ಗೌರವಾನ್ವಿತರೇ,
- “ದ್ವೀಪ ರಾಷ್ಟ್ರಗಳಿಗೆ ಸ್ಥಿತಿಸ್ಥಾಪಕತ್ವ ಮೂಲಸೌಕರ್ಯ’-ಐಆರ್ ಐಎಸ್ ನ ಆರಂಭ ಹೊಸ ಭರವಸೆ ಮತ್ತು ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ಅದು ಅತ್ಯಂತ ದುರ್ಬಲ ರಾಷ್ಟ್ರಗಳಿಗೆ ಏನಾದರೂ ಮಾಡಿದರೂ ತೃಪ್ತಿ ನೀಡುತ್ತದೆ.
- ಅದಕ್ಕಾಗಿ ನಾನು ವಿಪತ್ತು ನಿರ್ವಹಣಾ ಮೂಲಸೌಕರ್ಯ ಸ್ಥಿತಿಸ್ಥಾಪಕತ್ವ (ಸಿಡಿಆರ್ ಐ) ಮೈತ್ರಿಯನ್ನು ಅಭಿನಂದಿಸುತ್ತೇನೆ.
- ಈ ಪ್ರಮುಖ ವೇದಿಕೆಯಲ್ಲಿ ನಾನು ಆಸ್ಟ್ರೇಲಿಯಾ ಮತ್ತು ಯುಕೆ ಸೇರಿದಂತೆ ಎಲ್ಲ ಮೈತ್ರಿ ರಾಷ್ಟ್ರಗಳ ನಾಯಕರಿಗೆ ಮತ್ತು ಮಾರಿಷಸ್ ಮತ್ತು ಜಮೈಕಾ ಸೇರಿದಂತೆ ಸಣ್ಣ ದ್ವೀಪ ರಾಷ್ಟ್ರಗಳ ಗುಂಪಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.
- ಈ ಉದ್ಘಾಟನಾ ಸಮಾರಂಭಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ನೀಡಿದ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ.
ಗೌರವಾನ್ವಿತರೇ,
- ಹವಾಮಾನ ಬದಲಾವಣೆಯ ಕ್ರೋಧದಿಂದ ಯಾರೊಬ್ಬರೂ ತಪ್ಪಿಸಿಕೊಳ್ಳಲಾಗುತ್ತಿಲ್ಲ ಎಂಬುದು ಕಳೆದೊಂದು ದಶಕದಿಂದ ಸಾಬೀತಾಗಿದೆ. ಅದು ಅಭಿವೃದ್ಧಿ ಶೀಲ ರಾಷ್ಟ್ರಗಳಾಗಿರಬಹುದು ಅಥವಾ ನೈಸರ್ಗಿಕ ಸಂಪನ್ಮೂಲಗಳಲ್ಲಿ ಶ್ರೀಮಂತರ ರಾಷ್ಟ್ರವಾಗಿರಬಹುದು, ಎಲ್ಲ ರಾಷ್ಟ್ರಗಳಿಗೂ ಇದು ಅತಿದೊಡ್ಡ ಅಪಾಯವಾಗಿದೆ.
- ಆದರೆ ಇಲ್ಲಿಯೂ ಸಹ, “ಸಣ್ಣ ದ್ವೀಪ ಅಭಿವೃದ್ಧಿ ಶೀಲ ರಾಷ್ಟ್ರಗಳು-ಎಸ್ ಐಡಿಎಸ್’’ ಹವಾಮಾನ ಬದಲಾವಣೆಯ ದೊಡ್ಡ ಅಪಾಯವನ್ನು ಎದುರಿಸುತ್ತಿವೆ. ಅದು ಅವುಗಳಿಗೆ ಸಾವು, ಬದುಕಿನ ನಡುವಿನ ಹೋರಾಟದ ವಿಷಯವಾಗಿದೆ, ಅದು ಅವುಗಳ ಉಳಿವಿಗೆ ಸವಾಲಾಗಿದೆ. ಹವಾಮಾನ ವೈಪರೀತ್ಯದಿಂದ ಆಗುವ ವಿಪತ್ತುಗಳನ್ನು ಅಕ್ಷರಶಃ ಅವುಗಳನ್ನು ದುರಂತದ ರೂಪವನ್ನು ಪಡೆಯಬಹುದು.
- ಅಂತಹ ದೇಶಗಳಲ್ಲಿ ಹವಾಮಾನ ವೈಪರೀತ್ಯ ಅವುಗಳ ಜೀವನ ಭದ್ರತೆಗೆ ಮಾತ್ರವಲ್ಲ, ಅವುಗಳ ಆರ್ಥಿಕತೆಗೂ ಪ್ರಮುಖ ಸವಾಲಾಗಿದೆ.
- ಅಂತಹ ದೇಶಗಳು ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿವೆ, ಆದರೆ ಪ್ರಕೃತಿ ವಿಕೋಪಗಳಿಂದ ಪ್ರವಾಸಿಗರೂ ಸಹ ಅಲ್ಲಿಗೆ ಬರಲು ಹೆದರುತ್ತಾರೆ.
ಮಿತ್ರರೇ,
- ಎಸ್ ಐಡಿಎಸ್ ದೇಶಗಳು ಶತಮಾನಗಳಿಂದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳುತ್ತಿದ್ದರೂ ಸಹ, ಅವುಗಳಿಗೆ ನೈಸರ್ಗಿಕ ಏರುಪೇರುಗಳಿಗೆ ಹೇಗೆ ಹೊಂದಿಕೊಳ್ಳಬೇಕೆಂಬುದು ತಿಳಿದಿದೆ.
- ಆದರೆ ಕಳೆದ ಕೆಲವು ದಶಕಗಳಲ್ಲಿ ತೋರಿದ ಸ್ವಾರ್ಥದ ನಡವಳಿಕೆಯಿಂದಾಗಿ, ಪ್ರಕೃತಿಯ ಅಸ್ವಾಭಾವಿಕ ರೂಪವು ಮುನ್ನೆಲೆಗೆ ಬಂದಿದೆ, ಅದರ ಪರಿಣಾಮವನ್ನು ಇಂದು ಮುಗ್ಧ ಸಣ್ಣ ದ್ವೀಪ ರಾಷ್ಟ್ರಗಳು ಎದುರಿಸುವಂತಾಗಿದೆ.
- ಮತ್ತು ಆದ್ದರಿಂದ ನನಗೆ, ಸಿಡಿಆರ್ ಐ ಮತ್ತು ಐಆರ್ ಐಎಸ್ ಕೇವಲ ಮೂಲಸೌಕರ್ಯ ವಿಷಯಗಳಲ್ಲ, ಆದರೆ ಇದು ಮಾನವ ಕಲ್ಯಾಣದ ಅತ್ಯಂತ ಗಂಭೀರ ಜವಾಬ್ದಾರಿಯ ಭಾಗವಾಗಿದೆ.
- ಇದು ಮನುಕುಲದ ಕಡೆಗೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
- ಒಂದು ರೀತಿಯಲ್ಲಿ ಇದು ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ.
ಮಿತ್ರರೇ,
- ಸಿಡಿಆರ್ ಐ ಎನ್ನುವುದು ವಿಚಾರಸಂಕಿರಣದಿಂದ ಹೊರಹೊಮ್ಮುವ ಮಾಯಾಲೋಕವನ್ನು, ಆದರೆ ಸಿಡಿಆರ್ ಐ ಹುಟ್ಟು ಹಲವು ವಿಷಯಗಳ ಚಿಂತನೆ ಮತ್ತು ಅನುಭವಗಳ ಫಲಿತಾಂಶವಾಗಿದೆ.
- ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯದ ಅಪಾಯವನ್ನು ಗ್ರಹಿಸಿದ ಭಾರತವು, ಫೆಸಿಪಿಕ್ ದ್ವೀಪಗಳು ಮತ್ತು ಕ್ಯಾರಿಕೋಮ್ ರಾಷ್ಟ್ರಗಳೊಂದಿಗೆ ಸಹಕಾರಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.
- ನಾವು ಅವುಗಳ ಪ್ರಜೆಗಳಿಗೆ ಸೌರ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಿದ್ದೇವೆ ಮತ್ತು ಅಲ್ಲಿ ಮೂಲಸೌಕರ್ಯ ವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದೇವೆ.
- ಅದರ ಮುಂದುವರಿದ ಭಾಗವಾಗಿ ಇಂದು, ನಾನು ಭಾರತದ ಮತ್ತೊಂದು ಉಪಕ್ರಮವನ್ನು ಪ್ರಕಟಿಸುತ್ತಿದ್ದೇನೆ.
- ಭಾರತದ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಎಸ್ ಐಡಿಎಸ್ ಗಾಗಿ ವಿಶೇಷ ದತ್ತಾಂಶ ವಿಂಡೋ ಅನ್ನು ಅಭಿವೃದ್ಧಿಪಡಿಸಲಿದೆ.
- ಇದರೊಂದಿಗೆ ಐಎಸ್ ಡಿಎಸ್ ಉಪಗ್ರಹದ ಮೂಲಕ ಚಂಡಮಾರುತಗಳು, ಹವಳದ ಬಂಡೆಗಳ ಮೇಲ್ವಿಚಾರಣೆ, ಕರಾವಳಿ ರೇಖೆಯ ಮೇಲೆ ನಿಗಾ ಇತ್ಯಾದಿಗಳ ಬಗ್ಗೆ ಸಮಯೋಚಿತ ಮಾಹಿತಿಯನ್ನು ಪಡೆಯುವುದನ್ನು ಮುಂದುವರಿಸುತ್ತದೆ.
ಮಿತ್ರರೇ,
- ಸಿಡಿಆರ್ ಐ ಮತ್ತು ಎಸ್ ಐಡಿಎಸ್ ಎರಡೂ ಐಆರ್ ಐಎಸ್ ಸಾಕಾರಕ್ಕಾಗಿ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ, ಇದು ಸಹ-ಸೃಷ್ಟಿ ಮತ್ತು ಸಹ-ಪ್ರಯೋಜನಕ್ಕೆ ಉತ್ತಮ ಉದಾಹರಣೆಯಾಗಿದೆ.
- ಅದೇ ಕಾರಣಕ್ಕೆ ನಾನು ಈ ಐಆರ್ ಐಎಸ್ ಉದ್ಘಾಟನೆ ಅತ್ಯಂತ ಪ್ರಮುಖ ಭಾಗ ಎಂದು ಭಾವಿಸಿದ್ದೇನೆ.
- ಐಆರ್ ಐಎಸ್ ಮೂಲಕ, ತಂತ್ರಜ್ಞಾನ, ಹಣಕಾಸು ಮತ್ತು ಅಗತ್ಯ ಮಾಹಿತಿಯನ್ನು ಎಸ್ ಐಡಿಎಸ್ ಸುಲಭ ಮತ್ತು ವೇಗವಾಗಿ ಕ್ರೂಡೀಕರಿಸಲು ಸಾಧ್ಯವಾಗಲಿದೆ. ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಗುಣಮಟ್ಟದ ಮೂಲಸೌಕರ್ಯದ ಉತ್ತೇಜನದಿಂದ ಅಲ್ಲಿನ ಜೀವನ ಮತ್ತು ಜೀವನೋಪಾಯ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ.
- ಪ್ರಪಂಚವು ಈ ದೇಶಗಳನ್ನು ಕಡಿಮೆ ಜನಸಂಖ್ಯೆಯ ಸಣ್ಣ ದ್ವೀಪಗಳೆಂದು ಪರಿಗಣಿಸುತ್ತದೆ ಎಂದು ನಾನು ಮೊದಲೇ ಹೇಳಿದ್ದೇನೆ. ಆದರೆ ನಾನು ಈ ದೇಶಗಳನ್ನು ದೊಡ್ಡ ಸಾಗರಗಳನ್ನು ಹೊಂದಿರುವ ಸಾಮರ್ಥ್ಯದ ದೊಡ್ಡ ರಾಷ್ಟ್ರಗಳೆಂದು ಭಾವಿಸುತ್ತೇನೆ. ಸಮುದ್ರದಿಂದ ಬಂದ ಮುತ್ತುಗಳ ಹಾರವು ಪ್ರತಿಯೊಬ್ಬರನ್ನೂ ಅಲಂಕರಿಸುವಂತೆ, ಸಮುದ್ರದ ಎಸ್ ಐಡಿಎಸ್ ಜಗತ್ತನ್ನು ಅಲಂಕರಿಸುತ್ತದೆ.
- ಭಾರತವು ಈ ಹೊಸ ಯೋಜನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಅದರ ಯಶಸ್ಸಿಗಾಗಿ ಸಿಐಡಿಆರ್ ಹಾಗೂ ಇತರ ಪಾಲುದಾರ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.
- ಈ ಹೊಸ ಉಪಕ್ರಮಕ್ಕಾಗಿ ನಾನು ಸಿಡಿಆರ್ ಐ ಮತ್ತು ಎಲ್ಲಾ ಸಣ್ಣ ದ್ವೀಪ ರಾಷ್ಟ್ರಗಳ ಗುಂಪುಗಳಿಗೆ ಶುಭಾಶಯಗಳನ್ನು ಕೋರುತ್ತೇನೆ.
ತುಂಬಾ ತುಂಬಾ ಧನ್ಯವಾದಗಳು