ಘನತೆವೇತ್ತರೆ,
ಅತ್ಯಂತ ಅಲ್ಪಾವಧಿಯಲ್ಲಿ ಕರೆಯಲಾದ ಈ ವಿಶೇಷ ಸಂವಾದದಲ್ಲಿ ಚೊತೆಗೂಡಿರುವ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ.
ಅದರಲ್ಲೂ ವಿಶೇಷವಾಗಿ ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟ ತಕ್ಷಣವೇ ನಮ್ಮ ಜೊತೆಗೂಡಿರುವ  ನನ್ನ ಸ್ನೇಹಿತರಾದ ಪ್ರಧಾನಮಂತ್ರಿ ಓಲಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ನಾನು ಪುನರಾಯ್ಕೆಯಾಗಿರುವ ಅಧ್ಯಕ್ಷ ಅಷರಫ್ ಘನಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಇಂದು ನಮ್ಮೊಂದಿಗೆ ಇರುವ  ಸಾರ್ಕ್ ನ ನೂತನ ಮಹಾ ಪ್ರಧಾನ ಕಾರ್ಯದರ್ಶಿಯವರಿಗೂ ನಾನು ಸ್ವಾಗತ ಕೋರುತ್ತೇನೆ. ಅಲ್ಲದೆ ಗಾಂಧೀನಗರದ ಸಾರ್ಕ್ ವಿಪತ್ತು ನಿರ್ವಹಣೆ ಕೇಂದ್ರದ ನಿರ್ದೇಶಕರ ಉಪಸ್ಥಿತಿಯನ್ನೂ ನಾನು ಉಲ್ಲೇಖಿಸುತ್ತೇನೆ.

|

ಘನತೆವೇತ್ತರೆ,
ನಮಗೆಲ್ಲರಿಗೂ ತಿಳಿದಿರುವಂತೆ ಕೋವಿಡ್ -19 ಅನ್ನು ಇತ್ತೀಚೆಗೆ ವಿಶ್ವ ಆರೋಗ್ಯ ಸಂಘಟನೆ ಸಾಂಕ್ರಾಮಿಕ ಎಂದು ವರ್ಗೀಕರಿಸಿದೆ.
ಈವರೆಗೆ ನಮ್ಮ ವಲಯದಲ್ಲಿ 150ಕ್ಕಿಂತ ಕಡಿಮೆ ಪ್ರಕರಣಗಳ  ಪಟ್ಟಿ ಮಾಡಲಾಗಿದೆ. ಆದರೂ ನಾವು ಜಾಗರೂಕರಾಗಿರಬೇಕು.
ನಮ್ಮ ವಲಯ ಇಡೀ ಮಾವನರ ಸಂಖ್ಯೆಯ ಐದನೇ ಒಂದು ಭಾಗವನ್ನು ಹೊಂದಿದೆ. ಇದು ಅತಿ ಹೆಚ್ಚು ದಟ್ಟಣೆಯಿಂದ ಕೂಡಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳಾಗಿ, ನಾವೆಲ್ಲರೂ ಆರೋಗ್ಯ ಸೇವಾ ಸೌಲಭ್ಯಗಳ ಲಭ್ಯತೆಯ ವಿಚಾರದಲ್ಲಿ ಗಣನೀಯ ಸವಾಲು ಎದುರಿಸುತ್ತಿದ್ದೇವೆ.
ನಮ್ಮ ಜನರೊಂದಿಗಿನ ಬಾಂಧವ್ಯ ಅತ್ಯಂತ ಪುರಾತನವಾದ್ದು, ನಮ್ಮ ಸಮಾಜ ಆಳವಾಗಿ ಪರಸ್ಪರ ಸಂಪರ್ಕಿತವಾಗಿವೆ.
ಹೀಗಾಗಿ, ನಾವೆಲ್ಲರೂ ಒಗ್ಗೂಡಿ ಸಿದ್ಧರಾಗಬೇಕು, ನಾವೆಲ್ಲರೂ ಒಗ್ಗೂಡಿ ಕ್ರಮ ಕೈಗೊಳ್ಳಬೇಕು ಮತ್ತು ನಾವೆಲ್ಲರೂ ಒಗ್ಗೂಡಿ ಯಶಸ್ ಸಾಧಿಸಬೇಕು.
ಘನತೆವೇತ್ತರೆ,
ನಾವು ಈ ಸವಾಲು ಎದುರಿಸಲು ಸನ್ನದ್ಧರಾಗುತ್ತಿರುವಂತೆ, ಈ ವೈರಾಣು ಸೋಂಕು ಪಸರಿಸದಂತೆ ನಿಗ್ರಹಿಸಲು ಈವರೆಗಿನ ಭಾರತದ ಅನುಭವವನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳುತ್ತೇನೆ.
“ಸಿದ್ಧರಾಗಿ, ಆದರೆ, ಭೀತರಾಗಬೇಡಿ“ ಎಂಬುದು ನಮ್ಮ ಮಾರ್ಗದರ್ಶಿ ಮಂತ್ರವಾಗಿದೆ.
ನಾವು ಈ ಸಮಸ್ಯೆಯನ್ನು ಕಡೆಗಣಿಸದಂತೆ ಎಚ್ಚರ ವಹಿಸಿದ್ದೇವೆ. ಆದಾಗ್ಯೂ ಅನೈಚ್ಛಿಕ ಸೆಳೆತದ ಪ್ರಕ್ರಿಯೆ ತಡೆಯಲು ಮುಂದಾಗಿದ್ದೇವೆ.
ನಾವು  ಶ್ರೇಣೀಕೃತ ಪ್ರಕ್ರಿಯೆಯ ಕಾರ್ಯವಿಧಾನವೂ ಸೇರಿದಂತೆ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದೇವೆ.
ಜನವರಿಯ ಮಧ್ಯಭಾಗದಿಂದಲೇ ನಾವು ಭಾರತಕ್ಕೆ ಬರುವವರ ತಪಾಸಣೆಯನ್ನು ಆರಂಭಿಸಿದ್ದೇವೆ, ಜೊತೆಗೆ ಹಂತ ಹಂತವಾಗಿ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸುತ್ತಿದ್ದೇವೆ.
ಹಂತ ಹಂತದ ದೃಷ್ಟಿಕೋನವು ಈ ಆತಂಕ ನಿವಾರಿಸಲು ನಮಗೆ ನೆರವಾಗಿದೆ.
ನಾವು ಟಿವಿ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಹೆಚ್ಚಿಸುತ್ತಿದ್ದೇವೆ.
ದುರ್ಬಲ ವರ್ಗಗಳನ್ನು ತಲುಪಲು ನಾವು ವಿಶೇಷ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ.
ದೇಶಾದ್ಯಂತ ನಮ್ಮ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡುವುದೂ ಸೇರಿದಂತೆ ನಮ್ಮ ವ್ಯವಸ್ಥೆಯಲ್ಲಿ ಸಾಮರ್ಥ್ಯವನ್ನು ತ್ವರಿತವಾಗಿ ಹೆಚ್ಚಿಸಲು ನಾವು ಶ್ರಮಿಸುತ್ತಿದ್ದೇವೆ.
ನಾವು ರೋಗಪತ್ತೆ ದಕ್ಷತೆಯನ್ನೂ ಹೆಚ್ಚಿಸಿದ್ದೇವೆ. ಎರಡೇ ತಿಂಗಳಲ್ಲಿ, ನಾವು ಭಾರತಾದ್ಯಂತ ಒಂದು ಪ್ರಮುಖ ಪರೀಕ್ಷಾ ಸೌಲಭ್ಯದಿಂದ, ಅಂತಹ 60 ಕ್ಕೂ ಹೆಚ್ಚು ಪ್ರಯೋಗಾಲಯಗಳನ್ನು ರೂಪಿಸಿದ್ದೇವೆ.
ಈ ಸಾಂಕ್ರಾಮಿಕರೋಗವನ್ನು ನಿಗ್ರಹಿಸುವ ಪ್ರತಿಯೊಂದು ಹಂತಕ್ಕೂ ನಾವು ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸಿದ್ದೇವೆ: ಪ್ರವೇಶಿಸುವಾಗಲೇ ತಪಾಸಣೆ ಮಾಡಿ, ಶಂಕಿತ ಪ್ರಕರಣಗಳಲ್ಲಿ ಸಂಪರ್ಕಿತರ ಪತ್ತೆ ಮಾಡುತ್ತಿದ್ದೇವೆ; ಪ್ರತ್ಯೇಕೀಕರಣ (ಕ್ವಾರಂಟೈನ್) ಮತ್ತು ಪ್ರತ್ಯೇಕ ಸೌಕರ್ಯ ನಿರ್ವಹಣೆ; ಮತ್ತು ತೆರವುಗೊಳಿಸಿದ ಪ್ರಕರಣಗಳ ನಿಗಾ ಇಡುತ್ತಿದ್ದೇವೆ.
ನಾವು ವಿದೇಶಗಳಲ್ಲಿರುವ ನಮ್ಮ ಜನರ ಕರೆಗೂ ಸ್ಪಂದಿಸಿದ್ದೇವೆ. ನಾವು ಸುಮಾರು 1,400 ಭಾರತೀಯರನ್ನು ವಿವಿಧ ದೇಶಗಳಿಂದ ತೆರವು ಮಾಡಿಸಿದ್ದೇವೆ. ಅದೇ ರೀತಿ ನೆರೆಹೊರೆ ಪ್ರಥಮ ಎಂಬ ನೀತಿಯನ್ವಯ ನಾವು ನಿಮ್ಮ ಕೆಲವು ನಾಗರಿಕರಿಗೂ ಸಹಾಯ ಮಾಡಿದ್ದೇವೆ.
ವಿದೇಶದಲ್ಲಿ ನಿಯೋಜಿಸಲಾಗಿರುವ ನಮ್ಮ ಸಂಚಾರಿ ತಂಡಗಳಿಂದ ಪರೀಕ್ಷೆಯನ್ನು ನಡೆಸುವುದೂ ಸೇರಿದಂತೆ ಅಂತಹ ಸ್ಥಳಾಂತರಿಸುವಿಕೆಗಾಗಿ ನಾವು ಈಗ ಶಿಷ್ಟಾಚಾರಗಳನ್ನು ರೂಪಿಸಿದ್ದೇವೆ.
ಅದೇ ರೀತಿ ಭಾರತದಲ್ಲಿರುವ ತಮ್ಮ ನಾಗರಿಕರ ಬಗ್ಗೆ ಇತರ ರಾಷ್ಟ್ರಗಳೂ ಕಾಳಜಿ ಹೊಂದಿವೆ ಎಂಬುದನ್ನು ನಾವು ಮನಗಂಡಿದ್ದೇವೆ. ಹೀಗಾಗಿ ನಾವು ಕೈಗೊಂಡಿರುವ ಕ್ರಮಗಳ ಕುರಿತಂತೆ ವಿದೇಶೀ ರಾಯಭಾರಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

|

ಘನತೆವೇತ್ತರೆ,
ನಾವು ಇನ್ನೂ ಅಪರಿಚಿತ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು ನಾವು ಸಂಪೂರ್ಣವಾಗಿ ಗುರುತಿಸುತ್ತೇವೆ.
ನಮ್ಮ ಅತ್ಯುತ್ತಮ ಪ್ರಯತ್ನಗಳ ನಡುವೆಯೂ ಪರಿಸ್ಥಿತಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ನಾವು ಖಚಿತವಾಗಿ ಗ್ರಹಿಸಲು ಸಾಧ್ಯವಿಲ್ಲ.
ನೀವೂ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಿರಬಹುದು.
ಇದಕ್ಕಾಗಿಯೇ ನಾವೆಲ್ಲರೂ ನಮ್ಮ ನಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳುವುದು ಅತ್ಯಂತ ಮೌಲ್ಯಯುತವಾಗಿದೆ.
ನಾನು ನಿಮ್ಮ ಅಭಿಪ್ರಾಯಗಳನ್ನು ಆಲಿಸಲು ಎದಿರುನೋಡುತ್ತಿದ್ದೇನೆ.  
ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'Operation Brahma': First Responder India Ships Medicines, Food To Earthquake-Hit Myanmar

Media Coverage

'Operation Brahma': First Responder India Ships Medicines, Food To Earthquake-Hit Myanmar
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಮಾರ್ಚ್ 2025
March 30, 2025

Citizens Appreciate Economic Surge: India Soars with PM Modi’s Leadership