ಜಪಾನ್ ಪ್ರಧಾನಿ ಗೌರವಾನ್ವಿತ ಶ್ರೀ ಫುಮಿಯೋ ಕಿಶಿದಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಭಾರತ – ಜಪಾನ್ ಸಹಭಾಗಿತ್ವವನ್ನು ಬಲಪಡಿಸುವುದಲ್ಲದೇ ಭಾರತ – ಫೆಸಿಫಿಕ್ ವಲಯದಲ್ಲಿ ಸ್ವಾಯತ್ತ, ಮುಕ್ತ ಮತ್ತು ಎಲ್ಲವನ್ನೊಳಗೊಂಡ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಮಾಜಿ ಪ್ರಧಾನಿ ಅಬೆ ಅವರು ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸುವ ಕುರಿತು ಉಭಯ ನಾಯಕರು ಫಲಪ್ರದವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಭಾರತ – ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ ಹಾಗೂ ಹಲವಾರು ಅಂತರರಾಷ್ಟ್ರೀಯ ಗುಂಪುಗಳು ಮತ್ತು ಸಂಸ್ಥೆಗಳ ಕುರಿತಂತೆಯೂ ಈ ನಾಯಕರು ಚರ್ಚಿಸಿದರು.
岸田首相と有意義な会談をしました。私たちは印日関係に関わる様々な事項について話し合いました。安倍晋三元首相の悲劇的な死に対するお悔やみをお伝えしました。@kishida230 pic.twitter.com/fqeljRCHJ2
— Narendra Modi (@narendramodi) September 27, 2022
Had a fruitful meeting with PM Kishida. We discussed various bilateral subjects. I conveyed my condolences on the tragic demise of former PM Shinzo Abe. @kishida230 pic.twitter.com/B46HQ4tbca
— Narendra Modi (@narendramodi) September 27, 2022