ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿ ಮನ್ ಕಿ ಬಾತ್ ನ 100 ನೇ ಸಂಚಿಕೆಯನ್ನು ಟ್ವೀಟ್ ಮಾಡಿದೆ. 'ಮನ್ ಕಿ ಬಾತ್: ಎ ಸೋಷಿಯಲ್ ರೆವಲ್ಯೂಷನ್ ಆನ್ ರೇಡಿಯೋ' ಪುಸ್ತಕದ ಮುನ್ನುಡಿಯಲ್ಲಿ ಜಪಾನಿನ ದಿವಂಗತ ಪ್ರಧಾನಿ ಶಿಂಜೋ ಅಬೆ ಅವರ ಸಂದೇಶವನ್ನು ರಾಯಭಾರ ಕಚೇರಿ ಸ್ಮರಿಸಿದೆ.
ಮನ್ ಕಿ ಬಾತ್ ನ 89 ನೇ ಸಂಚಿಕೆಯನ್ನು ರಾಯಭಾರ ಕಚೇರಿ ನೆನಪಿಸಿಕೊಂಡಿದೆ, ಅಲ್ಲಿ ಪ್ರಧಾನಿ ಮೋದಿ ಭಾರತ-ಜಪಾನ್ ಸಾಂಸ್ಕೃತಿಕ ಸಂಬಂಧಗಳನ್ನು ಶ್ಲಾಘಿಸಿದರು, ಏಷ್ಯಾದ ದೇಶಗಳಲ್ಲಿ ಮಹಾಭಾರತ ಮತ್ತು ರಾಮಾಯಣವನ್ನು ಪ್ರದರ್ಶಿಸುತ್ತಿರುವ ಜಪಾನಿನ ಕಲಾವಿದರನ್ನು ಉಲ್ಲೇಖಿಸಿದರು.
ಟ್ವೀಟ್ ಥ್ರೆಡ್ ಗೆ ಪ್ರತ್ಯುತ್ತರ ನೀಡಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಕರುಣಾಮಯಿ ಮಾತುಗಳಿಗಾಗಿ ಮತ್ತು ನನ್ನ ಸ್ನೇಹಿತ ದಿವಂಗತ ಶ್ರೀ ಶಿಂಜೋ ಅಬೆ ಅವರನ್ನು ನೆನಪಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು."
Thank you for the kind words and for also remembering my friend, late Mr. Shinzo Abe. #MannKiBaat https://t.co/qmf4hNvfVv
— Narendra Modi (@narendramodi) May 3, 2023