ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಮ್ಲಾದ ಸ್ಯಾನಿಟರಿ ನ್ಯಾಪ್ಕಿನ್ ಘಟಕ ಆರಂಭಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಮಹಿಳೆಯರಲ್ಲಿ ಆರೋಗ್ಯ ಹೆಚ್ಚಿಸಲು ಮತ್ತು ಉದ್ಯೋಗವನ್ನು ಉತ್ತೇಜಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಇದು ಕಾರಣವಾಗುತ್ತದೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಸಂಸದ ಸುರೇಶ್ ಕಶ್ಯಪ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಗಳು, 'ಶಿಮ್ಲಾದ ಈ ಸ್ಯಾನಿಟರಿ ನ್ಯಾಪ್ಕಿನ್ ಘಟಕ ಮಹಿಳಾ ಸಬಲೀಕರಣದ ಕಡೆಗೆ ಶ್ಲಾಘನೀಯ ಉಪಕ್ರಮವಾಗಿದೆ.
ಇದು ಅವರ ಆರೋಗ್ಯದ ಜೊತೆಗೆ ಉದ್ಯೋಗ ಸೃಷ್ಟಿಗೆ ಮಾರ್ಪಟ್ಟಿರುವುದು ತುಂಬಾ ಸಂತೋಷದ ವಿಷಯ' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
शिमला का यह सेनेटरी नैपकिन प्लांट महिला सशक्तिकरण की दिशा में एक सराहनीय पहल है। बहुत खुशी की बात है कि यह उनके स्वास्थ्य के साथ-साथ रोजगार का भी साधन बना है। https://t.co/rBtJnDQbG3
— Narendra Modi (@narendramodi) April 22, 2023