ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶ್ಮೀರದ ಶ್ರೀಮಂತ ಸಂಸ್ಕೃತಿ, ಕಲೆ ಮತ್ತು ಕರಕುಶಲತೆಯನ್ನು ಪ್ರದರ್ಶಿಸುವ ಸಂಸ್ಕೃತಿ ಸಚಿವಾಲಯದ ವಿಟಾಸ್ಟಾ ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ.
ಕಾಶ್ಮೀರದ ಶ್ರೀಮಂತ ಸಂಸ್ಕೃತಿ, ಕಲೆ ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸಲು ಸಂಸ್ಕೃತಿ ಸಚಿವಾಲಯವು 2023 ರ ಜನವರಿ 27 ರಿಂದ 30 ರವರೆಗೆ ವಿಟಾಸ್ಟಾ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಕಾಶ್ಮೀರದ ಐತಿಹಾಸಿಕ ಗುರುತಿಸುವಿಕೆಯನ್ನು ಇತರ ರಾಜ್ಯಗಳಿಗೆ ವಿಸ್ತರಿಸುತ್ತದೆ ಮತ್ತು ಇದು 'ಏಕ್ ಭಾರತ್ ಶ್ರೇಷ್ಠ ಭಾರತ್' ನ ಸ್ಫೂರ್ತಿಯ ಸಂಕೇತವಾಗಿದೆ.
ಅಮೃತ ಮಹೋತ್ಸವ್ ದ ಟ್ವೀಟ್ ಎಳೆಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಈ ಬಗ್ಗೆ ಟ್ವೀಟ್ ಮಾಡಿದ್ದು; ಅದರಲ್ಲಿ :
"कश्मीर की समृद्ध विरासत, विविधता और विशिष्टता का अनुभव कराती एक अद्भुत पहल!" ಎಂದು ಹೇಳಿದ್ದಾರೆ.
कश्मीर की समृद्ध विरासत, विविधता और विशिष्टता का अनुभव कराती एक अद्भुत पहल! https://t.co/Dc7mDaAN39
— Narendra Modi (@narendramodi) January 29, 2023