ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ 2023ರ ಆಗಸ್ಟ್ 24ರಂದು ಜೋಹಾನ್ಸ್ ಬರ್ಗ್ ನಲ್ಲಿ ಇಥಿಯೋಪಿಯಾ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬಿ ಅಹ್ಮದ್ ಅಲಿ ಅವರನ್ನು ಭೇಟಿ ಮಾಡಿದರು.
ಇಬ್ಬರೂ ನಾಯಕರು ಅಭಿವೃದ್ಧಿ, ಪಾಲುದಾರಿಕೆ ಮತ್ತು ಸಾಮರ್ಥ್ಯ ವರ್ಧನೆ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಸಹಕಾರ, ಐಸಿಟಿ, ಕೃಷಿ, ಯುವಕರ ಕೌಶಲ್ಯ ಮತ್ತು ಜನರ ನಡುವಿನ ಸಂಪರ್ಕ ಸೇರಿದಂತೆ ಪ್ರಮುಖ ಕ್ಷೇತ್ರಗಳ ಬಗ್ಗೆ ಫಲಪ್ರದ ಚರ್ಚೆ ನಡೆಸಿದರು. ಅವರು ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಬ್ರಿಕ್ಸ್ ನಲ್ಲಿ ಇಥಿಯೋಪಿಯಾದ ಸದಸ್ಯತ್ವಕ್ಕಾಗಿ ಪ್ರಧಾನಮಂತ್ರಿ ಅವರು ಪ್ರಧಾನಮಂತ್ರಿ ಅಬಿ ಅಹ್ಮದ್ ಅವರನ್ನು ಅಭಿನಂದಿಸಿದರು. ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅಬಿ ಅಹ್ಮದ್ ಅವರನ್ನು ಅವರು ಶ್ಲಾಘಿಸಿದರು.
ಪ್ರಧಾನಮಂತ್ರಿ ಅಬಿ ಅಹ್ಮದ್ ಅವರು, ಬ್ರಿಕ್ಸ್ ಕುಟುಂಬವನ್ನು ಸೇರಲು ಇಥಿಯೋಪಿಯಾಕ್ಕೆ ಭಾರತ ಬೆಂಬಲ ನೀಡಿದಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಚಂದ್ರಯಾನ ಮಿಷನ್ ನ ಯಶಸ್ಸಿಗಾಗಿ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು, ಇದು ಇಥಿಯೋಪಿಯಾ ಮತ್ತು ಜಾಗತಿಕ ದಕ್ಷಿಣಕ್ಕೆ ಹೆಮ್ಮೆ ಮತ್ತು ಸ್ಫೂರ್ತಿಯ ಕ್ಷಣ ಎಂದು ಬಣ್ಣಿಸಿದರು.
Held fruitful talks with PM @AbiyAhmedAli. Congratulated him on Ethiopia joining BRICS. We discussed ways to boost ties in sectors like trade, defence and people to people relations. pic.twitter.com/PE6a8xRgZQ
— Narendra Modi (@narendramodi) August 24, 2023