ಆಗಸ್ಟ್ 25 , 2023 ರಂದು ಅಥೆನ್ಸ್ ನಲ್ಲಿ ಗ್ರೀಸ್ ನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್ ಆಯೋಜಿಸಿದ್ದ ವ್ಯಾಪಾರ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡರು.
ಈ ವ್ಯವಹಾರಿಕ ಭೋಜನಕೂಟದಲ್ಲಿ ಶಿಪ್ಪಿಂಗ್, ಮೂಲಸೌಕರ್ಯ, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಭಾರತೀಯ ಮತ್ತು ಗ್ರೀಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (ಸಿ.ಇ.ಒ.) ಭಾಗವಹಿಸಿದ್ದರು.
ನವೀಕರಿಸಬಹುದಾದ ಇಂಧನ, ಸ್ಟಾರ್ಟ್‌ಅಪ್‌ಗಳು, ಫಾರ್ಮಾ, ಐಟಿ, ಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯಗಳಂತಹ ಕ್ಷೇತ್ರಗಳಲ್ಲಿ ಭಾರತದ ಪ್ರಗತಿ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಕೈಗೊಂಡ ವಿವಿಧ ಉಪಕ್ರಮಗಳನ್ನು ಪ್ರಧಾನಮಂತ್ರಿ ಈ ಸಂದರ್ಭದಲ್ಲಿ ವಿವರಿಸಿದರು. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಭಾರತ ಹಾಗೂ ಗ್ರೀಸ್ ನಡುವೆ ಆರ್ಥಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಉದ್ಯಮ ಕ್ಷೇತ್ರದ ಈ ನಾಯಕರು ವಹಿಸಿದ ಪಾತ್ರವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.
ಭಾರತದಲ್ಲಿನ ಹೂಡಿಕೆಯ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮತ್ತು ಭಾರತದ ಬೆಳವಣಿಗೆಯ ಯಶೋಗಾಥೆಯ ಭಾಗವಾಗುವಂತೆ ಉದ್ಯಮಿಗಳನ್ನು ಪ್ರಧಾನಮಂತ್ರಿ ಪ್ರೋತ್ಸಾಹಿಸಿ ಉತ್ತೇಜಿಸಿದರು.
ಔಯವಹಾರಿಕ ಭೋಜನಕೂಟ ಕಾರ್ಯಕ್ರಮದಲ್ಲಿ ಈ ಕೆಳಗಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (ಸಿ.ಇ.ಒ.) ಭಾಗವಹಿಸಿದ್ದರು:
ಕ್ರ. ಸಂಖ್ಯೆ |
ಸಂಸ್ಥೆ |
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿ.ಇ.ಒ.) |
1. |
ಎಲ್ಪೆನ್ |
ಶ್ರೀ ಥಿಯೋಡರ್ ಇ. ಟ್ರಿಫೊನ್, ಸಿ.ಒ/ ಸಿ.ಇ.ಒ |
2. |
ಗೆಕ್ ಟೆರ್ನಾ ಗ್ರೂಪ್ |
ಶ್ರೀ ಜಾರ್ಜಿಯೊಸ್ ಪೆರಿಸ್ಟರಿಸ್, ಬಿ.ಒ.ಡಿ. ಅಧ್ಯಕ್ಷರು |
3. |
ನೆಪ್ಚೂನ್ಸ್ ಲೈನ್ಸ್ ಶಿಪ್ಪಿಂಗ್ ಮತ್ತು ಮ್ಯಾನೇಜಿಂಗ್ ಎಂಟರ್‌ಪ್ರೈಸಸ್ ಎಸ್.ಎ. |
ಶ್ರೀಮತಿ ಮೆಲಿನಾ ಟ್ರಾವ್ಲೌ, ಬಿ.ಒ.ಡಿ. ಅಧ್ಯಕ್ಷರು |
4. |
ಚಿಪಿತಾ ಎಸ್.ಎ. |
ಶ್ರೀ ಸ್ಪೈರೋಸ್ ಥಿಯೋಡೋರೊಪೌಲೋಸ್, ಸ್ಥಾಪಕರು |
5. |
ಯುರೋಬ್ಯಾಂಕ್ ಎಸ್.ಎ. |
ಶ್ರೀ ಫೋಕಿಯಾನ್ ಕರಾವಿಯಾಸ್, ಸಿ.ಇ.ಒ |
6. |
ಟೆಮ್ಸ್ ಎಸ್.ಎ. |
ಶ್ರೀ ಅಕಿಲ್ಸ್ ಕಾನ್ಸ್ಟಾಂಟಕೋಪೌಲೋಸ್, ಅಧ್ಯಕ್ಷರು ಮತ್ತು ಸಿ.ಇ.ಒ |
7. |
ಮೈಟಿಲಿನೋಸ್ ಗ್ರೂಪ್ |
ಶ್ರೀ ಇವಾಂಜೆಲೋಸ್ ಮೈಟಿಲಿನೋಸ್ , ಅಧ್ಯಕ್ಷರು ಮತ್ತು ಸಿ.ಇ.ಒ |
8. |
ಟೈಟಾನ್ ಸಿಮೆಂಟ್ ಗ್ರೂಪ್ |
ಶ್ರೀ ಡಿಮಿಟ್ರಿ ಪಾಪಲೆಕ್ಸೊಪೌಲೋಸ್, ಬಿ.ಒ.ಡಿ. ಅಧ್ಯಕ್ಷರು |
9. |
ಇಂಟಾಸ್ ಫಾರ್ಮಾಸ್ಯುಟಿಕಲ್ಸ್ |
ಶ್ರೀ ಬಿನಿಶ್ ಚುಡ್ಗರ್, ಉಪಾಧ್ಯಕ್ಷರು |
10. |
ಇ.ಇ.ಪಿ.ಸಿ |
ಶ್ರೀ ಅರುಣ್ ಗರೋಡಿಯಾ, ಅಧ್ಯಕ್ಷರು |
11. |
ಎಂ.ಕ್ಯೂರ್ ಫಾರ್ಮಾಸ್ಯುಟಿಕಲ್ಸ್ |
ಶ್ರೀ ಸಮಿತ್ ಮೆಹ್ತಾ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿ.ಇ.ಒ |
12. |
ಎಂ.ಆರ್. ಗ್ರೂಪ್ |
ಶ್ರೀ ಶ್ರೀನಿವಾಸ್ ಬೊಮ್ಮಿದಾಳ, ಗ್ರೂಪ್ ನಿರ್ದೇಶಕರು |
13. |
ಐ.ಟಿ.ಸಿ |
ಶ್ರೀ ಸಂಜೀವ್ ಪುರಿ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು |
14. |
ಯು.ಪಿ.ಎಲ್ |
ಶ್ರೀ ವಿಕ್ರಮ್ ಶ್ರಾಫ್, ನಿರ್ದೇಶಕರು |
15. |
ಶಾಹಿ ಎಕ್ಸ್‌ಪೋರ್ಟ್ಸ್ |
ಶ್ರೀ ಹರೀಶ್ ಅಹುಜಾ, ವ್ಯವಸ್ಥಾಪಕ ನಿರ್ದೇಶಕರು |