ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 14ರಂದು ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷೆ ಮತ್ತು ಅಸೆಂಬ್ಲಿಯ ಹಿರಿಯ ನಾಯಕರಾದ ಘನತೆವೆತ್ತ ಶ್ರೀಮತಿ ಯಾಲ್ ಬ್ರಾನ್-ಪಿವೆಟ್ ಅವರನ್ನು ಅವರ ಅಧಿಕೃತ ನಿವಾಸ ಪ್ಯಾರಿಸ್ ನ ಹೋಟೆಲ್ ಡಿ ಲಾಸ್ಸೆಯಲ್ಲಿ ಭೋಜನ ಸಮಯದಲ್ಲಿ ಭೇಟಿಯಾದರು.
ಇಬ್ಬರೂ ನಾಯಕರು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಸಂಬಂಧಿಸಿ ಪರಸ್ಪರ ಹಂಚಿಕೆಯ ಮೌಲ್ಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಉಭಯ ಸಂಸತ್ತುಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಬಗ್ಗೆ ಅವರು ಚರ್ಚಿಸಿದರು.
ಭಾರತದ ವಿಶಾಲ ಚುನಾವಣಾ ಪ್ರಕ್ರಿಯೆಯ ಬಗ್ಗೆ ಫ್ರಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿತು. ವ್ಯಾಪಾರ ಮತ್ತು ಆರ್ಥಿಕತೆ, ಪರಿಸರ, ತಂತ್ರಜ್ಞಾನ ಮತ್ತು ಸಂಸ್ಕೃತಿ ಸೇರಿದಂತೆ ವ್ಯೂಹಾತ್ಮಕ ಪಾಲುದಾರಿಕೆಯ ವಿವಿಧ ಸ್ತಂಭಗಳನ್ನು ಒಳಗೊಂಡಂತೆ ಚರ್ಚೆಗಳು ನಡೆದವು. ಅವರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.