ಶ್ರೀಲಂಕಾ ಅಧ್ಯಕ್ಷತೆಯಲ್ಲಿಂದು ಆಯೋಜಿಸಲಾಗಿದ್ದ 5ನೇ ಬಿಮ್ ಸ್ಟೆಕ್ ಶೃಂಗಸಭೆ (ಬಹು ವಲಯದ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉಪಕ್ರಮ-BIMSTEC)ಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಈ ಬಾರಿ ಶ್ರೀಲಂಕಾ ರಾಷ್ಟ್ರವು ಬಿಮ್ ಸ್ಟೆಕ್ ನ ಪ್ರಾಯೋಜಕತ್ವ ವಹಿಸಿದೆ.
5 ನೇ ಬಿಮ್‌ಸ್ಟೆಕ್ ಶೃಂಗಸಭೆಗೆ ಮುನ್ನಾ, ಕೊಲಂಬೊದಲ್ಲಿ ಮಾರ್ಚ್ 28 ಮತ್ತು 29ರಂದು ಹಿರಿಯ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರ ಮಟ್ಟದಲ್ಲಿ ಪೂರ್ವಸಿದ್ಧತಾ ಸಭೆಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು.
"ಬಿಮ್ ಸ್ಟೆಕ್ ಪ್ರದೇಶಗಳ ಚೇತರಿಕೆಯ ಹಾದಿ, ಸಮೃದ್ಧ ಆರ್ಥಿಕತೆ, ಆರೋಗ್ಯಕರ ಜನರು" ಎಂಬುದು ಈ ಬಾರಿಯ ಶೃಂಗಸಭೆಯ ಘೋಷವಾಕ್ಯವಾಗಿದೆ. ಕೋವಿಡ್ ನಂತರದ ಆರ್ಥಿಕ ಮತ್ತು ಅಭಿವೃದ್ಧಿ ಪರಿಣಾಮಗಳನ್ನು ಎದುರಿಸುವ ಸದಸ್ಯ ರಾಷ್ಟ್ರಗಳ ಕಾರ್ಯಕ್ರಮಗಳನ್ನು ಬೆಂಬಲಿಸುವ ಸಹಕಾರ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಚರ್ಚೆ, ಸಂವಾದ ಮತ್ತು ಸಮಾಲೋಚನೆಗಳಿಗೆ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಒತ್ತು ನೀಡಲಾಗಿದೆ. ಬಿಮ್ ಸ್ಟೆಕ್ ಸನ್ನದು ಅಂಗೀಕರಿಸಿ, ಸಹಿ ಹಾಕಿರುವುದು ಈ ಶೃಂಗಸಭೆಯ ಪ್ರಮುಖಾಂಶವಾಗಿದೆ. ಬಂಗಾಳ ಕೊಲ್ಲಿ ಸಮುದ್ರವನ್ನು ಅವಲಂಬಿಸಿರುವ ಸದಸ್ಯ ರಾಷ್ಟ್ರಗಳು ಒಳಗೊಂಡಿರುವ ಗುಂಪನ್ನು ಸಂಘಟನೆಯಾಗಿ ಔಪಚಾರಿಕಗೊಳಿಸಲಾಗಿದೆ.
ಈ ಶೃಂಗಸಭೆಯು ಬಿಮ್ ಸ್ಟೆಕ್ ಸಂಪರ್ಕ ಕಾರ್ಯಸೂಚಿಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸುತ್ತಿರುವುದನ್ನು ಮನಗಂಡಿತು. ಶೃಂಗಸಭೆಯ ನಾಯಕರು 'ಸಾರಿಗೆ ಸಂಪರ್ಕಕ್ಕಾಗಿ ಮಾಸ್ಟರ್ ಪ್ಲಾನ್' ಅಳವಡಿಸಿಕೊಳ್ಳುವುದರೊಂದಿಗೆ ಈ ಪ್ರದೇಶದಲ್ಲಿ ಭವಿಷ್ಯದ ಸಂಪರ್ಕ ಸಂಬಂಧಿತ ಚಟುವಟಿಕೆಗಳಿಗೆ ಸ್ಪಷ್ಟ ಮತ್ತು ನಿಖರ ಮಾರ್ಗಸೂಚಿ ರೂಪಿಸಿದರು.
ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಬಿಮ್ ಸ್ಟೆಕ್ ವಲಯದಲ್ಲಿ ಪ್ರಾದೇಶಿಕ ಸಂಪರ್ಕ, ಸಹಕಾರ ಮತ್ತು ಭದ್ರತೆ ಹೆಚ್ಚಳಜ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಆಗಬೇಕಿರುವ ಕಾರ್ಯಗಳ ಕುರಿತು ಅವರು ಹಲವಾರು ಸಲಹೆಗಳನ್ನು ನೀಡಿದರು. ಬಂಗಾಳ ಕೊಲ್ಲಿಯನ್ನು ಸಂಪರ್ಕ, ಸಮೃದ್ಧಿ ಮತ್ತು ಭದ್ರತೆಯ ಸೇತುವೆಯನ್ನಾಗಿ ಪರಿವರ್ತಿಸಲು ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳು ಶ್ರಮಿಸಬೇಕು ಎಂದು ಪ್ರಧಾನಿ ಅವರು ಸಹನಾಯಕರಿಗೆ ಕರೆ ನೀಡಿದರು.
ಸಹಕಾರ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಪ್ರತಿನಿಧಿಸುವ ಪ್ರಮುಖ 3 ಬಿಮ್ ಸ್ಟೆಕ್ ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಇತರ ನಾಯಕರೊಂದಿಗೆ ಪ್ರಧಾನ ಮಂತ್ರಿ ಮೋದಿ ಅವರು ಸಾಕ್ಷಿಯಾದರು. ಆ ಮೂರು ಒಪ್ಪಂದಗಳೆಂದರೆ, 1. ಅಪರಾಧ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಕುರಿತ ಬಿಮ್ ಸ್ಟೆಕ್ ಒಪ್ಪಂದ. 2. ರಾಜತಾಂತ್ರಿಕ ತರಬೇತಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಕುರಿತ ಬಿಮ್ ಸ್ಟೆಕ್ ಒಪ್ಪಂದದ ತಿಳುವಳಿಕೆ ಪತ್ರ ಮತ್ತು 3. ಬಿಮ್ ಸ್ಟೆಕ್ ತಂತ್ರಜ್ಞಾನ ವರ್ಗಾವಣೆ ಸೌಲಭ್ಯ ಸ್ಥಾಪನೆಯ ಕುರಿತಾದ ಸಂಘಟನೆಯ ತಿಳಿವಳಿಕೆ ಪತ್ರ.
बिम्सटेक की स्थापना का यह 25वां वर्ष है, इसलिए आज की समिट को मैं विशेष रूप से महत्वपूर्ण मानता हूँ।
— PMO India (@PMOIndia) March 30, 2022
इस लैंडमार्क समिट के परिणाम बिम्सटेक के इतिहास में एक स्वर्णिम अध्याय लिखेंगे: PM @narendramodi
पिछले कुछ सप्ताहों के यूरोप के developments से अंतर्राष्ट्रीय व्यवस्था के स्थायित्व पर प्रश्नचिन्ह खड़ा हो गया है।
— PMO India (@PMOIndia) March 30, 2022
इस संदर्भ में, बिम्सटेक क्षेत्रीय सहयोग को और सक्रिय बनाना महत्वपूर्ण हो गया है: PM @narendramodi
आज के चुनौतीपूर्ण वैश्विक परिपेक्ष से हमारा क्षेत्र भी अछूता नहीं रहा है।
— PMO India (@PMOIndia) March 30, 2022
हमारी अर्थव्यवस्थाएं, हमारे लोग, अभी भी Covid-19 pandemic के दुष्प्रभावों को झेल रहे हैं: PM @narendramodi
यह महत्त्वपूर्ण कार्य समय और अपेक्षा के अनुरूप पूरा हो, इसके लिए भारत सचिवालय के operational budget को बढ़ाने के लिए one मिलियन डॉलर की वित्तीय सहायता देगा: PM @narendramodi
— PMO India (@PMOIndia) March 30, 2022
बिम्सटेक हमारी अपेक्षाओं को पूरा करे, इसके लिए सचिवालय की क्षमता को बढ़ाना भी महत्त्वपूर्ण है।
— PMO India (@PMOIndia) March 30, 2022
मेरा सुझाव है कि सेक्रेटरी जनरल इस लक्ष्य की प्राप्ति के लिए एक रोडमैप बनायें: PM @narendramodi
हमारे आपसी व्यापार को बढ़ाने के लिए बिम्सटेक FTA के प्रस्ताव पर शीघ्र प्रगति करना आवश्यक है।
— PMO India (@PMOIndia) March 30, 2022
हमें अपने देशों के उद्यमियों और startups के बीच आदान-प्रदान भी बढ़ाना चाहिए।
इसी के साथ हमें Trade Facilitation के क्षेत्र में international norms को अपनाने का भी प्रयत्न करना चाहिए: PM
इसे और सक्रिय बनाने के लिए मैं आप सब का सहयोग चाहूँगा।
— PMO India (@PMOIndia) March 30, 2022
इस Centre के कार्य को पुनः शुरू करने के लिए भारत तीन मिलियन डॉलर का योगदान करने को तैयार है: PM @narendramodi
Disaster management, विशेषकर disaster risk reduction पर सहयोग के लिए BIMSTEC Centre for Weather and Climate एक महत्त्वपूर्ण संस्था है: PM @narendramodi
— PMO India (@PMOIndia) March 30, 2022
आज जब हमारा क्षेत्र स्वास्थ्य और economic security की चुनौतियों का सामना कर रहा है, हमारे बीच एकजुटता और सहयोग समय की मांग है।
— PMO India (@PMOIndia) March 30, 2022
आज समय है Bay of Bengal को Bridge of Connectivity, Bridge of Prosperity, Bridge of Security बनाने का: PM @narendramodi