ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋಪನ್ ಹೇಗನ್‌ನಲ್ಲಿ 2ನೇ ಭಾರತ-ನಾರ್ಡಿಕ್ ಶೃಂಗಸಭೆಯ ವೇಳೆ ನಾರ್ವೆಯ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಜೋನಾಸ್ ಗಹರ್ ಸ್ಟೋರ್ ಅವರನ್ನು ಭೇಟಿ ಮಾಡಿದ್ದರು. ಪ್ರಧಾನ ಮಂತ್ರಿ ಸ್ಟೋರ್ ಅವರು 2021ರ ಅಕ್ಟೋಬರ್ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ.
ಇಬ್ಬರೂ ಪ್ರಧಾನ ಮಂತ್ರಿಗಳು ದ್ವಿಪಕ್ಷೀಯ ಸಹಕಾರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಿದರು ಮತ್ತು ಭವಿಷ್ಯದ ಸಹಕಾರ ಸಂಬಂಧಗಳ ಕ್ಷೇತ್ರಗಳ ಕುರಿತು ಚರ್ಚಿಸಿದರು. ನಾರ್ವೆಯ ಕೌಶಲ್ಯ ಮತ್ತು ಭಾರತದ ನೈಸರ್ಗಿಕ ಸಂಪನ್ಮೂಲಗಳ ವ್ಯಾಪ್ತಿ ಒಂದಕ್ಕೊಂದು ಪೂರಕವಾಗಿದೆ ಒದಗಿಸಿದೆ ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಉಭಯ ನಾಯಕರು ನೀಲಿ ಆರ್ಥಿಕತೆ, ನವೀಕರಿಸಬಹುದಾದ ಇಂಧನ, ಹಸಿರು ಜಲಜನಕ, ಸೌರ ಮತ್ತು ಪವನ ವಿದ್ಯುತ್ ಯೋಜನೆಗಳು, ಗ್ರೀನ್ ಶಿಪ್ಪಿಂಗ್, ಮೀನುಗಾರಿಕೆ, ಜಲ ನಿರ್ವಹಣೆ, ಮಳೆನೀರು ಕೊಯ್ಲು, ಬಾಹ್ಯಾಕಾಶ ಸಹಕಾರ, ದೀರ್ಘಾವಧಿಯ ಮೂಲಸೌಕರ್ಯ ಹೂಡಿಕೆ, ಆರೋಗ್ಯ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಆಳವಾದ ಸಂಬಂಧಗಳನ್ನು ಹೊಂದುವ ಸಂಭವನೀಯತೆಯ ಬಗ್ಗೆ ಚರ್ಚಿಸಿದರು.
ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆದವು. ಯುಎನ್ ಎಸ್ ಸಿ ಸದಸ್ಯರಾಗಿ ಭಾರತ ಮತ್ತು ನಾರ್ವೆ ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಕುರಿತು ಪರಸ್ಪರ ಮಾತುಕತೆಯಲ್ಲಿ ತೊಡಗಿವೆ.
Boosting friendship with Norway.
— PMO India (@PMOIndia) May 4, 2022
Prime Ministers @narendramodi and @jonasgahrstore meet in Copenhagen. They are taking stock of the full range of bilateral relations between the two nations and ways to deepen developmental cooperation. pic.twitter.com/FbxzJHiyYU