ಘನತೆವೆತ್ತ ಪ್ರಧಾನಮಂತ್ರಿ ಪುಷ್ಪ ಕಮಾಲ್ ದಹಾಲ್ ‘ಪ್ರಚಂಡ’ ಅವರೇ
ನೇಪಾಳ ನಿಯೋಗದ ಗೌರವಾನ್ವಿತ ಸದಸ್ಯರೇ
ಮಾಧ್ಯಮದ ಸ್ನೇಹಿತರೆ
ನಮ್ಮ ಗೆಳೆತನದ ಇತಿಹಾಸದಲ್ಲಿ, ಇಂದು ಮಹತ್ವದ ದಿನ.
ಅಧಿಕಾರ ವಹಿಸಿಕೊಂಡ ಬಳಿಕ ವಿದೇಶದ ಪ್ರಥಮ ಭೇಟಿಯಲ್ಲಿರುವ ಘನತೆವೆತ್ತ ‘ಪ್ರಚಂಡ’ ಹಾಗೂ ಅವರ ನಿಯೋಗವನ್ನು ಭಾರತದಲ್ಲಿ ಸ್ವಾಗತಿಸುವುದು ನನಗೆ ಹೆಮ್ಮೆಯ ವಿಚಾರವಾಗಿದೆ.
ಸ್ನೇಹಿತರೇ,
ನಮ್ಮ ಎರಡೂ ಸಮಾಜಗಳು ಆಳವಾದ ಬೇರು ಬಿಟ್ಟ ಐತಿಹಾಸಿಕ ಮತ್ತು ನಾಗರಿಕ ನಂಟು ಹೊಂದಿವೆ.
ನದಿಗಳು, ಮುಕ್ತ ಗಡಿಗಳು, ಕಾಲಾತೀತ ಜನರೊಂದಿಗಿನ ಸಂಪರ್ಕದ ಹಂಚಿಕೆ ನಮ್ಮ ಎರಡೂ ದೇಶಗಳನ್ನು ಹತ್ತಿರದಿಂದ ಬೆಸೆದಿವೆ.
ನಮ್ಮ ಸರ್ಕಾರಗಳ ನಡುವಿನ ಬಾಂಧವ್ಯ, ನಮ್ಮ ಸಮಾಜಗಳ ನಡುವಿನ ನಂಟು ನಮ್ಮ ಪಾಲುದಾರಿಕೆಗೆ ಆಳ ಮತ್ತು ಲಕ್ಷಣ ನೀಡಿವೆ.
ನಾವು ಕಷ್ಟದ ಸಮಯದಲ್ಲಿ ನಮ್ಮ ಹೊರೆಯನ್ನು ಹಂಚಿಕೊಂಡಿದ್ದೇವೆ, ಅದೇ ರೀತಿ ಪರಸ್ಪರರ ಸಾಧನೆಗಳನ್ನು ನಾವು ಆಚರಿಸಿದ್ದೇವೆ.
ನಮ್ಮ ಗೆಳೆತನವು ಸಮಯ ಪರಿಕ್ಷಿತ ಮತ್ತು ವಿಶಿಷ್ಠ
ನೆರೆಯ ಮತ್ತು ಮಿತ್ರ ರಾಷ್ಟ್ರಗಳಾಗಿ, ನೇಪಾಳದ ಪ್ರಗತಿ, ಸ್ಥಿರತೆ ಮತ್ತು ಶಾಂತಿ ನಮ್ಮ ವಿನಿಮಯಿತ ಉದ್ದೇಶವಾಗಿದೆ.
ನೇಪಾಳದ ಅಭಿವೃದ್ಧಿಯ ಪಯಣದ ಪ್ರತಿ ಹೆಜ್ಜೆಯಲ್ಲೂ ಮತ್ತು ಆರ್ಥಿಕ ಪ್ರಗತಿಯಲ್ಲಿ ನಾವು ನಿಮ್ಮ ಗೌರವಾನ್ವಿತ ಪಾಲುದಾರರಾಗಿದ್ದೇವೆ.
ನೇಪಾಳದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವಲ್ಲಿ ನೀವು ವೈಯಕ್ತಿಕವಾಗಿ ವಹಿಸಿದ ಪಾತ್ರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ.
ನೇಪಾಳದಲ್ಲಿ ನೀವು ಪ್ರೇರಕ ಶಕ್ತಿಯಾಗಿದ್ದೀರಿ. ನಿಮ್ಮ ನಾಯಕತ್ವದಲ್ಲಿ, ನಿಮ್ಮ ವೈವಿಧ್ಯಮಯ ಸಮಾಜದ ಎಲ್ಲ ವರ್ಗದವರ ಆಶೋತ್ತರಗಳಿಗೆ ಅವಕಾಶ ನೀಡಿ ಸಮಗ್ರ ಮಾತುಕತೆಯ ಮೂಲಕ ನೇಪಾಳದಲ್ಲಿ ಸಂವಿಧಾನವನ್ನು ಯಶಸ್ವಿಯಾಗಿ ಜಾರಿ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.
ನಿಮ್ಮ ಈ ಪ್ರಯತ್ನದಲ್ಲಿ ಸಕಲ ಯಶಸ್ಸು ದೊರಕಲಿ ಎಂದು ನಾನು ಶುಭ ಕೋರುತ್ತೇನೆ.
ಸ್ನೇಹಿತರೇ,
ಇಂದು ನಾವು ನಡೆಸಿದ ಫಲಪ್ರದ ಮತ್ತು ವಿಸ್ತೃತ ಚರ್ಚೆ, ಪ್ರಧಾನಮಂತ್ರಿ ಪ್ರಚಂಡ ಮತ್ತು ನಾನು, ದ್ವಿಪಕ್ಷೀಯ ಸಹಕಾರದ ಸಂಪೂರ್ಣ ಆಯಾಮಗಳನ್ನು ಕವರ್ ಮಾಡಿದ್ದೇವೆ.
ನೇಪಾಳದೊಂದಿಗೆ ಅಭಿವೃದ್ಧಿ ಪಾಲುದಾರಿಕೆಯನ್ನು ಬಲಪಡಿಸಲು ಭಾರತ ಸಿದ್ಧವಾಗಿದೆ ಮತ್ತು ನಿಮ್ಮೊಂದಿಗೆ ನಿಂತಿದೆ ಎಂಬುದನ್ನು ಪ್ರಧಾನಿ ಪ್ರಚಂಡ ಅವರಿಗೆ ನಾನು ತಿಳಿಸಿರುತ್ತೇನೆ.
ಮತ್ತು, ನೇಪಾಳದ ಜನರ ಮತ್ತು ಸರ್ಕಾರದ ಆದ್ಯತೆಗಳಿಗೆ ಅನುಗುಣವಾಗಿ ಕಾರ್ಯೋನ್ಮುಖರಾಗುತ್ತೇವೆ.
ಈ ನಿಟ್ಟಿನಲ್ಲಿ, ನಾವು ಇಂದು ಭೂಕಂಪೋತ್ತರ ನೇಪಾಳದ ಮರು ನಿರ್ಮಾಣಕ್ಕೆ 750 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಒಪ್ಪಂದಕ್ಕೆ ಅಂಕಿತ ಹಾಕಿದ್ದೇವೆ.
ಕಳೆದ ವರ್ಷ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಂತ್ರಸ್ತರಾದ ಲಕ್ಷಾಂತರ ಜನರಿಗೆ ಇದು ಪರಿಹಾರ ಒದಗಿಸುತ್ತದೆ ಎಂಬ ನಂಬಿಕೆ ನನಗಿದೆ.
ಅಲ್ಲದೆ ಭಾರತವು ಹೊಸ ಯೋಜನೆಗಳು ಅಂದರೆ ತೇರಾಯ್ ರಸ್ತೆ, ವಿದ್ಯುತ್ ಪ್ರಸರಣ ಮಾರ್ಗ, ಉಪ ಕೇಂದ್ರ ಹಾಗೂ ಕಾಸ್ಕಿಯಲ್ಲಿ ಒಂದು ಪಾಲಿಟೆಕ್ನಿಕ್ ಹೊಸ ಯೋಜನೆಗೆ ಹೆಚ್ಚುವರಿ ಲೈನ್ ಆಫ್ ಕ್ರೆಡಿಟ್ ನೀಡಲೂ ಒಪ್ಪಿಗೆ ನೀಡಿದೆ.
ಸ್ನೇಹಿತರೇ,
ನಮ್ಮ ಸಮಾಜದ ಸುರಕ್ಷತೆಗೆ ನಮ್ಮ ಅಭಿವೃದ್ಧಿ ಉದ್ದೇಶ ಮತ್ತು ಬಲವಾದ ಆರ್ಥಿಕ ಪ್ರಗತಿ ಸಾಧಿಸುವುದು ಅವಶ್ಯ ಎಂಬುದನ್ನು ಪ್ರಧಾನಿ ಪ್ರಚಂಡ ಮತ್ತು ನಾನು ಗುರುತಿಸಿದ್ದೇವೆ.
ನಮ್ಮ ಭದ್ರತೆ ಹಿತ ನಿಕಟ ಮತ್ತು ಪರಸ್ಪರ ಸಂಪರ್ಕಿತವಾಗಿವೆ ಎಂಬುದನ್ನು ನಾವು ಒಪ್ಪಿದ್ದೇವೆ.
ನಮ್ಮ ದೇಶಗಳ ನಡುವಿನ ಮುಕ್ತ ಗಡಿಗಳು ಸಹಕಾರಕ್ಕೆ ಮತ್ತು ನಮ್ಮ ಜನರ ನಡುವಿನ ಸಂವಾದಕ್ಕೆ ದೊಡ್ಡ ಅವಕಾಶ ಕಲ್ಪಿಸಿವೆ.
ಆದರೆ, ಈ ಗಡಿಯನ್ನು ದುರ್ಬಳಕೆ ಮಾಡಿಕೊಳ್ಳುವ ಶಕ್ತಿಗಳ ವಿರುದ್ಧ ನಾವು ಕಾವಲು ನಡೆಸಲೇ ಬೇಕು. ನಮ್ಮ ರಕ್ಷಣೆ ಮತ್ತು ಭದ್ರತಾ ಸಂಸ್ಥೆಗಳ ನಡುವೆ ಮುಂದುವರಿದ ನಿಕಟ ಸಹಕಾರವು, ನಮ್ಮ ವೃದ್ಧಿಸುತ್ತಿರುವ ವಾಣಿಜ್ಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಅಭಿವೃದ್ಧಿ ಪಾಲುದಾರಿಕೆಗೆ ಹಾಗೂ ನಮ್ಮ ಜನತೆಗೆ ಒಳಿತಿಗೆ ಮಹತ್ವದ್ದಾಗಿದೆ.
ಸ್ನೇಹಿತರೇ,
ವಾಣಿಜ್ಯ, ಸಂಪರ್ಕ, ಅದರ ಎಲ್ಲ ಆಯಾಮಗಳ ಅಭಿವೃದ್ಧಿ ಯೋಜನೆಗಳು ಮತ್ತು ಪರಸ್ಪರ ಹೂಡಿಕೆ ನೇಪಾಳದೊಂದಿಗೆ ನಮ್ಮ ಪಾಲುದಾರಿಕೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ.
ಮುಕ್ತ ಆಕಾಶ, ಗಡಿಯಾಚೆಗಿನ ಇಂಧನ ವ್ಯಾಪಾರ, ಸಂಚಾರ ಮಾರ್ಗಗಳು, ಗಡಿಯಾಚೆಗಿನ ಸಂಪರ್ಕ ನೇಪಾಳಕ್ಕೆ ನೇರವಾಗಿ ಲಾಭವಾಗುತ್ತಿದೆ ಮತ್ತು ನಮ್ಮ ಆರ್ಥಿಕ ಪಾಲುದಾರಿಕೆ ಬಲಪಡಿಸಲು ನೆರವಾಗಿದೆ.
ನೇಪಾಳ ಮತ್ತು ಭಾರತ ಇಂಧನ ಮತ್ತು ಜಲ ಸಂಪನ್ಮೂಲ ವಲಯ ಸೇರಿದಂತೆ ಆರ್ಥಿಕ ಕಾರ್ಯಕ್ರಮಗಳ ಶ್ರೇಣಿಯ ಕ್ಷೇತ್ರದಲ್ಲಿ ನಿಕಟವಾಗಿ ಕಾರ್ಯೋನ್ಮುಖವಾಗಿವೆ.
ಪ್ರಧಾನಿ ಪ್ರಚಂಡ ಮತ್ತು ನಾನು ಈಗ ನಡೆಯುತ್ತಿರುವ ಜಲ ವಿದ್ಯುತ್ ಯೋಜನೆ ಮತ್ತು ಅಭಿವೃದ್ಧಿ ಮತ್ತು ಪ್ರಸರಣ ಮಾರ್ಗಗಳ ಕಾರ್ಯಾಚರಣೆಯ ತ್ವರಿತ ಹಾಗೂ ಯಶಸ್ವೀ ಜಾರಿಗೆ ಒಪ್ಪಿಗೆ ನೀಡಿದ್ದೇವೆ.
ಇದು ನೇಪಾಳಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ಇಂಧನ ಮತ್ತು ಆದಾಯ ತರುವ ಮೂಲವಾಗಿದೆ.
ನಮ್ಮ ಸಮುದಾಯಗಳ ನಡುವಿನ ನಂಟಿಗೆ ಆಳ ಮತ್ತು ಹುರುಪು ಸೇರಿಸುವುದು ಅಗತ್ಯ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ.
ನಾವು ನಮ್ಮಲ್ಲಿ ಹಂಚಿಕೊಂಡಿರುವ ಬೌದ್ಧ ಪರಂಪರೆಯನ್ನು ಪ್ರದರ್ಶಿಸಲು ಮತ್ತು ಆಯುರ್ವೇದ ಮತ್ತುಇತರ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಅಭಿವೃದ್ಧಿಗೆ ಗಮನ ನೀಡಲು ಒಪ್ಪಿಗೆ ಸೂಚಿಸಿದ್ದೇವೆ.
ಪ್ರಧಾನಮಂತ್ರಿಯವರು ಹಾಗೂ ನಾನು ಅಭಿವೃದ್ಧಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮತ್ತು ಅದರ ಮೇಲೆ ನಿಕಟ ನಿಗಾ ಇಡಲೂ ಸಮ್ಮತಿಸಿದ್ದೇವೆ.
ಇಂದು ಕೈಗೊಂಡ ನಮ್ಮ ನಿರ್ಧಾರಗಳು ನಮ್ಮ ಆರ್ಥಿಕ ಕಾರ್ಯಕ್ರಮಗಳಿಗೆ ಬಲ ನೀಡುತ್ತವೆ ಮತ್ತು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬ ವಿಶ್ವಾಸ ನನಗೆ ಮತ್ತು ಪ್ರಧಾನಮಂತ್ರಿಯವರಿಗೆ ಇದೆ.
ಘನತೆವೆತ್ತರೇ,
ನಿಮ್ಮ ಭೇಟಿ ಹೆಚ್ಚು ಸಕಾಲಿಕವಾಗಿದೆ.
ನಾವಿಂದು ನಡೆಸಿದ ಚರ್ಚೆ, ನಮ್ಮ ಶತಮಾನಗಳಷ್ಟು ಹಳೆಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ನಂಬಿಕೆ ನನಗಿದೆ.
ಮತ್ತು ನಮ್ಮ ಪಾಲುದಾರಿಕೆಯಲ್ಲಿ ಹೊಸ ಮತ್ತು ವೈಭವದ ಅಧ್ಯಾಯ ಬರೆಯಲಿದೆ. ಘನತೆವೆತ್ತರೇ, ಮತ್ತೊಮ್ಮೆ ನಿಮಗೆ ಭಾರತಕ್ಕೆ ಆತ್ಮೀಯ ಸ್ವಾಗತ. ನೀವು ಭಾರತದಲ್ಲಿ ಆಹ್ಲಾದಕರ ಮತ್ತು ಫಲಪ್ರದ ವಾಸ್ತವ್ಯ ಅನುಭವಿಸುತ್ತೀರಿ ಎಂಬ ವಿಶ್ವಾಸ ನನಗಿದೆ.
ಧನ್ಯವಾದಗಳು.
PM begins press remarks: Welcome Excellency Prachanda. Today a significant day in history of our friendship pic.twitter.com/U7KhsiF0VI
— Vikas Swarup (@MEAIndia) September 16, 2016
PM: Our friendship is time-tested & unique.We share our burden during difficult times,just as we celebrate each other’s achievements.
— Vikas Swarup (@MEAIndia) September 16, 2016
PM:As immediate neighbours& close friendly nations,peace, stability,&eco prosperity of Nepal is our shared objective pic.twitter.com/qUanlDsivz
— Vikas Swarup (@MEAIndia) September 16, 2016
PM:Commend role you've personally played in strengthening democratic institutions in Nepal. Wish you every success pic.twitter.com/JlbWAPXEB4
— Vikas Swarup (@MEAIndia) September 16, 2016
PM:India stands ready & prepared to strengthen development p'ship w/Nepal. We will do so as per the priorities of the people & govt of Nepal
— Vikas Swarup (@MEAIndia) September 16, 2016
PM:Our security interests are inter-linked.We agreed that securing our societies is essential for achieving shared objectives of dev &growth
— Vikas Swarup (@MEAIndia) September 16, 2016
PM: Continued coopn b/w our defence & security agencies is imp to guard our open borders that provide opp'ties for interaction to our people
— Vikas Swarup (@MEAIndia) September 16, 2016
PM highlights key pillars of p'ship & mentions India’s initiatives that would benefit Nepal & strengthen our p'ship pic.twitter.com/qPQD15SDdF
— Vikas Swarup (@MEAIndia) September 16, 2016
PM:We agreed to push for speedy &successful implementation of ongoing hydropower pjcts & dev. & operationalization of transmission lines
— Vikas Swarup (@MEAIndia) September 16, 2016
PM:We have agreed to show case our shared Buddhist heritage & focus on the development of Ayurveda and other traditional systems of medicine
— Vikas Swarup (@MEAIndia) September 16, 2016
PM: PM and I have also agreed to focus on close monitoring and time bound completion of all development projects. pic.twitter.com/aQmR1OGokh
— Vikas Swarup (@MEAIndia) September 16, 2016
PM ends:Confident that our discussion today wud further cement our centuries old relations.And,write a new & glorious chapter of our p'ship
— Vikas Swarup (@MEAIndia) September 16, 2016