವು ಸಂಸ್ಕೃತಿ, ಹವಾಮಾನ ಮತ್ತು ಸಾಮಾಜಿಕ ಕ್ರಿಯಾಶೀಲತೆಯಲ್ಲಿ ಅಗಾಧವಾದ ವೈವಿಧ್ಯತೆ ಹೊಂದಿದೆ". ಭಾರತದಲ್ಲಿ ಆರೋಗ್ಯ ವೃತ್ತಿಪರರ ತರಬೇತಿ ಮತ್ತು ವೈವಿಧ್ಯಮಯ ಅನುಭವಗಳು ಗಮನಾರ್ಹ. ವಿವಿಧ ಸನ್ನಿವೇಶಗಳ ಅಗತ್ಯತೆಗಳನ್ನು ಪೂರೈಸುವ ಅಸಾಧಾರಣ ಕೌಶಲ್ಯದಿಂದಾಗಿ ಭಾರತೀಯ ಆರೋಗ್ಯ ಪ್ರತಿಭೆಗಳು ವಿಶ್ವದ ವಿಶ್ವಾಸ ಗೆದ್ದಿದ್ದಾರೆ ಎಂದು ಪ್ರಧಾನಿ ಹೇಳಿದರು.
ಶತಮಾನಕ್ಕೊಮ್ಮೆ ಸಂಭಸಿದ ಸಾಂಕ್ರಾಮಿಕ ರೋಗವನ್ನು ಪ್ರಸ್ತಾಪಿಸಿದ ಅವರು, ಇದು ಜಗತ್ತಿಗೆ ಹಲವಾರು ಸತ್ಯಗಳನ್ನು ನೆನಪಿಸಿದೆ. ಆಳವಾಗಿ ಸಂಪರ್ಕ ಹೊಂದಿದ ಜಗತ್ತಿನಲ್ಲಿ ಆರೋಗ್ಯ ಬೆದರಿಕೆಗಳನ್ನು ಗಡಿಗಳು ತಡೆಯಲು ಸಾಧ್ಯವಿಲ್ಲ. ಜಾಗತಿಕ ದಕ್ಷಿಣದಲ್ಲಿರುವ ದೇಶಗಳು ಸಂಪನ್ಮೂಲಗಳ ನಿರಾಕರಣೆ ಸೇರಿದಂತೆ ವಿವಿಧ ತೊಂದರೆಗಳು ಮತ್ತು ಸಂಕಷ್ಟಗಳನ್ನು ಎದುರಿಸುತ್ತಿವೆ. ಹಾಗಾಗಿ, ನಿಜವಾದ ಪ್ರಗತಿಯು ಜನಕೇಂದ್ರಿತವಾಗಿದೆ. ವೈದ್ಯಕೀಯ ವಿಜ್ಞಾನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ, ದೂರದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ಖಾತರಿಪಡಿಸಬೇಕು”. ಆರೋಗ್ಯ ಸಂರಕ್ಷಣಾ ವಲಯದಲ್ಲಿ ವಿಶ್ವಾಸಾರ್ಹ ಪಾಲುದಾರರ ಅನೇಕ ರಾಷ್ಟ್ರಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ, ಲಸಿಕೆಗಳು ಮತ್ತು ಔಷಧಗಳ ಮೂಲಕ ಜೀವಗಳನ್ನು ಉಳಿಸುವ ಉದಾತ್ತ ಧ್ಯೇಯದಲ್ಲಿ ಭಾರತವು ಅನೇಕ ರಾಷ್ಟ್ರಗಳಿಗೆ ಪಾಲುದಾರನಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೇಡ್-ಇನ್-ಇಂಡಿಯಾ ಲಸಿಕೆಗಳ ಉದಾಹರಣೆಗಳನ್ನು ನೀಡಿದ ಅವರು, ಮತ್ತು ವೇಗವಾಗಿ ಕೋವಿಡ್ -19 ಲಸಿಕೆ ಆಂದೋಲನ ನಡೆಸಿದ ಮತ್ತು ಹಡಗು ಸಾಗಣೆ ಮೂಲಕ 100ಕ್ಕೂ ಹೆಚ್ಚು ದೇಶಗಳಿಗೆ 300 ದಶಲಕ್ಷ ಡೋಸ್ ಕೋವಿಡ್-19 ಲಸಿಕೆ ಪೂರೈಸಿದ ವಿಶ್ವದ ಅತಿದೊಡ್ಡ ರಾಷ್ಟ್ರ ಭಾರತ. ಇದು ಭಾರತದ ಸಾಮರ್ಥ್ಯ ಮತ್ತು ಬದ್ಧತೆಯ ಒಂದು ನೋಟವನ್ನು ತೋರಿಸಿದೆ ಎಂದು ಮೋದಿ ಪುನರುಚ್ಚರಿಸಿದರು. ರಾಷ್ಟ್ರವು ತನ್ನ ನಾಗರಿಕರಿಗೆ ಹಾಗೂ ಉತ್ತಮ ಆರೋಗ್ಯ ಬಯಸುವ ಪ್ರತಿಯೊಂದು ರಾಷ್ಟ್ರಕ್ಕೂ ವಿಶ್ವಾಸಾರ್ಹ ಸ್ನೇಹಿತನಾಗಿ ಮುಂದುವರಿಯುತ್ತಿದೆ ಎಂದರು.
"ಆರೋಗ್ಯದ ಕಡೆಗೆ ಭಾರತದ ದೃಷ್ಟಿಕೋನವು ಸಾವಿರಾರು ವರ್ಷಗಳಿಂದ ಸಮಗ್ರವಾಗಿದೆ". ಯೋಗ ಮತ್ತು ಧ್ಯಾನದಂತಹ ಆರೋಗ್ಯ ವ್ಯವಸ್ಥೆಗಳೊಂದಿಗೆ ಭಾರತವು ತಡೆಗಟ್ಟುವ ಮತ್ತು ಉತ್ತೇಜಿಸುವ ಆರೋಗ್ಯದ ಶ್ರೇಷ್ಠ ಸಂಪ್ರದಾಯ ಹೊಂದಿದೆ. ಆಧುನಿಕ ಜಗತ್ತಿಗೆ ಪ್ರಾಚೀನ ಭಾರತದ ಕೊಡುಗೆಗಳು ಈಗ ಜಾಗತಿಕ ಆಂದೋಲನಗಳಾಗಿವೆ. ಅವರು ಆರೋಗ್ಯದ ಸಂಪೂರ್ಣ ಶಿಸ್ತು ರೂಢಿಸಿಕೊಳ್ಳಲು ಆಯುರ್ವೇದ ಸ್ಪರ್ಶಿಸಿದರು. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. "ಜಗತ್ತು ಒತ್ತಡ ಮತ್ತು ಜೀವನಶೈಲಿಯ ಕಾಯಿಲೆಗಳಿಗೆ ಪರಿಹಾರಗಳನ್ನು ಹುಡುಕುತ್ತಿದೆ. ಭಾರತದ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳು ಬಹಳಷ್ಟು ಉತ್ತರಗಳನ್ನು ಹೊಂದಿವೆ. ಭಾರತದ ಸಾಂಪ್ರದಾಯಿಕ ಆಹಾರಕ್ಕಾಗಿ ತಯಾರಿಸುವ ಸಿರಿಧಾನ್ಯಗಳು ವಿಶ್ವಾದ್ಯಂತ ಆಹಾರ ಭದ್ರತೆ, ಪಥ್ಯ ಮತ್ತು ಪೌಷ್ಟಿಕಾಂಶದ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿವೆ ಎಂದು ಬಣ್ಣಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ, ಇದು ವಿಶ್ವದ ಅತಿದೊಡ್ಡ ಸರ್ಕಾರಿ ಅನುದಾನಿತ ಆರೋಗ್ಯ ವಿಮಾ ರಕ್ಷಣೆ ಯೋಜನೆಯಾಗಿದೆ. ಇದು 500 ದಶಲಕ್ಷಕ್ಕಿಂತ ಹೆಚ್ಚಿನ ಭಾರತೀಯ ನಾಗರಿಕರ ವೈದ್ಯಕೀಯ ಚಿಕಿತ್ಸೆಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ 40 ದಶಲಕ್ಷಕ್ಕಿಂತ ಹೆಚ್ಚಿನ ಜನರು ಈಗಾಗಲೇ ನಗದು ರಹಿತ ಮತ್ತು ಕಾಗದರಹಿತ ರೀತಿಯ ಸೇವೆಗಳನ್ನು ಪಡೆದುಕೊಂಡಿದ್ದಾರೆ, ಇದರಿಂದಾಗಿ ನಾಗರಿಕರು ಸುಮಾರು 7 ಶತಕೋಟಿ ಡಾಲರ್ ಹಣ ಉಳಿಸಿದ್ದಾರೆ.
ಆರೋಗ್ಯ ರಕ್ಷಣೆಯ ಸವಾಲುಗಳಿಗೆ ಜಾಗತಿಕ ಪ್ರತಿಕ್ರಿಯೆಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್. ಇದು ಸಮಗ್ರ, ಅಂತರ್ಗತ ಮತ್ತು ಸಾಂಸ್ಥಿಕ ಪ್ರತಿಕ್ರಿಯೆಯ ಸಮಯವಾಗಿದೆ. “ನಮ್ಮ ಜಿ-20 ಅಧ್ಯಕ್ಷೀಯ ಅವಧಿಯಲ್ಲಿ ಇದು ನಮ್ಮ ಆದ್ಯತೆಯ ಗಮನದ ಕ್ಷೇತ್ರಗಳಲ್ಲಿ ಒಂದಾಗಿದೆ. ನಮ್ಮ ನಾಗರಿಕರಿಗೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ಆರೋಗ್ಯ ಸೇವೆಯನ್ನು ಸುಲಭವಾಗಿ ಮತ್ತು ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ”. ಭಾರತದ ಆದ್ಯತೆಯು ಅಸಮಾನತೆಯನ್ನು ಕಡಿಮೆ ಮಾಡುತ್ತಿದೆ, ಸೇವೆ ಸಲ್ಲಿಸದವರಿಗೆ ಸೇವೆ ಸಲ್ಲಿಸುವುದು ದೇಶಕ್ಕೆ ನಂಬಿಕೆಯ ಲೇಖನವಾಗಿದೆ. ಈ ಸಮಾವೇಶ ಅಥವಾ ಕೂಟವು ಈ ದಿಸೆಯಲ್ಲಿ ಜಾಗತಿಕ ಸಹಭಾಗಿತ್ವವನ್ನು ಬಲಪಡಿಸುತ್ತದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು. 'ಒಂದು ಭೂಮಿ-ಒಂದು ಆರೋಗ್ಯ' ಎಂಬ ಸಾಮಾನ್ಯ ಕಾರ್ಯಸೂಚಿಯಲ್ಲಿ ಇತರ ರಾಷ್ಟ್ರಗಳು ಪಾಲುದಾರಿಕೆ ಹೊಂದಬೇಕು ಎಂದು ಮನವಿ ಮಾಡಿ, ಪ್ರಧಾನ ಮಂತ್ರಿ ಅವರು ಭಾಷಣ ಮುಕ್ತಾಯಗೊಳಿಸಿದರು.
ಹಿನ್ನೆಲೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ(ಫಿಕ್ಕಿ)ದ ಸಹಯೋಗದೊಂದಿಗೆ “ಒನ್ ಅರ್ಥ್ ಒನ್ ಹೆಲ್ತ್, ಅಡ್ವಾಂಟೇಜ್ ಹೆಲ್ತ್‌ಕೇರ್ ಇಂಡಿಯಾ 2023”ರ 6ನೇ ಆವೃತ್ತಿಯನ್ನು ಭಾರತದ ಜಿ-20 ಅಧ್ಯಕ್ಷತೆಯೊಂದಿಗೆ ಸಹ-ಬ್ರಾಂಡ್ ಮಾಡಿ, ಸಮಾವೇಶವನ್ನು 2023 ಏಪ್ರಿಲ್ 26 ಮತ್ತು 27ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಿತ್ತು.
ಎರಡು ದಿನಗಳ ಕಾರ್ಯಕ್ರಮವು ಜಾಗತಿಕ ಸಹಭಾಗಿತ್ವದ ಪ್ರಾಮುಖ್ಯತೆಗೆ ಒತ್ತು ನೀಡಿದೆ. ಚೇತರಿಸಿಕೊಳ್ಳುವ ಜಾಗತಿಕ ಆರೋಗ್ಯ ವಾಸ್ತುಶಿಲ್ಪ ನಿರ್ಮಿಸಲು ಮತ್ತು ಮೌಲ್ಯಾಧರಿತ ಆರೋಗ್ಯ ರಕ್ಷಣೆಯ ಮೂಲಕ ಸಾರ್ವತ್ರಿಕ ಆರೋಗ್ಯ ಸಂರಕ್ಷಣೆಯ ಗುರಿ ಸಾಧಿಸಲು ಕೆಲಸ ಮಾಡುತ್ತದೆ. ಮೌಲ್ಯಾಧಾರಿತ ಆರೋಗ್ಯ ಸೇವೆಗಳನ್ನು ಒದಗಿಸುವ ಆರೋಗ್ಯ ಸಂರಕ್ಷಣೆ ಕಾರ್ಯಪಡೆಯ ರಫ್ತುದಾರರಾಗಿ ವೈದ್ಯಕೀಯ ಮೌಲ್ಯ ಪ್ರಯಾಣ ಕ್ಷೇತ್ರದಲ್ಲಿ ಭಾರತದ ಶಕ್ತಿ ಪ್ರದರ್ಶಿಸಲು ಇದು ಮತ್ತಷ್ಟು ಗುರಿ ಹೊಂದಿದೆ. ವಿಶ್ವ ದರ್ಜೆಯ ಆರೋಗ್ಯ ಮತ್ತು ಯೋಗಕ್ಷೇಮ ಸೇವೆಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಭಾರತದ ಜಿ-20 ಅಧ್ಯಕ್ಷೀಯ ಅವಧಿಯ ಧ್ಯೇಯವಾಕ್ಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ಕ್ಕೆ ಅನುಗುಣವಾಗಿದೆ. 'ಒಂದು ಭೂಮಿ, ಒಂದು ಆರೋಗ್ಯ- ಅಡ್ವಾಂಟೇಜ್ ಹೆಲ್ತ್‌ಕೇರ್ ಇಂಡಿಯಾ 2023' ಎಂದು ಸೂಕ್ತವಾಗಿ ಹೆಸರಿಸಲಾಗಿದೆ. ಭಾರತದಿಂದ ಸೇವೆಗಳ ರಫ್ತು ಉತ್ತೇಜಿಸಲು ಈ ಅಂತಾರಾಷ್ಟ್ರೀಯ ಶೃಂಗಸಭೆಯು ಜ್ಞಾನದ ವಿನಿಮಯಕ್ಕೆ ಆದರ್ಶವಾದ ವೇದಿಕೆಯನ್ನು ಒದಗಿಸುತ್ತದೆ, ಜಾಗತಿಕ ಎಂವಿಟಿ ಉದ್ಯಮದಲ್ಲಿ ಪಾಲುದಾರರು ಮತ್ತು ಪ್ರಮುಖ ಅಧಿಕಾರಿಗಳ ಭಾಗವಹಿಸುವಿಕೆ, ನೀತಿ ನಿರ್ಧಾರಕರು, ಉದ್ಯಮ ಪಾಲುದಾರರು, ತಜ್ಞರು ಮತ್ತು ಜಾಗತಿಕ ಉದ್ಯಮ ವೃತ್ತಿಪರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಭಾಗವಹಿಸಿದ ಪ್ರತಿನಿಧಿಗಳಿಗೆ ವಿಶ್ವಾದ್ಯಂತ ಇರುವ ಗೆಳೆಯರೊಂದಿಗೆ ಸಂಪರ್ಕ ಜಾಲ ನಿರ್ಮಿಸಲು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಬಲವಾದ ವ್ಯಾಪಾರ ಪಾಲುದಾರಿಕೆ ಹೊಂದಲು ಅನುವು ಮಾಡಿಕೊಟ್ಟಿದೆ.
ಈ ಶೃಂಗಸಭೆಯು 70 ದೇಶಗಳಿಂದ 125 ಪ್ರದರ್ಶಕರು ಮತ್ತು ಸುಮಾರು 500 ವಿದೇಶಿ ಪ್ರತಿನಿಧಿಗಳಿಗೆ ಸಾಕ್ಷಿಯಾಗಲಿದೆ. ರಿವರ್ಸ್ ಖರೀದಿದಾರರ ಮಾರಾಟಗಾರರ ಸಭೆಗಳು ಮತ್ತು ಆಫ್ರಿಕಾ, ಮಧ್ಯಪ್ರಾಚ್ಯ, ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್, ಸಾರ್ಕ್ ಮತ್ತು ಆಸಿಯಾನ್ ಪ್ರದೇಶದಲ್ಲಿ 70 ಕ್ಕೂ ಹೆಚ್ಚು ಗೊತ್ತುಪಡಿಸಿದ ದೇಶಗಳ ಆತಿಥೇಯ ಪ್ರತಿನಿಧಿಗಳೊಂದಿಗೆ ನಿಗದಿತ B2B ಸಭೆಗಳು ಭಾರತೀಯ ಆರೋಗ್ಯ ಪೂರೈಕೆದಾರರು ಮತ್ತು ವಿದೇಶಿ ಭಾಗವಹಿಸುವವರನ್ನು ಒಟ್ಟುಗೂಡಿಸುತ್ತದೆ ಮತ್ತು ಸಂಪರ್ಕಿಸುತ್ತದೆ. ವೇದಿಕೆ. ಈ ಶೃಂಗಸಭೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪ್ರವಾಸೋದ್ಯಮ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಆಯುಷ್ ಸಚಿವಾಲಯ, ಉದ್ಯಮ ವೇದಿಕೆಗಳು, ಸ್ಟಾರ್ಟ್‌ಅಪ್‌ಗಳು ಇತ್ಯಾದಿಗಳ ಪ್ರಖ್ಯಾತ ಭಾಷಣಕಾರರು ಮತ್ತು ತಜ್ಞರೊಂದಿಗೆ ಪ್ಯಾನಲ್ ಚರ್ಚೆಗಳನ್ನು ಸಹ ನಡೆಸುತ್ತದೆ. ಮಧ್ಯಸ್ಥಗಾರರೊಂದಿಗೆ ಸಂವಾದಾತ್ಮಕ ಅವಧಿಗಳು.
India’s vision for health has always been universal. pic.twitter.com/hvBo0gO9Lh
— PMO India (@PMOIndia) April 26, 2023
India’s view of health does not stop at lack of illness.
— PMO India (@PMOIndia) April 26, 2023
Being free of diseases is just a stage on the way to wellness. pic.twitter.com/C7276CjagU
‘One Earth, One Family, One Future’ pic.twitter.com/8FXX10tLP1
— PMO India (@PMOIndia) April 26, 2023
Indian healthcare talent has won the world’s trust. pic.twitter.com/Cl7AgcgTHC
— PMO India (@PMOIndia) April 26, 2023
True progress is people-centric. pic.twitter.com/J0iqbhNV0i
— PMO India (@PMOIndia) April 26, 2023
India is proud to have been a partner to many nations in the noble mission of saving lives through vaccines and medicines. pic.twitter.com/7GnuzpvKKS
— PMO India (@PMOIndia) April 26, 2023
For thousands of years, India’s outlook towards health has been holistic.
— PMO India (@PMOIndia) April 26, 2023
We have a great tradition of preventive health. pic.twitter.com/R0IM3ZmBy0
Reducing disparity is India’s priority.
— PMO India (@PMOIndia) April 26, 2023
Serving the unserved is an article of faith for us. pic.twitter.com/gMDDl32u5N