Quoteಸಂಗೀತವು ನಮ್ಮನ್ನು ಸಮಷ್ಟಿಯೊಂದಿಗೆ ಬಾಂಧವ್ಯ ಬೆಸೆಯುವ, ಸಮಷ್ಟಿ ಕರ್ತವ್ಯಗಳನ್ನು ನೆನಪಿಸುವ ಮಾಧ್ಯಮವಾಗಿದೆ
Quoteಯೋಗ ದಿನವನ್ನು ಆಚರಿಸುವುದರಿಂದ ಜಾಗತಿಕವಾಗಿ ಭಾರತೀಯ ಪರಂಪರೆಯ ಲಾಭವನ್ನು ಇಡೀ ವಿಶ್ವವೇ ಪಡೆಯುತ್ತಿದೆ. ಭಾರತೀಯ ಸಂಗೀತ ಪರಂಪರೆಯೂ ಮನಷ್ಯನ ಮನಃಸ್ಥಿತಿಯನ್ನು ಬದಲಿಸುವ ಆಳವಾದ ಅನುಭೂತಿಯನ್ನು ಹೊಂದಿದೆ
Quoteಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಭಾರತೀಯ ಸಂಗೀತವನ್ನು ಅರಿಯುವ, ಕಲಿಯುವ ಹಾಗೂ ಅದರ ಲಾಭಗಳನ್ನು ಪಡೆಯುವಂತಹ ಅರ್ಹತೆ ಹೊಂದಿದ್ದಾನೆ. ಹಾಗೆ ಪ್ರತಿಯೊಬ್ಬರೂ ಈ ಬಗ್ಗೆ ಅರಿವು ಹೊಂದಲಿ ಎಂಬ ಹೊಣೆಗಾರಿಕೆ ನಮ್ಮದಾಗಿದೆ
Quoteತಂತ್ರಜ್ಞಾನ ಆಧರಿತ ಇಂದಿನ ಈ ಯುಗದಲ್ಲಿ, ಪ್ರತಿಯೊಂದಕ್ಕೂ ತಾಂತ್ರಿಕ ಜ್ಞಾನ ಅಗತ್ಯವಾಗಿರುವಾಗ ಮಾಹಿತಿ ಮತ್ತು ತಂತ್ರಜ್ಞಾನವು ಸಂಗೀತ ಕ್ಷೇತ್ರದಲ್ಲಿಯೂ ಕ್ರಾಂತಿ ತರಲಿ
Quoteನಮ್ಮ ಕಲೆ ಮತ್ತು ಸಂಸ್ಕೃತಿ ಕೇಂದ್ರಗಳನ್ನು ಕಾಶಿಯಂತೆ ಪುನಃಶ್ಚೇತನ ನೀಡುತ್ತಿದ್ದೇವೆ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತನಾಮರಲ್ಲಿ ಒಬ್ಬರಾದ ಪಂಡಿತ್‌ ಜಸ್‌ರಾಜ್‌ ಅವರಿಗೆ ಅವರ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸುತ್ತ ಮಾತನಾಡಿದರು.

ಪಂಡಿತ್‌ ಜಸರಾಜ್‌ ಅವರ ಚೇತನವನ್ನು, ಅವರ ಮಗಳು ದುರ್ಗಾ ಜಸ್‌ರಾಜ್‌ ಹಾಗೂ ಪಂಡಿತ್‌ ಶಾರಂಗ್‌ ದೇವ್‌ ಅವರು ಜೀವಂತವಾಗಿರಿಸುವಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಎಂದು ಪಂಡಿತ್‌ ಜಸ್ ರಾಜ್‌ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಆನ್‌ಲೈನಿನಲ್ಲಿ ಉದ್ಘಾಟಿಸುತ್ತ, ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು. 

ಭಾರತೀಯ ಋಷಿ ಮುನಿಗಳು ಭಾರತೀಯ ಸಂಗೀತ ಪರಂಪರೆಯ ಕುರಿತು ಮಾತನಾಡಿದರು. ಕಾಸ್ಮಿಕ್‌ ಶಕ್ತಿಯನ್ನು ಅನುಭವಿಸಲು ಹಾಗೂ ಬ್ರಹ್ಮಾಂಡದಲ್ಲಿ ಚಲಿಸಲು, ಸಂಗೀತದ ಹರಿವನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಭಾರತೀಯ ಸಂಗೀತದ ಹೆಗ್ಗಳಿಕೆಯನ್ನು ಹೇಳಿದರು. ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ವಿಭಿನ್ನವಾಗಿಸುವುದು ಹೇಗೆಂದರೆ, ಈ ಸಂಗೀತವು, ಜಾಗತಿಕ ಕರ್ತವ್ಯಗಳ ಪ್ರಜ್ಞೆಯನ್ನು ಸಮಷ್ಟಿಯೊಂದಿಗೆ ಬಾಂಧವ್ಯ ಬೆಸೆಯುವ ಮಾಧ್ಯಮವಾಗಿದೆ ಎಂದು ಶ್ಲಾಘಿಸಿದರು.    

|

ಭಾರತೀಯ ಕಲೆ, ಸಂಸ್ಕೃತಿ ಹಾಗೂ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಸಂರಕ್ಷಿಸುವ ಪಂಡಿತ್‌ ಜಸ್‌ರಾಜ್‌ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸಿದರು.  ಈ ತಂತ್ರಜ್ಞಾನದ ಕಾಲದಲ್ಲಿ ಪ್ರತಿಷ್ಠಾನವು ಎರಡು ಮಹತ್ವದ ಅಂಶಗಳೆಡೆ ಗಮನ ನೀಡಲಿ ಎಂದು ಅವರು ಆಶಿಸಿದರು. ಮೊದಲಿಗೆ ಜಾಗತಿಕ ದಿನಮಾನದಲ್ಲಿ ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದೂಸ್ತಾನಿ ಸಂಗೀತ ಪ್ರಕಾರವು ತನ್ನ ಅಸ್ಮಿತೆಯನ್ನು ಪ್ರತಿಪಾದಿಸಬೇಕು. ಯೋಗ ದಿನಾಚರಣೆಯಿಂದಾಗಿ ಜಗತ್ತಿಗೆ ಭಾರತೀಯ ಪರಂಪರೆಯ ಸಿರಿವಂತಿಕೆಯ ಲಾಭವಾಗಿದೆ. ಹಾಗೆಯೇ ಭಾರತೀಯ ಸಂಗೀತಕ್ಕೂ ತನ್ನದೇ ಆದ ಶಕ್ತಿ, ಸಾಮರ್ಥ್ಯ ಇದೆ. ಮನುಷ್ಯನ ಮನಸಿನಾಳಕ್ಕೆ ಇಳಿಯುವ, ಪರಿವರ್ತಿಸುವ ಸಾಮರ್ಥ್ಯ ಭಾರತೀಯ ಸಂಗೀತಕ್ಕೆ ಇದೆ ಎಂದು ಪ್ರತಿಪಾದಿಸದರು.

ಜಗತ್ತಿನಲ್ಲಿರುವ ಪ್ರತಿ ಮನುಷ್ಯನಿಗೂ ಭಾರತೀಯ ಸಂಗೀತ ಪರಂಪರೆಯನ್ನು ಅರಿಯುವ, ಕಲಿಯುವ ಸಾಧ್ಯತೆ ಇದೆ. ಸಂಗೀತದ ಲಾಭಗಳನ್ನು ಪಡೆಯುವಂತಾಗಬೇಕು. ಹಾಗಾಗಲಿ ಎಂಬ ಹೊಣೆಗಾರಿಕೆ ನಮ್ಮೆಲ್ಲರ ಹೆಗಲಿನ ಮೇಲಿದೆ ಎಂದು ಹೇಳಿದರು. 

ಎರಡನೆಯದಾಗಿ, ಪ್ರಧಾನಮಂತ್ರಿ ಅವರು ಇಂದಿನ ಯುಗವು ತಂತ್ರಜ್ಞಾನ ಯುಗವಾಗಿದೆ. ಬದುಕಿನ ಎಲ್ಲ ಆಯಾಮಗಳನ್ನೂ ತಂತ್ರಜ್ಞಾನದಿಂದ ಪ್ರಭಾವಿತಗೊಂಡಿದೆ. ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಕ್ರಾಂತಿ, ಸಂಗೀತ ಕ್ಷೇತ್ರದಲ್ಲಿಯೂ ಆಗಬೇಕು. ಸಂಗೀತಕ್ಕೆಂದೇ ಮೀಸಲಾಗಿರಿಸಬಹುದಾದ ಕೆಲವು ಸ್ಟಾರ್ಟ್‌ಅಪ್‌ಗಳನ್ನು ಮಾಡಲು ಕರೆ ನೀಡಿದರು. ಭಾರತೀಯ ವಾದ್ಯಗಳು, ಸಂಗೀತದ ರಿವಾಜುಗಳನ್ನು ಒಳಗೊಂಡಿರಬೇಕು ಎಂಬ ಸಲಹೆಯನ್ನೂ ನೀಡಿದರು. 

ಕಾಶಿಯಂಥ ನಗರವನ್ನು ಪುನಃಶ್ಚೇತನಗೊಳಿಸಿದ್ದನ್ನು, ಪುನರ್‌ನಿರ್ಮಾಣ ಮಾಡಿರುವುದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಯವರು ದೇಶದಲ್ಲಿ ಹಾಗೆ ಕಲೆ ಮತ್ತು ಸಂಸ್ಕೃತಿಯ ಕೇಂದ್ರಗಳನ್ನು ಪುನರ್‌ಸ್ಥಾಪಿಸುವ ಕುರಿತು ಮಾತನಾಡಿದರು. ಪ್ರಕೃತಿ ರಕ್ಷಣೆ ಹಾಗೂ ನಿಸರ್ಗ ಪ್ರೀತಿಯಿಂದ ಜಗತ್ತಿಗೇ ಆಭರತವು ತನ್ನ ಭವಿತವ್ಯವನ್ನು ಸುರಕ್ಷಿತಗೊಳಿಸಿರುವ ಪರಿಯನ್ನು ತೋರಿದೆ. ಪರಂಪರೆಯೊಂದಿಗೆ ಭಾರತದ ಪ್ರಗತಿಯನ್ನು ತೋರುತ್ತಿರುವುದು, ‘ಸಬ್‌ಕಾ ಪ್ರಯಾಸ್‌’  ಪ್ರತಿಯೊಬ್ಬರ ಪರಿಶ್ರಮದ ಫ್ರತಿಫಲವೇ ಆಗಿದೆ ಎಂದು ಪ್ರತಿಪಾದಿಸಿದರು.

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Data centres to attract ₹1.6-trn investment in next five years: Report

Media Coverage

Data centres to attract ₹1.6-trn investment in next five years: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಜುಲೈ 2025
July 10, 2025

From Gaganyaan to UPI – PM Modi’s India Redefines Global Innovation and Cooperation