ಶಿವಾಜಿ ಮಹಾರಾಜರ ಜೀವನ ಮತ್ತು ಇತಿಹಾಸವನ್ನು ಜನರ ಬಳಿಗೆ ಕೊಂಡೊಯ್ಯುವ ಅವರ ಅದ್ಭುತ ಕೊಡುಗೆಗಾಗಿ ನಾವೆಲ್ಲರೂ ಅವರಿಗೆ ಯಾವಾಗಲೂ ಋಣಿಯಾಗಿರುತ್ತೇವೆ: ಪ್ರಧಾನಿ
ಛತ್ರಪತಿ ಶಿವಾಜಿ ಮಹಾರಾಜರಿಲ್ಲದೆ ಭಾರತದ ರೂಪ, ಅದರ ವೈಭವವನ್ನು ಊಹಿಸಿಕೊಳ್ಳುವುದು ಅಸಾಧ್ಯ: ಪ್ರಧಾನಿ
ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್’ ಹಿಂದುಳಿದ ಮತ್ತು ವಂಚಿತರಿಗೆ ನ್ಯಾಯ ಮತ್ತು ದೌರ್ಜನ್ಯದ ವಿರುದ್ಧದ ಯುದ್ಧದ ಸಾಟಿಯ ಅಪ್ರತಿಮ ಉದಾಹರಣೆಯಾಗಿದೆ: ಪ್ರಧಾನಿ
ಬಾಜಾ ಸಾಹೇಬ್ ಪುರಂದರೆ ಅವರು ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬರೆಯುವಾಗ ಅದೇ ಮಾನದಂಡಗಳನ್ನು ಕಾಯ್ದುಕೊಳ್ಳುವಂತೆ ನಾನು ಯುವ ಇತಿಹಾಸಕಾರರಿಗೆ ಮನವಿ ಮಾಡುತ್ತೇನೆ

ನಮಸ್ಕಾರ!

ಈ ಕಾರ್ಯಕ್ರಮದಲ್ಲಿ ನಮ್ಮನ್ನು ಆಶೀರ್ವದಿಸುತ್ತಿರುವ ಗೌರವಾನ್ವಿತ ಬಾಬಾಸಾಹೇಬ್ ಪುರಂದರೇ ಜೀ, ಬಾಬಾಸಾಹೇಬ್ ಸತ್ಕಾರ್ ಸಮಾರೋಹ್ ಸಮಿತಿಯ   ಅಧ್ಯಕ್ಷರಾದ  ಸುಮಿತ್ರಾ ತಾಯಿ  ಮತ್ತು ಶಿವಶಾಹಿಯಲ್ಲಿ ನಂಬಿಕೆ ಹೊಂದಿರುವ ಬಾಬಾ ಸಾಹೇಬರ ಎಲ್ಲಾ ಅನುಯಾಯಿಗಳೇ!

ನಾನು ಶಿವ - ಶಾಹಿರ್ ಬಾಬಾ ಸಾಹೇಬ್ ಪುರಂದರೆ ಅವರಿಗೆ ಸಾಷ್ಟಾಂಗ ಪ್ರಣಾಮಗಳು  ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು  ಪಾಲಿಸುವ ಶಕ್ತಿಯನ್ನು ನನಗೆ ನೀಡಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ.

ಗೌರವಾನ್ವಿತ ಬಾಬಾಸಾಹೇಬ್ ಪುರಂದರೆ ಜೀ ಅವರ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅವರ ಮಾರ್ಗದರ್ಶನ, ಅವರ ಆಶೀರ್ವಾದ, ನಾವೆಲ್ಲರೂ ಇಲ್ಲಿಯವರೆಗೆ ಪಡೆಯುತ್ತಿದ್ದೇವೆ, ಅದೇ ರೀತಿಯಲ್ಲಿ ನಾವು ಅದನ್ನು ದೀರ್ಘಕಾಲದವರೆಗೆ ಪಡೆಯುವುದನ್ನು ಮುಂದುವರಿಸಬೇಕು, ಇದೇ ನನ್ನ ಶುಭ ಹಾರೈಕೆ. ಈ ವಿಶೇಷ ಕಾರ್ಯಕ್ರಮಕ್ಕಾಗಿ ನಾನು ಗೌರವಾನ್ವಿತ ಸುಮಿತ್ರಾ ತಾಯಿ ಅವರನ್ನು ಅಭಿನಂದಿಸುತ್ತೇನೆ. ಈ ಆಕರ್ಷಕ  ಸಮಾರಂಭದಲ್ಲಿ ಬಾಬಾಸಾಹೇಬರ ಆಶೀರ್ವಾದವನ್ನು ಪಡೆಯಲು, ಅವರನ್ನು ಗೌರವಿಸುವ ನಿಮ್ಮೆಲ್ಲರ ನಡುವೆ ಇರಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ಶುಭ ಸಂದರ್ಭದಲ್ಲಿ ನಾನು ದೇಶದಾದ್ಯಂತ ಬಾಬಾಸಾಹೇಬರ ಅನೇಕ ಅನುಯಾಯಿಗಳನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಸುದೀರ್ಘ ಜೀವನವನ್ನು ಬಯಸುವುದು ಮಾನವೀಯತೆಯ ಅತ್ಯಂತ ಪರಿಷ್ಕೃತ ಮತ್ತು ಸಕಾರಾತ್ಮಕ ಚಿಂತನೆಗಳಲ್ಲಿ ಒಂದಾಗಿದೆ. ವೇದಗಳಲ್ಲಿ ನಮ್ಮ ಋಷಿಗಳು ಶತಾಯುಷ್ಯವನ್ನು  ಮೀರಿ ಹೋಗಿದ್ದಾರೆ. ನಮ್ಮ ಋಷಿಗಳು ಹೀಗೆ ಹೇಳಿದ್ದಾರೆ:

जीवेम शरदः शतम्॥

बुध्येम शरदः शतम्॥

रोहेम शरदः शतम्॥

ಅಂದರೆ, ನಾವು ನೂರು ವರ್ಷ ಬದುಕೋಣ, ನೂರು ವರ್ಷಗಳ ಕಾಲ ಚಿಂತನಶೀಲರಾಗಿ ಮತ್ತು ನೂರು ವರ್ಷಗಳ ಕಾಲ ಮುಂದುವರಿಯೋಣ. ಬಾಬಾಸಾಹೇಬ್ ಪುರಂದರೆಯವರ ಜೀವನವು ನಮ್ಮ ಋಷಿಗಳ ಉದಾತ್ತ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.  ಒಬ್ಬ ವ್ಯಕ್ತಿಯು ತನ್ನ ತಪಸ್ಸಿನಿಂದ ಜೀವನದಲ್ಲಿ ಇಂತಹ ಯೋಗಗಳನ್ನು ಅರಿತುಕೊಂಡಾಗ, ಅನೇಕ ಕಾಕತಾಳೀಯಗಳು ಸಹ ಸಹಜವಾಗಿಯೇ  ಪ್ರಾರಂಭವಾಗುತ್ತವೆ. ಬಾಬಾಸಾಹೇಬರು ತಮ್ಮ ಜೀವನದ ನೂರನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಅದೇ ಸಮಯದಲ್ಲಿ ನಮ್ಮ ದೇಶವೂ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಡುತ್ತಿರುವುದು ಒಂದು ಸಂತೋಷದ  ಸಂಯೋಗವಾಗಿದೆ.   ಈ ಸಂಯೋಗವು  ಬಾಬಾ ಅವರ ತಪಸ್ಸಿಗೆ ಸಂತಸಗೊಂಡಿರುವ  ತಾಯಿ ಭಾರತಿಯ ಆಶೀರ್ವಾದ ಎಂದು ಬಾಬಾ ಸಾಹೇಬ್ ಸ್ವತಃ ಅರಿತುಕೊಂಡಿರಬೇಕು  ಎಂದು ಭಾವಿಸುತ್ತೇನೆ,.

ಸಹೋದರ ಸಹೋದರಿಯರೇ,

ಸ್ವಾತಂತ್ರ್ಯದ 75 ನೇ ವರ್ಷಕ್ಕೆ ನಮಗೆ ಸ್ಫೂರ್ತಿ ನೀಡುವ ಇನ್ನೊಂದು ಸಂಯೋಗವಿದೆ. ಸ್ವಾತಂತ್ರ್ಯದ ಅಮೃತ ಉತ್ಸವದಲ್ಲಿ, ದೇಶವು ಸ್ವಾತಂತ್ರ್ಯ ಹೋರಾಟಗಾರರ ಅಮರ ಆತ್ಮಗಳ ಇತಿಹಾಸವನ್ನು ಬರೆಯುವ ಅಭಿಯಾನವನ್ನು ಆರಂಭಿಸಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಬಾಬಾಸಾಹೇಬ್ ಪುರಂದರೆ ದಶಕಗಳಿಂದ ಈ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಈ ಒಂದು ಧ್ಯೇಯಕ್ಕಾಗಿ ಅವರು ತಮ್ಮ ಇಡೀ ಜೀವನವನ್ನು ಕಳೆದಿದ್ದಾರೆ. ಶಿವಾಜಿ ಮಹಾರಾಜರ ಜೀವನ ಮತ್ತು ಇತಿಹಾಸಕ್ಕೆ ಅವರು ನೀಡಿದ ಕೊಡುಗೆಗಾಗಿ ನಾವು ಯಾವಾಗಲೂ ಅವರಿಗೆ ಋಣಿಯಾಗಿರುತ್ತೇವೆ. ಅವರ ಕೊಡುಗೆಗಾಗಿ ರಾಷ್ಟ್ರಕ್ಕೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅವಕಾಶ ನಮಗೆ ದೊರೆತಿರುವುದಕ್ಕೆ ನನಗೆ ಸಂತೋಷವಾಗಿದೆ. 2019 ರಲ್ಲಿ, ದೇಶವು ಅವರಿಗೆ 'ಪದ್ಮವಿಭೂಷಣ' ನೀಡಿ ಗೌರವಿಸಿತು, 2015 ರಲ್ಲಿ, ಅಂದಿನ ಮಹಾರಾಷ್ಟ್ರ ಸರ್ಕಾರವು 'ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು' ನೀಡಿತು. ಮಧ್ಯಪ್ರದೇಶದಲ್ಲಿ, ಶಿವರಾಜ್ ಜೀ ಸರ್ಕಾರವು ಕಾಳಿದಾಸ್ ಪ್ರಶಸ್ತಿಯನ್ನು ನೀಡುವ ಮೂಲಕ 'ಛತ್ರಪತಿ ಶಿವಾಜಿ'ಯ ಈ ಪರಮ ಭಕ್ತನಿಗೆ ಗೌರವಿಸಿತು.

ಸ್ನೇಹಿತರೆ,

ಬಾಬಾಸಾಹೇಬ್ ಪುರಂದರೆ ಜೀ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಮೇಲೆ ಭಕ್ತಿ ಅಂತಿದಲ್ಲ! ಶಿವಾಜಿ ಮಹಾರಾಜರು ಭಾರತದ ಇತಿಹಾಸದ ಪ್ರಮುಖರು ಮಾತ್ರವಲ್ಲ,  ಪ್ರಸ್ತುತ ಭರತಖಂಡವೂ  ಅವರ ಅಮರ ಕಥೆಯಿಂದ ಪ್ರಭಾವಿತವಾಗಿದೆ.  ಶಿವಾಜಿ ಮಹಾರಾಜರು ಇಲ್ಲದಿದ್ದರೆ ಏನಾಗುತ್ತಿತ್ತು ? ಇದು ನಮ್ಮ ಹಿಂದಿನ, ನಮ್ಮ ವರ್ತಮಾನದ ಮತ್ತು ನಮ್ಮ ಭವಿಷ್ಯದ  ಬಹುದೊಡ್ಡ ಪ್ರಶ್ನೆಯಾಗಿದೆ.  ಛತ್ರಪತಿ ಶಿವಾಜಿ ಮಹಾರಾಜರಿಲ್ಲದೆ ಭಾರತದ ವೈಭವವನ್ನು ಊಹಿಸಿಕೊಳ್ಳುವುದು ಕಷ್ಟ. ಆ ಅವಧಿಯಲ್ಲಿ ಛತ್ರಪತಿ ಶಿವಾಜಿ ಹೊಂದಿದ್ದ ಪಾತ್ರ, ಅದೇ ಪಾತ್ರವನ್ನು ಅವರ ನಂತರ ಅವರ ಕಥೆಗಳು ನಿರಂತರವಾಗಿ   ಸ್ಫೂರ್ತಿಯಿಂದ ನಿರ್ವಹಿಸಲಾಗಿದೆ,.  ಶಿವಾಜಿ ಮಹಾರಾಜರ 'ಹಿಂದ್ವಿ ಸ್ವರಾಜ್' ಉತ್ತಮ ಆಡಳಿತ, ಹಿಂದುಳಿದ ಮತ್ತು ದೀನದಲಿತರಿಗೆ ನ್ಯಾಯ ಮತ್ತು ದೌರ್ಜನ್ಯದ ವಿರುದ್ಧದ ಧ್ವನಿಯ ವಿಶಿಷ್ಟ ಉದಾಹರಣೆಯಾಗಿದೆ. ವೀರ ಶಿವಾಜಿಯ ನಿರ್ವಹಣೆ, ದೇಶದ ಕಡಲ ಶಕ್ತಿಯ ಬಳಕೆ, ನೌಕಾಪಡೆಯ ಉಪಯುಕ್ತತೆ,  ಜಲ ನಿರ್ವಹಣೆ, ಇಂತಹ ಅನೇಕ ವಿಷಯಗಳು ಇಂದಿಗೂ ಮಾದರಿಯಾಗಿದೆ. ಮತ್ತು ಶಿವಾಜಿ ಮಹಾರಾಜರ ಈ ರೂಪವನ್ನು ಸ್ವತಂತ್ರ ಭಾರತದ ಹೊಸ ಪೀಳಿಗೆಗೆ  ಪರಿಚಯಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ.

ಶಿವಾಜಿ ಮಹಾರಾಜರ ಬಗೆಗಿನ ಅವರ ಅಚಲ ಭಕ್ತಿ ಅವರ ಬರಹಗಳು ಮತ್ತು ಪುಸ್ತಕಗಳಲ್ಲಿ ಪ್ರತಿಫಲಿಸುತ್ತದೆ. ಬಾಬಾ ಸಾಹೇಬ್ ಪುರಂದರೆಯವರ ಶಿವಾಜಿ ಮಹಾರಾಜರಿಗೆ ಸಂಬಂಧಿಸಿದ ಕಥೆಗಳನ್ನು ಹೇಳುವ ಶೈಲಿ ಮತ್ತು ಅವರ ಮಾತುಗಳು ಶಿವಾಜಿ ಮಹಾರಾಜರನ್ನು ನಮ್ಮ ಮನಸ್ಸಿನಲ್ಲಿ ಜೀವಂತವಾಗಿಸುತ್ತದೆ. ನನಗೆ ಸ್ಪಷ್ಟವಾಗಿ ನೆನಪಿದೆ  ಸುಮಾರು ನಾಲ್ಕು ದಶಕಗಳ ಹಿಂದೆ ಅಹಮದಾಬಾದ್‌ನಲ್ಲಿ ನಿಮ್ಮ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ನಾನು ನಿಮ್ಮ ಕಾರ್ಯಕ್ರಮಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದೆ.   ಅವರ ನಾಟಕ 'ಜಾಣತಾ  ರಾಜ' ಪ್ರದರ್ಶನಗೊಳ್ಳುತ್ತಿದ್ದಾಗ ನಾನು ಅವರನ್ನು ನೋಡಲು ವಿಶೇಷವಾಗಿ ಪುಣೆಗೆ ಹೋಗಿದ್ದೆ.

ಬಾಬಾ ಸಾಹೇಬರು ಯಾವಾಗಲೂ ಇತಿಹಾಸವು ಅದರ ನೈಜ ರೂಪದಲ್ಲಿ ಯುವಕರನ್ನು ತಲುಪುವಂತೆ ಮತ್ತು ಅವರಿಗೆ ಸ್ಫೂರ್ತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಸಮತೋಲನ ದೇಶದ ಇತಿಹಾಸಕ್ಕೆ ಅಗತ್ಯವಾಗಿದೆ.  ಅವರು ತಮ್ಮ ಭಕ್ತಿ ಮತ್ತು ಸಾಹಿತ್ಯವನ್ನು ತಮ್ಮ ಇತಿಹಾಸದ ಜ್ಞಾನದ ಮೇಲೆ ಪ್ರಭಾವ ಬೀರಲು ಬಿಡಲಿಲ್ಲ. ನಾನು ದೇಶದ ಯುವ ಇತಿಹಾಸಕಾರರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬರೆಯುವಾಗ ಅದೇ ಸ್ಫೂರ್ತಿ ಮತ್ತು ಅಧಿಕೃತತೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಹೇಳುತ್ತೇನೆ.

ಸ್ನೇಹಿತರೆ,

ಬಾಬಾ ಸಾಹೇಬ್ ಪುರಂದರೆಯವರ ಪ್ರಯತ್ನಗಳು ಇತಿಹಾಸವನ್ನು ಅದರ ನೈಜ ರೂಪದಲ್ಲಿ ತಿಳಿಸಲು ಮಾತ್ರ ಸೀಮಿತವಾಗಿಲ್ಲ. ಅವರು ಶಿವ ಮಹಾರಾಜರ ಆದರ್ಶಗಳಂತೆ ತಮ್ಮ ಜೀವನವನ್ನು ಸಮಾನವಾಗಿ ನಡೆಸಲು ಪ್ರಯತ್ನಿಸಿದ್ದಾರೆ. ಅವರು ವರ್ತಮಾನ ಹಾಗೂ ಇತಿಹಾಸದ ಬಗ್ಗೆ ಅಷ್ಟೇ ಕಾಳಜಿ ಹೊಂದಿದ್ದಾರೆ.

ಗೋವಾ ವಿಮೋಚನಾ ಹೋರಾಟದಿಂದ ಹಿಡಿದು ದಾದ್ರಾ-ನಗರ ಹವೇಲಿಯ ಸ್ವಾತಂತ್ರ್ಯ ಹೋರಾಟದವರೆಗೆ ಅವರ ಪಾತ್ರ ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಕುಟುಂಬವು ನಿರಂತರವಾಗಿ ಸಾಮಾಜಿಕ ಕೆಲಸ ಮತ್ತು ಸಂಗೀತ ಕಲೆಗಳಿಗೆ ಅರ್ಪಿತವಾಗಿದೆ. ನೀವು ಇನ್ನೂ 'ಶಿವ-ಸೃಷ್ಟಿ' ಯನ್ನು ರಚಿಸುವ ಅಭೂತಪೂರ್ವ ಸಂಕಲ್ಪದ ಮೇಲೆ ಕೆಲಸ ಮಾಡುತ್ತಿದ್ದೀರಿ.  ಶಿವಾಜಿ ಮಹಾರಾಜರ ಆದರ್ಶಗಳು, ನೀವು ದೇಶದ ಮುಂದೆ ಇರಿಸಿಲು ಜೀವಮಾನದ ಪ್ರಯತ್ನವನ್ನು ಮಾಡಿದ್ದೀರಿ, ಆ ಆದರ್ಶಗಳು ಶತಮಾನಗಳಿಂದಲೂ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ.

ಈ ನಂಬಿಕೆಯೊಂದಿಗೆ, ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನಾನು ವಿನಮ್ರ ಪ್ರಾರ್ಥನೆಯನ್ನು ಮಾತೆ ಭವಾನಿಯ ಚರಣಗಳಲ್ಲಿ ಅರ್ಪಿಸುತ್ತೇನೆ.  ನಿಮ್ಮ ಆಶೀರ್ವಾದವನ್ನು ನಾವು ಈದೇ ರೀತಿ ಸ್ವೀಕರಿಸುವುದನ್ನು ಮುಂದುವರಿಸೋಣವೆನ್ನುವ ಶುಭ ಆಶಯಗಳೊಂದಿಗೆ, ನಾನು ನನ್ನ ಮಾತು ಮುಗಿಸುತ್ತೇನೆ.

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
EPFO membership surges with 1.34 million net additions in October

Media Coverage

EPFO membership surges with 1.34 million net additions in October
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"