The kind of restraint being practiced across country during this time is unprecedented, Ganeshotsav too is also being celebrated online: PM
Now is the time for everyone to be vocal for local toys: PM Modi
"Team up for toys", says PM Modi
Today, when the country is aspiring to be self-reliant, then, we have to move forward with full confidence in every field: Prime Minister during Mann Ki Baat
People's participation is very important in the movement of nutrition: Prime Minister Modi
During Mann Ki Baat, PM Modi speaks about Army dogs Sophie and Vida, who were awarded "Commendation Cards" on Independence Day
In the challenging times of Corona, teachers have quickly adapted technology and are guiding their students: PM Modi

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.ಸಾಮಾನ್ಯವಾಗಿ ಇದು ಉತ್ಸವಗಳ ಸಮಯ. ಅಲ್ಲಲ್ಲಿ ಜಾತ್ರೆಗಳನ್ನು ಆಯೋಜಿಸಲಾಗಿದೆ, ಧಾರ್ಮಿಕ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಕೊರೊನಾದ ಈ ಸಂಕಟದ ಸ್ಥಿತಿಯಲ್ಲಿ ಜನರಲ್ಲಿ ಸಂಭ್ರಮವಂತೂ ಇದೆ, ತ್ಸಾಹವೂ ಇದೆ ಆದರೆ ನಮ್ಮೆಲ್ಲರ ಮನಸ್ಸನ್ನು ಕಲಕುವಂತಹ ಶಿಸ್ತೂ ಇದೆ. ಒಟ್ಟಾರೆ ನೋಡುವುದಾದರೆ ನಾಗರಿಕರಲ್ಲಿ  ಕರ್ತವ್ಯದ ಅರಿವಿದೆ. ಜನರು ತಮ್ಮ ಬಗ್ಗೆ ಎಚ್ಚರಿಕೆ ವಹಿಸುತ್ತಲೇ, ಬೇರೆಯವರ ಬಗ್ಗೆ ಎಚ್ಚರಿಕೆವಹಿಸಿ ತಮ್ಮ ದೈನಂದಿನ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ. ದೇಶದಲ್ಲಿ ಆಯೋಜಿಸಲಾಗುತ್ತಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಈ ಬಾರಿ ಸರಳತೆ ಮತ್ತು ಸಂಯಮವನ್ನು ಕಾಯ್ದುಕೊಳ್ಳಲಾಗುತ್ತಿರುವುದು ಅಭುತಪೂರ್ವವಾಗಿದೆ. ಕೆಲವೆಡೆ ಗಣೇಶ ಉತ್ಸವವನ್ನು ಆನ್ ಲೈನ್ ನಲ್ಲಿ ಆಚರಿಸಲಾಗುತ್ತಿದೆ ಇದೇ ವೇಳೆ ಹಲವೆಡೆ ಈ ಬಾರಿ ನೈಸರ್ಗ ಸ್ನೇಹಿ ಗಣೇಶ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸ್ನೇಹಿತರೆ, ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಹಬ್ಬಗಳು ಮತ್ತು ಪರಿಸರದ ಕುರಿತು ಖಂಡಿತ ನಮ್ಮ ಮನದಲ್ಲಿ ಒಂದು ವಿಷಯ ಮೂಡುತ್ತದೆ. ಇವೆರಡ ಮಧ್ಯೆ ಬಹಳ ಗಾಢವಾದ ಸಂಬಂಧವಿದೆ. ಒಂದೆಡೆ ನಮ್ಮ ಹಬ್ಬಹರಿದಿನಗಳಲ್ಲಿ ಪರಿಸರ ಮತ್ತು ಪ್ರಕೃತಿಯ ಜೊತೆಗೆ ಸಹಜೀವನದ ಸಂದೇಶ ಅಡಗಿದ್ದರೆ ಮತ್ತೊಂದೆಡೆ ಹಲವಾರು ಹಬ್ಬಗಳನ್ನು ಪ್ರಕೃತಿಯ ರಕ್ಷಣೆಗೆಂದೇ ಆಚರಿಸಲಾಗುತ್ತದೆ. ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿ ಯುಗ ಯುಗಗಳಿಂದ ಥಾರು ಬುಡಕಟ್ಟು ಸಮಾಜದ ಜನರು 60 ಗಂಟೆಗಳ ಲಾಕ್ ಡೌನ್ ಅಥವಾ ಅವರದೇ ಭಾಷೆಯಲ್ಲಿ ಹೇಳುವುದಾದರೆ 60 ಗಂಟೆಗಳ ನಿಷೇಧ ವನ್ನು ಆಚರಿಸುತ್ತಾರೆ. ಪ್ರಕೃತಿಯ ರಕ್ಷಣೆಗಾಗಿ ಥಾರು ಸಮಾಜದ ಜನತೆ ನಿಷೇಧವನ್ನು ತಮ್ಮ ಪರಂಪರೆಯ ಒಂದು ಭಾಗವನ್ನಾಗಿಸಿಕೊಂಡಿದೆ ಮತ್ತು ಯುಗಗಳಿಂದ ಅದನ್ನು ಪಾಲಿಸುತ್ತಾ ಬಂದಿದೆ. ಈ ಅವಧಿಯಲ್ಲಿ ಯಾರೂ ಗ್ರಾಮದೊಳಗೆ ಪ್ರವೇಶಿಸುವುದಿಲ್ಲ ಮತ್ತು ಯಾರೂ ತಮ್ಮ ಮನೆಯಿಂದ ಹೊರಬೀಳುವುದಿಲ್ಲ. ಅಲ್ಲದೆ ತಾವು ಹೊರ ಹೋದರೆ ಅಥವಾ ಯಾರಾದರೂ ಹೊರಗಿನಿಂದ ಬಂದರೆ ಅವರು ಬಂದು ಹೋಗುವುದರಿಂದ ಮತ್ತು ಜನರ ದೈನಂದಿನ ಕೆಲಸಕಾರ್ಯಗಳಿಂದ ಹೊಸ ಗಿಡ ಮರಗಳಿಗೆ ನಷ್ವಾಗಬಹುದು ಎಂದು ಅವರು ನಂಬುತ್ತಾರೆ. ನಿಷೇಧದ ಆರಂಭಕ್ಕೂ ಮೊದಲು ನಮ್ಮ ಬುಡಕಟ್ಟು ಸಮುದಾಯದ ಸೋದರ ಸೋದರಿಯರು ಭವ್ಯವಾದ ರೀತಿಯಲ್ಲಿ ಪೂಜೆ ಪ್ರವಚನ ನಡೆಸುತ್ತಾರೆ ಮತ್ತು ಮುಕ್ತಾಯದಲ್ಲಿ ಬುಡಕಟ್ಟು ಸಾಂಪ್ರದಾಯಿಕ ಗೀತೆ, ಸಂಗೀತ, ನೃತ್ಯದ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. 

ಸ್ನೇಹಿತರೆ, ಇಂದು ಓನಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಬ್ಬ ಚಿಂಗಂ ಮಾಸದಲ್ಲಿ ಬರುತ್ತದೆ. ಈ ಸಮಯದಲ್ಲಿ ಜನರು ಏನನ್ನಾದರೂ ಹೊಸ ವಸ್ತುವನ್ನು ಖರೀದಿಸುತ್ತಾರೆ. ತಮ್ಮ ಮನೆಗಳನ್ನು ಸಿಂಗರಿಸುತ್ತಾರೆ. ಹೂವಿನ ರಂಗೋಲಿ ಹಾಕುತ್ತಾರೆ. ಓಣಂ ಹಬ್ಬದ ಆನಂದವನ್ನು ಅನುಭವಿಸುತ್ತಾರೆ. ವಿವಿಧ ಬಗೆಯ ಕ್ರೀಡೆಗಳು, ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಓಣಂ ಹಬ್ಬದ ಸಡಗರ ಇಂದು ದೂರದ ವಿದೇಶಗಳಿಗೂ ಹಬ್ಬಿದೆ. ಅಮೇರಿಕಾ ಆಗಲಿ, ಯುರೋಪ್ ಆಗಲಿ ಅಥವಾ ಖಾಡಿ ದೇಶವೇ ಆಗಲಿ ಓಣಂ ಹಬ್ಬದ ಉಲ್ಲಾಸ ನಿಮಗೆ ಎಲ್ಲೆಡೆ ನೋಡಲು ಸಿಗುತ್ತದೆ. ಓಣಂ ಈಗ ಒಂದು ಅಂತಾರಾಷ್ಟ್ರೀಯ ಹಬ್ಬವಾಗುತ್ತಾ ಸಾಗಿದೆ. 

ಸ್ನೇಹಿತರೆ, ಓಣಂ ನಮ್ಮ ಕೃಷಿಗೆ ಸಂಬಂಧಸಿದ ಹಬ್ಬವಾಗಿದೆ. ಇದು ನಮ್ಮ ಗ್ರಾಮೀಣ ಅರ್ಥವ್ಯವಸ್ಥೆಗೆ ಒಂದು ಹೊಸ ಆರಂಭದ ಸಮಯವಾಗಿರುತ್ತದೆ. ಕೃಷಿಕರ ಶಕ್ತಿಯಿಂದಲೇ ನಮ್ಮ ಜೀವನ, ನಮ್ಮ ಸಮಾಜ ಸಾಗುತ್ತದೆಯಲ್ಲವೇ. ನಮ್ಮ ಹಬ್ಬಗಳು ಕೃಷಿಕರ ಪರಿಶ್ರಮದಿಂದಲೇ ವರ್ಣಮಯವಾಗುತ್ತವೆ. ನಮ್ಮ ಅನ್ನದಾತರ, ಕೃಷಿಕರ ಜೀವನಧಾರೆಯ ಶಕ್ತಿಗೆ ವೇದಗಳಲ್ಲೂ ಗೌರವಪೂರ್ಣ ನಮನ ಸಲ್ಲಿಸಲಾಗಿದೆ.

ಋಗ್ವೇದದಲ್ಲಿ ಮಂತ್ರವೊಂದಿದೆ –

ಅನ್ನಾನಾಂ ಪತಯೇ ನಮಃ, ಕ್ಷೇತ್ರಾಣಾಂ ಪತಯೇ ನಮಃ,

ಅಂದರೆ ಅನ್ನದಾತನಿಗೆ ನಮಸ್ಕಾರಗಳು ಕೃಷಿಕನಿಗೆ ನಮಸ್ಕಾರಗಳು. ನಮ್ಮ  ಕೃಷಿಕರು ಕೊರೊನಾದ ಈ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ನಮ್ಮ ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಮುಂಗಾರು ಬೆಳೆಯ ಬಿತ್ತನೆ ಶೇ 7 ರಷ್ಟು ಹೆಚ್ಚಾಗಿದೆ.  ಧಾನ್ಯಗಳ ಬಿತ್ತನೆ ಈ ಬಾರಿ ಸುಮಾರು ಶೇ 10 ರಷ್ಟು, ಬೇಳೆಕಾಳುಗಳ  ಬಿತ್ತನೆ  ಸುಮಾರು ಶೇ 5 ರಷ್ಟು, ಪ್ರಧಾನ ಧಾನ್ಯಗಳು ಸುಮಾರು ಶೇ 3 ರಷ್ಟು ಹೆಚ್ಚಾಗಿ ಬಿತ್ತನೆಯಾಗಿವೆ. ಇದಕ್ಕಾಗಿ ದೇಶದ ಕೃಷಿಕ ಬಂಧುಗಳನ್ನು ಅಭಿನಂದಿಸುತ್ತೇನೆ. ಅವರ ಪರಿಶ್ರಮಕ್ಕೆ ನಮಿಸುತ್ತೇನೆ.    

ನನ್ನ ಪ್ರಿಯ ದೇಶಬಾಂಧರೆ, ಕೊರೊನಾದ ಈ ಕಾಲಘಟ್ಟದಲ್ಲಿ ದೇಶ ಹಲವಾರು ವಿಷಯಗಳ ವಿರುದ್ಧ ಒಟ್ಟೊಟ್ಟಿಗೇ ಹೋರಾಡುತ್ತಿದೆ. ಆದರೆ ಇದರ ಜೊತೆಗೆ ಹಲವಾರು ಬಾರಿ ಇಷ್ಟೊಂದು ಸುದೀರ್ಘಾವಧಿ ಮನೆಯಲ್ಲೇ ಉಳಿಯುವುದರಿದ ನನ್ನ ಪುಟ್ಟ ಬಾಲಮಿತ್ರರ ಸಮಯ ಹೇಗೆ ಕಳೆಯುತ್ತಿರಬಹುದು ಎಂಬ ಪ್ರಶ್ನೆಯೂ ಮನದಲ್ಲಿ ಮೂಡುತ್ತದೆ. ಇದರಿಂದಾಗಿಯೇ ವಿಶ್ವದಲ್ಲೇ ಒಂದು ವಿಭಿನ್ನ ಪ್ರಯತ್ನವಾಗಿರುವ ಗಾಂಧಿನಗರದಲ್ಲಿರುವ ಮಕ್ಕಳ ವಿಶ್ವ ವಿದ್ಯಾಲಯ,  ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಣ್ಣ, ಲಘು ಮತ್ತು  ಮಧ್ಯಮ ಉದ್ಯೋಗಗಳ ಸಚಿವಾಲಯಗಳೊಂದಿಗೆ ಸೇರಿ ನಾವು ಮಕ್ಕಳಿಗಾಗಿ ಏನು ಮಾಡಬಹುದು, ಇದರ ಬಗ್ಗೆ ಚಿಂತನ ಮಂಥನಗಳು ನಡೆದವು. ಇದು ನನಗೆ ಬಹಳ ಆಹ್ಲಾದಕರ ಮತ್ತು ಲಾಭದಾಯಕವಾಗಿತ್ತು ಏಕೆಂದರೆ ಒಂದು ರೀತಿಯಲ್ಲಿ ಇದು ನನಗೆ ಹೊಸತನ್ನು ಅರಿಯುವ, ಹೊಸತನ್ನು ಕಲಿಯುವಂಥ ಅವಕಾಶವಾಗಿತ್ತು.      

 

ಸ್ನೇಹಿತರೆ, ಆಟಿಕೆಗಳು ಅದರಲ್ಲೂ ವಿಶೇಷವಾಗಿ ಭಾರತೀಯ ಆಟಿಕೆಗಳು ಎಂಬುದು ನಮ್ಮ ಚಿಂತನೆಯ ವಿಷಯವಾಗಿತ್ತು. ಭಾರತೀಯ ಮಕ್ಕಳಿಗೆ ಹೊಸ ಹೊಸ ಆಟಿಕೆಗಳು ಹೇಗೆ ಸಿಗಬೇಕು, ಭಾರತ ಆಟಿಕೆಗಳ ಉತ್ಪಾದನಾ ಕೇಂದ್ರ ಹೇಗೆ ಆಗಬೇಕು ಎಂಬುದರ ಕುರಿತು ವಿಚಾರ ವಿಮರ್ಶೆ ನಡೆಯಿತು. ಅಂದ ಹಾಗೆ ಮನದ ಮಾತನ್ನು ಕೇಳುತ್ತಿರುವ ಎಲ್ಲ ಮಕ್ಕಳ ತಂದೆತಾಯಿಯರಲ್ಲಿ ಕ್ಷಮೆ ಕೇಳುತ್ತೇನೆ ಏಕೆಂದರೆ ಬಹುಶಃ ಈ ಮನದ ಮಾತನ್ನು ಕೇಳಿದ ನಂತರ ಆಟಿಕೆಗಳ ಹೊಸ ಹೊಸ ಬೇಡಿಕೆಗಳನ್ನು ಕೇಳುವಂತಹ  ಹೊಸತೊಂದು ಕೆಲಸ ಅವರ ಮನಸ್ಸಲ್ಲಿ ಮೂಡಬಹುದು.

ಸ್ನೇಹಿತರೆ, ಆಟಿಕೆಗಳು ಚಟುವಟಿಕೆಯನ್ನು ವೃದ್ಧಿಸುವಂತಹವಾಗಿರುವುದರ ಜೊತೆಗೆ ನಮ್ಮ ಆಕಾಂಕ್ಷೆಗಳಿಗೂ ರೆಕ್ಕೆ ಮೂಡಿಸುತ್ತವೆ. ಆಟಿಕೆಗಳು ಕೇವಲ ಮನಸ್ಸನ್ನು ಉಲ್ಲಸಿತಗೊಳಿಸುವುದಲ್ಲದೆ ಮನಸ್ಸುಗಳನ್ನು ರೂಪಿಸುತ್ತವೆ ಮತ್ತು ಗುರಿಗಳನ್ನು ಗಟ್ಟಿಗೊಳಿಸುತ್ತವೆ. ಆಟಿಕೆಗಳ ಕುರಿತು ಗುರುದೇವ ರವೀಂದ್ರನಾಥ ಟ್ಯಾಗೋರರು ಯಾವ ಆಟಿಕೆ ಅಪೂರ್ಣವಾದುದಾಗಿರುತ್ತದೆ ಅದೇ ಅತ್ಯುತ್ತಮವಾದುದಾಗಿರುತ್ತದೆ, ಅದು ಎಂಥ ಆಟಿಕೆಯಾಗಿರಬೇಕೆಂದರೆ ಅದು ಅಪೂರ್ಣವಾಗಿರಬೇಕು ಮತ್ತು ಮಕ್ಕಳೆಲ್ಲ ಸೇರಿ ಅದನ್ನು ಪೂರ್ತಿಗೊಳಿಸಬೇಕು ಎಂದು ಹೇಳಿರುವುದನ್ನು ನಾನು ಎಲ್ಲೋ ಓದಿದ್ದೆ. ಗುರುದೇವ ಟ್ಯಾಗೋರರು ತಾವು ಚಿಕ್ಕವರಾಗಿದ್ದಾಗ ತಮ್ಮದೇ ಕಲ್ಪನೆಯಿಂದ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ, ತಮ್ಮ ಸ್ನೇಹಿತರೊಂದಿಗೆ ಸೇರಿ ತಮ್ಮ ಆಟಿಕೆಗಳನ್ನು ಮಾಡುತ್ತಿದ್ದರು ಮತ್ತು  ಆಟವನ್ನು ಆಡುತ್ತಿದ್ದರು. ಆದರೆ ಒಂದು ದಿನ ಬಾಲ್ಯದ ಆ ಮೋಜಿನ ಕ್ಷಣಗಳಲ್ಲಿ ಹಿರಿಯರ ಹಸ್ತಕ್ಷೇಪವಾಯಿತು. ಅವರ ಒಬ್ಬ ಸ್ನೇಹಿತ, ಒಂದು ದೊಡ್ಡ, ಸುಂದರ ವಿದೇಶದ ಆಟಿಕೆಯನ್ನು ತೆಗೆದುಕೊಂಡು ಬಂದ. ಆಟಿಕೆಯನ್ನು ತೋರಿಸುತ್ತಾ ಗರ್ವದಿಂದ ಬೀಗುತ್ತಿರುವಾಗ ಆಟಕ್ಕಿಂತ ಹೆಚ್ಚು ಆಟಿಕೆಯ ಮೇಲೆ  ಎಲ್ಲ ಸ್ನೇಹಿತರ ಗಮನ ಕೇಂದ್ರೀಕೃತವಾಗಿತ್ತು. ಎಲ್ಲರ ಆಕರ್ಷಣೆಯ ಕೇಂದ್ರ ಆಟದ ಬದಲಿಗೆ ಆಟಿಕೆಯಾಗಿತ್ತು. ಯಾವ ಮಗು ನಿನ್ನೆವರೆಗೆ ಎಲ್ಲ ಮಕ್ಕಳೊಂದಿಗೆ ಆಡುತ್ತಿದ್ದನೋ, ಎಲ್ಲರೊಂದಿಗೆ ಇರುತ್ತಿದ್ದನೋ, ಬೆರೆತುಹೋಗುತ್ತಿದ್ದನೋ, ಆಟದಲ್ಲಿ ಮುಳುಗಿಹೋಗುತ್ತಿದ್ದನೋ, ಈಗ ಆತ ದೂರ ಉಳಿಯಲಾರಂಭಿಸಿದ. ಒಂದು ರೀತಿಯಲ್ಲಿ ಬೇರೆ ಮಕ್ಕಳಿಗಿಂತ ಭಿನ್ನ ಎನ್ನುವ ಭಾವ ಅವನ ಮನದಲ್ಲಿ ಬೇರೂರಿತು. ದುಬಾರಿ ಆಟಿಕೆಯಲ್ಲಿ ಮಾಡಲು ಏನೂ ಇರಲಿಲ್ಲ, ಕಲಿಯಲೂ ಏನೂ ಇರಲಿಲ್ಲ. ಅಂದರೆ, ಒಂದು ಆಕರ್ಷಕ ಆಟಿಕೆ ಪ್ರತಿಭಾವಂತ ಮಗುವೊಂದನ್ನು ಎಲ್ಲೋ ತುಳಿದುಹಾಕಿತು. ಹುದುಗಿಸಿಟ್ಟಿತು, ಬಡವಾಗಿಸಿತು. ಈ ಆಟಿಕೆ ಹಣದ, ಸಂಪತ್ತಿನ, ದೊಡ್ಡಸ್ತಿಕೆಯ ಪ್ರಸರ್ಶನ ಮಾಡಿತು ಆದರೆ, ಆ ಮಗುವಿನ ಸೃಜನಶೀಲ ಮನೋಭಾವ ಬೆಳೆಯುವುದನ್ನು ಮತ್ತು ವಿಕಸನಗೊಳ್ಳುವುದನ್ನು ನಿರ್ಬಂಧಿಸಿತು. ಆಟಿಕೆಯೇನೋ ಬಂತು ಆದರೆ ಆಟವೇ ಮುಗಿದುಹೋಯಿತು, ಮಗುವಿನ ಬೆಳವಣಿಗೆಯೂ ಕುಂಠಿತವಾಯಿತು. ಆದ್ದರಿಂದ ಗುರುದೇವ ಹೇಳುತ್ತಿದ್ದರು ಆಟಿಕೆ ಹೇಗಿರಬೇಕೆಂದರೆ ಮಕ್ಕಳ ಬಾಲ್ಯವನ್ನು ಹೊರಹೊಮ್ಮಿಸುವಂತಿರಬೇಕು. ಅವರ ಸೃಜನಶೀಲತೆಯನ್ನು ಬಿಂಬಿಸುವಂತಿರಬೇಕು. ಮಕ್ಕಳ ಬೇರೆ ಬೇರೆ ಆಯಾಮಗಳ ಮೇಲೆ ಆಟಿಕೆಗಳ ಪ್ರಭಾವದ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹಳಷ್ಟು ಗಮನಹರಿಸಲಾಗಿದೆ. ಆಡುತ್ತಾ ಕಲಿಯುವುದು, ಆಟಿಕೆಗಳನ್ನು ತಯಾರಿಸುವುದನ್ನು ಕಲಿಯುವುದು, ಟಿಕೆಗಳನ್ನು ಸಿದ್ಧಪಡಿಸುವ ಸ್ಥಳಕ್ಕೆ ಭೇಟಿ ನೀಡುವುದು, ಇವೆಲ್ಲವನ್ನು ಕಲಿಕೆಯ ಭಾಗವನ್ನಾಗಿಸಿದೆ.

ಸ್ನೇಹಿತರೆ, ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಸಮೃದ್ಧ ಪರಂಪರೆಯಿದೆ. ಅತ್ಯುತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾದ ಬಹಳಷ್ಟು ಪ್ರತಿಭಾವಂತ ಕುಶಲಕರ್ಮಿಗಳಿದ್ದಾರೆ. ಭಾರತದಲ್ಲಿ ಕೆಲವೊಂದು ಕ್ಷೇತ್ರಗಳು ಟಾಯ್ ಕ್ಲಸ್ಟರ್ ಅಂದರೆ ಆಟಿಕೆಗಳ ಕೇಂದ್ರಗಳಾಗಿಯೂ ವಿಕಸಿತಗೊಳ್ಳುತ್ತಿವೆ. ಉದಾಹರಣೆಗೆ ಕರ್ನಾಟಕದ ರಾಮನಗರದ ಚನ್ನಪಟ್ಟಣ, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೊಂಡಪಲ್ಲಿ, ತಮಿಳುನಾಡಿನ ತಂಜಾವೂರ್, ಅಸ್ಸಾಂನ ದುಭರಿ, ಉತ್ತರ ಪ್ರದೇಶದ ವಾರಣಾಸಿ, ಇಂಥ ಅದೆಷ್ಟೋ ಸ್ಥಳಗಳಿವೆ, ಬಹಳಷ್ಟು ಹೆಸರುಗಳನ್ನು ಪಟ್ಟಿ ಮಾಡಬಹಯದಾಗಿದೆ. ಜಾಗತಿಕ ಆಟಿಕೆಗಳ ಉದ್ಯಮ ರೂ 7 ಲಕ್ಷ ಕೋಟಿ ಗಿಂತ ಅಧಿಕ ವ್ಯವಹಾರ ಹೊಂದಿದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು.  ರೂ 7 ಲಕ್ಷ ಕೋಟಿ ಗಿಂತ ಹೆಚ್ಚಿನ ವ್ಯವಹಾರದ ಇಷ್ಟು ದೊಡ್ಡ ಉದ್ಯಮವಾದರೂ ಭಾರತದ ಪಾಲುದಾರಿಕೆ ಇದರಲ್ಲಿ ಬಹಳ ಕಡಿಮೆಯಿದೆ. ಯಾವ ರಾಷ್ಟ್ರದ ಬಳಿ ಇಷ್ಟು ಅಗಾಧವಾದ ಬಳುವಳಿ ಇದೆ, ಪರಂಪರೆಯಿದೆ, ವಿವಿಧತೆಯಿದೆ, ಯುವಜನತೆಯಿದೆ, ಆಟಿಕೆಗಳ ಮಾರುಕಟ್ಟೆಯಲ್ಲಿ ಅದರ ಪಾಲುದಾರಿಕೆ ಇಷ್ಟು ಕಡಿಮೆಯಿದೆ ಎಂದರೆ ನಮಗೆ ಖುಷಿಯೆನಿಸುತ್ತದೆಯೇ? ಇಲ್ಲ, ಇದನ್ನು ಕೇಳಿದ ಮೇಲೆ ನಿಮಗೂ ಖುಷಿಯೆನಿಸುವುದಿಲ್ಲ. ನೋಡಿ ಸ್ನೇಹಿತರೆ, ಆಟಿಕೆಗಳ ಉದ್ಯಮ ಬಹಳ ವ್ಯಾಪಕವಾದುದು. ಗೃಹ ಉದ್ಯೋಗವಾಗಲಿ, ಸಣ್ಣ ಪುಟ್ಟ ಅಥವಾ ಲಘು ಉದ್ಯೋಗಗಳಾಗಲಿ, ಎಂ ಎಸ್ ಎಂ ಇ ಗಳಾಗಲಿ, ಇದರ ಜೊತೆ ಜೊತೆಗೆ ದೊಡ್ಡ ಉದ್ಯೋಗಗಳು, ಖಾಸಗಿ ಉದ್ಯಮಗಳು ಈ ವಲಯದ ಪರೀಧಿಗೆ ಬರುತ್ತವೆ. ಇದನ್ನು ಮುಂದುವರಿಸಲು ದೇಶ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶ್ರೀಯುತ ಸಿ ವಿ ರಾಜು ಅವರಿದ್ದಾರೆ. ಅವರ ಗ್ರಾಮದ ಎತಿ–ಕೊಪ್ಪಕಾ ಆಟಿಕೆಗಳು ಒಂದು ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದವು. ಈ ಆಟಿಕೆಗಳನ್ನು ಕಟ್ಟಿಗೆಯಿಂದ ತಯಾರಿಸಿದ್ದು ಅದರ ವಿಶೇಷವಾಗಿತ್ತು. ಈ ಆಟಿಕೆಗಳಲ್ಲಿ ಎಲ್ಲಿಯೂ ಯಾವುದೇ ರೀತಿಯ ಕೋನಗಳು ನೋಡಲು ಸಿಗುತ್ತಿರಲಿಲ್ಲ ಎಂಬುದು ಮತ್ತೊಂದು ವಿಶೇಷತೆಯಾಗಿತ್ತು. ಈ ಆಟಿಕೆಗಳು ಎಲ್ಲ ಕೋನಗಳಿಂದಲೂ ದುಂಡಗೆ ಇರುತ್ತಿದ್ದವು. ಆದ್ದರಿಂದ ಮಕ್ಕಳಿಗೆ ಪೆಟ್ಟಾಗುವ ಸಮಸ್ಯೆ ಇರುತ್ತಿರಲಿಲ್ಲ. ಸಿ ವಿ ರಾಜು ಅವರು ಎತಿ–ಕೊಪ್ಪಿಕಾ ಆಟಿಕೆಗಳಿಗಾಗಿ ಈಗ ತಮ್ಮ ಗ್ರಾಮದ ಕುಶಲಕರ್ಮಿಗಳ ಜೊತೆ ಒಗ್ಗೂಡಿ ಒಂದು ರೀತಿಯ ಹೊಸ ಆಂದೋಲನವನ್ನು ಆರಂಭಿಸಿದ್ದಾರೆ.  ಅತ್ಯುತ್ತಮ ಗುಣಮಟ್ಟದ ಎತಿ–ಕೊಪ್ಪಿಕಾ ಆಟಿಕೆಗಳನ್ನು ತಯಾರಿಸಿ ಸ್ಥಳೀಯ ಆಟಿಕೆಗಳ ಕುಂದಿಹೋದ ಗೌರವವನ್ನು ಸಿವಿ ರಾಜು ಅವರು ಮತ್ತೆ ತಂದುಕೊಟ್ಟಿದ್ದಾರೆ. ಆಟಿಕೆಗಳ ಬಗ್ಗೆ ನಾವು ಎರಡು ವಿಷಯಗಳನ್ನು ಯೋಚಿಸಬಹುದು. ನಿಮ್ಮ ಗೌರವಪೂರ್ಣ ಇತಿಹಾಸವನ್ನು ನಿಮ್ಮ ಜೀವನದಲ್ಲಿ ಮತ್ತೆ ಅಳವಡಿಸಿಕೊಳ್ಳಬಹುದು ಹಾಗೂ ನಿಮ್ಮ ಸ್ವರ್ಣಮಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ನಾನು ನನ್ನ ಸ್ಟಾರ್ಟ್ ಅಪ್ ಮಿತ್ರರಿಗೆ, ನಮ್ಮ ಹೊಸ ಉದ್ಯಮಿಗಳಿಗೆ – Team up for toys… ಎಂದು ಹೇಳುತ್ತೇನೆ. ಬನ್ನಿ ಒಗ್ಗೂಡಿ ಆಟಿಕೆಗಳನ್ನು ತಯಾರಿಸೋಣ. ಈಗ ಎಲ್ಲರಿಗೂ ಸ್ಥಳೀಯ ಆಟಿಕೆಗಳಿಗಾಗಿ ಧ್ವನಿ ಎತ್ತುವ ಸಮಯ ಬಂದಿದೆ. ಬನ್ನಿ, ನಾವು ನಮ್ಮ ಯುವಜನತೆಗಾಗಿ, ಹೊಸತನದ, ಉತ್ತಮ ಗುಣಮಟ್ಟದ, ಆಟಿಕೆಗಳನ್ನು ತಯಾರಿಸೋಣ. ಆಟಿಕೆಗಳು ಬಾಲ್ಯ ಅರಳಿಸುವಂತಹವು ಮತ್ತು ನಲಿಸುವಂತಹವಾಗಿರಬೇಕು. ಪರಿಸರಕ್ಕೂ ಅನುಕೂಲಕರವಾದಂತಹ ಆಟಿಕೆಗಳನ್ನು ನಾವು ತಯಾರಿಸೋಣ.                    

ಸ್ನೇಹಿತರೆ, ಇದೇ ರೀತಿ, ಈಗ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಈ ಯುಗದಲ್ಲಿ ಕಂಪ್ಯೂಟರ್ ಗೇಮ್ಸ್ ಗಳ ಟ್ರೆಂಡ್ ಕೂಡ ಇದೆ. ಈ ಆಟಗಳನ್ನು ಮಕ್ಕಳೂ ಆಡುತ್ತಾರೆ. ಆದರೆ ಇದರಲ್ಲಿ ಎಷ್ಟು ಆಟಗಳಿರುತ್ತವೆಯೋ ಅವುಗಳ ಥೀಮ್ ಗಳು ಕೂಡಾ ಹೆಚ್ಚಾಗಿ ವಿದೇಶಗಳದ್ದೇ ಆಗಿರುತ್ತವೆ. ನಮ್ಮ ದೇಶದಲ್ಲಿ ಎಷ್ಟೊಂದು ಐಡಿಯಾಗಳಿವೆ, ಎಷ್ಟೊಂದು ಕಾನ್ಸೆಪ್ಟ್ ಗಳಿವೆ ಎಂದರೆ ನಮ್ಮ ಇತಿಹಾಸ ಬಹಳ ಸಮೃದ್ಧವಾಗಿದೆ. ನಾವು ಅವುಗಳ ಮೇಲೆ ಗೇಮ್ಸ್ ಸಿದ್ಧಪಡಿಸಬಹುದೇ? ನೀವೂ ಭಾರತದಲ್ಲೂ ಗೇಮ್ಸ್ ಸಿದ್ಧಪಡಿಸಿ, ಎಂದು ನಾನು ದೇಶದ ಯುವಪ್ರತಿಭೆಗೆ ಹೇಳುತ್ತೇನೆ. Let the games begin ಎಂದೂ ಹೇಳಲಾಗುತ್ತದೆ. ಹಾಗಾದರೆ ಬನ್ನಿ ಆಟ ಆರಂಭಿಸೋಣ.     

ಸ್ನೇಹಿತರೆ, ಸ್ವಾವಲಂಬಿ ಭಾರತ ಆಂದೋಲನದಲ್ಲಿ ವರ್ಚುವಲ್ ಗೇಮ್ಸ್ ಆಗಲಿ, ಆಟಿಕೆಗಳ ಕ್ಷೇತ್ರವಾಗಲಿ, ಎಲ್ಲವೂ ಬಹಳ ಮಹತ್ವಪೂರ್ಣ ಪಾತ್ರವನ್ನು ವಹಿಸಬೇಕಿದೆ ಮತ್ತು ಇದೊಂದು ಅವಕಾಶವೂ ಆಗಿದೆ. ಇಂದಿನಿಂದ 100 ವರ್ಷ ಹಿಂದೆ ಅಸಹಕಾರ ಆಂದೋಲನ ಆರಂಭವಾಗಿತ್ತು. ಆಗ ಗಾಂಧೀಜಿ ಬರೆದಿದ್ದರು – “ಅಸಹಕಾರ ಆಂದೋಲನ ದೇಶದ ಜನತೆಗೆ ಸ್ವಾಭಿಮಾನ ಮತ್ತು ತಮ್ಮ ಶಕ್ತಿಯ ಅರಿವು ಮೂಡಿಸುವ ಒಂದು ಪ್ರಯತ್ನ” ಎಂದು.

ಇಂದು ನಾವು ದೇಶವನ್ನು ಸ್ವಾವಲಂಬಿಯಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ, ಅಂದರೆ ಸಂಪೂರ್ಣ ಸ್ವಾಭಿಮಾನದೊಂದಿಗೆ ಮುಂದೆ ಸಾಗಬೇಕಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿ ಮಾಡಬೇಕಿದೆ. ಅಸಹಕಾರ ಆಂದೋಲನದ ರೂಪದಲ್ಲಿ ಯಾವ ಬೀಜವನ್ನು ಬಿತ್ತಲಾಗಿತ್ತೊ ಅದನ್ನು ಈಗ ಸ್ವಾವಲಂಬಿ ಭಾರತದ ವಟವೃಕ್ಷದಂತೆ ಪರಿವರ್ತನೆಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.    

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತೀಯರ ಅನ್ವೇಷಣೆ ಮತ್ತು ಪರಿಹಾರ ನೀಡುವ ಸಾಮರ್ಥ್ಯದ ಬಲವನ್ನು ಪ್ರತಿಯೊಬ್ಬರೂ ಮಾನ್ಯ ಮಾಡುತ್ತಾರೆ. ಮತ್ತು ಎಲ್ಲಿ ಸಮರ್ಪಣಾ ಭಾವವಿದೆಯೋ, ಸಂವೇದನೆ ಇದೆಯೋ ಅಲ್ಲಿ ಈ ಶಕ್ತಿ ಅಪರಿಮಿತವಾಗುತ್ತದೆ. ಈ ತಿಂಗಳ ಆರಂಭದಲ್ಲಿ ದೇಶದ ಯುವಜನತೆಯ ಎದುರು ಆ್ಯಪ್ ಆವಿಷ್ಕಾರದ ಸವಾಲೊಂದನ್ನು ಇಡಲಾಗಿತ್ತು. ಈ ಸ್ವಾವಲಂಬಿ ಭಾರತ ಆ್ಯಪ್ ಆವಿಷ್ಕಾರದ ಸವಾಲಿನಲ್ಲಿ ನಮ್ಮ ಯುವಜನರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಸುಮಾರು 7 ಸಾವಿರ entry ಗಳು  ಬಂದಿದ್ದವು. ಅವುಗಳಲ್ಲಿ, ಮೂರನೇ ಎರಡರಷ್ಟು ಆ್ಯಪ್ ಗಳು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳ ಯುವಕರು ಅಭಿವೃದ್ಧಿಪಡಿಸಿರುವಂಥವುಗಳಾಗಿವೆ. ಇದು ಸ್ವಾವಲಂಬಿ ಭಾರತ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಶುಭ ಸಂಕೇತವಾಗಿದೆ. ಸ್ವಾವಲಂಬಿ  ಭಾರತ ಆ್ಯಪ್ ಆವಿಷ್ಕಾರ ಸವಾಲಿನ ಫಲಿತಾಂಶವನ್ನು ನೋಡಿದರೆ ತಾವು ಖಂಡಿತವಾಗಿ ಪ್ರಭಾವಿತರಾಗುತ್ತೀರಿ. ಸಾಕಷ್ಟು ವಿಚಾರ ವಿನಿಮಯಗಳ ನಂತರ ಬೇರೆ ಬೇರೆ ವಿಭಾಗಗಳಲ್ಲಿ ಸರಿಸುಮಾರು 2 ಡಜನ್ ಆ್ಯಪ್ ಗಳಿಗೆ ಪ್ರಶಸ್ತಿಯನ್ನೂ ನೀಡಲಾಗಿದೆ. ತಾವೆಲ್ಲರೂ ಈ ಆ್ಯಪ್ ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಬಳಕೆ ಮಾಡಿಕೊಳ್ಳಿ. ಇದರಿಂದ ತಮಗೂ ಇಂಥದ್ದೇನಾದರೂ ಮಾಡಲು ಪ್ರೇರಣೆಯಾಗಬಹುದು. ಇವುಗಳಲ್ಲಿ ಕುಟುಕೀ ಎನ್ನುವ ಮಕ್ಕಳ ಕಲಿಕಾ ಆ್ಯಪ್ ಒಂದಿದೆ. ಚಿಕ್ಕಮಕ್ಕಳಿಗೆ ಉತ್ತಮ ಸಂವಾದಿಯಾಗಿರುವ ಈ ಆ್ಯಪ್ ನಲ್ಲಿ ಹಾಡುಗಳನ್ನು, ಕಥೆಗಳನ್ನು ಕೇಳಿಸಲಾಗುತ್ತದೆ. ಈ ಮೂಲಕವೇ ಮಕ್ಕಳು ಸಾಕಷ್ಟು ಗಣಿತ ಹಾಗೂ ವಿಜ್ಞಾನದ ಹಲವಾರು ಅಂಶಗಳನ್ನು ಕಲಿತುಕೊಳ್ಳುತ್ತಾರೆ.  ಇದರಲ್ಲಿ ಚಟುವಟಿಕೆಗಳೂ ಇವೆ, ಆಟವೂ ಇದೆ. ಇದೇ ರೀತಿಯಲ್ಲಿ ಒಂದು ಮೈಕ್ರೊ ಬ್ಲಾಗಿಂಗ್ ವೇದಿಕೆಯಾಗಿರುವ ಆ್ಯಪ್ ಕೂಡ ಇದೆ. ಇದರ ಹೆಸರು ಕೆಒಒ ಅಂದರೆ ಕೂ. ಇದರಲ್ಲಿ ನಾವು ನಮ್ಮ ಮಾತೃಭಾಷೆಯಲ್ಲಿ ಬರಹ, ವಿಡಿಯೋ ಹಾಗೂ ಧ್ವನಿಯ ಮೂಲಕ ನಮ್ಮ ಮಾತುಗಳನ್ನು ದಾಖಲಿಸಬಹುದು, ಸಂವಾದ ನಡೆಸಬಹುದು. ಇದೇ ರೀತಿ, ಚಿಂಗಾರಿ ಎನ್ನುವ ಆ್ಯಪ್ ಸಹ ಯುವಜನತೆಯಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. “ಆಸ್ಕ್ ಸರ್ಕಾರ್’ ಎನ್ನುವ ಆ್ಯಪ್ ಇದೆ. ಇದರಲ್ಲಿ ಚಾಟ್ ಬೋಟ್ ಮೂಲಕ 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage