ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ನವೆಂಬರ್ 21-22ರ ಗಯಾನ ಪ್ರವಾಸದ ಅಂಗವಾಗಿ ಇಂದು ಜಾರ್ಜ್ ಟೌನ್ ಗೆ ಆಗಮಿಸಿದರು. 56 ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿ ಅವರು ಕೈಗೊಂಡಿರುವ ಮೊದಲ ಭೇಟಿ ಇದಾಗಿದೆ. ವಿಶೇಷ ಗೌರವಾರ್ಥವಾಗಿ ಪ್ರಧಾನಿ ಅವರು ವಿಮಾನನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಗಯಾನ ಅದ್ಯಕ್ಷ ಗೌರವಾನ್ವಿತ ಡಾ. ಮೊಹಮ್ಮದ್ ಇರ್ಫಾನ್ ಅಲಿ, ಗಯಾನಾ ಪ್ರಧಾನಮಂತ್ರಿ ಗೌರವಾನ್ವಿತ ಬ್ರಿಗೇಡಿಯರ್ (ನಿವೃತ್ತ) ಮಾರ್ಕ್ ಆಂಥೋನಿ ಫಿಲಿಪ್ಸ್ ಅವರೊಂದಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಗಯಾನಾ ಸರ್ಕಾರದ ಹತ್ತಕ್ಕೂ ಅಧಿಕ ಸಂಪುಟ ಸಚಿವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ಅವರು ಹೋಟೆಲ್ ಗೆ ಆಗಮಿಸುತ್ತಿದ್ದಂತೆಯೇ, ಅವರನ್ನು ಅಧ್ಯಕ್ಷ ಅಲಿ ಅವರು ಬಾರ್ಬಡೋಸ್ ನ ಪ್ರಧಾನಿ ಗೌರವಾನ್ವಿತ ಮಿಯಾ ಅಮೋರ್ ಮೊಟ್ಲಿ ಮತ್ತು ಗ್ರೆನಡಾದ ಪ್ರಧಾನ ಮಂತ್ರಿ ಗೌರವಾನ್ವಿತ ಡಿಕನ್ ಮಿಚೆಲ್ ಅವರು ಸ್ವಾಗತಿಸಿದರು. ಅಲ್ಲದೆ, ಪ್ರಧಾನಮಂತ್ರಿ ಅವರು ಗಯಾನದ ಹಲವು ಸಚಿವ ಸಂಪುಟದ ಸಮಕ್ಷಮದಲ್ಲಿ ಭಾರತೀಯ ಸಮುದಾಯ ಮತ್ತು ಭಾರತ-ಗಯಾನದ ಅನಿವಾಸಿಗಳಿಂದ ವರ್ಣರಂಜಿತ ಮತ್ತು ಭವ್ಯ ಸ್ವಾಗತವನ್ನು ಸ್ವೀಕರಿಸಿದರು. ವಿಮಾನ ನಿಲ್ದಾಣ ಮತ್ತು ಹೋಟೆಲ್‌ನಲ್ಲಿ ಸ್ವಾಗತದ ನಡುವೆ, ಇಡೀ ಗಯಾನಾ ಸರ್ಕಾರದ ಸಚಿವ ಸಂಪುಟದ ಸದಸ್ಯರು ಉಪಸ್ಥಿತರಿದ್ದರು. ಭಾರತ-ಗಯಾನಾ ನಡುವಿನ ನಿಕಟ ಸ್ನೇಹಕ್ಕೆ ಸಾಕ್ಷಿಯಾಗಿ, ಜಾರ್ಜ್‌ಟೌನ್ ನ ಮೇಯರ್ ಅವರು "ಕೀ ಟು ದಿನ ಸಿಟಿ ಆಫ್ ಜಾರ್ಜ್‌ಟೌನ್" ಅನ್ನು ಪ್ರಧಾನಮಂತ್ರಿಗೆ ಹಸ್ತಾಂತರಿಸಿದರು.