ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 24 ಆಗಸ್ಟ್ 2023 ರಂದು ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್-ಆಫ್ರಿಕಾ ಔಟ್ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದದಲ್ಲಿ ಭಾಗವಹಿಸಿದರು.
ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಾಯಕರೊಂದಿಗೆ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳ ಅತಿಥಿ ರಾಷ್ಟ್ರಗಳು ಭಾಗವಹಿಸಿದ್ದರು.
ಸಂವಾದದಲ್ಲಿ, ಪ್ರಧಾನ ಮಂತ್ರಿಯವರು ಬ್ರಿಕ್ಸ್ ಜಗತ್ತಿನ ದಕ್ಷಿಣ ಭಾಗದ ಧ್ವನಿಯಾಗಬೇಕೆಂದು ಕರೆ ನೀಡಿದರು. ಅವರು ಆಫ್ರಿಕಾದೊಂದಿಗಿನ ಭಾರತದ ನಿಕಟ ಪಾಲುದಾರಿಕೆಯನ್ನು ಒತ್ತಿಹೇಳಿದರು ಮತ್ತು ಅಜೆಂಡಾ 2063 ರ ಅಡಿಯಲ್ಲಿ ಅದರ ಅಭಿವೃದ್ಧಿ ಪ್ರಯಾಣದಲ್ಲಿ ಆಫ್ರಿಕಾವನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ವಿಕೇಂದ್ರಿತ ಸಾಮರ್ಥ್ಯದ ಜಗತ್ತನ್ನು ಬಲಪಡಿಸಲು ಹೆಚ್ಚಿನ ಸಹಕಾರಕ್ಕಾಗಿ ಪ್ರಧಾನಮಂತ್ರಿಯವರು ಕರೆ ನೀಡಿದರು ಮತ್ತು ಜಾಗತಿಕ ಸಂಸ್ಥೆಗಳನ್ನು ಪ್ರಾತಿನಿಧಿಕ ಮತ್ತು ಪ್ರಸ್ತುತವಾಗಿ ಇರಿಸಲು ಅವುಗಳನ್ನು ಸುಧಾರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಭಯೋತ್ಪಾದನೆ ನಿಗ್ರಹ, ಪರಿಸರ ಸಂರಕ್ಷಣೆ, ಹವಾಮಾನ ಸಂರಕ್ಷಣೆಯ ಕ್ರಮ, ಸೈಬರ್ ಭದ್ರತೆ, ಆಹಾರ ಮತ್ತು ಆರೋಗ್ಯ ಭದ್ರತೆ ಮತ್ತು ಚೇತರಿಸುವ ಪೂರೈಕೆ ಸರಪಳಿಗಳ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಅವರು ನಾಯಕರನ್ನು ಒತ್ತಾಯಿಸಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟ, ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ (ಒಂದು ಸೂರ್ಯ ಒಂದು ಭೂಮಿ ಒಂದು ಗ್ರಿಡ್), ವಿಪತ್ತಿನಿಂದ ಚೇತರಿಕೆಯ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಒಂದು ಭೂಮಿ ಒಂದು ಆರೋಗ್ಯ, ಬಿಗ್ ಕ್ಯಾಟ್ ಅಲೈಯನ್ಸ್ ಮತ್ತು ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ನಂತಹ ಅಂತರಾಷ್ಟ್ರೀಯ ಉಪಕ್ರಮಗಳ ಭಾಗವಾಗುವಂತೆ ಪ್ರಧಾನಮಂತ್ರಿಯವರು ಇತರ ದೇಶಗಳಿಗೆ ಆಹ್ವಾನ ನೀಡಿದರು. ಅವರು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸ್ಟಾಕ್ ಅನ್ನು ಹಂಚಿಕೊಳ್ಳಲು ಸಹ ಆಹ್ವಾನಿಸಿದರು