ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶಾದ್ಯಂತ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಸಾವಿರಾರು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
1.3 ಲಕ್ಷ ಮಹಿಳೆಯರನ್ನು ಒಳಗೊಂಡ ಸ್ವಸಹಾಯ ಗುಂಪಿನ ಭಾಗವಾಗಿರುವ ದೇವಾಸ್ ಮಧ್ಯಪ್ರದೇಶದ ರುಬಿನಾ ಖಾನ್, ಸ್ವಸಹಾಯ ಸಂಘದಿಂದ ಸಾಲ ಪಡೆದು ಬಟ್ಟೆ ಮಾರಾಟ ಮಾಡುವ ಸಣ್ಣ ಉದ್ಯಮವನ್ನು ಪ್ರಾರಂಭಿಸಿ ಕಾರ್ಮಿಕ ಜೀವನವನ್ನು ತೊರೆದರು. ನಂತರ ಅವರು ತಮ್ಮ ಸರಕುಗಳನ್ನು ಮಾರಾಟ ಮಾಡಲು ಸೆಕೆಂಡ್ ಹ್ಯಾಂಡ್ ಮಾರುತಿ ವ್ಯಾನ್ ಪಡೆದರು. ಈ ಕುರಿತು ಪ್ರಧಾನ ಮಂತ್ರಿಯು 'ಮೇರೆ ಪಾಸ್ ಸೈಕಲ್ ಭಿ ನಹೀ ಹೈ' ಎಂದು ತಮಾಷೆ ಮಾಡಿದರು.
ನಂತರ ಆ ಮಹಿಳೆ ಪ್ರಗತಿ ಸಾಧಿಸಿ ಉತ್ತಮ ರೀತಿಯಲ್ಲಿ ಸಾಗಿದ್ದಾರೆ.
ಅವರು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮಾಸ್ಕ್‌ಗಳು, ಪಿಪಿಪಿ ಕಿಟ್ ಮತ್ತು ಸ್ಯಾನಿಟೈಜರ್‌ಗಳನ್ನು ತಯಾರಿಸಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ (CRP) ತಮ್ಮ ಅನುಭವವನ್ನು ವಿವರಿಸಿದರು. ಉದ್ಯಮಶೀಲತೆಯ ಜೀವನಕ್ಕೆ ಮಹಿಳೆಯರಿಗೆ ಹೇಗೆ ಸ್ಫೂರ್ತಿ ನೀಡಿದರು ಎಂದು ತಿಳಿಸಿದರು. 40 ಗ್ರಾಮಗಳಲ್ಲಿ ಈ ರೀತಿಯ ಗುಂಪುಗಳನ್ನು ರಚಿಸಲಾಗಿದೆ.
ಸ್ವಸಹಾಯ ಗುಂಪುಗಳ ಮಹಿಳೆಯರಲ್ಲಿ ಸುಮಾರು 2 ಕೋಟಿ ಸಹೋದರಿಯರನ್ನು ಲಕ್ಷಾಧೀಶ್ವರರನ್ನಾಗಿ ಮಾಡುವ ಉದ್ದೇಶ ಹೊಂದಿರುವುದಾಗಿ ಪ್ರಧಾನಿ ತಿಳಿಸಿದರು. ಈ ಕನಸಿನಲ್ಲಿ ಪಾಲುದಾರರಾಗಲು ನಾವು ನೆರವಾಗುತ್ತೇವೆ ಎಂದು ಭರವಸೆ ನೀಡಿದರು.
'ಪ್ರತಿಯೊಬ್ಬ ಶ್ರೀಮಂತರಾಗಬೇಕು ಎಂದು ನಾನು ಬಯಸುತ್ತೇನೆ' ಎಂದು ಹೇಳಿದರು. ಇದಕ್ಕೆ ಎಲ್ಲರೂ ಕೈ ಎತ್ತುವ ಮೂಲಕ ದನಿಗೂಡಿಸಿದರು. ಅವರ ಆತ್ಮವಿಶ್ವಾಸವನ್ನು ಪ್ರಧಾನಿ ಶ್ಲಾಘಿಸಿದರು.
"ನಮ್ಮ ತಾಯಂದಿರು ಮತ್ತು ಸಹೋದರಿಯರ ವಿಶ್ವಾಸವು ನಮ್ಮ ದೇಶವನ್ನು ಸ್ವಾವಲಂಬಿಯಾಗಿಸುತ್ತದೆ" ಎಂದು ಅವರು ಹೇಳಿದರು.
ಶ್ರೀಮತಿ ಖಾನ್ ಅವರ ಪ್ರಯಾಣವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಸ್ವಸಹಾಯ ಸಂಘವು ಮಹಿಳೆಯರಿಗೆ ಮತ್ತು ಅವರ ಆತ್ಮವಿಶ್ವಾಸದ ಸ್ವಾವಲಂಬನೆಯ ಮಾಧ್ಯಮವಾಗಿ ಸಾಬೀತುಪಡಿಸುತ್ತಿದೆ ಎಂದು ಹೇಳಿದರು, ಕನಿಷ್ಠ 2 ಕೋಟಿ ಸಹೋದರಿಯನ್ನು ಲಕ್ಷಾಧೀಶ್ವರರನ್ನಾಗಿ ಮಾಡಲು ಶ್ರಮಿಸಲು ನನ್ನನ್ನು ಉತ್ತೇಜಿಸುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು. ಇಡೀ ಗ್ರಾಮವು ಸಮೃದ್ಧವಾಗಿದೆ ಎಂದು ಅವರು ತಿಳಿಸಿದರು.