ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದೋರ್‌ನಲ್ಲಿ ನಡೆಯುತ್ತಿರುವ 17 ನೇ ಪ್ರವಾಸಿ ಭಾರತೀಯ ದಿವಸ್ (PBD) ಸಂದರ್ಭದಲ್ಲಿ ಇಂದು ಸುರಿನಾಮ್ ಅಧ್ಯಕ್ಷರಾದ ಶ್ರೀ ಚಂದ್ರಿಕಾ ಪ್ರಸಾದ್ ಸಂತೋಖಿ ಅವರೊಂದಿಗೆ ಸಭೆ ನಡೆಸಿದರು. ಸುರಿನಾಮ್ ಅಧ್ಯಕ್ಷರಾದ ಶ್ರಿಉ ಸಂತೋಖಿ ಅವರು 2023 ರ ಜನವರಿ 7 ರಿಂದ ಜನವರಿ 14 ರವರೆಗೆ ಭಾರತದಲ್ಲಿ ಅಧಿಕೃತ ಭೇಟಿಯಲ್ಲಿದ್ದಾರೆ.ಅಲ್ಲದೇ ಸಂತೋಖಿ ಅವರು 17 ನೇ ಪ್ರವಾಸಿ ಭಾರತೀಯ ದಿವಸ್ (PBD)ನಲ್ಲಿ ಗೌರವ ಅತಿಥಿಯಾಗಿದ್ದಾರೆ.
ಉಭಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ಶ್ರೀ ಚಂದ್ರಿಕಾ ಪ್ರಸಾದ್ ಸಂತೋಖಿ ಅವರುಗಳು ಇಂದಿನ ಸಭೆಯಲ್ಲಿ ಹೈಡ್ರೋಕಾರ್ಬನ್‌ಗಳು, ರಕ್ಷಣೆ, ಕಡಲ ಭದ್ರತೆ, ಡಿಜಿಟಲ್ ಉಪಕ್ರಮಗಳು ಮತ್ತು ಐಸಿಟಿ ಮತ್ತು ಸಾಮರ್ಥ್ಯ ನಿರ್ಮಾಣ ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ನೀಡುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
ಪ್ರಧಾನ ಮಂತ್ರಿಗಳು ಶ್ರೀ ಸಂತೋಖಿ ಅವರೊಂದಿಗೆ ಭಾರತವು ಸುರಿನಾಮ್‌ನಿಂದ ಪಡೆದ ಸಾಲ ಹಾಗೂ ಪಡೆದ ಆ ಸಾಲದಿಂದಾದ ಉಂಟಾಗುವ ಲಾಭಗಳ ಕುರಿತು ಚರ್ಚಿಸಿದರು.ಸಭೆಯಲ್ಲಿ ಸುರಿನಾಮ್ ಅಧ್ಯಕ್ಷರಾದ ಸಂತೋಖಿ ಅವರು, ಸುರಿನಾಮ್‌ನ ಸಾಲವನ್ನು ಭಾರತವು ಪುನರ್ರಚಿಸುವುದನ್ನು ಮೆಚ್ಚಿರುವುದಾಗಿ ಸಭೆಯಲ್ಲಿ ತಿಳಿಸಿದರು.
ಸುರಿನಾಮ್ ರಾಷ್ಟ್ರಪತಿ ಸಂತೋಖಿ ಅವರು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚಿಸಲಿದ್ದಾರೆ. ಅಲ್ಲದೇ 10 ಜನವರಿ 2023 ರಂದು ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಸಮಾರೋಪ ಸಮಾರಂಭ ಹಾಗೂ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಸಂತೋಖಿ ಅವರು ಇಂದೋರ್‌ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿಯೂ ಭಾಗವಹಿಸಲಿದ್ದಾರೆ. ಇದಾದ ಬಳಿಕ ಅವರು ಅಹಮದಾಬಾದ್ ಮತ್ತು ನವದೆಹಲಿಗೆ ತೆರಳಲಿದ್ದಾರೆ.