ಮೊದಲ ಲೆಕ್ಕಪರಿಶೋಧನಾ ದಿನ ಕುರಿತ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಭಾರತದ ಲೆಕ್ಕ ಪರಿಶೋಧಕರು ಮತ್ತು ನಿಯಂತ್ರಕರಾದ ಶ‍್ರೀ ಗಿರೀಶ‍್ ಚಂದ್ರ ಮುರ್ಮು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸಿಎಜಿಯು ದೇಶದ ಖಾತೆಗಳ ಮೇಲೆ ನಿಗಾ ಇಡುವುದಲ್ಲದೇ ಉತ್ಪಾದಕತೆ ಮತ್ತು ಮೌಲ್ಯ ವರ್ಧನೆ ಸಹ ಮಾಡುತ್ತದೆ. ಹೀಗಾಗಿ ಲೆಕ್ಕಪರಿಶೋಧನಾ ದಿನ ಕಾರ್ಯಕ್ರಮದಲ್ಲಿ ನಡೆಯುವ ಚರ್ಚೆಗಳು ಮತ್ತು ಸಂಬಂಧಿತ ವಿಷಯಗಳು ನಮ್ಮ ಅಭಿವೃದ‍್ಧಿ ಮತ್ತು ಸುಧಾರಣೆಯ ಭಾಗವಾಗಿವೆ. ಸಿಎಜಿ ಸಂಸ್ಥೆಯು ಪ್ರಾಮುಖ್ಯತೆಯನ್ನು ಬೆಳೆಸಿಕೊಂಡಿದೆ ಮತ್ತು ಕಾಲಾನಂತರದಲ್ಲಿ ಪರಂಪರೆಯನ್ನು ಸೃಷ್ಟಿಸಿದೆ ಎಂದರು.
ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಈ ಮಹಾನ್ ನಾಯಕರು ದೊಡ್ಡ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಸಾಧಿಸುವುದು ಹೇಗೆ ಎಂದು ನಮಗೆ ಕಲಿಸಿದ್ದಾರೆ ಎಂದರು.
ದೇಶದಲ್ಲಿ ಲೆಕ್ಕಪರಿಶೋಧನೆಯನ್ನು ಆತಂಕ ಮತ್ತು ಭಯದಿಂದ ನೋಡುತ್ತಿದ್ದ ಕಾಲವಿತ್ತು. ಸಿಎಜಿ ಮತ್ತು ಸರ್ಕಾರ ನಮ್ಮ ವ್ಯವಸ್ಥೆಯ ಸಾಮಾನ್ಯ ಚಿಂತನಾ ವಲಯವಾಗಿ ಪರಿವರ್ತನೆಯಾಗಿದೆ. ಆದರೆ ಇಂದು ಈ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಇಂದು ಲೆಕ್ಕಪರಿಶೋಧನೆ ಅತ್ಯಂತ ಪ್ರಮುಖ ಮೌಲ್ಯ ಸೇರ್ಪಡೆಯಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಹಲವಾರು ತಪ್ಪು ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಇದರ ಪರಿಣಾಮ ಬ್ಯಾಂಕ್ ಗಳ ಎನ್.ಪಿ.ಎ ಹೆಚ್ಚುತ್ತಲೇ ಇತ್ತು. “ಈ ಹಿಂದೆ ಎನ್.ಪಿ.ಎ ಗಳನ್ನು ಕಂಬಳಿಗಳಡಿ ಹೇಗೆ ಗುಡಿಸಲಾಗುತ್ತಿತ್ತು ಎಂಬುದು ನಿಮಗೆಲ್ಲಾ ತಿಳಿಸಿದೆ” ಎಂದು ಹೇಳಿದರು.
“ಇಂದು ನಾವು ಹೊಸ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಅದರಲ್ಲಿ ಸರ್ಕಾರವೇ ಎಲ್ಲವೂ ಆಗಿದೆ. ಸರ್ಕಾರದ ಹಸ್ತಕ್ಷೇಪ ಕಡಿಮೆಯಾಗುತ್ತಿದೆ ಮತ್ತು ನಿಮ್ಮ ಕೆಲಸ ಇಂದು ಸುಲಭವಾಗುತ್ತಿದೆ: ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ ಎಂಬುದಕ್ಕೆ ಅನುಗುಣವಾಗಿ ಆಡಳಿತ ನಡೆಯುತ್ತಿದೆ. “ಸಂಪರ್ಕ ರಹಿತ ವಿಧಾನ, ಸ್ವಯಂ ಚಾಲಿತ ನವೀಕರಣ, ಮುಖರಹಿತ ಮೌಲ್ಯಮಾಪನ, ಸೇವೆ ಒದಗಿಸಲು ಆನ್ ಲೈನ್ ಅಪ್ಲಿಕೇಷನ್ ಗಳು, ಈ ಎಲ್ಲಾ ಸುಧಾರಣೆಗಳು ಸರ್ಕಾರದ ಅನಗತ್ಯ ಹಸ್ತಕ್ಷೇಪವನ್ನು ಕೊನೆಗೊಳಿಸಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಕಡತಗಳನ್ನು ತಡಕಾಡುತ್ತಿರುವ ಕಾರ್ಯನಿರತ ವ್ಯಕ್ತಿಯ ಚಿತ್ರಣದಿಂದ ಸಿಎಜಿ ಹೊರ ಬಂದಿದೆ. “ಸಿಎಜಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತ್ವರಿತವಾಗಿ ಬದಲಾವಣೆಯಾಗಿದೆ. ಇಂದು ನೀವು ಸುಧಾರಿತ ವಿಶ್ಲೇಷಣಾ ಸಾಧನಗಳು, ಭೂ ಪ್ರಾದೇಶಿಕ ದತ್ತಾಂಶ ಮತ್ತು ಉಪಗ್ರಹ ಚಿತ್ರಗಳನ್ನು ಬಳಸುತ್ತಿದ್ದೀರಿ” ಎಂದರು.
ದೇಶದ ಅತಿದೊಡ್ಡ ಸಾಂಕ್ರಾಮಿಕ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಇದರ ವಿರುದ್ಧ ದೇಶ ಅಸಾಧಾರಣವಾಗಿ ಹೋರಾಟ ಮಾಡಿತು. ಇಂದು ನಾವು ಜಗತ್ತಿನ ಅತಿದೊಡ್ಡ ಲಸಿಕಾ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಕೆಲವು ವಾರಗಳ ಹಿಂದೆ ದೇಶ 100 ಕೋಟಿ ಡೋಸ್ ಲಸಿಕೆಯ ಮೈಲಿಗಲ್ಲು ದಾಟಿದೆ. ಈ ಮಹಾನ್ ಹೋರಾಟದ ಸಂದರ್ಭದಲ್ಲಿ ಹೊರ ಹೊಮ್ಮಿದ ಆಚರಣೆಗಳನ್ನು ಸಿಎಜಿ ಅಧ್ಯಯನ ಮಾಡಬಹುದು ಎಂದು ಪ್ರಧಾನಮಂತ್ರಿ ಅವರು ಸಲಹೆ ಮಾಡಿದರು.
ಹಿಂದಿನ ಕಾಲದಲ್ಲಿ ಕಥೆಗಳ ಮೂಲಕ ಮಾಹಿತಿ ಪ್ರಸರಣವಾಗುತ್ತಿತ್ತು. ಇತಿಹಾಸವನ್ನು ಕಥೆಗಳ ಮೂಲಕ ಬರೆಯಲಾಗುತ್ತಿತ್ತು. ಆದರೆ “21ನೇ ಶತಮಾನದಲ್ಲಿ ದತ್ತಾಂಶ ಮಾಹಿತಿಯಾಗಿದೆ ಮತ್ತು ಬರುವ ದಿನಗಳಲ್ಲಿ ಇತಿಹಾಸ ಇದನ್ನು ನೋಡಲಿದೆ ಹಾಗೂ ದತ್ತಾಂಶದ ಮೂಲಕ ಇದು ಅರ್ಥವಾಗಲಿದ್ದು, ಭವಿಷ್ಯದಲ್ಲಿ ದತ್ತಾಂಶ ಇತಿಹಾಸವನ್ನು ನಿರ್ದೇಶಿಸಲಿದೆ” ಎಂದು ಹೇಳಿದ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಪೂರ್ಣಗೊಳಿಸಿದರು.
एक समय था, जब देश में ऑडिट को एक आशंका, एक भय के साथ देखा जाता था।
— PMO India (@PMOIndia) November 16, 2021
‘CAG बनाम सरकार’, ये हमारी व्यवस्था की सामान्य सोच बन गई थी।
लेकिन, आज इस मानसिकता को बदला गया है।
आज ऑडिट को वैल्यू एडिशन का अहम हिस्सा माना जा रहा है: PM @narendramodi
पहले देश के बैंकिंग सेक्टर में transparency की कमी के चलते तरह तरह की practices चलती थीं।
— PMO India (@PMOIndia) November 16, 2021
परिणाम ये हुआ कि बैंको के NPAs बढ़ते गए।
NPAs को कार्पेट के नीचे कवर करने का जो कार्य पहले के समय किया गया, वो आप भली-भांति जानते हैं: PM @narendramodi
लेकिन हमने पूरी ईमानदारी के साथ पिछली सरकारों का सच देश के सामने रखा।
— PMO India (@PMOIndia) November 16, 2021
हम समस्याओं को पहचानेंगे तभी तो समाधान तलाश कर पाएंगे: PM @narendramodi
आज हम ऐसी व्यवस्था बना रहे हैं जिसमें ‘सरकार सर्वम्’ की सोच, सरकार का दखल भी कम हो रहा है, और आपका काम भी आसान हो रहा है।
— PMO India (@PMOIndia) November 16, 2021
‘मिनिमम गवर्नमेंट मैक्सिमम गवर्नेंस’: PM @narendramodi
Contactless customs, automatic renewals, faceless assessments, service delivery के लिए online applications,
— PMO India (@PMOIndia) November 16, 2021
इन सारे reforms ने सरकार के गैर-जरूरी दखल को खत्म किया है: PM @narendramodi
दशकों तक हमारे देश में CAG की पहचान, सरकारी फाइलों और बहीखातों के बीच माथापच्ची करने वाली संस्था के तौर पर रही है।
— PMO India (@PMOIndia) November 16, 2021
CAG से जुड़े लोगों की यही इमेज बन गई थी।
इसका ज़िक्र मैंने 2019 में भी आपसे किया था: PM @narendramodi
मुझे खुशी है कि आप तेजी के साथ परिवर्तन ला रहे हैं, प्रक्रियाओं को आधुनिक बना रहे हैं।
— PMO India (@PMOIndia) November 16, 2021
आज आप advanced analytics tools इस्तेमाल कर रहे हैं, Geo-spatial data और satellite imagery का इस्तेमाल कर रहे हैं: PM @narendramodi
सदी की ये सबसे बड़ी महामारी जितनी चुनौतीपूर्ण थी, उतनी ही इसके खिलाफ देश की लड़ाई भी असाधारण रही है।
— PMO India (@PMOIndia) November 16, 2021
आज हम दुनिया का सबसे बड़ा वैक्सीनेशन प्रोग्राम भी चला रहे हैं।
कुछ सप्ताह पहले ही देश ने 100 करोड़ वैक्सीन डोज का पड़ाव पार किया है: PM @narendramodi
पुराने समय में information, stories के जरिए प्रसारित होती थी। कहानियों के जरिए ही इतिहास लिखा जाता था।
— PMO India (@PMOIndia) November 16, 2021
लेकिन आज 21वीं सदी में, data ही information है, और आने वाले समय में हमारी history भी data के जरिए देखी और समझी जाएगी।
In future, data will be dictating the history: PM