QuoteIndian institutions should give different literary awards of international stature : PM
QuoteGiving something positive to the society is not only necessary as a journalist but also as an individual : PM
QuoteKnowledge of Upanishads and contemplation of Vedas, is not only an area of spiritual attraction but also a view of science : PM

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಜೈಪುರದಲ್ಲಿಂದು ಪತ್ರಿಕಾ ದ್ವಾರದ ಉದ್ಘಾಟನೆ ನೆರವೇರಿಸಿದರು. ಜತೆಗೆ, ಅವರು ಪತ್ರಿಕಾ ಸಮೂಹದ ಅಧ್ಯಕ್ಷ  ಗುಲಾಬ್ ಕೊಥಾರಿ ಅವರು ರಚಿಸಿರುವ ಸಂವಾದ್ ಉಪನಿಷತ್ ಮತ್ತು ಅಕ್ಷರ ಯಾತ್ರ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪತ್ರಿಕಾ ದ್ವಾರವು ರಾಜಸ್ಥಾನದ ಸಂಸ್ಕೃತಿಯನ್ನು ಪ್ರತಿಫಲಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಪ್ರಮುಖ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಆಕರ್ಷಕ ಕೇಂದ್ರವಾಗಿ ಪರಿವರ್ತನೆಯಾಗಬೇಕು ಎಂದು ಆಶಿಸಿದರು.

ಬಿಡುಗಡೆ ಮಾಡಿದ ಎರಡು ಕೃತಿಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇವೆರಡು ಭಾರತೀಯ ಸಂಸ್ಕøತಿ ಮತ್ತು ವೇದಾಂತವನ್ನು ಪ್ರತಿನಿಧಿಸುತ್ತಿವೆ. ಸಮಾಜವನ್ನು ತಿದ್ದುವ ಕೆಲಸದಲ್ಲಿ ಲೇಖಕರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.

|

ಪ್ರತಿಯೊಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಕೃತಿ ರಚನೆಯಲ್ಲಿ ತೊಡಗಿಸಿಕೊಂಡು ತಮ್ಮ ಲೇಖನಗಳ ಮೂಲಕ ದೇಶದ ಜನತೆಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ  ಸ್ಮರಿಸಿದರು.

ಭಾರತದ ಸಂಸ್ಕೃತಿ, ನಾಗರೀತಕತೆ ಮತ್ತು ಮೌಲ್ಯಗಳನ್ನು ಸಂರಕ್ಷಿಸಲು ಶ್ರಮಿಸಿರುವ ಪತ್ರಿಕಾ ಸಮೂಹದ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಎಂದರು.

ಪತ್ರಿಕಾ ಸಮೂಹದ ಸಂಸ್ಥಾಪಕ ಶ್ರೀ ಕರ್ಪೂರ್ ಚಂದ್ರ ಕುಲಿಶ್ ಅವರು ಪತ್ರಿಕೋದ್ಯಮ ರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ವೇದಗಳ ಜ್ಞಾನವನ್ನು ಸಮಾಜಕ್ಕೆ ಹರಡಲು ಪ್ರಯತ್ನಿಸಿದ ಮಾರ್ಗ ಶ್ಲಾಘನೀಯ ಎಂದರು.

ಕುಲಿಶ್ ಅವರ ಜೀವನ ಮತ್ತು ಕೆಲಸಗಳನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, ಪ್ರತಿಯೊಬ್ಬ ಪತ್ರಕರ್ತ ಸಾಕಾರಾತ್ಮಕ ದೃಷ್ಟಿಕೋನದಿಂದ ಕೆಲಸ ಮಾಡಬೇಕು. ಅಂತೆಯೇ, ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಿದಾಗ ಸಮಾಜಕ್ಕೆ ಆತನಿಂದ ಏನಾದರೂ ಅರ್ಥಪೂರ್ಣ ಕೆಲಸಗಳು ಆಗುತ್ತವೆ ಎಂದರು.

ಎರಡೂ ಕೃತಿಗಳಲ್ಲಿ ವೇದಗಳಿಗೆ ಸಂಬಂಧಿಸಿ ಸಮರ್ಥಿಸಿರುವ ಅಭಿಪ್ರಾಯಗಳು ಕಾಲಾತೀತ ಒಳನೋಟಗಳಾಗಿವೆ. ಅವು ಇಡೀ ಮನುಕುಲದ ಒಳಿತಿಗೆ ಸಾರಿರುವ ಸಂದೇಶಗಳಾಗಿವೆ. ಈ ನಿಟ್ಟಿನಲ್ಲಿ ಉಪನಿಷತ್ ಸಂವಾದ್ ಮತ್ತು ಅಕ್ಷರ ಯಾತ್ರ ಕೃತಿಗಳು ವ್ಯಾಪಕ ಅಧ್ಯಯನಕ್ಕೆ ಸಮರ್ಪಕವಾಗಿವೆ ಎಂದು ತಿಳಿಸಿದರು.

ನಮ್ಮ ಯುವ ಸಮುದಾಯ ಮತ್ತು ಹೊಸ ಪೀಳಿಗೆ ಗಂಭೀರ ಜ್ಞಾನ ಸಂಪಾದನೆಯಿಂದ ದೂರ ಸರಿಯಬಾರದು. ಪುರಾತನ ವಿಷಯಗಳ ಜ್ಞಾನ ಗಳಿಕೆ ಅತ್ಯಗತ್ಯ. ನಮ್ಮ ವೇದ ಮತ್ತು ಉಪನಿಷತ್ ಆಧ್ಯಾತ್ಮಿಕ ತಿಳಿವಳಿಕೆಯ ಆಧಾರಸ್ತಂಭವಾಗುವ ಜತೆಗೆ, ವೈಜ್ಙಾನಿಕ ಜ್ಞಾನದ ಮೂಲವಾಗಿವೆ ಎಂದು ಪ್ರಧಾನ ಮಂತ್ರಿ ಬಣ್ಣಿಸಿದರು.

|

ಬಡವರಿಗೆ ಶೌಚಾಲಯ ನಿರ್ಮಿಸಿಕೊಡುವ ಸ್ವಚ್ಛ ಭಾರತ ಅಭಿಯಾನದ ಅಗತ್ಯವನ್ನು ಪ್ರತಿಪಾದಿಸಿದ ನರೇಂದ್ರ ಮೋದಿ ಅವರು, ಜನಸಾಮಾನ್ಯರಿಗೆ ಅಂಟುವ ಹಲವು ಜಾಢ್ಯಗಳನ್ನು ದೂರ ಮಾಡಲು ಇದೊಂದು ಉತ್ತಮ ಕಾರ್ಯಕ್ರಮ ಎಂದರು.

ಉಜ್ವಲ ಯೋಜನೆಯ ಮಹತ್ವ ಕುರಿತು ಮಾತನಾಡಿದ ಅವರು, ನಮ್ಮ ತಾಯಂದಿರು, ಸಹೋದರಿಯರನ್ನು ಹೊಗೆಯಿಂದ ಮುಕ್ತಗೊಳಿಸಲುಸಲು ಈ ಯೋಜನೆ ನೆರವಾಗಲಿದೆ. ಜಲಜೀವನ ಮಿಷನ್ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ ಎಂದರು.

ಕೊರೊನಾ ಸೋಂಕು ನಿಯಂತ್ರಿಸಲು ದೇಶದ ಮಾಧ್ಯಮ ರಂಗ ಹಿಂದೆಂದೂ ಕಾಣದ ಸಾರ್ವಜನಿಕ ಸೇವೆ ಸಲ್ಲಿಸುವ ಜತೆಗೆ ಜಾಗೃತಿ ಮೂಡಿಸಿದೆ. ಅದು ಸಕ್ರಿಯವಾಗಿ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

|

ಕೇಂದ್ರ ಸರಕಾರದ ಆತ್ಮ ನಿರ್ಭರ್ ಆಂದೋಲನಕ್ಕೆ ಮಾಧ್ಯಮ ರಂಗ ರೂಪು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ, ಸ್ಥಳೀಯ ಉತ್ಪನ್ನಗಳ ಉತ್ತೇಜನಾ (ವೋಕಲ್ ಫಾರ್ ಲೋಕಲ್) ಮುನ್ನೋಟವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಭಾರತದ ಉತ್ಪನ್ನಗಳು ವಿಶ್ವವ್ಯಾಪಿ ಆಗುವ ರೀತಿಯಲ್ಲೇ ಭಾರತೀಯ ಧ್ವ್ವನಿಯೂ ಜಾಗತಿಕವಾಗುವ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ಪುನರುಚ್ಚರಿಸಿದರು.

ಇಡೀ ವಿಶ್ವವೇ ಭಾರತವನ್ನು ಮೌನದಿಂದ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಂತಹ ಪರಿಸ್ಥಿಯಲ್ಲಿ ಭಾರತದ ಮಾಧ್ಯಮ ರಂಗವೂ ಜಾಗತಿಕವಾಗಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯ ಸಂಸ್ಥೆಗಳು ಅಂತಾರಾಷ್ಟ್ರೀಯ ಶ್ರೇಷ್ಠತೆಯ ವಿಭಿನ್ನ ಸಾಹಿತ್ಯ ಪ್ರಶಸ್ತಿಗಳನ್ನು ನೀಡಬೇಕು ಎಂದು ನರೇಂದ್ರ ಮೋದಿ ಅವರು ಸಲಹೆ ನೀಡಿದರು.

ಪತ್ರಿಕಾ ಸಮೂಹವು ಶ್ರೀ ಕರ್ಪೂರ್ ಚಂದ್ರ ಕುಲಿಶ್ ಗೌರವಾರ್ಥ ಅಂತಾರಾಷ್ಟ್ರೀಯ ಪತ್ರಿಕಾ ಪ್ರಶಸ್ತಿ ಆರಂಭಿಸಿರುವುದು ಅಭಿನಂದನೀಯ ಎಂದು ನರೇಂದ್ರ ಮೋದಿ ತಿಳಿಸಿದರು.

Click here to read full text of speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Terror Will Be Treated As War: PM Modi’s Clear Warning to Pakistan

Media Coverage

Terror Will Be Treated As War: PM Modi’s Clear Warning to Pakistan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಮೇ 2025
May 11, 2025

PM Modi’s Vision: Building a Stronger, Smarter, and Safer India