ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಏಷ್ಯಾಟಿಕ್ ಸಿಂಹಗಳ ಕುರಿತು ರಾಜ್ಯಸಭಾ ಸದಸ್ಯರಾದ ಪರಿಮಲ್ ನಾಥ್ವಾನಿ ಅವರು ಬರೆದಿರುವ ಕಾಫಿ ಟೇಬಲ್ ಪುಸ್ತಕ "ಕಾಲ್ ಆಫ್ ದಿ ಗಿರ್" ನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.
ದೆಹಲಿಯಲ್ಲಿ ಶ್ರೀ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಈ ಪುಸ್ತಕವನ್ನು ನೀಡಿದ್ದಾರೆ.
ಇದನ್ನು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ಮೋದಿಯವರು ಹಂಚಿಕೊಂಡಿದ್ದಾರೆ.
“ಸೋದರ ಪರಿಮಲ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಯಿತು. ಗಿರ್ ಉದ್ಯಾನವನದಲ್ಲಿರುವ ಏಷ್ಯಾಟಿಕ್ ಸಿಂಹಗಳ ಕುರಿತು ನೀವು ಬರೆದಿರುವ ಪುಸ್ತಕ ಪಡೆದಿದ್ದು ಖುಷಿಯಾಯಿತು. ವನ್ಯಜೀವಿಗಳ ಬಗ್ಗೆ ನೀವು ಹೊಂದಿರುವ ಪ್ರೀತಿ ಮತ್ತು ಕಾಳಜಿ ಬಗ್ಗೆ ನಾನು ತಿಳಿದಿದ್ದೇನೆ. ಗಿರ್ ನಲ್ಲಿರುವ ಏಷ್ಯಾಟಿಕ್ ಸಿಂಹಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಖಂಡಿತವಾಗಿಯೂ ಈ ಪುಸ್ತಕ ಸಹಾಯವಾಗುತ್ತದೆ.'' @mpparimal” ಎಂದು ಬರೆದುಕೊಂಡಿದ್ದಾರೆ.
Glad to have met you, Parimal Bhai and received a copy of your work on Gir. I’ve always known you as someone passionate about wildlife and this work will surely help all those interested in the majestic Gir Lion. @mpparimal https://t.co/mRKPOtK43D
— Narendra Modi (@narendramodi) July 31, 2024