ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇಘಾಲಯದ 50 ನೇ ರಾಜ್ಯೋತ್ಸವ ದಿನದಂದು ಮೇಘಾಲಯದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದ ಸ್ಥಾಪನೆ ಮತ್ತು ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಯಾದ ನಂತರ ಈಶಾನ್ಯ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. 3-4 ದಶಕಗಳ ನಂತರ ಯಾವುದೇ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ ಮೊದಲ ಭೇಟಿ ಇದಾಗಿದೆ. ನಿಸರ್ಗಕ್ಕೆ ಹತ್ತಿರವಾದ ಜನರು ಎಂಬ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ರಾಜ್ಯದ ಜನತೆಗೆ ಪೂರಕವಾಗಿದೆ. "ಮೇಘಾಲಯವು ಜಗತ್ತಿಗೆ ಪ್ರಕೃತಿ, ಪ್ರಗತಿ, ಸಂರಕ್ಷಣೆ ಮತ್ತು ಪರಿಸರ-ಸುಸ್ಥಿರತೆಯ ಸಂದೇಶವನ್ನು ನೀಡಿದೆ" ಎಂದು ಶ್ರೀ ಮೋದಿ ಅವರು ಹೇಳಿದರು.
ಪ್ರತಿ ಹಳ್ಳಿಯಲ್ಲಿನ ‘ಶಿಳ್ಳೆ ಗ್ರಾಮ’ ಮತ್ತು ವಾದ್ಯವೃಂದದ ಸಂಪ್ರದಾಯಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಕಲೆ ಮತ್ತು ಸಂಗೀತ ಕ್ಷೇತ್ರಗಳಲ್ಲಿ ರಾಜ್ಯದ ಕೊಡುಗೆಯನ್ನು ವಂದಿಸಿದರು. ಪ್ರತಿಭಾವಂತ ಕಲಾವಿದರಿಂದ ಈ ಭೂಮಿ ತುಂಬಿದೆ ಮತ್ತು ಶಿಲ್ಲಾಂಗ್ ಚೇಂಬರ್ ಗಾಯನ ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಅವರು ಹೇಳಿದರು. ಮೇಘಾಲಯದ ಶ್ರೀಮಂತ ಕ್ರೀಡಾ ಸಂಸ್ಕೃತಿಯಿಂದ ದೇಶವು ಹೆಚ್ಚಿನ ಭರವಸೆಯನ್ನು ಹೊಂದಿದೆ ಎಂದು ಅವರು ಗಮನಿಸಿದರು.
ಸಾವಯವ ಕೃಷಿ ಕ್ಷೇತ್ರದಲ್ಲಿ ರಾಜ್ಯದ ಬೆಳೆಯುತ್ತಿರುವ ಖ್ಯಾತಿಯನ್ನು ಪ್ರಧಾನಿ ಗಮನಿಸಿದರು. "ಮೇಘಾಲಯದ ಸಹೋದರಿಯರು ಬಿದಿರು ನೇಯ್ಗೆ ಕಲೆಯನ್ನು ಪುನರುಜ್ಜೀವನಗೊಳಿಸಿದ್ದಾರೆ ಮತ್ತು ಕಷ್ಟಪಟ್ಟು ದುಡಿಯುವ ರೈತರು ಮೇಘಾಲಯವನ್ನು ಸಾವಯವ ರಾಜ್ಯವೆಂದು ಗುರುತಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಉತ್ತಮ ರಸ್ತೆಗಳು, ರೈಲು ಮತ್ತು ವಿಮಾನ ಸಂಪರ್ಕಕ್ಕಾಗಿ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ರಾಜ್ಯದ ಸಾವಯವ ಉತ್ಪನ್ನಗಳಿಗೆ ಹೊಸ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಕೇಂದ್ರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್‌ನಂತಹ ಯೋಜನೆಗಳು ಮೇಘಾಲಯಕ್ಕೆ ಪ್ರಯೋಜನವನ್ನು ನೀಡಿವೆ. ಇಂದು, ಜಲ ಜೀವನ್ ಮಿಷನ್ 2019 ರಲ್ಲಿ ಕೇವಲ 1 ಪ್ರತಿಶತ ಮನೆಗಳಿಂದ 33 ಪ್ರತಿಶತ ಮನೆಗಳಿಗೆ ಪೈಪ್‌ಲೈನ್ ನೀರನ್ನು ತೆಗೆದುಕೊಂಡಿದೆ. ಲಸಿಕೆ ವಿತರಣೆಗಾಗಿ ಡ್ರೋನ್‌ಗಳನ್ನು ಬಳಸಿದ ಮೊದಲ ರಾಜ್ಯಗಳಲ್ಲಿ ಮೇಘಾಲಯವೂ ಸೇರಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಸಮಾರೋಪದಲ್ಲಿ, ಪ್ರವಾಸೋದ್ಯಮ ಮತ್ತು ಸಾವಯವ ಉತ್ಪನ್ನಗಳ ಹೊರತಾಗಿ ಹೊಸ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ತಮ್ಮ ನಿರಂತರ ಬೆಂಬಲ ಮತ್ತು ಸಂಕಲ್ಪವನ್ನು ಮೇಘಾಲಯದ ಜನರಿಗೆ ಪ್ರಧಾನಿ ಭರವಸೆ ನೀಡಿದರು.
पिछले 50 साल में मेघालय के लोगों ने प्रकृति के पास होने की अपनी पहचान को मज़बूत किया है।
— PMO India (@PMOIndia) January 21, 2022
सुरीले झरनों को देखने के लिए, स्वच्छ और शांत वातावरण अनुभव करने के लिए, आपकी अनूठी परंपरा से जुड़ने के लिए देश-दुनिया के लिए मेघालय आकर्षक स्थान बन रहा है: PM @narendramodi
मेघालय ने प्रकृति और प्रगति का, conservation और eco-sustainability का संदेश दुनिया को दिया है।
— PMO India (@PMOIndia) January 21, 2022
खासी, गारो और जयंतिया समुदाय के हमारे भाई-बहन, इसके लिए विशेष तौर पर सराहना के पात्र हैं: PM @narendramodi
बीते 7 सालों में केंद्र सरकार ने पूरी ईमानदारी से मेघालय की विकास यात्रा को तेज़ करने का प्रयास किया है।
— PMO India (@PMOIndia) January 21, 2022
विशेष रूप से बेहतर रोड, रेल और एयर कनेक्टिविटी सुनिश्चित करने के लिए केंद्र सरकार पूरी तरह से कमिटेड है: PM @narendramodi
मेघालय ने बहुत कुछ हासिल किया है।
— PMO India (@PMOIndia) January 21, 2022
लेकिन अभी भी मेघालय को बहुत कुछ हासिल करना बाकी है।
टूरिज्म और ऑर्गेनिक फार्मिंग के अलावा भी मेघालय में नए सेक्टर्स के विकास के लिए प्रयास ज़रूरी हैं।
मैं आपके हर प्रयास के लिए आपके साथ हूं: PM @narendramodi