ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಕೋಪನ್‌ಹೇಗನ್‌ನಲ್ಲಿ ನಡೆದ 2ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಸ್ವೀಡನ್‌ನ ಪ್ರಧಾನ ಮಂತ್ರಿ ಶ್ರೀಮತಿ ಮ್ಯಾಗ್ಡಲೀನಾ ಆಂಡರ್ಸನ್ ಅವರ್ನು ಭೇಟಿ ಮಾಡಿದರು. ಉಭಯ ನಾಯಕರ ನಡುವಿನ ಭೇಟಿ ಇದೇ ಮೊದಲಾಗಿದೆ.
ಭಾರತ ಮತ್ತು ಸ್ವೀಡನ್ ಸಾಮಾನ್ಯ ಮೌಲ್ಯಗಳ ಆಧಾರದ ಮೇಲೆ ದೀರ್ಘಕಾಲದ ನಿಕಟ ಸಂಬಂಧಗಳನ್ನು ಹೊಂದಿವೆ; ಉತ್ತಮವಾದ ವ್ಯಾಪಾರ, ಹೂಡಿಕೆ ಹಾಗು ಸಂಶೋಧನೆ ಮತ್ತು ಅಭಿವೃದ್ಧಿ ಸಂಪರ್ಕಗಳು; ಮತ್ತು ಜಾಗತಿಕ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಇದೇ ರೀತಿಯ ವಿಧಾನಗಳು ನಾವೀನ್ಯತೆ, ತಂತ್ರಜ್ಞಾನ, ಹೂಡಿಕೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸಹಯೋಗಗಳು ಈ ಆಧುನಿಕ ಸಂಬಂಧದ ತಳಹದಿಯನ್ನು ಒದಗಿಸುತ್ತವೆ. ಮೊದಲನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು 2018ರಲ್ಲಿ ಸ್ವೀಡನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಎರಡೂ ದೇಶದವರು ವ್ಯಾಪಕವಾದ ಜಂಟಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡರು ಮತ್ತು ಜಂಟಿ ನಾವೀನ್ಯತೆ ಪಾಲುದಾರಿಕೆಗೆ ಸಹಿ ಹಾಕಿದರು.
ಇಂದಿನ ಸಭೆಯಲ್ಲಿ ಉಭಯ ನಾಯಕರು ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು. ʼಲೀಡ್ ಐಟಿʼ ಉಪಕ್ರಮದ ಪ್ರಗತಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಕಡಿಮೆ ಇಂಗಾಲದ ಆರ್ಥಿಕತೆಯ ಕಡೆಗೆ ವಿಶ್ವದ ಅತಿ ಹೆಚ್ಚು ಹಸಿರುಮನೆ ಅನಿಲ (ಜಿಎಚ್‌ಜಿ) ಹೊರಸೂಸುವ ಕೈಗಾರಿಕೆಗಳಿಗೆ ಮಾರ್ಗದರ್ಶನ ನೀಡಲು ವಿಶ್ವ ಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಸೆಪ್ಟೆಂಬರ್ 2019 ರಲ್ಲಿ ʼಉದ್ಯಮ ಪರಿವರ್ತನೆಯ ಮೇಲೆ ನಾಯಕತ್ವ ಗುಂಪನ್ನುʼ(ಲೀಡ್‌ಐಟಿ) ಸ್ಥಾಪಿಸಲು ಇದು ಭಾರತ-ಸ್ವೀಡನ್ ಜಂಟಿ ಜಾಗತಿಕ ಉಪಕ್ರಮವಾಗಿದೆ. ಅದರ ಸದಸ್ಯತ್ವವು ಈಗ 16 ದೇಶಗಳು ಮತ್ತು 19 ಕಂಪನಿಗಳೊಂದಿಗೆ 35 ಕ್ಕೆ ಬೆಳೆದಿದೆ.
ನಾವೀನ್ಯತೆ, ಹವಾಮಾನ ತಂತ್ರಜ್ಞಾನ, ಹವಾಮಾನ ಕ್ರಮ, ಹಸಿರು ಜಲಜನಕ, ಬಾಹ್ಯಾಕಾಶ, ರಕ್ಷಣೆ, ನಾಗರಿಕ ವಿಮಾನಯಾನ, ಆರ್ಕ್ಟಿಕ್, ಪೋಲಾರ್ ಧ್ರುವ ಸಂಶೋಧನೆ, ಸುಸ್ಥಿರ ಗಣಿಗಾರಿಕೆ ಮತ್ತು ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸುವ ಸಾಧ್ಯತೆಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು.
ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಚರ್ಚೆಗಳು ನಡೆದವು.
Cementing ties with Sweden.
— PMO India (@PMOIndia) May 4, 2022
PM @narendramodi and @SwedishPM Magdalena Andersson held extensive talks on further diversifying the India-Sweden friendship. pic.twitter.com/d1bXP5JW5u