The nation has fought against the coronavirus pandemic with discipline and patience and must continue to do so: PM
India has vaccinated at the fastest pace in the world: PM Modi
Lockdowns must only be chosen as the last resort and focus must be more on micro-containment zones: PM Modi

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಕೋವಿಡ್-19 ಪರಿಸ್ಥಿತಿಯ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಮಂತ್ರಿಯವರು ಸಂತಾಪ ವ್ಯಕ್ತಪಡಿಸಿದರು. "ಕುಟುಂಬದ ಒಬ್ಬ ಸದಸ್ಯನಾಗಿ, ಈ ದುಃಖದ ಸಮಯದಲ್ಲಿ ನಿಮ್ಮೊಂದಿಗೆ ನಾನಿದ್ದೇನೆ. ಸವಾಲು ದೊಡ್ಡದಾಗಿದೆ ನಿಜ. ನಾವು ದೃಢ ನಿರ್ಧಾರ, ಧೈರ್ಯ ಮತ್ತು ಸಿದ್ಧತೆಯೊಂದಿಗೆ ಒಟ್ಟಾಗಿ ಅದನ್ನು ಜಯಿಸಬೇಕಾಗಿದೆ," ಎಂದು ಪ್ರಧಾನಿ ಹೇಳಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ನೀಡಿದ ಕೊಡುಗೆಗಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ಆಂಬ್ಯುಲೆನ್ಸ್ ಚಾಲಕರು, ಭದ್ರತಾ ಪಡೆಗಳು ಮತ್ತು ಪೊಲೀಸ್ ಪಡೆಗಳಿಗೆ ಅವರು ಗೌರವ ಸಲ್ಲಿಸಿದರು.

ದೇಶದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಸರಕಾರ ಶರವೇಗ ಮತ್ತು ಸಂವೇದನಾಶೀಲತೆಯಿಂದ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಅಗತ್ಯವಿರುವ ಪ್ರತಿಯೊಬ್ಬ ವ್ಯಕ್ತಿಗೂ ಆಮ್ಲಜನಕ ದೊರಕಿಸಿಕೊಡಲು ಕೇಂದ್ರ, ರಾಜ್ಯ ಸರಕಾರಗಳು ಮತ್ತು ಖಾಸಗಿ ವಲಯಗಳು ಪ್ರಯತ್ನಗನ್ನು ಮಾಡುತ್ತಿವೆ. ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವ ಪ್ರಯತ್ನಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ. ಹೊಸ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದು, ಒಂದು ಲಕ್ಷ ಹೊಸ ಸಿಲಿಂಡರ್‌ಗಳನ್ನು ಒದಗಿಸುವುದು, ಆಮ್ಲಜನಕವನ್ನು ಕೈಗಾರಿಕಾ ಬಳಕೆಯಿಂದ ವೈದ್ಯಕೀಯ ಬಳಕೆಯತ್ತ ತಿರುಗಿಸುವುದು,  ʻಆಕ್ಸಿಜನ್ ರೈಲುʼ ಸಂಚಾರ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನಮ್ಮ ವಿಜ್ಞಾನಿಗಳು ಅತ್ಯಂತ ಕಡಿಮೆ ಸಮಯದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ಅಗ್ಗದ ಲಸಿಕೆಯನ್ನು ಹೊಂದಿದೆ. ಭಾರತದಲ್ಲಿ ಲಭ್ಯವಿರುವ ಶೀತ-ಸಂಗ್ರಹಾಗಾರ ಸರಪಳಿ ವ್ಯವಸ್ಥೆಗೆ ಹೊಂದುವಂಥ ಲಸಿಕೆ ಇದಾಗಿದೆ ಎಂದು ಪ್ರಧಾನಿ ಹೇಳಿದರು. ಈ ತಂಡದ ಪ್ರಯತ್ನದಿಂದಾಗಿ, ಭಾರತವು ಎರಡು 'ಮೇಡ್ ಇನ್ ಇಂಡಿಯಾ' ಲಸಿಕೆಗಳೊಂದಿಗೆ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದೆ. ಲಸಿಕೆಯ ಮೊದಲ ಹಂತದಿಂದಲೇ, ಲಸಿಕೆಯು ಗರಿಷ್ಠ ಪ್ರದೇಶಗಳಿಗೆ ಮತ್ತು ಅಗತ್ಯವಿರುವ ಗರಿಷ್ಠ ಜನರಿಗೆ ತಲುಪುವತ್ತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ಮೊದಲ 10 ಕೋಟಿ, 11 ಕೋಟಿ ಮತ್ತು 12 ಕೋಟಿ ಲಸಿಕೆ ಡೋಸ್ ಗಳನ್ನು ನೀಡಿದ ಹಿರಿಮೆ ಭಾರತದ್ದು ಎಂದರು.

ಲಸಿಕೆಗೆ ಸಂಬಂಧಿಸಿದ ಇತ್ತೀಚೆಗಿನ ನಿರ್ಧಾರದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಮೇ 1ರ ನಂತರ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಲಸಿಕೆ ಪಡೆಯಬಹುದು ಎಂದರು. ಭಾರತದಲ್ಲಿ ಉತ್ಪತ್ತಿಯಾಗುವ ಲಸಿಕೆಯ ಅರ್ಧದಷ್ಟನ್ನು ನೇರವಾಗಿ ರಾಜ್ಯಗಳು ಮತ್ತು ಆಸ್ಪತ್ರೆಗಳಿಗೆ ತಲುಪಲಿದೆ ಎಂದರು.

ಜೀವಗಳನ್ನು ಉಳಿಸುವ ಜೊತೆಗೆ, ಆರ್ಥಿಕ ಚಟುವಟಿಕೆಗಳನ್ನು ಉಳಿಸಲು ಮತ್ತು ಜನರ ಜೀವನೋಪಾಯದ ಮೇಲೆ ಸಾಧ್ಯವಾದಷದ್ಟು ಕನಿಷ್ಠ ಪ್ರತಿಕೂಲ ಪರಿಣಾಮ ಆಗುವ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಲಾಗತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 18 ವರ್ಷ ಮೇಲ್ಪಟ್ಟ ಜನಸಂಖ್ಯೆಗೆ ಲಸಿಕೆಯನ್ನು ಮುಕ್ತಗೊಳಿಸಿರುವುದರಿಂದ, ನಗರಗಳಲ್ಲಿನ ದುಡಯುವ ವರ್ಗಕ್ಕೆ ತ್ವರಿತವಾಗಿ ಲಸಿಕೆ ಲಭ್ಯವಾಗಲಿದೆ. ರಾಜ್ಯ ಸರಕಾರಗಳು ಕಾರ್ಮಿಕರ ವಿಶ್ವಾಸವನ್ನು ಹೆಚ್ಚಿಸಬೇಕು ಮತ್ತು ಅವರನ್ನು ಇದ್ದಲ್ಲೇ ಉಳಿಯುವಂತೆ ಮನವೊಲಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು. ರಾಜ್ಯಗಳ ಈ ಆಶ್ವಾಸನೆಯು ಶ್ರಮಿಕರು ಮತ್ತು ಕಾರ್ಮಿಕರಿಗೆ ಬಹಳ ಸಹಾಯ ಮಾಡುತ್ತದೆ.  ಅವರು ಎಲ್ಲೇ ಇದ್ದರೂ ಅಲ್ಲಿಯೇ ಲಸಿಕೆಯನ್ನು ಪಡೆಯುತ್ತಾರೆ. ಇದರಿಂದ ಅವರ ಕೆಲಸಕ್ಕೂ ತೊಂದರೆಯಾಗುವುದಿಲ್ಲ ಎಂದರು.

ಮೊದಲ ಅಲೆಯ ಆರಂಭಿಕ ದಿನಗಳಿಗೆ ಹೋಲಿಸಿದರೆ, ಈಗ ಸವಾಲನ್ನು ಎದುರಿಸಲು ನಮಗೆ ಉತ್ತಮ ಜ್ಞಾನ ಮತ್ತು ಸಂಪನ್ಮೂಲಗಳಿವೆ ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕದ ವಿರುದ್ಧ ಉತ್ತಮ ಮತ್ತು ತಾಳ್ಮೆಯ ಹೋರಾಟದ ಶ್ರೇಯವನ್ನು ಶ್ರೀ ಮೋದಿ ಅವರು ಭಾರತದ ಜನತೆಗೆ ಅರ್ಪಿಸಿದರು. ಜನರ ಪಾಲ್ಗೊಳ್ಳುವಿಕೆ, ಸಹಕಾರದ ಬಲದಿಂದ ನಾವು ಈ ಎರಡನೇ ಕೊರೊನಾ ಅಲೆಯನ್ನೂ ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅಗತ್ಯ ಸಮಯದಲ್ಲಿ ಜನರಿಗೆ ಸಹಾಯ ಮಾಡುತ್ತಿರುವ ಸಾಮಾಜಿಕ ಸಂಸ್ಥೆಗಳ ಕೊಡುಗೆಯನ್ನು ಅವರು ಸ್ಮರಿಸಿದರು. ಜೊತೆಗೆ, ಸಹಾಯ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕೆಂದು ಅವರು ಕರೆ ನೀಡಿದರು.

ತಾವಿರುವ ಪ್ರದೇಶಗಳು ಮತ್ತು ನೆರೆಹೊರೆಯಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುವಂತೆ ಯುವಕರಿಗೆ ಪ್ರಧಾನಿ ಕರೆ ನೀಡಿದರು. ಇದರಿಂದ ಕಂಟೈನ್‌ಮೆಂಟ್‌ ವಲಯಗಳು, ಕರ್ಫ್ಯೂಗಳು ಅಥವಾ ಲಾಕ್‌ಡೌನ್‌ಗಳನ್ನು ತಪ್ಪಿಸಲು ಸಹಾಯಕವಾಗಲಿದೆ.  ತಮ್ಮ ಕುಟುಂಬ ಸದಸ್ಯರು ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತಹ ವಾತಾವರಣವನ್ನು ಸೃಷ್ಟಿಸುವಂತೆ ಅವರು ಮಕ್ಕಳಿಗೆ ಕರೆ ನೀಡಿದರು.

ಇಂದಿನ ಪರಿಸ್ಥಿತಿಯಲ್ಲಿ ನಾವು ದೇಶವನ್ನು ಲಾಕ್‌ಡೌನ್‌ನಿಂದ ರಕ್ಷಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ಲಾಕ್‌ಡೌನ್ ಅನ್ನು ಕೊನೆಯ ಅಸ್ತ್ರವಾಗಿ ಮಾತ್ರ ಪರಿಗಣಿಸುವಂತೆ ಅವರು ರಾಜ್ಯ ಸರಕಾರಗಳಿಗೆ ಸೂಚಿಸಿದರು. ನಾವು ಸಣ್ಣ ಕಂಟೈನ್‌ಮೆಂಟ್‌ ವಲಯಗಳತ್ತ ಗಮನ ಹರಿಸಬೇಕು ಮತ್ತು ಲಾಕ್‌ಡೌನ್ ತಪ್ಪಿಸಲು ನಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡಬೇಕು ಎಂದು ಪ್ರಧಾನಿ ಹೇಳಿದರು.

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi