ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2022 ರಂದು ಟೋಕಿಯೋದಲ್ಲಿ ಯುನಿಕ್ಲೋ ನ ಮೂಲ ಕಂಪನಿಯಾದ ಫಾಸ್ಟ್ ರಿಟೇಲಿಂಗ್ ಕಂಪನಿ ಲಿಮಿಟೆಡ್‌ನ ಪ್ರಧಾನ ಅಧಿಕಾರಿ, ಅಧ್ಯಕ್ಷ ಮತ್ತು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ತದಾಶಿ ಯನಾಯ್ ಅವರನ್ನು ಭೇಟಿಯಾದರು. ವೇಗವಾಗಿ ಬೆಳೆಯುತ್ತಿರುವ ಭಾರತದ ಜವಳಿ ಮತ್ತು ಉಡುಪು ಮಾರುಕಟ್ಟೆ ಮತ್ತು ಭಾರತದಲ್ಲಿ ಜವಳಿ ಯೋಜನೆಗಳಿಗೆ ಉತ್ಪಾದಕತೆ ಸಂಬಂಧಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಇರುವ ಹೂಡಿಕೆ ಅವಕಾಶಗಳ ಕುರಿತು ಸಭೆಯಲ್ಲಿ, ಅವರು ಚರ್ಚಿಸಿದರು. ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ, ತೆರಿಗೆ ಮತ್ತು ಕಾರ್ಮಿಕ ಕ್ಷೇತ್ರಗಳು ಸೇರಿದಂತೆ ಭಾರತದಲ್ಲಿ ವಿದೇಶಿ ಹೂಡಿಕೆದಾರರಿಗೆ ಸುಲಭವಾಗಿ ವ್ಯಾಪಾರ ಮಾಡಲು ಸಾಧ್ಯವಾಗುವಂತೆ ಕೈಗೊಳ್ಳಲಾಗುತ್ತಿರುವ ವಿವಿಧ ಸುಧಾರಣೆಗಳ ಬಗ್ಗೆ ಅವರು ಚರ್ಚಿಸಿದರು.
ಜವಳಿಗಳ ಉತ್ಪಾದನಾ ಕೇಂದ್ರವಾಗಲು, ವಿಶೇಷವಾಗಿ ಜವಳಿ ಉತ್ಪಾದನೆಯಲ್ಲಿ ತಂತ್ರಜ್ಞಾನಗಳ ಬಳಕೆಗೆ ಭಾರತದ ಪ್ರಯತ್ನಗಳಲ್ಲಿ ಯುನಿಕ್ಲೋ ನ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿಯವರು ಆಹ್ವಾನಿಸಿದರು. ಜವಳಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಿಎಂ-ಮಿತ್ರ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಯುನಿಕ್ಲೋಗೆ ಪ್ರಧಾನಮಂತ್ರಿಯವರು ಆಹ್ವಾನ ನೀಡಿದರು.
PM @narendramodi interacted with Mr. Tadashi Yanai, Chairman, President and CEO of @UNIQLO_JP. Mr. Yanai appreciated the entrepreneurial zeal of the people of India. PM Modi asked Mr. Yanai to take part in the PM-Mitra scheme aimed at further strengthening the textiles sector. pic.twitter.com/fKCjWwYNH2
— PMO India (@PMOIndia) May 23, 2022