Quote“ನಮ್ಮ ಸಂವಿಧಾನವು ದೇಶದ ಅನೇಕ ತಲೆಮಾರುಗಳ ಕನಸುಗಳನ್ನು ಈಡೇರಿಸಬಲ್ಲ ಸ್ವತಂತ್ರ ಭಾರತದ ದೃಷ್ಟಿಕೋನದ ರೂಪದಲ್ಲಿ ನಮ್ಮ ಮುಂದೆ ಬಂದಿದೆ.’’
Quoteಸಂವಿಧಾನ ಕೇವಲ ಪುಸ್ತಕವಲ್ಲ. ಇದು ಒಂದು ಕಲ್ಪನೆ, ಬದ್ಧತೆ ಮತ್ತು ಸ್ವಾತಂತ್ರ್ಯದ ಮೇಲಿನ ನಂಬಿಕೆಯಾಗಿದೆ,’’
Quote“ ಹಕ್ಕುಗಳು ಮತ್ತು ಕರ್ತವ್ಯಗಳ ಒಡಂಬಡಿಕೆಯು ನಮ್ಮ ಸಂವಿಧಾನವನ್ನು ತುಂಬಾ ವಿಶೇಷವಾಗಿಸುತ್ತದೆ’’ “ ಭಾರತವು ಸ್ವಭಾವತಃ ಸ್ವತಂತ್ರ ಚಿಂತನೆಯ ದೇಶವಾಗಿದೆ. ಜಡತ್ವವು ನಮ್ಮ ಮೂಲಭೂತ ಸ್ವಭಾವದ ಭಾಗವಲ್ಲ’’
Quoteಶ್ರೀ ರಾಮ್ ಬಹದ್ದೂರ್ ರಾಯ್ ಅವರ ‘ಭಾರತೀಯ ಸಂವಿಧಾನ್: ಅಂಕಾಹಿ ಕಹಾನಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.

ಪ್ರಾರಂಭದಲ್ಲಿ, ಶ್ರೀ ರಾಮ್ ಬಹದ್ದೂರ್ ರೈ ಅವರು ಹೊಸ ವಿಚಾರಗಳನ್ನು ಹುಡುಕುವ ಜೀವನಪರ್ಯಂತದ ಅನ್ವೇಷಣೆ ಮತ್ತು ಹೊಸದನ್ನು ಸಮಾಜದ ಮುಂದೆ ತರುವ ಬಯಕೆಯನ್ನು ಪ್ರಧಾನಮಂತ್ರಿ ಅವರು ಗಮನಿಸಿದರು. ಇಂದು ಬಿಡುಗಡೆಯಾದ ಪುಸ್ತಕವು ಸಂವಿಧಾನವನ್ನು ಸಮಗ್ರ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಸಂವಿಧಾನದ ಪ್ರಜಾಸತ್ತಾತ್ಮಕ ಚಲನಶೀಲತೆಯ ಮೊದಲ ದಿನವನ್ನು ಗುರುತಿಸುವ ಸಂವಿಧಾನದ ಮೊದಲ ತಿದ್ದುಪಡಿಗೆ ಜೂನ್ 18 ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಸಹಿ ಹಾಕಿದರು ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು, ಇದೇ ವೇಳೆ ಇದು ನಮ್ಮ ಅತಿದೊಡ್ಡ ಶಕ್ತಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

“ದೇಶದ ಅನೇಕ ತಲೆಮಾರುಗಳ ಕನಸುಗಳನ್ನು ನನಸು ಮಾಡಬಲ್ಲ ಸ್ವತಂತ್ರ ಭಾರತದ ದೃಷ್ಟಿಕೋನದ ರೂಪದಲ್ಲಿ ನಮ್ಮ ಸಂವಿಧಾನವು ನಮ್ಮ ಮುಂದೆ ಬಂದಿದೆ," ಎಂದು ಪ್ರಧಾನಿ ಹೇಳಿದರು. ಸಂವಿಧಾನ ರಚನಾ ಸಭೆಯ ಮೊದಲ ಸಭೆ ಸ್ವಾತಂತ್ರ್ಯಕ್ಕೆ ಕೆಲವು ತಿಂಗಳುಗಳ ಮೊದಲು 1946ರ ಡಿಸೆಂಬರ್ 9ರಂದು ನಡೆಯಿತು ಎಂಬುದನ್ನು ಸ್ಮರಿಸಿದ ಅವರು, ಇದು ನಮ್ಮ ಅಂತಿಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಮತ್ತು ನಂಬಿಕೆಯನ್ನು ಸೂಚಿಸುತ್ತದೆ ಎಂದರು. ಇದು ಭಾರತದ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ ಎಂಬುದನ್ನು ಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಒಂದು ಕಲ್ಪನೆ, ಬದ್ಧತೆ ಮತ್ತು ಸ್ವಾತಂತ್ರ್ಯದ ಮೇಲಿನ ನಂಬಿಕೆಯಾಗಿದೆ. ’’

ಶ್ರೀ ರೈಯವರ ಈ ಪುಸ್ತಕವು ಭವಿಷ್ಯದ ಭಾರತದಲ್ಲಿ ಗತಕಾಲದ ಪ್ರಜ್ಞೆ ಬಲವಾಗಿ ಉಳಿಯುವಂತೆ ಮಾಡಲು ಮರೆತುಹೋದ ಆಲೋಚನೆಗಳನ್ನು ನೆನಪಿಟ್ಟುಕೊಳ್ಳುವ ನವ ಭಾರತದ ಪ್ರಯತ್ನದ ಪರಂಪರೆಯಲ್ಲಿ ಇರಲಿದೆ ಎಂದು ಪ್ರಧಾನಮಂತ್ರಿ ಅವರು ಆಶಿಸಿದರು. ಈ ಪುಸ್ತಕವು ಸ್ವಾತಂತ್ರ್ಯದ ಇತಿಹಾಸ ಮತ್ತು ನಮ್ಮ ಸಂವಿಧಾನದ ಹೇಳಲಾಗದ ಅಧ್ಯಾಯಗಳೊಂದಿಗೆ ದೇಶದ ಯುವಕರಿಗೆ ಹೊಸ ಆಲೋಚನೆಯನ್ನು ನೀಡುತ್ತದೆ ಮತ್ತು ಅವರ ಪ್ರವಚನವನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು.

ಶ್ರೀ ರೈ ಅವರ ಪುಸ್ತಕದ ಹಿಂದಿರುವ ತುರ್ತುಪರಿಸ್ಥಿತಿಯ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, “ ಹಕ್ಕುಗಳು ಮತ್ತು ಕರ್ತವ್ಯಗಳ ಒಡಂಬಡಿಕೆ ನಮ್ಮ ಸಂವಿಧಾನವನ್ನು ವಿಶೇಷವಾಗಿಸುತ್ತದೆ. ನಮಗೆ ಹಕ್ಕುಗಳಿದ್ದರೆ, ನಮಗೂ ಕರ್ತವ್ಯಗಳಿವೆ, ಮತ್ತು ನಮಗೆ ಕರ್ತವ್ಯಗಳಿದ್ದರೆ, ಹಕ್ಕುಗಳು ಸಮಾನವಾಗಿ ಬಲವಾಗಿರುತ್ತವೆ. ಅದಕ್ಕಾಗಿಯೇ, ಆಜಾದಿ ಅಮೃತ್ ಕಾಲ್ ನಲ್ಲಿ, ದೇಶವು ಕರ್ತವ್ಯ ಪ್ರಜ್ಞೆಯ ಬಗ್ಗೆ ಮಾತನಾಡುತ್ತಿದೆ ಮತ್ತು ಕರ್ತವ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದೆ.’’ ಎಂದು ಸಂವಿಧಾನದ ಬಗ್ಗೆ ವ್ಯಾಪಕ ಜಾಗೃತಿಯ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

 ಗಾಂಧೀಜಿ ನಮ್ಮ ಸಂವಿಧಾನದ ಪರಿಕಲ್ಪನೆಗೆ ಹೇಗೆ ನಾಯಕತ್ವವನ್ನು ನೀಡಿದರು. ಸರ್ದಾರ್ ಪಟೇಲರು ಧರ್ಮದ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ರದ್ದುಗೊಳಿಸುವ ಮೂಲಕ ಭಾರತೀಯ ಸಂವಿಧಾನವನ್ನು ಕೋಮುವಾದದಿಂದ ಮುಕ್ತಗೊಳಿಸಿದರು, ಡಾ. ಅಂಬೇಡ್ಕರ್ ಅವರು ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವವನ್ನು ಸೇರಿಸಿ ‘ಏಕ್ ಭಾರತ್ ಶ್ರೇಷ್ಠ ಭಾರತ’ವನ್ನು ರೂಪಿಸಿದರು ಮತ್ತು ಡಾ. ರಾಜೇಂದ್ರ ಪ್ರಸಾದ್ ಅವರಂತಹ ವಿದ್ವಾಂಸರು ಸಂವಿಧಾನವನ್ನು ಭಾರತದ ಆತ್ಮದೊಂದಿಗೆ ಸಂಪರ್ಕಿಸಲು ಹೇಗೆ ಪ್ರಯತ್ನಿಸಿದರು. ಈ ಪುಸ್ತಕವು ಇಂತಹ ಹೇಳಲಾಗದ ಅಂಶಗಳನ್ನು ನಮಗೆ ಪರಿಚಯಿಸುತ್ತದೆ,’’ ಎಂದು ಅವರು ಹೇಳಿದರು.

ಸಂವಿಧಾನದ ಜೀವಂತ ಸ್ವರೂಪದ ಬಗ್ಗೆ ವಿವರಿಸಿದ ಪ್ರಧಾನಮಂತ್ರಿ ಅವರು, “ ಭಾರತವು ಸ್ವಭಾವತಃ ಸ್ವತಂತ್ರ ಚಿಂತನೆಯ ದೇಶವಾಗಿದೆ. ಜಡತ್ವವು ನಮ್ಮ ಮೂಲ ಸ್ವಭಾವದ ಭಾಗವಲ್ಲ. ಸಂವಿಧಾನ ರಚನಾ ಸಭೆಯ ರಚನೆಯಿಂದ ಹಿಡಿದು ಅದರ ಚರ್ಚೆಗಳವರೆಗೆ, ಸಂವಿಧಾನವನ್ನು ಅಂಗೀಕರಿಸುವುದರಿಂದ ಹಿಡಿದು ಅದರ ಇಂದಿನ ಹಂತದವರೆಗೆ, ನಾವು ನಿರಂತರವಾಗಿ ಕ್ರಿಯಾತ್ಮಕ ಮತ್ತು ಪ್ರಗತಿಪರ ಸಂವಿಧಾನವನ್ನು ನೋಡಿದ್ದೇವೆ. ನಾವು ವಾದಿಸಿದ್ದೇವೆ, ಪ್ರಶ್ನೆಗಳನ್ನು ಎತ್ತಿದ್ದೇವೆ, ಚರ್ಚಿಸಿದ್ದೇವೆ ಮತ್ತು ಬದಲಾವಣೆಗಳನ್ನು ಮಾಡಿದ್ದೇವೆ. ಇದು ನಮ್ಮ ಜನಸಾಮಾನ್ಯರಲ್ಲಿ ಮತ್ತು ಜನರ ಮನಸ್ಸಿನಲ್ಲಿಯೂ ಮುಂದುವರಿಯುತ್ತದೆ ಎಂದು ನನಗೆ ಖಾತ್ರಿಯಿದೆ,’’ ಎಂದು ಅವರು ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • T S KARTHIK November 27, 2024

    in IAF INDIAN AIRFORCE army navy✈️ flight train trucks vehicle 🚆🚂 we can write vasudeva kuttumbakkam -we are 1 big FAMILY to always remind team and nation and world 🌎 all stakeholders.
  • Ashvin Patel July 30, 2022

    Good
  • Chowkidar Margang Tapo July 20, 2022

    namo namo namo namo namo namo namo
  • Laxman singh Rana July 15, 2022

    namo namo 🇮🇳🌹
  • Laxman singh Rana July 15, 2022

    namo namo 🇮🇳
  • Chowkidar Margang Tapo July 10, 2022

    bharat mata ki.jai
  • Sanjay Kumar Singh July 05, 2022

    Jai Jai Shri Krishna
  • Madhubhai kathiriya June 29, 2022

    Jay hind
  • Shivkumragupta Gupta June 29, 2022

    जय भारत
  • Shivkumragupta Gupta June 29, 2022

    जय हिंद
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India’s urban boom an oppurtunity to build sustainable cities: Former housing secretary

Media Coverage

India’s urban boom an oppurtunity to build sustainable cities: Former housing secretary
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಜುಲೈ 2025
July 13, 2025

From Spiritual Revival to Tech Independence India’s Transformation Under PM Modi