1. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಸೆಪ್ಟೆಂಬರ್ 16 ರಂದು ಎಸ್.ಸಿ.ಒ ಶೃಂಗಸಭೆ ಹಿನ್ನೆಲೆಯಲ್ಲಿ ಟರ್ಕಿ ಗೌರವಾನ್ವಿತ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗಾನ್ ಅವರನ್ನು ಭೇಟಿ ಮಾಡಿದರು.
2. ಉಭಯ ನಾಯಕರು ಭಾರತ – ಟರ್ಕಿ ಬಾಂಧವ್ಯಗಳ ಪ್ರಗತಿ ಪರಿಶೀಲನೆ ನಡೆಸಿದರು. ಇತ್ತೀಚಿನ ಆರ್ಥಿಕ ವಲಯದ ಬಾಂಧವ್ಯ, ನಿರ್ದಿಷ್ಟವಾಗಿ ದ್ವಿಪಕ್ಷೀಯ ವ್ಯಾಪಾರ, ಆರ್ಥಿಕ ಮತ್ತು ವಾಣಿಜ್ಯ ಬಾಂಧವ್ಯಗಳ ಇನ್ನಷ್ಟು ಸಾಮರ್ಥ್ಯ ವರ್ಧನೆ ಕುರಿತಂತೆ ಚರ್ಚಿಸಿದರು.
3. ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಈ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ತಮ್ಮ ಪ್ರದೇಶದ ಅಭ್ಯುದಯಕ್ಕಾಗಿ ಉಭಯ ನಾಯಕರು ದ್ವಿಪಕ್ಷೀಯ ವಿಷಯಗಳಷ್ಟೇ ಅಲ್ಲದೇ ಪರಸ್ಪರ ನಿರಂತರ ಸಂಪರ್ಕದಲ್ಲಿರಲು ಸಮ್ಮತಿಸಿದ್ದಾರೆ.
Met President @RTErdogan and reviewed the full range of bilateral relations between India and Turkey including ways to deepen economic linkages for the benefit of our people. @trpresidency pic.twitter.com/wwNe1KrMCm
— Narendra Modi (@narendramodi) September 16, 2022