Says India is becoming a leading attractions for Foreign Investment
India received over 20 Billion Dollars of Foreign Investment this year: PM
India offers affordability of geography, reliability and political stability: PM
India offers transparent and predictable tax regime; encourages & supports honest tax payers: PM
India being made one of the lowest tax destinations in the World with further incentive for new manufacturing units: PM
There have been far reaching reforms in recent times which have made the business easier and red-tapism lesser: PM
India is full of opportunities both public & private sector: PM

ಅಮೆರಿಕಾ-ಭಾರತ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆಯ (ಯುಎಸ್‌ಐಎಸ್‌ಪಿಎಫ್) ಅಮೆರಿಕಾ-ಭಾರತ 2020 ಶೃಂಗಸಭೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಭಾಷಣ ಮಾಡಿದರು.

ಯುಎಸ್‌ಐಎಸ್‌ಪಿಎಫ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು ಇದು ಭಾರತ ಮತ್ತು ಅಮೆರಿಕಾ ನಡುವಿನ ಪಾಲುದಾರಿಕೆಗಾಗಿ ಕೆಲಸ ಮಾಡುತ್ತಿದೆ.

ಆಗಸ್ಟ್ 31 ರಂದು ಪ್ರಾರಂಭವಾಗಿರುವ 5 ದಿನಗಳ ಶೃಂಗಸಭೆಯ ಈ ವರ್ಷದ ವಿಷಯ “ಅಮೆರಿಕಾ-ಭಾರತದ ಹೊಸ ಸವಾಲುಗಳಿಗೆ ಪರಿಹಾರಗಳು”.

ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ನರೇಂದ್ರ ಮೋದಿಯವರು, ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಎಲ್ಲರ ಮೇಲೆ ಪರಿಣಾಮ ಬೀರಿದೆ ಮತ್ತು ಇದು ನಮ್ಮ ಸ್ಥಿತಿಸ್ಥಾಪಕತ್ವ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಆರ್ಥಿಕ ವ್ಯವಸ್ಥೆಗಳನ್ನು ಪರೀಕ್ಷಿಗೊಳಪಡಿಸಿದೆ ಎಂದು ಹೇಳಿದರು.

ಪ್ರಸ್ತುತ ಪರಿಸ್ಥಿತಿಗೆ ಹೊಸ ಮನೋಭಾವ ಬೇಕಾಗಿದೆ. ಅಭಿವೃದ್ಧಿಯ ವಿಧಾನವು ಮಾನವ ಕೇಂದ್ರಿತವಾಗಿರುವ, ಎಲ್ಲರ ನಡುವೆ ಸಹಕಾರದ ಮನೋಭಾವ ಬೇಕಾಗಿದೆ ಎಂದು ಅವರು ಹೇಳಿದರು.

ಮುಂದಿನ ಮಾರ್ಗೋಪಾಯಗಳನ್ನು ಕುರಿತು ಮಾತನಾಡಿದ ಪ್ರಧಾನಿ, ದೇಶವು ಸಾಮರ್ಥ್ಯಗಳನ್ನು ಹೆಚ್ಚಿಸುವ, ಬಡವರನ್ನು ಸುರಕ್ಷಿತಗೊಳಿಸುವ ಮತ್ತು ನಾಗರಿಕರ ಭವಿಷ್ಯವನ್ನು ಭದ್ರಪಡಿಸುವ ಬಗ್ಗೆ ಗಮನ ಹರಿಸುತ್ತಿದೆ ಎಂದರು.

ದೇಶದಲ್ಲಿ ಕೋವಿಡ್ ವಿರುದ್ಧ ಹೋರಾಡಲು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಇಂತಹ ಎಲ್ಲಾ ಆರಂಭಿಕ ಕ್ರಮಗಳು 130 ಕೋಟಿ ಜನಸಂಖ್ಯೆ ಮತ್ತು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ದೇಶವು ವಿಶ್ವದಲ್ಲಿಯೇ ಪ್ರತಿ ಮಿಲಿಯನ್‌ಗೆ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದೆ ಎಂದರು.

ಭಾರತದ ವ್ಯಾಪಾರ ಸಮುದಾಯ, ವಿಶೇಷವಾಗಿ ಸಣ್ಣ ವ್ಯಾಪಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಈ ಉದ್ಯಮವು ಶೂನ್ಯದಿಂದ ಪ್ರಾರಂಭಿಸಿ, ನಮ್ಮನ್ನು ವಿಶ್ವದ ಎರಡನೇ ಅತಿದೊಡ್ಡ ಪಿಪಿಇ ಕಿಟ್‌ಗಳ ತಯಾರಕರನ್ನಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.

ವಿವಿಧ ಸುಧಾರಣೆಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, 130 ಕೋಟಿ ಭಾರತೀಯರ ಆಕಾಂಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಪರಿಣಾಮ ಬೀರಲು ಸಾಂಕ್ರಾಮಿಕ ರೋಗವು ವಿಫಲವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸುಧಾರಣೆಗಳ ಪರ್ವ ಆರಂಭವಾಗಿದ್ದು, ಇದು ವ್ಯವಹಾರವನ್ನು ಸುಲಭಗೊಳಿಸಿದೆ ಮತ್ತು ಅಧಿಕಾರಶಾಹಿಯ ಹಸ್ತಕ್ಷೇಪವನ್ನು ಕಡಿಮೆ ಮಾಡಿದೆ ಎಂದು ಹೇಳಿದರು.

ವಿಶ್ವದ ಅತಿದೊಡ್ಡ ವಸತಿ ಕಾರ್ಯಕ್ರಮದ ಕೆಲಸಗಳು ನಡೆಯುತ್ತಿವೆ ಮತ್ತು ನವೀಕರಿಸಬಹುದಾದ ಇಂಧನ ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತಿದೆ. ಎಂದು ಪ್ರಧಾನಿ ಹೇಳಿದರು.

ರೈಲು, ರಸ್ತೆ ಮತ್ತು ವಾಯು ಸಂಪರ್ಕದ ಉತ್ತೇಜನದ ಬಗ್ಗೆಯೂ ಪ್ರಧಾನಿ ಉಲ್ಲೇಖಿಸಿದರು.

ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ನಿರ್ಮಿಸಲು ಭಾರತವು ವಿಶಿಷ್ಟ ಡಿಜಿಟಲ್ ಮಾದರಿಯನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು.

ಲಕ್ಷಾಂತರ ಜನರಿಗೆ ಬ್ಯಾಂಕಿಂಗ್, ಸಾಲ, ಡಿಜಿಟಲ್ ಪಾವತಿ ಮತ್ತು ವಿಮೆಯನ್ನು ಒದಗಿಸಲು ನಾವು ಅತ್ಯುತ್ತಮ ಹಣಕಾಸು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಈ ಎಲ್ಲಾ ಉಪಕ್ರಮಗಳಲ್ಲಿ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಜಾಗತಿಕವಾದ ಅತ್ಯುತ್ತಮ ಅಭ್ಯಾಸಗಳನ್ನು ಬಳಸಲಾಗುತ್ತಿದೆ ಎಂದರು.

ಜಾಗತಿಕ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರವು ಕೇವಲ ವೆಚ್ಚಾಧಾರಿತವಾಗಿಬಾರದು, ಬದಲಿಗೆ ನಂಬಿಕೆಯನ್ನು ಆಧರಿಸಿರಬೇಕು ಎಂದು ಸಾಂಕ್ರಾಮಿಕವು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಶ್ರೀ ಮೋದಿ ಹೇಳಿದರು. ಸಂಸ್ಥೆಗಳು ಈಗ ಭೂಮಿಯ ಕೈಗೆಟುಕುವಿಕೆಯ ಜೊತೆಗೆ, ವಿಶ್ವಾಸಾರ್ಹತೆ ಮತ್ತು ನೀತಿ ಸ್ಥಿರತೆಯನ್ನು ಸಹ ನೋಡುತ್ತಿವೆ. ಈ ಎಲ್ಲ ಗುಣಗಳನ್ನು ಭಾರತ ಹೊಂದಿದೆ. ಈ ಕಾರಣದಿಂದಾಗಿಯೇ, ಭಾರತವು ವಿದೇಶಿ ಹೂಡಿಕೆಗೆ ಉತ್ತಮ ತಾಣಗಳಲ್ಲಿ ಒಂದಾಗಿದೆ ಎಂದರು.

ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಅಥವಾ ಕೊಲ್ಲಿ ರಾಷ್ಟ್ರಗಳ ಸಮೇತ, ಜಗತ್ತು ನಮ್ಮ ಮೇಲೆ ವಿಶ್ವಾಸವಿರಿಸಿದೆ ಎಂದು ಅವರು ಹೇಳಿದರು. ಈ ವರ್ಷ ನಾವು 20 ಬಿಲಿಯನ್ ಡಾಲರ್‌ಗಳಷ್ಟು ವಿದೇಶಿ ಹೂಡಿಕೆಯನ್ನು ಪಡೆದಿದ್ದೇವೆ. ಗೂಗಲ್, ಅಮೆಜಾನ್ ಮತ್ತು ಮುಬಡಾಲಾ ಇನ್ವೆಸ್ಟ್‌ಮೆಂಟ್ಸ್ ಭಾರತಕ್ಕಾಗಿ ದೀರ್ಘಾವಧಿಯ ಯೋಜನೆಗಳನ್ನು ಪ್ರಕಟಿಸಿವೆ ಎಂದರು.

ಪಾರದರ್ಶಕ ಮತ್ತು ನಿರೀಕ್ಷಿತ ಭಾರತವು ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಪ್ರೋತ್ಸಾಹಿಸುತ್ತದೆ ಮತ್ತು ಬೆಂಬಲಿಸುತ್ತದೆ. ಭಾರತದ ಜಿಎಸ್ಟಿಯು ಏಕೀಕೃತ, ಸಂಪೂರ್ಣ ಶಕ್ತಗೊಂಡ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ ಎಂದು ಪ್ರಧಾನಿ ಹೇಳಿದರು,

ದಿವಾಳಿ ಮತ್ತು ದಿವಾಳಿತನ ಸಂಹಿತೆಯನ್ನು ಉಲ್ಲೇಖಿಸಿದ ಪ್ರಧಾನಿಯವರು, ಅದು ಇಡೀ ಹಣಕಾಸು ವ್ಯವಸ್ಥೆಗೆ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದರು. ಉದ್ಯೋಗದಾತರಿಗೆ ಅನುಸರಣೆ ಹೊರೆಯನ್ನು ಕಡಿಮೆ ಮಾಡುವ ಸಮಗ್ರ ಕಾರ್ಮಿಕ ಸುಧಾರಣೆಗಳ ಬಗ್ಗೆ ಮತ್ತು ಈ ಸುಧಾರಣೆಗಳು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ರಕ್ಷಣೆಯನ್ನು ಹೇಗೆ ಒದಗಿಸುತ್ತವೆ ಎಂಬ ಬಗ್ಗೆ ವಿವರಿಸಿದರು.

ಪ್ರಗತಿಯಲ್ಲಿ ಹೂಡಿಕೆಯ ಮಹತ್ವ ಮತ್ತು ಬೇಡಿಕೆ ಮತ್ತು ಪೂರೈಕೆ ಎರಡನ್ನೂ ಭಾರತ ಹೇಗೆ ನಿಭಾಯಿಸುತ್ತಿದೆ ಎಂಬ ಬಗ್ಗೆ ಪ್ರಧಾನಿ ವಿವರಿಸಿದರು.

ಹೊಸ ಉತ್ಪಾದನಾ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಭಾರತವನ್ನು ವಿಶ್ವದ ಅತ್ಯಂತ ಕಡಿಮೆ ತೆರಿಗೆ ತಾಣಗಳಲ್ಲಿ ಒಂದನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇ-ಪ್ಲಾಟ್‌ಫಾರ್ಮ್ ಆಧಾರಿತ ‘ಮುಖಾಮುಖಿ ರಹಿತ ಮೌಲ್ಯಮಾಪನ’ದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ತೆರಿಗೆ ಪಾವತಿದಾರರ ಸನ್ನದಿನ ಜೊತೆಗೆ ನಾಗರಿಕರಿಗೆ ಇದು ಹೆಚ್ಚು ನೆರವಾಗುತ್ತದೆ. ಬಾಂಡ್ ಮಾರುಕಟ್ಟೆಗಳ ನಿಯಂತ್ರಕ ಸುಧಾರಣೆಗಳು ಹೂಡಿಕೆದಾರರಿಗೆ ಪ್ರವೇಶದ ಸುಲಭತೆಯನ್ನು ಖಚಿತಪಡಿಸುತ್ತವೆ ಎಂದು ಹೇಳಿದರು.

2019 ರಲ್ಲಿ ಜಾಗತಿಕವಾಗಿ ವಿದೇಶಿ ನೇರ ಹೂಡಿಕೆ ಒಳಹರಿವು ಶೇಕಡಾ 1 ರಷ್ಟು ಕುಸಿದಾಗ ಭಾರತಕ್ಕೆ ಎಫ್‌ಡಿಐ ಶೇ 20 ರಷ್ಟು ಏರಿಕೆಯಾಗಿದೆ ಮತ್ತು ಇದು ನಮ್ಮ ಎಫ್‌ಡಿಐ ವ್ಯವಸ್ಥೆಯ ಯಶಸ್ಸಸ್ಸಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಈ ಎಲ್ಲಾ ಕ್ರಮಗಳು ಸಮೃದ್ಧ ಭವಿಷ್ಯವನ್ನು ಖಚಿತಪಡಿಸುತ್ತವೆ. ಇವುಗಳು ಬಲವಾದ ಜಾಗತಿಕ ಆರ್ಥಿಕತೆಗೂ ಸಹಕಾರಿಯಾಗುತ್ತವೆ ಎಂದು ಶ್ರೀ ಮೋದಿ ಹೇಳಿದರು.

ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತವನ್ನು ನಿರ್ಮಿಸಲು 130 ಕೋಟಿ ಭಾರತೀಯರು ಕೈಗೊಂಡ ಸಂಕಲ್ಪದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಇದು ಸ್ಥಳೀಯತೆಯನ್ನು ಜಾಗತಿಕದೊಂದಿಗೆ ವಿಲೀನಗೊಳಿಸುತ್ತದೆ ಮತ್ತು ಭಾರತವು ಜಾಗತಿಕ ಶಕ್ತಿಯ ಗುಣಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಭಾರತವನ್ನು ಜಡ ಮಾರುಕಟ್ಟೆಯಿಂದ ಜಾಗತಿಕ ಮೌಲ್ಯ ಸರಪಳಿಯ ಸಕ್ರಿಯ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ಬಗ್ಗೆ ಅವರು ಹೇಳಿದರು.

ಮುಂದಿನ ಹಾದಿಯು ವಿಶೇಷವಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಅಪಾರ ಅವಕಾಶಗಳಿಂದ ಕೂಡಿದೆ. ಕಲ್ಲಿದ್ದಲು, ಗಣಿಗಾರಿಕೆ, ರೈಲ್ವೆ, ರಕ್ಷಣೆ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿಯಂತಹ ಕ್ಷೇತ್ರಗಳನ್ನು ಖಾಸಗಿಯವರಿಗೆ ಮುಕ್ತಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್, ವೈದ್ಯಕೀಯ ಸಾಧನಗಳು, ಔಷಧ ಕ್ಷೇತ್ರಗಳಿಗಾಗಿ ಪ್ರಾರಂಭಿಸಲಾಗಿರುವ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗಳ ಜೊತೆಗೆ ಕೃಷಿರಂಗದ ಸುಧಾರಣೆಗಳ ಬಗ್ಗೆಯೂ ಅವರು ಉಲ್ಲೇಖಿಸಿದರು.

ಭಾರತದ ಸವಾಲುಗಳ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಫಲಿತಾಂಶಗಳಲ್ಲಿ ನಂಬಿಕೆ ಇರುವ ಸರ್ಕಾರವಿದೆ. ಸುಲಭ ವ್ಯಾಪಾರದಂತೆಯೇ ಸುಲಭ ಜೀವನವೂ ಮುಖ್ಯವೆಂದು ನಂಬಿರುವ ಸರ್ಕಾರ ಇಲ್ಲಿದೆ ಎಂದು ಪ್ರಧಾನಿ ಶೃಂಗಸಭೆಗೆ ತಿಳಿಸಿದರು,

ಭಾರತವು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.65 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹತ್ವಾಕಾಂಕ್ಷಿಯಾದ ಮತ್ತು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಯುವ ದೇಶ ಎಂದು ಅವರು ಬಣ್ಣಿಸಿದರು, ಭಾರತವು ರಾಜಕೀಯ ಸ್ಥಿರತೆ ಮತ್ತು ರಾಜಕೀಯ ನಿರಂತರತೆಯನ್ನು ಹೊಂದಿರುವ ದೇಶವಾಗಿದೆ ಮತ್ತು ಇದು ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗೆ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
25% of India under forest & tree cover: Government report

Media Coverage

25% of India under forest & tree cover: Government report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi