ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭುವನೇಶ್ವರದ ಕಳಿಂಗ ಸಮಾಜ ವಿಜ್ಞಾನ ಸಂಸ್ಥೆಯಲ್ಲಿ ಪ್ರಥಮ ಜನಜಾತಿ ಖೇಲ್ ಮಹೋತ್ಸವವನ್ನು ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರೀಡಾಕೂಟವನ್ನು ಬೃಹತ್ ಆರಂಭ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ಅವರು, ದೇಶಕ್ಕೆ ಕೀರ್ತಿ ತರುವಲ್ಲಿ ಬುಡಕಟ್ಟು ಕ್ರೀಡಾಪಟುಗಳ ಪಾತ್ರವನ್ನು ಒಪ್ಪಿಕೊಂಡರು.
ಅಮೃತ ಮಹೋತ್ಸವದ ಟ್ವೀಟ್ ಗೆ ಉತ್ತರಿಸಿದ ಪ್ರಧಾನಮಂತ್ರಿ ಅವರು: " ನಮ್ಮ ಕ್ರೀಡಾ ಜಗತ್ತಿನಲ್ಲಿ ಉತ್ತಮ ಆರಂಭ! ಜಾಗತಿಕ ಕಾರ್ಯಕ್ರಮಗಳಲ್ಲಿ ಭಾರತವನ್ನು ಗುರುತಿಸುವಲ್ಲಿ ಬುಡಕಟ್ಟು ಕ್ರೀಡಾಪಟುಗಳು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅಂತಹ ಪ್ರಯತ್ನಗಳು ಈ ಸಮುದಾಯದಿಂದ ದೇಶಕ್ಕೆ ಹೊಸ ಪ್ರತಿಭೆಗಳನ್ನು ನೀಡುತ್ತವೆ." ಎಂದು ಹೇಳಿದ್ದಾರೆ.
हमारे खेल जगत में एक बड़ी शुरुआत! वैश्विक स्पर्धाओं में भारत को पहचान दिलाने में जनजातीय खिलाड़ियों की बड़ी भूमिका रही है। ऐसे प्रयासों से देश को इस समुदाय से नए-नए टैलेंट मिलेंगे। https://t.co/NTQkwEFAMn
— Narendra Modi (@narendramodi) June 14, 2023