ಘನತೆವೆತ್ತ ಅಧ್ಯಕ್ಷ ಶ್ರೀ ಬಿಡೆನ್ ಅವರೇ,
ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವದ ಪ್ರಮುಖ ವಿಷಯದ ಕುರಿತು ಈ ಶೃಂಗಸಭೆಯ ಉಪಕ್ರಮವನ್ನು ತೆಗೆದುಕೊಂಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನೀವು ಅಧಿಕಾರ ವಹಿಸಿಕೊಂಡ ತಕ್ಷಣ, "ಅಮೇರಿಕಾ ಹಿಂತಿರುಗಿದೆ" ಎಂದು ಹೇಳಿದ್ದೀರಿ. ಮತ್ತು ಇಷ್ಟು ಕಡಿಮೆ ಸಮಯದಲ್ಲಿ, ನಾವೆಲ್ಲರೂ ಇದನ್ನು ನೋಡುತ್ತಿದ್ದೇವೆ ಮತ್ತು ಆದ್ದರಿಂದ, ನಾನು ಹೇಳುತ್ತೇನೆ, ವೆಲ್ ಕಮ್ ಬ್ಯಾಕ್!
ಘನತೆವೆತ್ತ ಅಧ್ಯಕ್ಷರೇ,
ಸಾಂಕ್ರಾಮಿಕ ರೋಗದ ಆರಂಭಿಕ ತಿಂಗಳುಗಳಲ್ಲಿ, ಲಸಿಕೆಗಳು, ಆರೋಗ್ಯ ಉಪಕರಣಗಳು ಮತ್ತು ಅಗತ್ಯ ಔಷಧಿಗಳನ್ನು ಉತ್ಪಾದಿಸಲು ಕಚ್ಚಾ ವಸ್ತುಗಳ ಕೊರತೆಯನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಈಗ ಜಗತ್ತು ಆರ್ಥಿಕ ಚೇತರಿಕೆಗೆ ಸಜ್ಜಾಗುತ್ತಿದೆ, ಅರೆವಾಹಕಗಳು ಮತ್ತು ಇತರ ಸರಕುಗಳ ಪೂರೈಕೆ ವ್ಯವಸ್ಥೆಗಳು ಆರೋಗ್ಯಕರ ಬೆಳವಣಿಗೆಯ ಹಾದಿಯಲ್ಲಿ ಬರುತ್ತಿವೆ. ಶಿಪ್ಪಿಂಗ್ ಕಂಟೈನರ್‌ಗಳ ಕೊರತೆ ಇರುತ್ತದೆ ಎಂದು ಜಗತ್ತಿನಲ್ಲಿ ಯಾರು ಭಾವಿಸಿದ್ದರು?
ಘನತೆವೆತ್ತ ಅಧ್ಯಕ್ಷರೇ,
ಲಸಿಕೆಗಳ ಜಾಗತಿಕ ಪೂರೈಕೆಯನ್ನು ಸುಧಾರಿಸಲು ಭಾರತವು ಲಸಿಕೆಗಳ ರಫ್ತಿನ ವೇಗವನ್ನು ಹೆಚ್ಚಿಸಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉತ್ತಮ ಮತ್ತು ಕೈಗೆಟುಕುವ ಕೋವಿಡ್-19 ಲಸಿಕೆಯನ್ನು ಪೂರೈಸಲು ನಾವು ನಮ್ಮ ಕ್ವಾಡ್ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಮುಂದಿನ ವರ್ಷ ವಿಶ್ವಕ್ಕೆ 5 ಬಿಲಿಯನ್ ಕೋವಿಡ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಭಾರತ ಸಜ್ಜಾಗಿದೆ. ಕಚ್ಚಾ ವಸ್ತುಗಳ ಸರಬರಾಜಿನಲ್ಲಿ ಯಾವುದೇ ಅಡೆತಡೆಯಿಲ್ಲ ಎಂಬುದೂ ಬಹಳ ಮುಖ್ಯ.
ಘನತೆವೆತ್ತ ಅಧ್ಯಕ್ಷರೇ,
ಜಾಗತಿಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಮೂರು ಅಂಶಗಳು ಪ್ರಮುಖವಾಗಿವೆ ಎಂದು ನಾನು ನಂಬುತ್ತೇನೆ - ವಿಶ್ವಾಸಾರ್ಹ ಮೂಲ, ಪಾರದರ್ಶಕತೆ ಮತ್ತು ಸಮಯ-ಚೌಕಟ್ಟು. ನಮ್ಮ ಸರಬರಾಜು ವಿಶ್ವಾಸಾರ್ಹ ಮೂಲಗಳಿಂದ ಇರಬೇಕು. ನಮ್ಮ ಹಂಚಿಕೆಯ ಭದ್ರತೆಗೂ ಇದು ಮುಖ್ಯವಾಗಿದೆ. ವಿಶ್ವಾಸಾರ್ಹ ಮೂಲಗಳು ಅವು ಪ್ರತಿಕ್ರಿಯಾತ್ಮಕ ಪ್ರವೃತ್ತಿಯನ್ನು ಹೊಂದಿರುವುದಿಲ್ಲ ಆದ್ದರಿಂದ ಪೂರೈಕೆ ಸರಪಳಿಯು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ (ಟಿಟ್ ಫಾರ್ ಟಾಟ್) ವಿಧಾನದಿಂದ ರಕ್ಷಿಸಲ್ಪಡುತ್ತದೆ. ಪೂರೈಕೆ ಸರಪಳಿಯ ವಿಶ್ವಾಸಾರ್ಹತೆಗಾಗಿ, ಅದರಲ್ಲಿ ಪಾರದರ್ಶಕತೆ ಇರಬೇಕು. ಪಾರದರ್ಶಕತೆಯ ಕೊರತೆಯಿಂದಾಗಿ, ಇಂದು ಪ್ರಪಂಚದ ಅನೇಕ ಕಂಪನಿಗಳು ಸಣ್ಣ ವಸ್ತುಗಳ ಕೊರತೆಯನ್ನು ಎದುರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಗತ್ಯ ವಸ್ತುಗಳ ಪೂರೈಕೆ ಸಕಾಲಕ್ಕೆ ಆಗದಿದ್ದರೆ, ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಕರೋನಾ ಕಾಲದಲ್ಲಿ ಔಷಧ ಮತ್ತು ವೈದ್ಯಕೀಯ ಸರಬರಾಜುಗಳಲ್ಲಿ ನಾವು ಇದನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದೇವೆ. ಆದ್ದರಿಂದ ಸಮಯದ ಚೌಕಟ್ಟಿನೊಳಗೆ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ನಾವು ನಮ್ಮ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಬೇಕು. ಮತ್ತು ಇದಕ್ಕಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರ್ಯಾಯ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು.
ಘನತೆವೆತ್ತ ಅಧ್ಯಕ್ಷರೇ,
ಭಾರತವು ತನ್ನ ವಿಶ್ವಾಸಾರ್ಹತೆಯನ್ನು ಫಾರ್ಮಾಸ್ಯುಟಿಕಲ್ಸ್, ಐಟಿ ಮತ್ತು ಇತರ ವಸ್ತುಗಳ ವಿಶ್ವಾಸಾರ್ಹ ಮೂಲಗಳಾಗಿ ನಿರ್ಮಿಸಿದೆ. ಸ್ವಚ್ಛ ತಂತ್ರಜ್ಞಾನ ಪೂರೈಕೆ ಸರಪಳಿಯಲ್ಲಿಯೂ ನಮ್ಮ ಪಾತ್ರವನ್ನು ನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಪರಸ್ಪರ ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಮುಂದಿನ ಕ್ರಿಯಾ ಯೋಜನೆಯನ್ನು ರೂಪಿಸಲು ನಮ್ಮ ತಂಡಗಳಿಗೆ ತ್ವರಿತವಾಗಿ ಭೇಟಿಯಾಗುವಂತೆ ನಾವೆಲ್ಲಾ ಒಟ್ಟಾಗಿ ಸೂಚಿಸುವಂತೆ ಈ ಸಂದರ್ಭದಲ್ಲಿ ನಾನು ಸೂಚಿಸುತ್ತೇನೆ.
ಧನ್ಯವಾದಗಳು.