ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು ತಮ್ಮ ತಾಯಿಯ ಗೌರವಾರ್ಥ ಸಸಿ ನೆಡುತ್ತಿರುವುದು ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಉಪರಾಷ್ಟ್ರಪತಿ ಅವರನ್ನು ಪ್ರಶಂಸಿಸಿದ್ದಾರೆ.
ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ನವದೆಹಲಿಯ ಯಮುನಾ ನದಿಯ ದಡದಲ್ಲಿರುವ ಪರಿಸರ ತಾಣವಾದ ಅಸಿಟಾದಲ್ಲಿ ತಮ್ಮ ತಾಯಿ ಶ್ರೀಮತಿ ಕೇಸರಿ ದೇವಿಯವರ ಗೌರವಾರ್ಥವಾಗಿ ಒಂದು ಸಸಿಯನ್ನು ನೆಟ್ಟರು.
ಪ್ರಧಾನಮಂತ್ರಿಯವರು Xನಲ್ಲಿ:
"ಗೌರವಾನ್ವಿತ @VPIndia ಅವರು ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ, ಅವರಿಗೆ ಗೌರವ ಸಲ್ಲಿಸಲು ಒಂದು ಸಸಿಯನ್ನು ನೆಟ್ಟಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
अनुकरणीय! माँ के आदर और सम्मान में माननीय @VPIndia जी का पेड़ लगाना हर किसी को प्रेरित करने वाला है।#एक_पेड़_माँ_के_नाम https://t.co/BjxOtl7rOe
— Narendra Modi (@narendramodi) July 27, 2024